Surah Nuh in Kannada: translation and audio
Surah 71 · نوح · Noah · 28 verses
Surah Nuh verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Nuh word by word in English.
Verse 1
إِنَّآ أَرْسَلْنَا نُوحًا إِلَىٰ قَوْمِهِۦٓ أَنْ أَنذِرْ قَوْمَكَ مِن قَبْلِ أَن يَأْتِيَهُمْ عَذَابٌ أَلِيمٌ
Transliteration innā arsalnā nūḥan ilā qawmihi an andhir qawmaka min qabli an yatiyahum ʿadhābun alīmun
Kannada ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ``ನಿನ್ನ ಜನಾಂಗದವರಿಗೆ ವೇದನಾಯುಕ್ತ ಶಿಕ್ಷೆ ಬಂದೆರಗುವುದಕ್ಕೆ ಮುಂಚೆಯೇ ಅವರಿಗೆ ಮುನ್ನೆಚ್ಚರಿಕೆ ನೀಡು’’ ಎಂಬ ಆದೇಶದೊಂದಿಗೆ.
Verse 2
قَالَ يَـٰقَوْمِ إِنِّى لَكُمْ نَذِيرٌ مُّبِينٌ
Transliteration qāla yāqawmi innī lakum nadhīrun mubīnun
Kannada ಅವರು ಹೇಳಿದರು; `ನನ್ನ ಜನಾಂಗದವರೇ, ನಾನು ನಿಮಗೆ ಸ್ಪಷ್ಟ ಎಚ್ಚರಿಕೆ ಕೊಡುವವನಾಗಿದ್ದೇನೆ.
Verse 3
أَنِ ٱعْبُدُوا۟ ٱللَّهَ وَٱتَّقُوهُ وَأَطِيعُونِ
Transliteration ani uʿ'budū l-laha wa-ittaqūhu wa-aṭīʿūni
Kannada ನೀವು ಅಲ್ಲಾಹನನ್ನು ಆರಾಧಿಸಿರಿ, ಅವನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Verse 4
يَغْفِرْ لَكُم مِّن ذُنُوبِكُمْ وَيُؤَخِّرْكُمْ إِلَىٰٓ أَجَلٍ مُّسَمًّى ۚ إِنَّ أَجَلَ ٱللَّهِ إِذَا جَآءَ لَا يُؤَخَّرُ ۖ لَوْ كُنتُمْ تَعْلَمُونَ
Transliteration yaghfir lakum min dhunūbikum wayu-akhir'kum ilā ajalin musamman inna ajala l-lahi idhā jāa lā yu-akharu law kuntum taʿlamūna
Kannada ಹಾಗಾದರೆ ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ನಿಮ್ಮನ್ನು ಒಂದು ನಿಶ್ಚಿತ ಕಾಲದವರೆಗೆ ಮುಂದೂಡುವನು. ಅಲ್ಲಾಹನ ಅವಧಿ ಬಂದು ಬಿಟ್ಟರೆ ಮತ್ತೆ ಅದನ್ನು ಮುಂದೂಡಲಾಗುವುದಿಲ್ಲ. ನಿಮಗಿದು ತಿಳಿದಿರುತ್ತಿದ್ದರೆ!
Verse 5
قَالَ رَبِّ إِنِّى دَعَوْتُ قَوْمِى لَيْلًا وَنَهَارًا
Transliteration qāla rabbi innī daʿawtu qawmī laylan wanahāran
Kannada ಅವರು (ನೂಹ್) ಹೇಳಿದರು; `ನನ್ನ ಪ್ರಭೂ, ನಾನು ನನ್ನ ಜನಾಂಗದವರನ್ನು ರಾತ್ರಿಯೂ ಹಗಲೂ (ನಿನ್ನ ಮಾರ್ಗಕ್ಕೆ) ಕರೆದೆನು.
Verse 6
فَلَمْ يَزِدْهُمْ دُعَآءِىٓ إِلَّا فِرَارًا
Transliteration falam yazid'hum duʿāī illā firāran
Kannada ಆದರೆ ನನ್ನ ಕರೆಯು ಅವರ ಪಲಾಯನವನ್ನೇ ಹೆಚ್ಚಿಸಿತು.
Verse 7
وَإِنِّى كُلَّمَا دَعَوْتُهُمْ لِتَغْفِرَ لَهُمْ جَعَلُوٓا۟ أَصَـٰبِعَهُمْ فِىٓ ءَاذَانِهِمْ وَٱسْتَغْشَوْا۟ ثِيَابَهُمْ وَأَصَرُّوا۟ وَٱسْتَكْبَرُوا۟ ٱسْتِكْبَارًا
Transliteration wa-innī kullamā daʿawtuhum litaghfira lahum jaʿalū aṣābiʿahum fī ādhānihim wa-is'taghshaw thiyābahum wa-aṣarrū wa-is'takbarū is'tik'bāran
Kannada ನೀನು ಅವರನ್ನು ಕ್ಷಮಿಸಲೆಂದು ನಾನು ಅವರನ್ನು ಕರೆದಾಗಲೆಲ್ಲ ಅವರು ತಮ್ಮ ಕಿವಿಗಳಲ್ಲಿ ಬೆರಳುಗಳನ್ನು ತುರುಕಿಸಿಕೊಂಡರು, ತಮ್ಮ ವಸ್ತ್ರಗಳಿಂದ (ಮುಖ) ಮುಚ್ಚಿಕೊಂಡರು, (ಅಸತ್ಯದಲ್ಲಿ) ಊರಿ ನಿಂತರು. ಮತ್ತು ಭಾರೀ ಅಹಂಭಾವ ತೋರಿದರು.
Verse 8
ثُمَّ إِنِّى دَعَوْتُهُمْ جِهَارًا
Transliteration thumma innī daʿawtuhum jihāran
Kannada ತರುವಾಯ ನಾನು ಅವರಿಗೆ ಜೋರಾಗಿ ಕರೆಕೊಟ್ಟೆನು.
Verse 9
ثُمَّ إِنِّىٓ أَعْلَنتُ لَهُمْ وَأَسْرَرْتُ لَهُمْ إِسْرَارًا
Transliteration thumma innī aʿlantu lahum wa-asrartu lahum is'rāran
Kannada ಅನಂತರ ನಾನು ಅವರಿಗಾಗಿ ಬಹಿರಂಗ ಆಹ್ವಾನ ನೀಡಿದೆನು ಮತ್ತು ಬಹಳ ರಹಸ್ಯವಾಗಿಯೂ ಬೋಧಿಸಿದೆನು.
Verse 10
فَقُلْتُ ٱسْتَغْفِرُوا۟ رَبَّكُمْ إِنَّهُۥ كَانَ غَفَّارًا
Transliteration faqul'tu is'taghfirū rabbakum innahu kāna ghaffāran
Kannada ನಾನು ಹೇಳಿದೆನು; ನಿಮ್ಮ ಪ್ರಭುವಿನಲ್ಲಿ ನೀವು ಕ್ಷಮೆಯನ್ನು ಯಾಚಿಸಿರಿ. ಖಂಡಿತವಾಗಿಯೂ ಅವನು ಮಹಾಕ್ಷಮಾಶೀಲನಾಗಿದ್ದಾನೆ.
Verse 11
يُرْسِلِ ٱلسَّمَآءَ عَلَيْكُم مِّدْرَارًا
Transliteration yur'sili l-samāa ʿalaykum mid'rāran
Kannada ಹಾಗಾದಲ್ಲಿ ನಿಮಗೆ ಅವನು ಆಕಾಶದಿಂದ ಸಮೃದ್ಧವಾಗಿ ಮಳೆ ಸುರಿಸಿ ಕೊಡುವನು.
Verse 12
وَيُمْدِدْكُم بِأَمْوَٰلٍ وَبَنِينَ وَيَجْعَل لَّكُمْ جَنَّـٰتٍ وَيَجْعَل لَّكُمْ أَنْهَـٰرًا
Transliteration wayum'did'kum bi-amwālin wabanīna wayajʿal lakum jannātin wayajʿal lakum anhāran
Kannada ನಿಮಗೆ ಸೊತ್ತುಗಳನ್ನೂ ಸಂತಾನಗಳನ್ನೂ ಕೊಟ್ಟು ಪೋಷಿಸುವನು, ನಿಮಗಾಗಿ ತೋಟ ಗಳನ್ನೂ ನದಿಗಳನ್ನೂ ನಿರ್ಮಿಸಿ ಕೊಡುವನು.
Verse 13
مَّا لَكُمْ لَا تَرْجُونَ لِلَّهِ وَقَارًا
Transliteration mā lakum lā tarjūna lillahi waqāran
Kannada ಅಲ್ಲಾಹು ನಿಮ್ಮನ್ನು ಗೌರವಿಸುವುದನ್ನು ಯಾಕೆ ನೀವು ಆಗ್ರಹಪಡುವುದಿಲ್ಲ?
Verse 14
وَقَدْ خَلَقَكُمْ أَطْوَارًا
Transliteration waqad khalaqakum aṭwāran
Kannada ಅವನು ನಿಮ್ಮನ್ನು ವಿವಿಧ ಹಂತಗಳಲ್ಲಿ ಸೃಷ್ಟಿಸಿರುವನು.
Verse 15
أَلَمْ تَرَوْا۟ كَيْفَ خَلَقَ ٱللَّهُ سَبْعَ سَمَـٰوَٰتٍ طِبَاقًا
Transliteration alam taraw kayfa khalaqa l-lahu sabʿa samāwātin ṭibāqan
Kannada ನೀವು ನೋಡುತ್ತಿಲ್ಲವೇ? ಅಲ್ಲಾಹನು ಸಪ್ತಗಗನಗಳನ್ನು (ಒಂದರ ಮೇಲೆ ಒಂದರಂತೆ) ಅಂತಸ್ತುಗಳಾಗಿ ಹೇಗೆ ಸೃಷ್ಟಿಸಿದನು?
Verse 16
وَجَعَلَ ٱلْقَمَرَ فِيهِنَّ نُورًا وَجَعَلَ ٱلشَّمْسَ سِرَاجًا
Transliteration wajaʿala l-qamara fīhinna nūran wajaʿala l-shamsa sirājan
Kannada ಮತ್ತು ಅವುಗಳಲ್ಲಿ ಚಂದ್ರನನ್ನು ಒಂದು ಪ್ರಕಾಶವಾಗಿಯೂ ಸೂರ್ಯನನ್ನು ಒಂದು ಬೆಳಕಾಗಿಯೂ ಮಾಡಿರುವನು.
Verse 17
وَٱللَّهُ أَنۢبَتَكُم مِّنَ ٱلْأَرْضِ نَبَاتًا
Transliteration wal-lahu anbatakum mina l-arḍi nabātan
Kannada ಅಲ್ಲಾಹನು ನಿಮ್ಮನ್ನು ಭೂಮಿಯಿಂದ ಬೆಳೆ ಬೆಳೆಸಿದನು.
Verse 18
ثُمَّ يُعِيدُكُمْ فِيهَا وَيُخْرِجُكُمْ إِخْرَاجًا
Transliteration thumma yuʿīdukum fīhā wayukh'rijukum ikh'rājan
Kannada ಮುಂದೆ ಅವನು ನಿಮ್ಮನ್ನು ಅದಕ್ಕೆ ಮರಳಿ ಸುವನು ಮತ್ತು ಅದರಿಂದ ಒಮ್ಮೆಲೇ ನಿಮ್ಮನ್ನು ಹೊರತೆಗೆಯುವನು.
Verse 19
وَٱللَّهُ جَعَلَ لَكُمُ ٱلْأَرْضَ بِسَاطًا
Transliteration wal-lahu jaʿala lakumu l-arḍa bisāṭan
Kannada ಅಲ್ಲಾಹನು ನಿಮಗಾಗಿ ಭೂಮಿಯನ್ನು ಒಂದು ಹಾಸನ್ನಾಗಿ ಮಾಡಿದನು.
Verse 20
لِّتَسْلُكُوا۟ مِنْهَا سُبُلًا فِجَاجًا
Transliteration litaslukū min'hā subulan fijājan
Kannada ನೀವು ಅದರಲ್ಲಿ ವಿಶಾಲವಾದ ಮಾರ್ಗಗಳಲ್ಲಿ ಪ್ರವೇಶಿಸುವಂತಾಗಲು.
Verse 21
قَالَ نُوحٌ رَّبِّ إِنَّهُمْ عَصَوْنِى وَٱتَّبَعُوا۟ مَن لَّمْ يَزِدْهُ مَالُهُۥ وَوَلَدُهُۥٓ إِلَّا خَسَارًا
Transliteration qāla nūḥun rabbi innahum ʿaṣawnī wa-ittabaʿū man lam yazid'hu māluhu wawaladuhu illā khasāran
Kannada ನೂಹ್ ಹೇಳಿದರು; `ನನ್ನ ಪ್ರಭೂ, ಅವರು ನನ್ನನ್ನು ಧಿಕ್ಕರಿಸಿದರು. ಸಂಪತ್ತು ಹಾಗೂ ಸಂತಾನಗಳನ್ನು ಪಡೆದು ನಷ್ಟವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಕೆಲವರನ್ನು ಅವರು ಅನುಸರಿಸಿದರು.
Verse 22
وَمَكَرُوا۟ مَكْرًا كُبَّارًا
Transliteration wamakarū makran kubbāran
Kannada ಅವರು ಬಹುದೊಡ್ಡ ಕುತಂತ್ರವನ್ನು ಹೂಡಿದರು.
Verse 23
وَقَالُوا۟ لَا تَذَرُنَّ ءَالِهَتَكُمْ وَلَا تَذَرُنَّ وَدًّا وَلَا سُوَاعًا وَلَا يَغُوثَ وَيَعُوقَ وَنَسْرًا
Transliteration waqālū lā tadharunna ālihatakum walā tadharunna waddan walā suwāʿan walā yaghūtha wayaʿūqa wanasran
Kannada ಅವರು, `(ಜನರೇ) ನೀವು ಖಂಡಿತ ನಿಮ್ಮ ದೈವಗಳನ್ನು ತ್ಯಜಿಸಬೇಡಿರಿ. ವದ್ದ್, ಸುವಾಅï, ಯಗೂಸ್, ಯಊಖ್ ಮತ್ತು ನಸ್ರ್‍ಗಳನ್ನು ನೀವು ಖಂಡಿತ ಉಪೇಕ್ಷಿಸದಿರಿ’ ಎಂದು ಹೇಳಿದರು.
Verse 24
وَقَدْ أَضَلُّوا۟ كَثِيرًا ۖ وَلَا تَزِدِ ٱلظَّـٰلِمِينَ إِلَّا ضَلَـٰلًا
Transliteration waqad aḍallū kathīran walā tazidi l-ẓālimīna illā ḍalālan
Kannada ಅವರು ಅನೇಕ ಮಂದಿಯನ್ನು ದಾರಿಗೆಡಿಸಿದ್ದಾರೆ. (ಆದುದರಿಂದ ಪ್ರಭೂ!) ನೀನು ಈ ಅಕ್ರಮಿಗಳಿಗೆ ಪಥಭ್ರಷ್ಟತೆಯಲ್ಲದೆ ಬೇರೇನನ್ನೂ ವರ್ಧಿಸಿ ಕೊಡಬೇಡ.
Verse 25
مِّمَّا خَطِيٓـَٔـٰتِهِمْ أُغْرِقُوا۟ فَأُدْخِلُوا۟ نَارًا فَلَمْ يَجِدُوا۟ لَهُم مِّن دُونِ ٱللَّهِ أَنصَارًا
Transliteration mimmā khaṭīātihim ugh'riqū fa-ud'khilū nāran falam yajidū lahum min dūni l-lahi anṣāran
Kannada ತಮ್ಮ ಪಾಪಗಳ ಕಾರಣದಿಂದಾಗಿಯೇ ಅವರು ನೀರಲ್ಲಿ ಮುಳುಗಿಸಲ್ಪಟ್ಟರು ಮತ್ತು ನರಕಾಗ್ನಿಗೆ ಸೇರಿಸಲ್ಪಟ್ಟರು. ಅನಂತರ ಅವರಿಗೆ, ಅಲ್ಲಾಹನ ಹೊರತು ಸಹಾಯಕನಾರೂ ಲಭಿಸಲಿಲ್ಲ.
Verse 26
وَقَالَ نُوحٌ رَّبِّ لَا تَذَرْ عَلَى ٱلْأَرْضِ مِنَ ٱلْكَـٰفِرِينَ دَيَّارًا
Transliteration waqāla nūḥun rabbi lā tadhar ʿalā l-arḍi mina l-kāfirīna dayyāran
Kannada ನೂಹ್ ಹೇಳಿದರು; `ನನ್ನ ಪ್ರಭೂ, ಸತ್ಯನಿಷೇಧಿಗಳ ಪೈಕಿ ಯಾವನೇ ಗೃಹಸ್ಥನನ್ನು (ಯಾರನ್ನೂ) ಈ ಭೂಮಿಯ ಮೇಲೆ ನೆಲೆಸಲು ಬಿಡಬೇಡ.
Verse 27
إِنَّكَ إِن تَذَرْهُمْ يُضِلُّوا۟ عِبَادَكَ وَلَا يَلِدُوٓا۟ إِلَّا فَاجِرًا كَفَّارًا
Transliteration innaka in tadharhum yuḍillū ʿibādaka walā yalidū illā fājiran kaffāran
Kannada ನೀನು ಅವರನ್ನು ನಾಶಪಡಿಸದೆ ಹಾಗೆ ಬಿಟ್ಟರೆ, ಅವರು ನಿನ್ನ ದಾಸರನ್ನು ದಾರಿಗೆಡಿಸುವರು. ಮತ್ತು ಸತ್ಯನಿಷೇಧಿಗಳಾದ ದುರಾಚಾರಿ ಸಂತತಿಗಳನ್ನಲ್ಲದೆ ಅವರು ಹುಟ್ಟುಹಾಕಲಾರರು.
Verse 28
رَّبِّ ٱغْفِرْ لِى وَلِوَٰلِدَىَّ وَلِمَن دَخَلَ بَيْتِىَ مُؤْمِنًا وَلِلْمُؤْمِنِينَ وَٱلْمُؤْمِنَـٰتِ وَلَا تَزِدِ ٱلظَّـٰلِمِينَ إِلَّا تَبَارًۢا
Transliteration rabbi igh'fir lī waliwālidayya waliman dakhala baytiya mu'minan walil'mu'minīna wal-mu'mināti walā tazidi l-ẓālimīna illā tabāran
Kannada ನನ್ನ ಪ್ರಭೂ, ನನಗೂ, ನನ್ನ ಮಾತಾಪಿತರಿಗೂ ಸತ್ಯವಿಶ್ವಾಸಿಯಾಗಿ ನನ್ನ ಮನೆಗೆ ಪ್ರವೇಶಿಸಿದ ಪ್ರತಿಯೊಬ್ಬರಿಗೂ ಮತ್ತು ಎಲ್ಲ ಸತ್ಯವಿಶ್ವಾಸಿ ಸ್ತ್ರೀ - ಪುರುಷರಿಗೂ ನೀನು ಕ್ಷಮೆ ನೀಡು. ಅಕ್ರಮಿಗಳಿಗೆ ವಿನಾಶದ ಹೊರತು ಇನ್ನೇನನ್ನೂ ವರ್ಧಿಸ ಬೇಡ.
Read Surah Nuh in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.