Surah Fatir in Kannada: translation and audio
Surah 35 · فاطر · Originator · 45 verses
Surah Fatir verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Fatir word by word in English.
Verse 1
ٱلْحَمْدُ لِلَّهِ فَاطِرِ ٱلسَّمَـٰوَٰتِ وَٱلْأَرْضِ جَاعِلِ ٱلْمَلَـٰٓئِكَةِ رُسُلًا أُو۟لِىٓ أَجْنِحَةٍ مَّثْنَىٰ وَثُلَـٰثَ وَرُبَـٰعَ ۚ يَزِيدُ فِى ٱلْخَلْقِ مَا يَشَآءُ ۚ إِنَّ ٱللَّهَ عَلَىٰ كُلِّ شَىْءٍ قَدِيرٌ
Transliteration al-ḥamdu lillahi fāṭiri l-samāwāti wal-arḍi jāʿili l-malāikati rusulan ulī ajniḥatin mathnā wathulātha warubāʿa yazīdu fī l-khalqi mā yashāu inna l-laha ʿalā kulli shayin qadīrun
Kannada ಸರ್ವಸ್ತುತಿಯು ಅಲ್ಲಾಹನಿಗೆ ಮೀಸಲು. ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು. ಎರಡೆರಡು, ಮೂರು ಮೂರು ಹಾಗೂ ನಾಲ್ಕು ನಾಲ್ಕು ರೆಕ್ಕೆಗಳಿರುವ ದೇವಚರರನ್ನು ದೂತರನ್ನಾಗಿ ನೇಮಿಸಿದವನು. ಅವನು ತನ್ನ ಸೃಷ್ಟಿಯಲ್ಲಿ ತಾನಿಚ್ಚಿಸಿದ್ದನ್ನು ಹೆಚ್ಚಿಸುತ್ತಾನೆ. ಅಲ್ಲಾಹನು ಎಲ್ಲ ವಸ್ತುವಿನ ಮೇಲೆ ಸಾಮಥ್ರ್ಯವುಳ್ಳವನು.
Verse 2
مَّا يَفْتَحِ ٱللَّهُ لِلنَّاسِ مِن رَّحْمَةٍ فَلَا مُمْسِكَ لَهَا ۖ وَمَا يُمْسِكْ فَلَا مُرْسِلَ لَهُۥ مِنۢ بَعْدِهِۦ ۚ وَهُوَ ٱلْعَزِيزُ ٱلْحَكِيمُ
Transliteration mā yaftaḥi l-lahu lilnnāsi min raḥmatin falā mum'sika lahā wamā yum'sik falā mur'sila lahu min baʿdihi wahuwa l-ʿazīzu l-ḥakīmu
Kannada ಅಲ್ಲಾಹನು ಜನರಿಗೆ ಯಾವ ಅನುಗ್ರಹವನ್ನು ತೆರೆದರೂ ಅದನ್ನು ತಡೆಯುವವನಿಲ್ಲ. ಅವನು ಯಾವುದನ್ನು ತಡೆಹಿಡಿದನೋ ಅದರ ನಂತರ ಅದನ್ನು ಬಿಟ್ಟು ಕೊಡುವವನಿಲ್ಲ. ಅವನು ಅತ್ಯಂತ ಪ್ರಬಲನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
Verse 3
يَـٰٓأَيُّهَا ٱلنَّاسُ ٱذْكُرُوا۟ نِعْمَتَ ٱللَّهِ عَلَيْكُمْ ۚ هَلْ مِنْ خَـٰلِقٍ غَيْرُ ٱللَّهِ يَرْزُقُكُم مِّنَ ٱلسَّمَآءِ وَٱلْأَرْضِ ۚ لَآ إِلَـٰهَ إِلَّا هُوَ ۖ فَأَنَّىٰ تُؤْفَكُونَ
Transliteration yāayyuhā l-nāsu udh'kurū niʿ'mata l-lahi ʿalaykum hal min khāliqin ghayru l-lahi yarzuqukum mina l-samāi wal-arḍi lā ilāha illā huwa fa-annā tu'fakūna
Kannada ಜನರೇ, ನಿಮ್ಮ ಮೇಲೆ ಮಾಡಿಕೊಟ್ಟ ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ಅಲ್ಲಾಹನ ಹೊರತು ಆಕಾಶ ಮತ್ತು ಭೂಮಿಯಿಂದ ನಿಮಗೆ ಆಹಾರ ನೀಡುವ ಬೇರೆ ಸೃಷ್ಟಿಕರ್ತನಿರುವನೇ? ಅವನ ಹೊರತು ಬೇರೆ ಆರಾಧ್ಯನಿಲ್ಲ. ಹೀಗಿದ್ದೂ ನೀವು (ಸತ್ಯದಿಂದ) ತಪ್ಪಿ ಬಿಡುವುದು ಹೇಗೆ?
Verse 4
وَإِن يُكَذِّبُوكَ فَقَدْ كُذِّبَتْ رُسُلٌ مِّن قَبْلِكَ ۚ وَإِلَى ٱللَّهِ تُرْجَعُ ٱلْأُمُورُ
Transliteration wa-in yukadhibūka faqad kudhibat rusulun min qablika wa-ilā l-lahi tur'jaʿu l-umūru
Kannada (ಪೈಗಂಬರರೇ) ಇವರು ನಿಮ್ಮನ್ನು ಸುಳ್ಳಾಗಿಸುತ್ತಿದ್ದರೆ, ನಿಮಗಿಂತ ಮುಂಚೆಯೂ ಅನೇಕ ಸಂದೇಶವಾಹಕರು ಸುಳ್ಳಾಗಿಸಲ್ಪಟ್ಟಿದ್ದಾರೆ. (ಆದ್ದರಿಂದ ಅವರು ಕ್ಷಮಿಸಿದಂತೆ ನೀವು ಕ್ಷಮಿಸಿರಿ) ಕಾರ್ಯಗಳು ಅಲ್ಲಾಹನೆಡೆಗೇ ಮರಳಲಿವೆ.
Verse 5
يَـٰٓأَيُّهَا ٱلنَّاسُ إِنَّ وَعْدَ ٱللَّهِ حَقٌّ ۖ فَلَا تَغُرَّنَّكُمُ ٱلْحَيَوٰةُ ٱلدُّنْيَا ۖ وَلَا يَغُرَّنَّكُم بِٱللَّهِ ٱلْغَرُورُ
Transliteration yāayyuhā l-nāsu inna waʿda l-lahi ḥaqqun falā taghurrannakumu l-ḥayatu l-dun'yā walā yaghurrannakum bil-lahi l-gharūru
Kannada ಜನರೇ, ಅಲ್ಲಾಹನ ವಾಗ್ದಾನವು ಖಂಡಿತ ಸತ್ಯ. ಆದುದರಿಂದ ಲೌಕಿಕ ಜೀವನವು ನಿಮ್ಮನ್ನು ವಂಚಿ ಸದಿರಲಿ. ಆ ಮಹಾಧೂರ್ತನು (ಶೈತಾನನು) ಅಲ್ಲಾಹನ ಬಗ್ಗೆ ನಿಮ್ಮನ್ನು ವಂಚಿಸದಿರಲಿ.
Verse 6
إِنَّ ٱلشَّيْطَـٰنَ لَكُمْ عَدُوٌّ فَٱتَّخِذُوهُ عَدُوًّا ۚ إِنَّمَا يَدْعُوا۟ حِزْبَهُۥ لِيَكُونُوا۟ مِنْ أَصْحَـٰبِ ٱلسَّعِيرِ
Transliteration inna l-shayṭāna lakum ʿaduwwun fa-ittakhidhūhu ʿaduwwan innamā yadʿū ḥiz'bahu liyakūnū min aṣḥābi l-saʿīri
Kannada ಖಂಡಿತ ಶೈತಾನನು ನಿಮ್ಮ ಶತ್ರುವಾಗಿದ್ದಾನೆ. ಆದುದರಿಂದ ನೀವು ಅವನನ್ನು ಶತ್ರುವನ್ನಾಗಿ ಮಾಡಿರಿ. ಅವನು ತನ್ನ ಪಕ್ಷದವರನ್ನು ಅವರು ನರಕವಾಸಿಗಳಲ್ಲಿ ಸೇರಲೆಂದೇ ಆಹ್ವಾನಿಸುತ್ತಿದ್ದಾನೆ .
Verse 7
ٱلَّذِينَ كَفَرُوا۟ لَهُمْ عَذَابٌ شَدِيدٌ ۖ وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَهُم مَّغْفِرَةٌ وَأَجْرٌ كَبِيرٌ
Transliteration alladhīna kafarū lahum ʿadhābun shadīdun wa-alladhīna āmanū waʿamilū l-ṣāliḥāti lahum maghfiratun wa-ajrun kabīrun
Kannada ಸತ್ಯವನ್ನು ನಿಷೇಧಿಸುವವರಿಗೆ ಘೋರ ಯಾತನೆ ಕಾದಿದೆ. ಸತ್ಯವಿಶ್ವಾಸವನ್ನು ಸ್ವೀಕರಿಸಿ ಸತ್ಕರ್ಮ ವೆಸಗಿದವರಿಗೆ ಪಾಪ ಮುಕ್ತಿಯೂ ಮಹಾ ಸತ್ಫಲವೂ ಇದೆ.
Verse 8
أَفَمَن زُيِّنَ لَهُۥ سُوٓءُ عَمَلِهِۦ فَرَءَاهُ حَسَنًا ۖ فَإِنَّ ٱللَّهَ يُضِلُّ مَن يَشَآءُ وَيَهْدِى مَن يَشَآءُ ۖ فَلَا تَذْهَبْ نَفْسُكَ عَلَيْهِمْ حَسَرَٰتٍ ۚ إِنَّ ٱللَّهَ عَلِيمٌۢ بِمَا يَصْنَعُونَ
Transliteration afaman zuyyina lahu sūu ʿamalihi faraāhu ḥasanan fa-inna l-laha yuḍillu man yashāu wayahdī man yashāu falā tadhhab nafsuka ʿalayhim ḥasarātin inna l-laha ʿalīmun bimā yaṣnaʿūna
Kannada ಯಾರಿಗೆ ಅವನ ದುಷ್ಕರ್ಮವು ಚಂದಗೊಂಡು ಕೊನೆಗೆ ಅದು ಉತ್ತಮವಾಗಿ ಕಂಡಿತೋ ಅವನು ಸನ್ಮಾರ್ಗ ಪ್ರಾಪ್ತನಂತೆ ಆಗುವನೇ? ಅಲ್ಲಾಹು ತಾನಿಚ್ಛಿಸಿದವರನ್ನು ದಾರಿ ತಪ್ಪಿಸುತ್ತಾನೆ. ತಾನಿಚ್ಛಿಸಿದವರನ್ನು ನೇರ ದಾರಿಗೆ ತರುತ್ತಾನೆ. ಆದುದರಿಂದ ಇವರ ಮೇಲಿನ ವ್ಯಥೆಯಿಂದ ನಿಮ್ಮ ಪ್ರಾಣ ಹೋಗದಿರಲಿ. ಅಲ್ಲಾಹನು ಇವರು ಮಾಡುತ್ತಿರುವುದನ್ನು ಚೆನ್ನಾಗಿ ಅರಿಯುತ್ತಾನೆ.
Verse 9
وَٱللَّهُ ٱلَّذِىٓ أَرْسَلَ ٱلرِّيَـٰحَ فَتُثِيرُ سَحَابًا فَسُقْنَـٰهُ إِلَىٰ بَلَدٍ مَّيِّتٍ فَأَحْيَيْنَا بِهِ ٱلْأَرْضَ بَعْدَ مَوْتِهَا ۚ كَذَٰلِكَ ٱلنُّشُورُ
Transliteration wal-lahu alladhī arsala l-riyāḥa fatuthīru saḥāban fasuq'nāhu ilā baladin mayyitin fa-aḥyaynā bihi l-arḍa baʿda mawtihā kadhālika l-nushūru
Kannada ಅಲ್ಲಾಹನು ಮಾರುತಗಳನ್ನು ಕಳುಹಿಸುತ್ತಾನೆ. ಅನಂತರ ಅವುಗಳು ಮೋಡಗಳನ್ನು ಎಬ್ಬಿಸುತ್ತವೆ. ತರುವಾಯ ನಾವು ಅದನ್ನು ಒಂದು ನಿರ್ಜೀವ ಪ್ರದೇಶದ ಕಡೆಗೆ ಒಯ್ಯುತ್ತೇವೆ. ಆಮೇಲೆ ಅದರ ಮೂಲಕ ಆ ಭೂಮಿಯನ್ನು ಅದರ ಸಾವಿನ ಬಳಿಕ ಜೀವಂತಗೊಳಿಸುತ್ತೇವೆ. ಪುನರುಜ್ಜೀವನವೂ ಹೀಗೆಯೇ ಆಗುವುದು.
Verse 10
مَن كَانَ يُرِيدُ ٱلْعِزَّةَ فَلِلَّهِ ٱلْعِزَّةُ جَمِيعًا ۚ إِلَيْهِ يَصْعَدُ ٱلْكَلِمُ ٱلطَّيِّبُ وَٱلْعَمَلُ ٱلصَّـٰلِحُ يَرْفَعُهُۥ ۚ وَٱلَّذِينَ يَمْكُرُونَ ٱلسَّيِّـَٔاتِ لَهُمْ عَذَابٌ شَدِيدٌ ۖ وَمَكْرُ أُو۟لَـٰٓئِكَ هُوَ يَبُورُ
Transliteration man kāna yurīdu l-ʿizata falillahi l-ʿizatu jamīʿan ilayhi yaṣʿadu l-kalimu l-ṭayibu wal-ʿamalu l-ṣāliḥu yarfaʿuhu wa-alladhīna yamkurūna l-sayiāti lahum ʿadhābun shadīdun wamakru ulāika huwa yabūru
Kannada ಯಾರು ಪ್ರತಾಪವನ್ನು ಇಚ್ಚಿಸುತ್ತಾನೆ (ಅವನು ಅಲ್ಲಾಹನ ಅನುಸರಣೆ ಮಾಡಲಿ. ಏಕೆಂದರೆ) ಪ್ರತಾಪವು ಸರ್ವ ಸಂಪೂರ್ಣವಾಗಿ ಅಲ್ಲಾಹನದ್ದು. ಪರಿಶುದ್ಧ ವಚನವು ಏರಿ ಹೋಗುವುದು ಅವನ ಕಡೆಗಾಗಿದೆ. ಸತ್ಕರ್ಮವು ಅವನ ಕಡೆಗೇ ಏರಿ ಹೋಗುತ್ತದೆ. ಕೆಟ್ಟ ತಂತ್ರಗಳನ್ನು ಹೂಡುವ ವರಿಗೆ ಕಠಿಣ ಶಿಕ್ಷೆ ಇದೆ. ಅವರ ಕುತಂತ್ರವು ನಾಶವಾಗಿ ಹೋಗಲಿದೆ.
Verse 11
وَٱللَّهُ خَلَقَكُم مِّن تُرَابٍ ثُمَّ مِن نُّطْفَةٍ ثُمَّ جَعَلَكُمْ أَزْوَٰجًا ۚ وَمَا تَحْمِلُ مِنْ أُنثَىٰ وَلَا تَضَعُ إِلَّا بِعِلْمِهِۦ ۚ وَمَا يُعَمَّرُ مِن مُّعَمَّرٍ وَلَا يُنقَصُ مِنْ عُمُرِهِۦٓ إِلَّا فِى كِتَـٰبٍ ۚ إِنَّ ذَٰلِكَ عَلَى ٱللَّهِ يَسِيرٌ
Transliteration wal-lahu khalaqakum min turābin thumma min nuṭ'fatin thumma jaʿalakum azwājan wamā taḥmilu min unthā walā taḍaʿu illā biʿil'mihi wamā yuʿammaru min muʿammarin walā yunqaṣu min ʿumurihi illā fī kitābin inna dhālika ʿalā l-lahi yasīrun
Kannada ಅಲ್ಲಾಹನು ನಿಮ್ಮನ್ನು ಮಣ್ಣಿನಿಂದ ಸೃಷ್ಟಿಸಿದನು. ತರುವಾಯ ವೀರ್ಯದಿಂದ. ಅನಂತರ ನಿಮ್ಮ ನ್ನು (ಗಂಡು-ಹೆಣ್ಣು) ಜೋಡಿಗಳಾಗಿ ಮಾಡಿದನು. ಅಲ್ಲಾಹನಿಗೆ ಅರಿವಿಲ್ಲದೆ ಯಾವ ಸ್ತ್ರೀಯೂ ಗರ್ಭ ಧರಿಸುವುದಿಲ್ಲ. ಹೆರುವುದೂ ಇಲ್ಲ. ಯಾವನೇ ಆಯುಷಿಗೆ ಆಯುಷ್ಯ ಕೊಡುವುದಾಗಲಿ, ಆಯುಷ್ಯದಿಂದ ಕಡಿತ ಮಾಡುವುದಾಗಲೀ ಒಂದು ಗ್ರಂಥದಲ್ಲಿ ಲಿಖಿತವಾಗಿರದೆ ಸಂಭವಿಸುವುದಿಲ್ಲ. ಇದು ಅಲ್ಲಾಹನಿಗೆ ಬಲು ಸುಲಭ.
Verse 12
وَمَا يَسْتَوِى ٱلْبَحْرَانِ هَـٰذَا عَذْبٌ فُرَاتٌ سَآئِغٌ شَرَابُهُۥ وَهَـٰذَا مِلْحٌ أُجَاجٌ ۖ وَمِن كُلٍّ تَأْكُلُونَ لَحْمًا طَرِيًّا وَتَسْتَخْرِجُونَ حِلْيَةً تَلْبَسُونَهَا ۖ وَتَرَى ٱلْفُلْكَ فِيهِ مَوَاخِرَ لِتَبْتَغُوا۟ مِن فَضْلِهِۦ وَلَعَلَّكُمْ تَشْكُرُونَ
Transliteration wamā yastawī l-baḥrāni hādhā ʿadhbun furātun sāighun sharābuhu wahādhā mil'ḥun ujājun wamin kullin takulūna laḥman ṭariyyan watastakhrijūna ḥil'yatan talbasūnahā watarā l-ful'ka fīhi mawākhira litabtaghū min faḍlihi walaʿallakum tashkurūna
Kannada ಎರಡು ಸಮುದ್ರಗಳು ಸಮಾನವಲ್ಲ, ಇದು ಕುಡಿಯಲು ಹಿತವಾದ, ಸ್ವಾದಿಷ್ಠ ಸಿಹಿನೀರು. ಇನ್ನೊಂದು ತೀವ್ರ ಉಪ್ಪು! ಎರಡು ನೀರಿಂದಲೂ ನೀವು ತಾಜಾ ಮಾಂಸವನ್ನು ತಿನ್ನುತ್ತೀರಿ. ನೀವು ಧರಿಸುವ ಆಭರಣಗಳನ್ನು ಹೊರ ತೆಗೆಯುತ್ತೀರಿ. ಸಮುದ್ರದಲ್ಲಿ ಹಡಗುಗಳು ನೀರನ್ನು ಸೀಳುತ್ತಾ ಸಾಗುತ್ತಿರುವುದನ್ನು ನೀವು ನೋಡುತ್ತೀರಿ. ಇದು ಅಲ್ಲಾಹನ ಅನುಗ್ರಹದಿಂದ ನೀವು ಹುಡುಕಿ ತೆಗೆಯಲಿಕ್ಕೂ ಅವನಿಗೆ ಕೃತಜ್ಞರಾಗಲಿಕ್ಕೂ.
Verse 13
يُولِجُ ٱلَّيْلَ فِى ٱلنَّهَارِ وَيُولِجُ ٱلنَّهَارَ فِى ٱلَّيْلِ وَسَخَّرَ ٱلشَّمْسَ وَٱلْقَمَرَ كُلٌّ يَجْرِى لِأَجَلٍ مُّسَمًّى ۚ ذَٰلِكُمُ ٱللَّهُ رَبُّكُمْ لَهُ ٱلْمُلْكُ ۚ وَٱلَّذِينَ تَدْعُونَ مِن دُونِهِۦ مَا يَمْلِكُونَ مِن قِطْمِيرٍ
Transliteration yūliju al-layla fī l-nahāri wayūliju l-nahāra fī al-layli wasakhara l-shamsa wal-qamara kullun yajrī li-ajalin musamman dhālikumu l-lahu rabbukum lahu l-mul'ku wa-alladhīna tadʿūna min dūnihi mā yamlikūna min qiṭ'mīrin
Kannada ಅವನು ರಾತ್ರಿಯನ್ನು ಹಗಲಿಗೂ ಹಗಲನ್ನು ರಾತ್ರಿಗೂ ದಾಟಿಸುತ್ತಾನೆ. ಸೂರ್ಯ ಚಂದ್ರರನ್ನು ಅವನು ನಿಯಂತ್ರಿಸಿದನು. ಎಲ್ಲ ಒಂದು ನಿಶ್ಚಿತ ಅವಧಿಗೆ ನಡೆಯುತ್ತ ಸಾಗುತ್ತಿದೆ. ಈ ಅಲ್ಲಾಹ ನೇ ನಿಮ್ಮ ಪ್ರಭು. ಪ್ರಭುತ್ವವು ಅವನದ್ದು. ಅವ ನನ್ನು ಬಿಟ್ಟು ನೀವು ಆರಾಧಿಸುವವರು ಒಂದು ಈತ ಬೀಜದ ಸಿಪ್ಪೆಯ ಒಡೆಯರೂ ಅಲ್ಲ.
Verse 14
إِن تَدْعُوهُمْ لَا يَسْمَعُوا۟ دُعَآءَكُمْ وَلَوْ سَمِعُوا۟ مَا ٱسْتَجَابُوا۟ لَكُمْ ۖ وَيَوْمَ ٱلْقِيَـٰمَةِ يَكْفُرُونَ بِشِرْكِكُمْ ۚ وَلَا يُنَبِّئُكَ مِثْلُ خَبِيرٍ
Transliteration in tadʿūhum lā yasmaʿū duʿāakum walaw samiʿū mā is'tajābū lakum wayawma l-qiyāmati yakfurūna bishir'kikum walā yunabbi-uka mith'lu khabīrin
Kannada ನೀವು ಅವರನ್ನು ಕರೆದರೆ ಅವರು ನಿಮ್ಮ ಕರೆಯನ್ನು ಕೇಳಲಾರರು. ಕೇಳಿದರೆಂದು ಸಂಕಲ್ಪಿಸಿದರೂ ಅವರು ಉತ್ತರವನ್ನು ನಿಮಗೆ ಕೊಡಲಾರರು. ಪುನರುತ್ಥಾನ ದಿನ ನಿಮ್ಮ ಪಾಲುಗಾರಿಕೆಯನ್ನು ಅವರು ನಿರಾಕರಿಸುವರು. (ಓ ಮಾನವ) ಸೂಕ್ಷ್ಮವಾಗಿ ತಿಳಿಯುವ ಅಲ್ಲಾಹ ನಂತೆ ಬೇರೊಬ್ಬನು ನಿಮಗೆ ತಿಳಿಸಿಕೊಡಲಿಕ್ಕಿಲ್ಲ.
Verse 15
۞ يَـٰٓأَيُّهَا ٱلنَّاسُ أَنتُمُ ٱلْفُقَرَآءُ إِلَى ٱللَّهِ ۖ وَٱللَّهُ هُوَ ٱلْغَنِىُّ ٱلْحَمِيدُ
Transliteration yāayyuhā l-nāsu antumu l-fuqarāu ilā l-lahi wal-lahu huwa l-ghaniyu l-ḥamīdu
Kannada ಓ ಜನರೇ, ನೀವು ಅಲ್ಲಾಹನೆಡೆಗೆ ಅವಲಂಬಿತರು. ಅಲ್ಲಾಹು ನಿರಪೇಕ್ಷನೂ ಸ್ತುತ್ಯರ್ಹನೂ ಆಗಿರುತ್ತಾನೆ.
Verse 16
إِن يَشَأْ يُذْهِبْكُمْ وَيَأْتِ بِخَلْقٍ جَدِيدٍ
Transliteration in yasha yudh'hib'kum wayati bikhalqin jadīdin
Kannada ಅವನಿಚ್ಛಿಸಿದರೆ ನಿಮ್ಮನ್ನು ನಾಶ ಮಾಡಿ ಹೊಸ ಸೃಷ್ಟಿಯನ್ನು ತರಬಲ್ಲನು.
Verse 17
وَمَا ذَٰلِكَ عَلَى ٱللَّهِ بِعَزِيزٍ
Transliteration wamā dhālika ʿalā l-lahi biʿazīzin
Kannada ಅಲ್ಲಾಹನಿಗೆ ಅದೇನೂ ಕಷ್ಟವಲ್ಲ.
Verse 18
وَلَا تَزِرُ وَازِرَةٌ وِزْرَ أُخْرَىٰ ۚ وَإِن تَدْعُ مُثْقَلَةٌ إِلَىٰ حِمْلِهَا لَا يُحْمَلْ مِنْهُ شَىْءٌ وَلَوْ كَانَ ذَا قُرْبَىٰٓ ۗ إِنَّمَا تُنذِرُ ٱلَّذِينَ يَخْشَوْنَ رَبَّهُم بِٱلْغَيْبِ وَأَقَامُوا۟ ٱلصَّلَوٰةَ ۚ وَمَن تَزَكَّىٰ فَإِنَّمَا يَتَزَكَّىٰ لِنَفْسِهِۦ ۚ وَإِلَى ٱللَّهِ ٱلْمَصِيرُ
Transliteration walā taziru wāziratun wiz'ra ukh'rā wa-in tadʿu muth'qalatun ilā ḥim'lihā lā yuḥ'mal min'hu shayon walaw kāna dhā qur'bā innamā tundhiru alladhīna yakhshawna rabbahum bil-ghaybi wa-aqāmū l-ṣalata waman tazakkā fa-innamā yatazakkā linafsihi wa-ilā l-lahi l-maṣīru
Kannada ತಪ್ಪಿನ ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು. (ಅಪರಾಧದಿಂದ) ಹೊರೆ ಹೊತ್ತ ವ್ಯಕ್ತಿಯು ತನ್ನ ಹೊರೆಯನ್ನು ಹೊರಲು ಇನ್ನೊಬ್ಬನನ್ನು ಕೂಗಿದರೆ, ಅವನ ಆಪ್ತ ಬಂಧುವೇ ಆಗಿದ್ದರೂ ಅವನ ಹೊರೆಯಿಂದ ಒಂದಿಷ್ಟನ್ನೂ ಹೊರಲಾರನು. ಪರೋಕ್ಷವಾಗಿ ತಮ್ಮ ಪ್ರಭುವನ್ನು ಭಯಪಡುವವರಿಗೆ ಮತ್ತು ನಮಾಝ್ ಸಂಸ್ಥಾಪಿಸುವವರಿಗೆ ಮಾತ್ರ ನೀವು ಎಚ್ಚರಿಕೆ ಕೊಡಬಲ್ಲಿರಿ. ಯಾವನು ಶುದ್ಧಿಯಾಗುತ್ತಾನೆ, ಅವನು ತನಗಾಗಿಯೇ ಶುದ್ಧಿಯಾಗು ತ್ತಾನೆ. ನಿರ್ಗಮನ ಅಲ್ಲಾಹನ ಕಡೆಗೇ ಇದೆ.
Verse 19
وَمَا يَسْتَوِى ٱلْأَعْمَىٰ وَٱلْبَصِيرُ
Transliteration wamā yastawī l-aʿmā wal-baṣīru
Kannada ಕುರುಡನೂ ದೃಷ್ಟಿಯುಳ್ಳವನೂ ಸಮಾನರಲ್ಲ.
Verse 20
وَلَا ٱلظُّلُمَـٰتُ وَلَا ٱلنُّورُ
Transliteration walā l-ẓulumātu walā l-nūru
Kannada ಇರುಳುಗಳೂ, ಪ್ರಕಾಶವೂ ಅಲ್ಲ.
Verse 21
وَلَا ٱلظِّلُّ وَلَا ٱلْحَرُورُ
Transliteration walā l-ẓilu walā l-ḥarūru
Kannada ನೆರಳೂ ಬಿಸಿಲೂ ಸಮಾನವಲ್ಲ.
Verse 22
وَمَا يَسْتَوِى ٱلْأَحْيَآءُ وَلَا ٱلْأَمْوَٰتُ ۚ إِنَّ ٱللَّهَ يُسْمِعُ مَن يَشَآءُ ۖ وَمَآ أَنتَ بِمُسْمِعٍ مَّن فِى ٱلْقُبُورِ
Transliteration wamā yastawī l-aḥyāu walā l-amwātu inna l-laha yus'miʿu man yashāu wamā anta bimus'miʿin man fī l-qubūri
Kannada ಜೀವಂತರೂ ಮೃತರೂ ಸಮಾನರಲ್ಲ.ಅಲ್ಲಾಹು ತಾನಿಚ್ಛಿಸಿದವರಿಗೆ ಕೇಳಿಸುತ್ತಾನೆ. ಆದರೆ ಸಮಾಧಿ ಗಳಲ್ಲಿರುವವರಿಗೆ ನೀವು ಕೇಳಿಸಲಾರಿರಿ .
Verse 23
إِنْ أَنتَ إِلَّا نَذِيرٌ
Transliteration in anta illā nadhīrun
Kannada ನೀವು ಕೇವಲ ಓರ್ವ ಎಚ್ಚರಿಕೆ ಕೊಡುವವರು ಮಾತ್ರ.
Verse 24
إِنَّآ أَرْسَلْنَـٰكَ بِٱلْحَقِّ بَشِيرًا وَنَذِيرًا ۚ وَإِن مِّنْ أُمَّةٍ إِلَّا خَلَا فِيهَا نَذِيرٌ
Transliteration innā arsalnāka bil-ḥaqi bashīran wanadhīran wa-in min ummatin illā khalā fīhā nadhīrun
Kannada ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿ ನಿಮ್ಮನ್ನು ನಾವು ಸತ್ಯಸಹಿತ ಕಳುಹಿಸಿರುತ್ತೇವೆ. ಎಚ್ಚರಿಕೆ ಕೊಡುವ ವ್ಯಕ್ತಿಯೊಬ್ಬರು ಬಂದಿರದೆ ಯಾವುದೇ ಸಮುದಾಯ ಗತಿಸಿ ಹೋಗಿಲ್ಲ.
Verse 25
وَإِن يُكَذِّبُوكَ فَقَدْ كَذَّبَ ٱلَّذِينَ مِن قَبْلِهِمْ جَآءَتْهُمْ رُسُلُهُم بِٱلْبَيِّنَـٰتِ وَبِٱلزُّبُرِ وَبِٱلْكِتَـٰبِ ٱلْمُنِيرِ
Transliteration wa-in yukadhibūka faqad kadhaba alladhīna min qablihim jāathum rusuluhum bil-bayināti wabil-zuburi wabil-kitābi l-munīri
Kannada ಇವರು ನಿಮ್ಮನ್ನು ಸುಳ್ಳಾಗಿಸುತ್ತಾರಾದರೆ ಇವರಿಗಿಂತ ಮುಂಚೆ ಗತಿಸಿದವರೂ ಸುಳ್ಳಾಗಿಸಿದ್ದರು. ಅವರ ಸಂದೇಶವಾಹಕರು ಅವರ ಬಳಿಗೆ ಸುಸ್ಪಷ್ಟ ದೃಷ್ಟಾಂತಗಳನ್ನೂ ಕಿರು ಹೊತ್ತಗೆಗಳನ್ನೂ ಹಾಗೂ ಬೆಳಕು ನೀಡುವ ವೇದಗ್ರಂಥವನ್ನೂ ತಂದಿದ್ದರು.
Verse 26
ثُمَّ أَخَذْتُ ٱلَّذِينَ كَفَرُوا۟ ۖ فَكَيْفَ كَانَ نَكِيرِ
Transliteration thumma akhadhtu alladhīna kafarū fakayfa kāna nakīri
Kannada ಅನಂತರ ಸತ್ಯನಿಷೇಧಕರನ್ನು ನಾನು ಹಿಡಿದು ಶಿಕ್ಷಿಸಿದೆನು. ಆಗ ನನ್ನ ಶಿಕ್ಷೆ ಎಷ್ಟು ಕಠಿಣವಾಗಿತ್ತು!
Verse 27
أَلَمْ تَرَ أَنَّ ٱللَّهَ أَنزَلَ مِنَ ٱلسَّمَآءِ مَآءً فَأَخْرَجْنَا بِهِۦ ثَمَرَٰتٍ مُّخْتَلِفًا أَلْوَٰنُهَا ۚ وَمِنَ ٱلْجِبَالِ جُدَدٌۢ بِيضٌ وَحُمْرٌ مُّخْتَلِفٌ أَلْوَٰنُهَا وَغَرَابِيبُ سُودٌ
Transliteration alam tara anna l-laha anzala mina l-samāi māan fa-akhrajnā bihi thamarātin mukh'talifan alwānuhā wamina l-jibāli judadun bīḍun waḥum'run mukh'talifun alwānuhā wagharābību sūdun
Kannada ಅಲ್ಲಾಹನು ಆಕಾಶದಿಂದ ನೀರನ್ನು ಸುರಿಸುವುದನ್ನೂ ಆ ಬಳಿಕ ಅದರ ಮೂಲಕ ನಾವು (ಅಲ್ಲಾಹು) ವಿಭಿನ್ನ ಬಣ್ಣಗಳಿರುವ ತರತರದ ಫಲಗಳನ್ನು ಹೊರ ತರುವುದನ್ನೂ ನೀವು ನೋಡುವುದಿಲ್ಲವೇ? ಪರ್ವತಗಳಲ್ಲೂ ಬಿಳಿ, ಕೆಂಪು (ಕಡು ಹಾಗೂ ನಸು) ವೈವಿಧ್ಯಮಯ ಬಣ್ಣಗಳ ಮಾರ್ಗರೇಖೆಗಳಿವೆ.ಮತ್ತು ಕಡು ಕಪ್ಪು ಬಂಡೆಗಳೂ ಇವೆ.
Verse 28
وَمِنَ ٱلنَّاسِ وَٱلدَّوَآبِّ وَٱلْأَنْعَـٰمِ مُخْتَلِفٌ أَلْوَٰنُهُۥ كَذَٰلِكَ ۗ إِنَّمَا يَخْشَى ٱللَّهَ مِنْ عِبَادِهِ ٱلْعُلَمَـٰٓؤُا۟ ۗ إِنَّ ٱللَّهَ عَزِيزٌ غَفُورٌ
Transliteration wamina l-nāsi wal-dawābi wal-anʿāmi mukh'talifun alwānuhu kadhālika innamā yakhshā l-laha min ʿibādihi l-ʿulamāu inna l-laha ʿazīzun ghafūrun
Kannada ಇದೇ ರೀತಿಯಲ್ಲಿ ಮನುಷ್ಯರಲ್ಲೂ, ಪ್ರಾಣಿಗಳಲ್ಲೂ ಜಾನುವಾರುಗಳಲ್ಲೂ ವಿಭಿನ್ನ ಬಣ್ಣಗಳುಂಟು . ಅಲ್ಲಾಹನ ದಾಸರಲ್ಲಿ ಜ್ಞಾನವುಳ್ಳವರು ಮಾತ್ರ ಅವನನ್ನು ಭಯಪಡುತ್ತಾರೆ . ನಿಶ್ಚಯವಾಗಿಯೂ ಅಲ್ಲಾಹನು ಪ್ರತಾಪಶಾಲಿಯೂ ಕ್ಷಮಾ ಶೀಲನೂ ಆಗಿರುತ್ತಾನೆ.
Verse 29
إِنَّ ٱلَّذِينَ يَتْلُونَ كِتَـٰبَ ٱللَّهِ وَأَقَامُوا۟ ٱلصَّلَوٰةَ وَأَنفَقُوا۟ مِمَّا رَزَقْنَـٰهُمْ سِرًّا وَعَلَانِيَةً يَرْجُونَ تِجَـٰرَةً لَّن تَبُورَ
Transliteration inna alladhīna yatlūna kitāba l-lahi wa-aqāmū l-ṣalata wa-anfaqū mimmā razaqnāhum sirran waʿalāniyatan yarjūna tijāratan lan tabūra
Kannada ಅಲ್ಲಾಹನ ಗ್ರಂಥವನ್ನು ಪಠಿಸುವ, ನಮಾಝ ನ್ನು ನೆಲೆಗೊಳಿಸುವ ಮತ್ತು ನಾವು ಅವರಿಗೆ ಕೊಟ್ಟಿರುವ ಸಂಪತ್ತಿನಿಂದ ರಹಸ್ಯವಾಗಿಯೂ ಪರಸ್ಯವಾಗಿಯೂ ಖರ್ಚು ಮಾಡುವ ಜನರು ನಾಶವಿಲ್ಲದ ಒಂದು ವ್ಯಾಪಾರದ ಆಗ್ರಹದಲ್ಲಿರುವರು.
Verse 30
لِيُوَفِّيَهُمْ أُجُورَهُمْ وَيَزِيدَهُم مِّن فَضْلِهِۦٓ ۚ إِنَّهُۥ غَفُورٌ شَكُورٌ
Transliteration liyuwaffiyahum ujūrahum wayazīdahum min faḍlihi innahu ghafūrun shakūrun
Kannada ಇದರ ಪರಿಣಾಮವು ಅಲ್ಲಾಹು ಅವರ ಸತ್ಫಲವನ್ನು ಸಂಪೂರ್ಣವಾಗಿ ನೀಡುವುದು ಮತ್ತು ಅವನ ಔದಾರ್ಯದಿಂದ ಅವರಿಗೆ ಇನ್ನಷ್ಟು ಹೆಚ್ಚಿಸಿ ಕೊಡುವುದೂ ಆಗಿದೆ. ನಿಶ್ಚಯವಾಗಿಯೂ ಅಲ್ಲಾಹು ಮಹಾಕ್ಷಮಾಶೀಲನೂ ಉದಾರನೂ ಆಗಿರುತ್ತಾನೆ.
Verse 31
وَٱلَّذِىٓ أَوْحَيْنَآ إِلَيْكَ مِنَ ٱلْكِتَـٰبِ هُوَ ٱلْحَقُّ مُصَدِّقًا لِّمَا بَيْنَ يَدَيْهِ ۗ إِنَّ ٱللَّهَ بِعِبَادِهِۦ لَخَبِيرٌۢ بَصِيرٌ
Transliteration wa-alladhī awḥaynā ilayka mina l-kitābi huwa l-ḥaqu muṣaddiqan limā bayna yadayhi inna l-laha biʿibādihi lakhabīrun baṣīrun
Kannada ನಾವು ನಿಮ್ಮ ಕಡೆಗೆ ಸಂದೇಶ ಕಳುಹಿಸಿದ ಗ್ರಂಥವೇ ಸತ್ಯವಾಗಿದ್ದು ಅದು ಈ ಮುಂಚಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಅಲ್ಲಾಹು ತನ್ನ ದಾಸರ ಬಗ್ಗೆ ಸೂಕ್ಷ್ಮ ಜ್ಞಾನಿಯೂ, ಸೂಕ್ಷ್ಮದರ್ಶಿಯೂ ಆಗಿರುತ್ತಾನೆ.
Verse 32
ثُمَّ أَوْرَثْنَا ٱلْكِتَـٰبَ ٱلَّذِينَ ٱصْطَفَيْنَا مِنْ عِبَادِنَا ۖ فَمِنْهُمْ ظَالِمٌ لِّنَفْسِهِۦ وَمِنْهُم مُّقْتَصِدٌ وَمِنْهُمْ سَابِقٌۢ بِٱلْخَيْرَٰتِ بِإِذْنِ ٱللَّهِ ۚ ذَٰلِكَ هُوَ ٱلْفَضْلُ ٱلْكَبِيرُ
Transliteration thumma awrathnā l-kitāba alladhīna iṣ'ṭafaynā min ʿibādinā famin'hum ẓālimun linafsihi wamin'hum muq'taṣidun wamin'hum sābiqun bil-khayrāti bi-idh'ni l-lahi dhālika huwa l-faḍlu l-kabīru
Kannada ಅನಂತರ ನಮ್ಮ ದಾಸರಲ್ಲಿ (ಶ್ರೇಷ್ಟರಾಗಿ) ಆಯ್ದುಕೊಂಡವರಿಗೆ ಈ ಗ್ರಂಥವನ್ನು ನಾವು ಉತ್ತರಾಧಿಕಾರವಾಗಿ ಕೊಟ್ಟೆವು. ಆದರೆ ಅವರಲ್ಲಿ ಕೆಲವರು ತನ್ನ ಮೇಲೆ ತಾನೇ ಅಕ್ರಮವೆಸಗಿದವರು. ಕೆಲವರು ಮಿತತ್ವವನ್ನು ಪಾಲಿಸುವವರು. ಇನ್ನು ಕೆಲವರು ಅಲ್ಲಾಹನ ಇಚ್ಛೆಯಂತೆ ಪುಣ್ಯ ಕಾರ್ಯಗಳಲ್ಲಿ ಮುಂದೆ ದಾಟಿ ಹೋದವರು. ಇದುವೇ ಮಹಾ ಅನುಗ್ರಹ.
Verse 33
جَنَّـٰتُ عَدْنٍ يَدْخُلُونَهَا يُحَلَّوْنَ فِيهَا مِنْ أَسَاوِرَ مِن ذَهَبٍ وَلُؤْلُؤًا ۖ وَلِبَاسُهُمْ فِيهَا حَرِيرٌ
Transliteration jannātu ʿadnin yadkhulūnahā yuḥallawna fīhā min asāwira min dhahabin walu'lu-an walibāsuhum fīhā ḥarīrun
Kannada ಅವರು ಶಾಶ್ವತವಾದ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಿಸುವರು. ಅಲ್ಲಿ ಅವರನ್ನು ಬಂಗಾರದ ಕಂಕಣಗಳಿಂದಲೂ ಮುತ್ತುಗಳಿಂದಲೂ ಅಲಂಕರಿಸಲಾಗುವುದು. ಅಲ್ಲಿ ಅವರ ಉಡುಪು ರೇಶ್ಮೆಯ ದ್ದಾಗಿರುವುದು.
Verse 34
وَقَالُوا۟ ٱلْحَمْدُ لِلَّهِ ٱلَّذِىٓ أَذْهَبَ عَنَّا ٱلْحَزَنَ ۖ إِنَّ رَبَّنَا لَغَفُورٌ شَكُورٌ
Transliteration waqālū l-ḥamdu lillahi alladhī adhhaba ʿannā l-ḥazana inna rabbanā laghafūrun shakūrun
Kannada ಅವರು, “ನಮ್ಮಿಂದ ದುಃಖವನ್ನು ದೂರೀಕರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಖಂಡಿತ ನಮ್ಮ ಪ್ರಭು ಮಹಾಕ್ಷಮಾದಾನಿಯೂ ಕೃತಜ್ಞತೆಯನ್ನು ಸ್ವೀಕರಿಸುವವನೂ ಆಗಿರುತ್ತಾನೆ.
Verse 35
ٱلَّذِىٓ أَحَلَّنَا دَارَ ٱلْمُقَامَةِ مِن فَضْلِهِۦ لَا يَمَسُّنَا فِيهَا نَصَبٌ وَلَا يَمَسُّنَا فِيهَا لُغُوبٌ
Transliteration alladhī aḥallanā dāra l-muqāmati min faḍlihi lā yamassunā fīhā naṣabun walā yamassunā fīhā lughūbun
Kannada ಅಂದರೆ ಅವನು ತನ್ನ ಅನುಗ್ರಹದಿಂದ ನಮ್ಮನ್ನು ಶಾಶ್ವತ ನಿವಾಸದಲ್ಲಿ ತಂದಿರಿಸಿದನು. ಇಲ್ಲಿ ನಮಗೆ ಯಾವುದೇ ಕಷ್ಟ ಉಂಟಾಗದು. ಒಂದಿಷ್ಟು ಆಯಾಸವೂ ಬಾಧಿಸದು” ಎನ್ನುವರು.
Verse 36
وَٱلَّذِينَ كَفَرُوا۟ لَهُمْ نَارُ جَهَنَّمَ لَا يُقْضَىٰ عَلَيْهِمْ فَيَمُوتُوا۟ وَلَا يُخَفَّفُ عَنْهُم مِّنْ عَذَابِهَا ۚ كَذَٰلِكَ نَجْزِى كُلَّ كَفُورٍ
Transliteration wa-alladhīna kafarū lahum nāru jahannama lā yuq'ḍā ʿalayhim fayamūtū walā yukhaffafu ʿanhum min ʿadhābihā kadhālika najzī kulla kafūrin
Kannada ಸತ್ಯನಿಷೇಧಿಗಳಿಗೆ ನರಕಾಗ್ನಿ ಇದೆ. ಅವರಿಗೆ ಮರಣವನ್ನು ವಿಧಿಸಲಾಗುವುದಿಲ್ಲ. ಹಾಗಿದ್ದರೆ ಸತ್ತು ಹೋಗುತ್ತಿದ್ದರು. ನರಕ ಶಿಕ್ಷೆಯಿಂದ ಅವರಿಗೆ ಕಡಿತ ಮಾಡಲಾಗುವುದೂ ಇಲ್ಲ. ನಾವು ಎಲ್ಲ ಸತ್ಯನಿಷೇಧಿಗೂ ಇದೇ ರೀತಿ ಪ್ರತಿಫಲ ಕೊಡುತ್ತೇವೆ.
Verse 37
وَهُمْ يَصْطَرِخُونَ فِيهَا رَبَّنَآ أَخْرِجْنَا نَعْمَلْ صَـٰلِحًا غَيْرَ ٱلَّذِى كُنَّا نَعْمَلُ ۚ أَوَلَمْ نُعَمِّرْكُم مَّا يَتَذَكَّرُ فِيهِ مَن تَذَكَّرَ وَجَآءَكُمُ ٱلنَّذِيرُ ۖ فَذُوقُوا۟ فَمَا لِلظَّـٰلِمِينَ مِن نَّصِيرٍ
Transliteration wahum yaṣṭarikhūna fīhā rabbanā akhrij'nā naʿmal ṣāliḥan ghayra alladhī kunnā naʿmalu awalam nuʿammir'kum mā yatadhakkaru fīhi man tadhakkara wajāakumu l-nadhīru fadhūqū famā lilẓẓālimīna min naṣīrin
Kannada ಅಲ್ಲಿ ಅವರು ಚೀರಾಡುವರು. “ನಮ್ಮ ಪ್ರಭೂ, ನೀನು ನಮ್ಮನ್ನು ಒಮ್ಮೆ ಹೊರಹಾಕು. ಆಗ ನಾವು ಹಿಂದೆ ಮಾಡುತ್ತಿದ್ದಂತಹ ಕರ್ಮಗಳಿಗಿಂತ ಭಿನ್ನವಾದ ಸತ್ಕರ್ಮವನ್ನು ಮಾಡುತ್ತೇವೆ”. “ಯೋಚಿಸುವವರಿಗೆ ಅರ್ಥಮಾಡಿಕೊಳ್ಳಲು ಸಾಕಾಗುವಷ್ಟು ಆಯುಷ್ಯವನ್ನು ನಾವು ನಿಮಗೆ ಕೊಟ್ಟಿರಲಿಲ್ಲವೇ? ನಿಮ್ಮ ಬಳಿಗೆ ಎಚ್ಚರಿಕೆ ಕೊಡು ವವರೂ ಬಂದಿದ್ದರಲ್ಲವೇ? ಆದ್ದರಿಂದ ಈಗ ಸವಿಯಿರಿ, ಇನ್ನು ಅಕ್ರಮಿಗಳಿಗೆ ಯಾರೂ ಸಹಾಯ ಕನಿಲ್ಲ” (ಎಂದು ಅವರಿಗೆ ಉತ್ತರಿಸಲಾಗುವುದು.)
Verse 38
إِنَّ ٱللَّهَ عَـٰلِمُ غَيْبِ ٱلسَّمَـٰوَٰتِ وَٱلْأَرْضِ ۚ إِنَّهُۥ عَلِيمٌۢ بِذَاتِ ٱلصُّدُورِ
Transliteration inna l-laha ʿālimu ghaybi l-samāwāti wal-arḍi innahu ʿalīmun bidhāti l-ṣudūri
Kannada ನಿಜವಾಗಿಯೂ ಅಲ್ಲಾಹು ಆಕಾಶಗಳ ಮತ್ತು ಭೂಮಿಯ ಅದೃಶ್ಯ ಜ್ಞಾನಿ. ಅವನು ಹೃದಯಂತರಾಳವನ್ನು ಬಲ್ಲ ಸೂಕ್ಷ್ಮಜ್ಞಾನಿ.
Verse 39
هُوَ ٱلَّذِى جَعَلَكُمْ خَلَـٰٓئِفَ فِى ٱلْأَرْضِ ۚ فَمَن كَفَرَ فَعَلَيْهِ كُفْرُهُۥ ۖ وَلَا يَزِيدُ ٱلْكَـٰفِرِينَ كُفْرُهُمْ عِندَ رَبِّهِمْ إِلَّا مَقْتًا ۖ وَلَا يَزِيدُ ٱلْكَـٰفِرِينَ كُفْرُهُمْ إِلَّا خَسَارًا
Transliteration huwa alladhī jaʿalakum khalāifa fī l-arḍi faman kafara faʿalayhi kuf'ruhu walā yazīdu l-kāfirīna kuf'ruhum ʿinda rabbihim illā maqtan walā yazīdu l-kāfirīna kuf'ruhum illā khasāran
Kannada ಅವನು ನಿಮ್ಮನ್ನು ಭೂಮಿಯಲ್ಲಿ (ಗತಜನಾಂ ಗದ) ಪ್ರತಿನಿಧಿಗಳಾಗಿ ಮಾಡಿದವನು. ಆದ್ದರಿಂದ ಯಾರು ಸತ್ಯವನ್ನು ನಿಷೇಧಿಸುತ್ತಾರೆ, ಅವನ ನಿಷೇಧದ ಫಲ ಅವನ ಮೇಲೆಯೇ ಇದೆ. ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇಧವು ಅವರ ಪ್ರಭುವಿನ ಬಳಿ ಉಗ್ರ ಕ್ರೋಧವನ್ನಲ್ಲದೆ ಹೆಚ್ಚಿಸುವುದಿಲ್ಲ. ಸತ್ಯನಿಷೇಧಿಗಳಿಗೆ ಅವರ ಸತ್ಯನಿಷೇ ಧವು ಭಾರೀ ನಷ್ಟವನ್ನೇ ಹೊರತು ಬೇರೇನನ್ನೂ ಹೆಚ್ಚಿಸುವುದಿಲ್ಲ.
Verse 40
قُلْ أَرَءَيْتُمْ شُرَكَآءَكُمُ ٱلَّذِينَ تَدْعُونَ مِن دُونِ ٱللَّهِ أَرُونِى مَاذَا خَلَقُوا۟ مِنَ ٱلْأَرْضِ أَمْ لَهُمْ شِرْكٌ فِى ٱلسَّمَـٰوَٰتِ أَمْ ءَاتَيْنَـٰهُمْ كِتَـٰبًا فَهُمْ عَلَىٰ بَيِّنَتٍ مِّنْهُ ۚ بَلْ إِن يَعِدُ ٱلظَّـٰلِمُونَ بَعْضُهُم بَعْضًا إِلَّا غُرُورًا
Transliteration qul ara-aytum shurakāakumu alladhīna tadʿūna min dūni l-lahi arūnī mādhā khalaqū mina l-arḍi am lahum shir'kun fī l-samāwāti am ātaynāhum kitāban fahum ʿalā bayyinatin min'hu bal in yaʿidu l-ẓālimūna baʿḍuhum baʿḍan illā ghurūran
Kannada (ಪೈಗಂಬರರೇ) ಹೇಳಿರಿ : ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುತ್ತಿರುವ ನಿಮ್ಮ ಸಹಭಾಗಿಗ ಳನ್ನು ಕಂಡಿದ್ದೀರಾ? (ಇವರ ಬಗ್ಗೆ ನೀವೇನೆನ್ನುವಿರಿ?) ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿದ್ದಾರೆ? ಅಥವಾ ಆಕಾಶಗಳಲ್ಲಿ ಅವರ ಪಾಲು ಏನೆಂದು ನನಗೆ ತೋರಿಸಿರಿ. ಇಲ್ಲವೇ ಇವರಿಗೆ ನಾವು ಯಾವುದೇ ವೇದಗ್ರಂಥವನ್ನು (ಪ್ರತ್ಯೇಕವಾಗಿ) ಕೊಟ್ಟಿದ್ದೇವೆಯೇ? ಆಮೇಲೆ ಅದರಿಂದ ಯಾವುದೇ ಆಧಾರದ ಮೇಲೆ ಅವರು ನೆಲೆ ಗೊಂಡಿದ್ದಾರೆಯೇ? ಇಲ್ಲ. ಅಕ್ರಮಿಗಳು ಪರಸ್ಪರ ಮೋಸದ ಭರವಸೆಗಳನ್ನು ಮಾತ್ರ ನೀಡಬಲ್ಲರು.
Verse 41
۞ إِنَّ ٱللَّهَ يُمْسِكُ ٱلسَّمَـٰوَٰتِ وَٱلْأَرْضَ أَن تَزُولَا ۚ وَلَئِن زَالَتَآ إِنْ أَمْسَكَهُمَا مِنْ أَحَدٍ مِّنۢ بَعْدِهِۦٓ ۚ إِنَّهُۥ كَانَ حَلِيمًا غَفُورًا
Transliteration inna l-laha yum'siku l-samāwāti wal-arḍa an tazūlā wala-in zālatā in amsakahumā min aḥadin min baʿdihi innahu kāna ḥalīman ghafūran
Kannada ನಿಶ್ಚಯವಾಗಿಯೂ ಭೂಮಿ-ಆಕಾಶಗಳು (ಅವುಗಳ ಸ್ಥಾನದಿಂದ) ಸರಿದು ಹೋಗದಂತೆ ಅಲ್ಲಾಹನು ಹಿಡಿದಿಟ್ಟಿರುವನು. ಅವು ಸರಿದು ಹೋದರೆ, ಅಲ್ಲಾಹನೇ ಹೊರತು ಅವುಗಳನ್ನು ನಿಯಂತ್ರಿಸಿ ನಿಲ್ಲಿಸಲು ಬೇರಾರಿಗೂ ಸಾಧ್ಯವಿಲ್ಲ. ಅಲ್ಲಾಹು ಅತ್ಯಂತ ಸಹನಶೀಲನೂ ಕ್ಷಮಾಶೀಲನೂ ಆಗಿರುತ್ತಾನೆ.
Verse 42
وَأَقْسَمُوا۟ بِٱللَّهِ جَهْدَ أَيْمَـٰنِهِمْ لَئِن جَآءَهُمْ نَذِيرٌ لَّيَكُونُنَّ أَهْدَىٰ مِنْ إِحْدَى ٱلْأُمَمِ ۖ فَلَمَّا جَآءَهُمْ نَذِيرٌ مَّا زَادَهُمْ إِلَّا نُفُورًا
Transliteration wa-aqsamū bil-lahi jahda aymānihim la-in jāahum nadhīrun layakūnunna ahdā min iḥ'dā l-umami falammā jāahum nadhīrun mā zādahum illā nufūran
Kannada ನಿಶ್ಚಯವಾಗಿಯೂ ಭೂಮಿ-ಆಕಾಶಗಳು (ಅವುಗಳ ಸ್ಥಾನದಿಂದ) ಸರಿದು ಹೋಗದಂತೆ ಅಲ್ಲಾಹನು ಹಿಡಿದಿಟ್ಟಿರುವನು. ಅವು ಸರಿದು ಹೋದರೆ, ಅಲ್ಲಾಹನೇ ಹೊರತು ಅವುಗಳನ್ನು ನಿಯಂತ್ರಿಸಿ ನಿಲ್ಲಿಸಲು ಬೇರಾರಿಗೂ ಸಾಧ್ಯವಿಲ್ಲ. ಅಲ್ಲಾಹು ಅತ್ಯಂತ ಸಹನಶೀಲನೂ ಕ್ಷಮಾಶೀಲನೂ ಆಗಿರುತ್ತಾನೆ.
Verse 43
ٱسْتِكْبَارًا فِى ٱلْأَرْضِ وَمَكْرَ ٱلسَّيِّئِ ۚ وَلَا يَحِيقُ ٱلْمَكْرُ ٱلسَّيِّئُ إِلَّا بِأَهْلِهِۦ ۚ فَهَلْ يَنظُرُونَ إِلَّا سُنَّتَ ٱلْأَوَّلِينَ ۚ فَلَن تَجِدَ لِسُنَّتِ ٱللَّهِ تَبْدِيلًا ۖ وَلَن تَجِدَ لِسُنَّتِ ٱللَّهِ تَحْوِيلًا
Transliteration is'tik'bāran fī l-arḍi wamakra l-sayi-i walā yaḥīqu l-makru l-sayi-u illā bi-ahlihi fahal yanẓurūna illā sunnata l-awalīna falan tajida lisunnati l-lahi tabdīlan walan tajida lisunnati l-lahi taḥwīlan
Kannada ಇವರು ಭೂಮಿಯಲ್ಲಿ ಗರ್ವ ತೋರಿದುದಕ್ಕಾಗಿ ಮತ್ತು ಕೀಳುಮಟ್ಟದ ಕುತಂತ್ರಗಳನ್ನು ಹೂಡಿದ್ದಕ್ಕಾಗಿ. ನಿಜದಲ್ಲಿ ಕೆಟ್ಟಕುತಂತ್ರಗಳ ಫಲ ಅದರ ಜನರನ್ನೇ ಅಧೋಗತಿಗೆ ಇಳಿಸಿ ಬಿಡುತ್ತವೆ. ಆಗ ಗತ ಜನಾಂಗದ ಮೇಲೆ ಅಲ್ಲಾಹನು ಕೈಗೊಂಡ ಕ್ರಮವನ್ನೇ ಹೊರತು ಬೇರೇನನ್ನು ಇವರು ನಿರೀಕ್ಷಿಸುತ್ತಿರುವರು? ಹಾಗಿದ್ದರೆ ನೀವು ಅಲ್ಲಾಹನ ಕಾರ್ಯಾ ಚರಣೆಗೆ ಯಾವುದೇ ಬದಲಾವಣೆಯನ್ನು ಕಾಣಲಾರಿರಿ. ಅಲ್ಲಾಹನ ಕಾರ್ಯಾಚರಣೆಗೆ ಯಾವುದೇ ಸ್ಥಾನಪಲ್ಲಟವನ್ನು ನೀವು ಕಾಣಲಾರಿರಿ.
Verse 44
أَوَلَمْ يَسِيرُوا۟ فِى ٱلْأَرْضِ فَيَنظُرُوا۟ كَيْفَ كَانَ عَـٰقِبَةُ ٱلَّذِينَ مِن قَبْلِهِمْ وَكَانُوٓا۟ أَشَدَّ مِنْهُمْ قُوَّةً ۚ وَمَا كَانَ ٱللَّهُ لِيُعْجِزَهُۥ مِن شَىْءٍ فِى ٱلسَّمَـٰوَٰتِ وَلَا فِى ٱلْأَرْضِ ۚ إِنَّهُۥ كَانَ عَلِيمًا قَدِيرًا
Transliteration awalam yasīrū fī l-arḍi fayanẓurū kayfa kāna ʿāqibatu alladhīna min qablihim wakānū ashadda min'hum quwwatan wamā kāna l-lahu liyuʿ'jizahu min shayin fī l-samāwāti walā fī l-arḍi innahu kāna ʿalīman qadīran
Kannada ಇವರು ಭೂಮಿಯಲ್ಲಿ ಸಂಚರಿಸಿ ತಮಗಿಂತ ಮುಂಚೆ ಗತಿಸಿದವರ ಪರಿಣಾಮವೇನಾಯಿ ತೆಂದು ನೋಡಲಿಲ್ಲವೇ? ಅವರು ಇವರಿಗಿಂತ ಅಧಿಕ ಬಲಶಾಲಿಗಳಾಗಿದ್ದರು. ಆಕಾಶಗಳಲ್ಲಾಗಲಿ ಭೂಮಿಯಲ್ಲಾಗಲಿ ಅಲ್ಲಾಹನನ್ನು ಸೋಲಿಸಬಲ್ಲ ಯಾವ ಶಕ್ತಿಯೂ ಇಲ್ಲ. ಅವನು ಸರ್ವಜ್ಞನು ಮತ್ತು ಸರ್ವಶಕ್ತನು.
Verse 45
وَلَوْ يُؤَاخِذُ ٱللَّهُ ٱلنَّاسَ بِمَا كَسَبُوا۟ مَا تَرَكَ عَلَىٰ ظَهْرِهَا مِن دَآبَّةٍ وَلَـٰكِن يُؤَخِّرُهُمْ إِلَىٰٓ أَجَلٍ مُّسَمًّى ۖ فَإِذَا جَآءَ أَجَلُهُمْ فَإِنَّ ٱللَّهَ كَانَ بِعِبَادِهِۦ بَصِيرًۢا
Transliteration walaw yuākhidhu l-lahu l-nāsa bimā kasabū mā taraka ʿalā ẓahrihā min dābbatin walākin yu-akhiruhum ilā ajalin musamman fa-idhā jāa ajaluhum fa-inna l-laha kāna biʿibādihi baṣīran
Kannada ಜನರು ಮಾಡಿದ ದುಷ್ಕರ್ಮಗಳಿಗಾಗಿ ಅಲ್ಲಾ ಹನು ಅವರನ್ನು (ತ್ವರಿತವಾಗಿ) ಹಿಡಿದು ಶಿಕ್ಷಿಸುತ್ತಿದ್ದರೆ, ಭೂಮಿಯ ಮೇಲೆ ಒಂದು ಜೀವಿಯನ್ನೂ ಜೀವಂತ ಬಿಡುತ್ತಿರಲಿಲ್ಲ. ಆದರೆ, ಅವನು ಅವರಿಗೆ ಒಂದು ನಿಶ್ಚಿತ ಸಮಯದವರೆಗೆ ಕಾಲಾವಕಾಶ ಕೊಡುವನು. ಅನಂತರ ಅವರ ನಿಶ್ಚಿತ ಕಾಲ ಬಂದಾಗ ಅಲ್ಲಾಹು ತನ್ನ ದಾಸರನ್ನು ನೋಡಿ ಕೊಳ್ಳುವನು. (ತಕ್ಕ ಪ್ರತಿಫಲ ಕೊಡುವನು).
Read Surah Fatir in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.