MyDugsiStart learning

Surah Al-Mujadila in Kannada: translation and audio

Surah 58 · المجادلة · The Pleading Woman · 22 verses

Surah Al-Mujadila verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Mujadila word by word in English.

Verse 1

قَدْ سَمِعَ ٱللَّهُ قَوْلَ ٱلَّتِى تُجَـٰدِلُكَ فِى زَوْجِهَا وَتَشْتَكِىٓ إِلَى ٱللَّهِ وَٱللَّهُ يَسْمَعُ تَحَاوُرَكُمَآ ۚ إِنَّ ٱللَّهَ سَمِيعٌۢ بَصِيرٌ

Transliteration qad samiʿa l-lahu qawla allatī tujādiluka fī zawjihā watashtakī ilā l-lahi wal-lahu yasmaʿu taḥāwurakumā inna l-laha samīʿun baṣīrun

Kannada (ಪ್ರವಾದಿವರ್ಯರೇ) ತನ್ನ ಪತಿಯ ವಿಷಯದಲ್ಲಿ ತಮ್ಮಲ್ಲಿ ವಾದಿಸುತ್ತಿರುವ ಹಾಗೂ ಅಲ್ಲಾಹನೊಡನೆ ಮೊರೆಯಿಡುತ್ತಿರುವ ಸ್ತ್ರೀಯ ಮಾತನ್ನು ಅಲ್ಲಾಹನು ಖಂಡಿತ ಆಲಿಸಿದನು. ಅಲ್ಲಾಹನು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದಾನೆ. ಅಲ್ಲಾಹನು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.

Verse 2

ٱلَّذِينَ يُظَـٰهِرُونَ مِنكُم مِّن نِّسَآئِهِم مَّا هُنَّ أُمَّهَـٰتِهِمْ ۖ إِنْ أُمَّهَـٰتُهُمْ إِلَّا ٱلَّـٰٓـِٔى وَلَدْنَهُمْ ۚ وَإِنَّهُمْ لَيَقُولُونَ مُنكَرًا مِّنَ ٱلْقَوْلِ وَزُورًا ۚ وَإِنَّ ٱللَّهَ لَعَفُوٌّ غَفُورٌ

Transliteration alladhīna yuẓāhirūna minkum min nisāihim mā hunna ummahātihim in ummahātuhum illā allāī waladnahum wa-innahum layaqūlūna munkaran mina l-qawli wazūran wa-inna l-laha laʿafuwwun ghafūrun

Kannada ನಿಮ್ಮ ಪೈಕಿ ತಮ್ಮ ಪತ್ನಿಯರನ್ನು (ಳಿಹಾರ್) ತಾಯಿಗೆ ಸಮಾನರಂತೆ ಸಾರಿ ಬಿಡುವವರು (ತಪ್ಪು ಮಾಡಿರುತ್ತಾರೆ). ಪತ್ನಿಯರು ಅವರ ತಾಯಂದಿರಲ್ಲ. ಅವರನ್ನು ಹೆತ್ತವರೇ ಅವರ ತಾಯಂದಿರು. ಅವರು ನಿಷಿದ್ಧ ಹಾಗೂ ಸುಳ್ಳಾದ ಮಾತನ್ನು ಹೇಳುತ್ತಾರೆ. ವಾಸ್ತವದಲ್ಲಿ ಅಲ್ಲಾಹನು ಬಹಳ ಮನ್ನಿಸುವವನೂ ಮಹಾ ಕ್ಷಮಾಶೀಲನೂ ಆಗಿರುತ್ತಾನೆ.

Verse 3

وَٱلَّذِينَ يُظَـٰهِرُونَ مِن نِّسَآئِهِمْ ثُمَّ يَعُودُونَ لِمَا قَالُوا۟ فَتَحْرِيرُ رَقَبَةٍ مِّن قَبْلِ أَن يَتَمَآسَّا ۚ ذَٰلِكُمْ تُوعَظُونَ بِهِۦ ۚ وَٱللَّهُ بِمَا تَعْمَلُونَ خَبِيرٌ

Transliteration wa-alladhīna yuẓāhirūna min nisāihim thumma yaʿūdūna limā qālū fataḥrīru raqabatin min qabli an yatamāssā dhālikum tūʿaẓūna bihi wal-lahu bimā taʿmalūna khabīrun

Kannada ನಿಮ್ಮ ಪೈಕಿ ತಮ್ಮ ಪತ್ನಿಯರನ್ನು ತಾಯಿಗೆ ಸಮಾನವಾಗಿ (ಳಿಹಾರ್) ಮಾಡಿದವರು, ಅನಂತರ ತಾವು ಹೇಳಿದ ಮಾತಿನಿಂದ ಮರಳಿದರೆ ಅವರು ಪರಸ್ಪರ ಸ್ಪರ್ಶಿಸುವುದಕ್ಕೆ ಮುಂಚೆ ಒಬ್ಬ ಗುಲಾಮನನ್ನು ವಿಮೋಚಿಸಬೇಕಾಗುವುದು. ಇದು ನಿಮಗೆ ನೀಡಲಾಗುವ ಉಪದೇಶ. ನೀವು ಮಾಡುವುದರ ಬಗ್ಗೆ ಅಲ್ಲಾಹನು ಸೂಕ್ಷ್ಮಜ್ಞಾನಿಯಾಗಿರುವನು.

Verse 4

فَمَن لَّمْ يَجِدْ فَصِيَامُ شَهْرَيْنِ مُتَتَابِعَيْنِ مِن قَبْلِ أَن يَتَمَآسَّا ۖ فَمَن لَّمْ يَسْتَطِعْ فَإِطْعَامُ سِتِّينَ مِسْكِينًا ۚ ذَٰلِكَ لِتُؤْمِنُوا۟ بِٱللَّهِ وَرَسُولِهِۦ ۚ وَتِلْكَ حُدُودُ ٱللَّهِ ۗ وَلِلْكَـٰفِرِينَ عَذَابٌ أَلِيمٌ

Transliteration faman lam yajid faṣiyāmu shahrayni mutatābiʿayni min qabli an yatamāssā faman lam yastaṭiʿ fa-iṭ'ʿāmu sittīna mis'kīnan dhālika litu'minū bil-lahi warasūlihi watil'ka ḥudūdu l-lahi walil'kāfirīna ʿadhābun alīmun

Kannada ಇನ್ನು ಯಾರಿಗಾದರೂ ಗುಲಾಮನು ಸಿಗದಿದ್ದರೆ ಅವರಿಬ್ಬರು ಪರಸ್ಪರ ಸ್ಪರ್ಶಿಸುವುದಕ್ಕೆ ಮುಂಚೆ ಅವನು ನಿರಂತರವಾಗಿ ಎರಡು ತಿಂಗಳ ಉಪವಾಸ ವ್ರತವನ್ನು ಆಚರಿಸಬೇಕು. ಇದಕ್ಕೂ ಅಶಕ್ತನಾಗಿರುವವನು ಅರುವತ್ತು ಮಂದಿ ಮಿಸ್ಕೀನರಿಗೆ (ಬಡವರಿಗೆ) ಊಟ ಕೊಡಬೇಕು. ಇದು ಅಲ್ಲಾಹು ಮತ್ತು ಅವನ ದೂತರ ಮೇಲೆ ನೀವು ವಿಶ್ವಾಸವಿರಿಸುವಂತಾಗಲಿಕ್ಕಾಗಿ ಇದೆ. ಇವು ಅಲ್ಲಾಹನ ನಿಯಮ ಪರಿಧಿಗಳಾಗಿವೆ. ಸತ್ಯ ನಿಷೇಧಿಗಳಿಗೆ ವೇದನಾಯುಕ್ತ ಶಿಕ್ಷೆಯಿದೆ.

Verse 5

إِنَّ ٱلَّذِينَ يُحَآدُّونَ ٱللَّهَ وَرَسُولَهُۥ كُبِتُوا۟ كَمَا كُبِتَ ٱلَّذِينَ مِن قَبْلِهِمْ ۚ وَقَدْ أَنزَلْنَآ ءَايَـٰتٍۭ بَيِّنَـٰتٍ ۚ وَلِلْكَـٰفِرِينَ عَذَابٌ مُّهِينٌ

Transliteration inna alladhīna yuḥāddūna l-laha warasūlahu kubitū kamā kubita alladhīna min qablihim waqad anzalnā āyātin bayyinātin walil'kāfirīna ʿadhābun muhīnun

Kannada ಅಲ್ಲಾಹು ಮತ್ತು ಅವನ ದೂತರನ್ನು ವಿರೋಧಿಸು ವವರು ತಮಗಿಂತ ಹಿಂದಿನವರು ಅಪಮಾನಿಸ ಲ್ಪಟ್ಟಂತೆ ಅಪಮಾನಿಸಲ್ಪಡುವರು. ಸುಸ್ಪಷ್ಟ ವಚನಗಳನ್ನು ನಾವು ಅವತೀರ್ಣಗೊಳಿಸಿದ್ದೇವೆ. ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆ ಇದೆ.

Verse 6

يَوْمَ يَبْعَثُهُمُ ٱللَّهُ جَمِيعًا فَيُنَبِّئُهُم بِمَا عَمِلُوٓا۟ ۚ أَحْصَىٰهُ ٱللَّهُ وَنَسُوهُ ۚ وَٱللَّهُ عَلَىٰ كُلِّ شَىْءٍ شَهِيدٌ

Transliteration yawma yabʿathuhumu l-lahu jamīʿan fayunabbi-uhum bimā ʿamilū aḥṣāhu l-lahu wanasūhu wal-lahu ʿalā kulli shayin shahīdun

Kannada ಅಲ್ಲಾಹನು ಅವರೆಲ್ಲರನ್ನೂ ಮಗದೊಮ್ಮೆ ಜೀವಂತ ಎಬ್ಬಿಸುವ ದಿನ. ಅವರು ಮಾಡಿರುವ ಕರ್ಮಗಳ ಬಗ್ಗೆ ಅವರಿಗೆ ತಿಳಿಸಲಾಗುವುದು. ಅಲ್ಲಾಹನು ಅವರು ಮಾಡಿದುದನ್ನು ಎಣಿಸಿ ಕಾಯ್ದಿರಿಸಿದ್ದಾನೆ. ಆದರೆ ಅವರು ಮರೆತುಬಿಟ್ಟಿದ್ದಾರೆ. ಅಲ್ಲಾಹನು ಪ್ರತಿಯೊಂದು ವಸ್ತುವಿನ ಮೇಲೆ ಸಾಕ್ಷಿಯಾಗಿದ್ದಾನೆ.

Verse 7

أَلَمْ تَرَ أَنَّ ٱللَّهَ يَعْلَمُ مَا فِى ٱلسَّمَـٰوَٰتِ وَمَا فِى ٱلْأَرْضِ ۖ مَا يَكُونُ مِن نَّجْوَىٰ ثَلَـٰثَةٍ إِلَّا هُوَ رَابِعُهُمْ وَلَا خَمْسَةٍ إِلَّا هُوَ سَادِسُهُمْ وَلَآ أَدْنَىٰ مِن ذَٰلِكَ وَلَآ أَكْثَرَ إِلَّا هُوَ مَعَهُمْ أَيْنَ مَا كَانُوا۟ ۖ ثُمَّ يُنَبِّئُهُم بِمَا عَمِلُوا۟ يَوْمَ ٱلْقِيَـٰمَةِ ۚ إِنَّ ٱللَّهَ بِكُلِّ شَىْءٍ عَلِيمٌ

Transliteration alam tara anna l-laha yaʿlamu mā fī l-samāwāti wamā fī l-arḍi mā yakūnu min najwā thalāthatin illā huwa rābiʿuhum walā khamsatin illā huwa sādisuhum walā adnā min dhālika walā akthara illā huwa maʿahum ayna mā kānū thumma yunabbi-uhum bimā ʿamilū yawma l-qiyāmati inna l-laha bikulli shayin ʿalīmun

Kannada ಆಕಾಶಗಳಲ್ಲಿರುವುದನ್ನೂ-ಭೂಮಿಯಲ್ಲಿರುವುದ ನ್ನೂ ಅಲ್ಲಾಹನು ಅರಿಯುತ್ತಾನೆಂದು ನಿಮಗೆ ತಿಳಿ ದಿಲ್ಲವೇ? ಮೂರು ಮಂದಿಗಳ ನಡುವೆ ಗುಪ್ತ ಸಮಾಲೋಚನೆ ನಡೆಸುತ್ತಿರುವಾಗ ಅವರೊಂದಿಗೆ ನಾಲ್ಕನೆಯವನಾಗಿ ಅಲ್ಲಾಹನು ಖಂಡಿತ ಇರು ವನು. ಐದು ಮಂದಿಗಳು ಗೂಢಾಲೋಚನೆ ನಡೆ ಸುವಾಗ ಆರನೆಯವನಾಗಿ ಅಲ್ಲಾಹು ಅಲ್ಲಿ ಇದ್ದೇ ಇರುತ್ತಾನೆ. ಅವರು (ಮಾತು ಕತೆ ನಡೆಸುವವರು) ಇದಕ್ಕಿಂತ ಕಡಿಮೆ ಇರಲಿ ಅಥವಾ ಹೆಚ್ಚಿರಲಿ, ಅವರು ಎಲ್ಲೇ ಇರಲಿ, ಅಲ್ಲಾಹನು ಅವರ ಜೊತೆಗಿರುತ್ತಾನೆ. ಅವರು ಮಾಡಿದ್ದನ್ನು ಪುನರುತ್ಥಾನದಂದು ಅವರಿಗವನು ತಿಳಿಸುವನು. ಅಲ್ಲಾಹನು ಸಕಲ ವಸ್ತುಗಳ ಕುರಿತು ಸರಿಯಾದ ಜ್ಞಾನವುಳ್ಳವನಾಗಿದ್ದಾನೆ.

Verse 8

أَلَمْ تَرَ إِلَى ٱلَّذِينَ نُهُوا۟ عَنِ ٱلنَّجْوَىٰ ثُمَّ يَعُودُونَ لِمَا نُهُوا۟ عَنْهُ وَيَتَنَـٰجَوْنَ بِٱلْإِثْمِ وَٱلْعُدْوَٰنِ وَمَعْصِيَتِ ٱلرَّسُولِ وَإِذَا جَآءُوكَ حَيَّوْكَ بِمَا لَمْ يُحَيِّكَ بِهِ ٱللَّهُ وَيَقُولُونَ فِىٓ أَنفُسِهِمْ لَوْلَا يُعَذِّبُنَا ٱللَّهُ بِمَا نَقُولُ ۚ حَسْبُهُمْ جَهَنَّمُ يَصْلَوْنَهَا ۖ فَبِئْسَ ٱلْمَصِيرُ

Transliteration alam tara ilā alladhīna nuhū ʿani l-najwā thumma yaʿūdūna limā nuhū ʿanhu wayatanājawna bil-ith'mi wal-ʿud'wāni wamaʿṣiyati l-rasūli wa-idhā jāūka ḥayyawka bimā lam yuḥayyika bihi l-lahu wayaqūlūna fī anfusihim lawlā yuʿadhibunā l-lahu bimā naqūlu ḥasbuhum jahannamu yaṣlawnahā fabi'sa l-maṣīru

Kannada ಗೂಢಾಲೋಚನೆ ನಡೆಸುವುದನ್ನು ವಿರೋಧಿಸಲ್ಪಟ್ಟ ಒಂದು ವಿಭಾಗ ಜನರನ್ನು ತಾವು ನೋಡಲಿಲ್ಲವೇ? ಅವರು ಮತ್ತೆ ಅದೇ ವಿರೋಧಿಸಲ್ಪಟ್ಟ ಕೃತ್ಯದ ಕಡೆಗೆ ಮರಳುತ್ತಾರೆ. ಅವರು ಪಾಪ, ಅತಿರೇಕ ಹಾಗೂ ದೂತರೊಂದಿಗಿರುವ ಧಿಕ್ಕಾರದಿಂದ ಪರಸ್ಪರ ಗೂಢಾಲೋಚನೆ ನಡೆಸುತ್ತಾರೆ. ಅವರು ತಮ್ಮ ಬಳಿಗೆ ಬಂದಾಗ ಅಲ್ಲಾಹನು ತಮಗೆ ಸಲಾಮ್ ಹೇಳಿರದ ರೀತಿಯಲ್ಲಿ ತಮಗೆ ಸಲಾಮ್ ಹೇಳುತ್ತಾರೆ ಮತ್ತು ನಮ್ಮ ಈ ಮಾತುಗಳಿಗಾಗಿ ಅಲ್ಲಾಹನು ನಮಗೆ ಶಿಕ್ಷೆ ನೀಡುವುದಿಲ್ಲವೇಕೆ ಎಂದು ಅವರು ಪರಸ್ಪರ ಕೇಳಿಕೊಳ್ಳುತ್ತಾರೆ. ಅವರಿಗೆ ನರಕವೇ ಸಾಕು. ಅವರು ಅದರಲ್ಲಿ ಕರಟುವರು. ಅವರ ಪರ್ಯವಸಾನ ಬಹಳ ನಿಕೃಷ್ಟ.

Verse 9

يَـٰٓأَيُّهَا ٱلَّذِينَ ءَامَنُوٓا۟ إِذَا تَنَـٰجَيْتُمْ فَلَا تَتَنَـٰجَوْا۟ بِٱلْإِثْمِ وَٱلْعُدْوَٰنِ وَمَعْصِيَتِ ٱلرَّسُولِ وَتَنَـٰجَوْا۟ بِٱلْبِرِّ وَٱلتَّقْوَىٰ ۖ وَٱتَّقُوا۟ ٱللَّهَ ٱلَّذِىٓ إِلَيْهِ تُحْشَرُونَ

Transliteration yāayyuhā alladhīna āmanū idhā tanājaytum falā tatanājaw bil-ith'mi wal-ʿud'wāni wamaʿṣiyati l-rasūli watanājaw bil-biri wal-taqwā wa-ittaqū l-laha alladhī ilayhi tuḥ'sharūna

Kannada ಸತ್ಯವಿಶ್ವಾಸಿಗಳೇ, ನೀವು ಪರಸ್ಪರ ರಹಸ್ಯ ಸಂಭಾಷಣೆ ನಡೆಸುವಾಗ ಪಾಪ, ಅತಿರೇಕ ಮತ್ತು ದೂತರನ್ನು ಧಿಕ್ಕರಿಸಿಕೊಂಡು ರಹಸ್ಯ ಮಾತುಕತೆ ನಡೆಸಬೇಡಿ, ಪುಣ್ಯ ಹಾಗೂ ಧರ್ಮನಿಷ್ಠೆಯಲ್ಲಿ ನೀವು ರಹಸ್ಯ ಉಪದೇಶ ನೀಡಿರಿ. ಮತ್ತು ನೀವು ಯಾರ ಕಡೆಗೆ ಹೋಗಿ ಒಟ್ಟು ಸೇರಲಿಕ್ಕಿದೆಯೋ ಆ ಅಲ್ಲಾಹನನ್ನು ಭಯಪಡಿರಿ.

Verse 10

إِنَّمَا ٱلنَّجْوَىٰ مِنَ ٱلشَّيْطَـٰنِ لِيَحْزُنَ ٱلَّذِينَ ءَامَنُوا۟ وَلَيْسَ بِضَآرِّهِمْ شَيْـًٔا إِلَّا بِإِذْنِ ٱللَّهِ ۚ وَعَلَى ٱللَّهِ فَلْيَتَوَكَّلِ ٱلْمُؤْمِنُونَ

Transliteration innamā l-najwā mina l-shayṭāni liyaḥzuna alladhīna āmanū walaysa biḍārrihim shayan illā bi-idh'ni l-lahi waʿalā l-lahi falyatawakkali l-mu'minūna

Kannada ಆ ಗೂಢಾಲೋಚನೆಯು ಪೈಶಾಚಿಕ ಕೃತ್ಯ ವಾಗಿದೆ. ಸತ್ಯವಿಶ್ವಾಸಿಗಳು ಅದರಿಂದ ಬೇಸರ ಗೊಳ್ಳಲೆಂದು ಹಾಗೆ ಮಾಡಲಾಗುತ್ತದೆ. ಆದರೆ ಅಲ್ಲಾಹನ ಅನುಮತಿಯಿಲ್ಲದೆ ಅದು ಅವರಿಗೆ ಯಾವ ಹಾನಿಯನ್ನೂ ಮಾಡಲಾರದು. ಸತ್ಯ ವಿಶ್ವಾಸಿಗಳು ಅಲ್ಲಾಹನ ಮೇಲೆಯೇ ಭರವಸೆ ಇಡಲಿ.

Verse 11

يَـٰٓأَيُّهَا ٱلَّذِينَ ءَامَنُوٓا۟ إِذَا قِيلَ لَكُمْ تَفَسَّحُوا۟ فِى ٱلْمَجَـٰلِسِ فَٱفْسَحُوا۟ يَفْسَحِ ٱللَّهُ لَكُمْ ۖ وَإِذَا قِيلَ ٱنشُزُوا۟ فَٱنشُزُوا۟ يَرْفَعِ ٱللَّهُ ٱلَّذِينَ ءَامَنُوا۟ مِنكُمْ وَٱلَّذِينَ أُوتُوا۟ ٱلْعِلْمَ دَرَجَـٰتٍ ۚ وَٱللَّهُ بِمَا تَعْمَلُونَ خَبِيرٌ

Transliteration yāayyuhā alladhīna āmanū idhā qīla lakum tafassaḥū fī l-majālisi fa-if'saḥū yafsaḥi l-lahu lakum wa-idhā qīla unshuzū fa-unshuzū yarfaʿi l-lahu alladhīna āmanū minkum wa-alladhīna ūtū l-ʿil'ma darajātin wal-lahu bimā taʿmalūna khabīrun

Kannada ಸತ್ಯವಿಶ್ವಾಸಿಗಳೇ, ನಿಮ್ಮ ಸಭೆಗಳಲ್ಲಿ ಸ್ಥಳವಕಾಶ ಮಾಡಿಕೊಡಿರೆಂದು ನಿಮ್ಮೊಡನೆ ಹೇಳಲ್ಪಟ್ಟಾಗ ನೀವು ಸ್ಥಳವಕಾಶ ಮಾಡಿಕೊಡಿರಿ. ಅಲ್ಲಾಹನು ನಿಮಗೆ ವಿಶಾಲತೆಯನ್ನು ದಯಪಾಲಿಸುವನು, ನಿಮ್ಮೊಡನೆ ಎದ್ದು ಹೋಗಿರಿ ಎಂದು ಹೇಳಲ್ಪಟ್ಟಾಗ ನೀವು ಎದ್ದು ಹೋಗಿರಿ. ನಿಮ್ಮ ಪೈಕಿ ಸತ್ಯವಿಶ್ವಾಸವುಳ್ಳವರಿಗೆ ಮತ್ತು ಜ್ಞಾನವು ನೀಡಲ್ಪಟ್ಟಿರುವವರಿಗೆ ಅಲ್ಲಾಹನು ಉನ್ನತ ಪದವಿಗಳನ್ನು ದಯಪಾಲಿಸುವನು. ನೀವು ಮಾಡುತ್ತಿರುವುದರ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞಾನಿಯು.

Verse 12

يَـٰٓأَيُّهَا ٱلَّذِينَ ءَامَنُوٓا۟ إِذَا نَـٰجَيْتُمُ ٱلرَّسُولَ فَقَدِّمُوا۟ بَيْنَ يَدَىْ نَجْوَىٰكُمْ صَدَقَةً ۚ ذَٰلِكَ خَيْرٌ لَّكُمْ وَأَطْهَرُ ۚ فَإِن لَّمْ تَجِدُوا۟ فَإِنَّ ٱللَّهَ غَفُورٌ رَّحِيمٌ

Transliteration yāayyuhā alladhīna āmanū idhā nājaytumu l-rasūla faqaddimū bayna yaday najwākum ṣadaqatan dhālika khayrun lakum wa-aṭharu fa-in lam tajidū fa-inna l-laha ghafūrun raḥīmun

Kannada ಸತ್ಯವಿಶ್ವಾಸಿಗಳೇ, ನೀವು ದೂತರೊಡನೆ ಭೇಟಿ ನಡೆಸುವುದಾದರೆ ನಿಮ್ಮ ಭೇಟಿಗೆ ಮೊದಲು ಏನಾ ದರೊಂದು ದಾನವನ್ನು ಮುಂದಿಡಿರಿ. ಅದು ನಿಮ್ಮ ಪಾಲಿಗೆ ಹೆಚ್ಚು ಉತ್ತಮವೂ ಪರಿಶುದ್ಧವೂ ಆಗಿದೆ. ಇನ್ನು ನಿಮ್ಮ ಬಳಿ (ದಾನಧರ್ಮ ಮಾಡಲು) ಏನೂ ಇಲ್ಲದಿದ್ದರೆ, ಅಲ್ಲಾಹನು ಮಹಾಕ್ಷಮಾಶೀಲ ನೂ ಕೃಪಾನಿಧಿಯೂ ಆಗಿರುತ್ತಾನೆ.

Verse 13

ءَأَشْفَقْتُمْ أَن تُقَدِّمُوا۟ بَيْنَ يَدَىْ نَجْوَىٰكُمْ صَدَقَـٰتٍ ۚ فَإِذْ لَمْ تَفْعَلُوا۟ وَتَابَ ٱللَّهُ عَلَيْكُمْ فَأَقِيمُوا۟ ٱلصَّلَوٰةَ وَءَاتُوا۟ ٱلزَّكَوٰةَ وَأَطِيعُوا۟ ٱللَّهَ وَرَسُولَهُۥ ۚ وَٱللَّهُ خَبِيرٌۢ بِمَا تَعْمَلُونَ

Transliteration a-ashfaqtum an tuqaddimū bayna yaday najwākum ṣadaqātin fa-idh lam tafʿalū watāba l-lahu ʿalaykum fa-aqīmū l-ṣalata waātū l-zakata wa-aṭīʿū l-laha warasūlahu wal-lahu khabīrun bimā taʿmalūna

Kannada ಭೇಟಿ ನಡೆಸುವುದಕ್ಕೆ ಮುಂಚೆ ಕಾಣಿಕೆ ನೀಡು ವುದರಿಂದ (ದಾರಿದ್ರ್ಯವನ್ನು) ಹೆದರಿಬಿಟ್ಟಿರಾ? ಸರಿ, ನೀವು ಹಾಗೆ ಮಾಡದಿದ್ದರೆ- ಅಲ್ಲಾಹನು ನಿಮ್ಮನ್ನು ಕ್ಷಮಿಸಿಬಿಟ್ಟನು. ನೀವು ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ ಮತ್ತು ಅಲ್ಲಾ ಹು ಮತ್ತು ಅವನ ದೂತರನ್ನು ಅನುಸರಿಸಿರಿ. ನೀವು ಮಾಡುತ್ತಿರುವುದೆಲ್ಲವನ್ನೂ ಅಲ್ಲಾಹನು ಸೂಕ್ಷ್ಮವಾಗಿ ಬಲ್ಲವನು.

Verse 14

۞ أَلَمْ تَرَ إِلَى ٱلَّذِينَ تَوَلَّوْا۟ قَوْمًا غَضِبَ ٱللَّهُ عَلَيْهِم مَّا هُم مِّنكُمْ وَلَا مِنْهُمْ وَيَحْلِفُونَ عَلَى ٱلْكَذِبِ وَهُمْ يَعْلَمُونَ

Transliteration alam tara ilā alladhīna tawallaw qawman ghaḍiba l-lahu ʿalayhim mā hum minkum walā min'hum wayaḥlifūna ʿalā l-kadhibi wahum yaʿlamūna

Kannada ಅಲ್ಲಾಹನ ಕ್ರೋಧಕ್ಕೊಳಗಾಗಿರುವಂತಹ ಒಂದು ಕೂಟದವರೊಂದಿಗೆ (ಯಹೂದರು) ಮೈತ್ರಿ ಮಾಡಿ ಕೊಂಡವರನ್ನು (ಕಪಟವಿಶ್ವಾಸಿಗಳನ್ನು) ತಾವು ಕಂಡಿರಾ? ಅವರು ನಿಮ್ಮವರೂ ಅಲ್ಲ, ಅವರ (ಯಹೂದರ) ಕಡೆಯವರೂ ಅಲ್ಲ, ಅವರು ತಿಳಿದುಕೊಂಡೇ ಅಸತ್ಯದ ಹೆಸರಲ್ಲಿ ಸುಳ್ಳು ಆಣೆ ಹಾಕುತ್ತಾರೆ.

Verse 15

أَعَدَّ ٱللَّهُ لَهُمْ عَذَابًا شَدِيدًا ۖ إِنَّهُمْ سَآءَ مَا كَانُوا۟ يَعْمَلُونَ

Transliteration aʿadda l-lahu lahum ʿadhāban shadīdan innahum sāa mā kānū yaʿmalūna

Kannada ಅಲ್ಲಾಹನು ಅವರಿಗಾಗಿ ಕಠಿಣ ಶಿಕ್ಷೆಯನ್ನು ಸಿದ್ಧ ಪಡಿಸಿಟ್ಟಿರುವನು. ಅವರು ಮಾಡುತ್ತಿರುವ ಕೃತ್ಯ ಗಳು ಅತ್ಯಂತ ಕೆಟ್ಟವು.

Verse 16

ٱتَّخَذُوٓا۟ أَيْمَـٰنَهُمْ جُنَّةً فَصَدُّوا۟ عَن سَبِيلِ ٱللَّهِ فَلَهُمْ عَذَابٌ مُّهِينٌ

Transliteration ittakhadhū aymānahum junnatan faṣaddū ʿan sabīli l-lahi falahum ʿadhābun muhīnun

Kannada ಅವರು ತಮ್ಮ ಆಣೆಗಳನ್ನು ಒಂದು ಗುರಾಣಿಯಾಗಿ ಮಾಡಿಕೊಂಡಿದ್ದಾರೆ. ಅವರು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಾರೆ. ಅದಕ್ಕಾಗಿ ಅವರಿಗೆ ಅಪಮಾನಕರ ಶಿಕ್ಷೆಯಿದೆ.

Verse 17

لَّن تُغْنِىَ عَنْهُمْ أَمْوَٰلُهُمْ وَلَآ أَوْلَـٰدُهُم مِّنَ ٱللَّهِ شَيْـًٔا ۚ أُو۟لَـٰٓئِكَ أَصْحَـٰبُ ٱلنَّارِ ۖ هُمْ فِيهَا خَـٰلِدُونَ

Transliteration lan tugh'niya ʿanhum amwāluhum walā awlāduhum mina l-lahi shayan ulāika aṣḥābu l-nāri hum fīhā khālidūna

Kannada ಅವರ ಸಂಪತ್ತಾಗಲಿ, ಸಂತಾನಗಳಾಗಲಿ ಅಲ್ಲಾಹನ ಶಿಕ್ಷೆಯಿಂದ ರಕ್ಷಿಸಲು ಎಳ್ಳಷ್ಟೂ ಉಪಯುಕ್ತವಾಗಲಾರವು. ಅವರು ನರಕದವರು. ಅವರು ಅದರಲ್ಲಿ ಸ್ಥಿರವಾಸಿಗಳು.

Verse 18

يَوْمَ يَبْعَثُهُمُ ٱللَّهُ جَمِيعًا فَيَحْلِفُونَ لَهُۥ كَمَا يَحْلِفُونَ لَكُمْ ۖ وَيَحْسَبُونَ أَنَّهُمْ عَلَىٰ شَىْءٍ ۚ أَلَآ إِنَّهُمْ هُمُ ٱلْكَـٰذِبُونَ

Transliteration yawma yabʿathuhumu l-lahu jamīʿan fayaḥlifūna lahu kamā yaḥlifūna lakum wayaḥsabūna annahum ʿalā shayin alā innahum humu l-kādhibūna

Kannada ಅಲ್ಲಾಹನು ಅವರೆಲ್ಲರನ್ನೂ ಎಬ್ಬಿಸುವ ದಿನ. ಅವರು ನಿಮ್ಮ ಮುಂದೆ ಆಣೆ ಹಾಕಿದಂತೆಯೇ ಅವನ (ಅಲ್ಲಾಹನ) ಮುಂದೆಯೂ ಆಣೆ ಹಾಕುವರು ಮತ್ತು ನಾವು (ಈ ಸುಳ್ಳು ಆಣೆಯಿಂದ) ಏನೋ ಒಂದು ಉತ್ತಮ ಕಾರ್ಯದಲ್ಲಿರು ವೆವೆಂದು ಅವರು ಭಾವಿಸುವರು. ತಿಳಿದುಕೊಳ್ಳಿರಿ. ಅವರೇ ಸುಳ್ಳುಗಾರರು.

Verse 19

ٱسْتَحْوَذَ عَلَيْهِمُ ٱلشَّيْطَـٰنُ فَأَنسَىٰهُمْ ذِكْرَ ٱللَّهِ ۚ أُو۟لَـٰٓئِكَ حِزْبُ ٱلشَّيْطَـٰنِ ۚ أَلَآ إِنَّ حِزْبَ ٱلشَّيْطَـٰنِ هُمُ ٱلْخَـٰسِرُونَ

Transliteration is'taḥwadha ʿalayhimu l-shayṭānu fa-ansāhum dhik'ra l-lahi ulāika ḥiz'bu l-shayṭāni alā inna ḥiz'ba l-shayṭāni humu l-khāsirūna

Kannada ಶೈತಾನನು ಅವರನ್ನು ಸ್ವಾಧೀನಿಸಿಕೊಂಡಿದ್ದಾನೆ ಮತ್ತು ಅವನು ಅಲ್ಲಾಹನ ಸ್ಮರಣೆಯನ್ನು ಅವರಿಗೆ ಮರೆಸಿ ಬಿಟ್ಟಿದ್ದಾನೆ. ಅವರು ಶೈತಾನನ ಪಕ್ಷದವರು. ತಿಳಿಯಿರಿ, ಶೈತಾನನ ಪಕ್ಷದವರೇ ನಷ್ಟಕ್ಕೊಳಗಾದವರು.

Verse 20

إِنَّ ٱلَّذِينَ يُحَآدُّونَ ٱللَّهَ وَرَسُولَهُۥٓ أُو۟لَـٰٓئِكَ فِى ٱلْأَذَلِّينَ

Transliteration inna alladhīna yuḥāddūna l-laha warasūlahu ulāika fī l-adhalīna

Kannada ಅಲ್ಲಾಹು ಮತ್ತು ಅವನ ದೂತರೊಂದಿಗೆ ಸ್ಪರ್ಧೆಗೆ ನಿಲ್ಲುವವರು ಖಂಡಿತವಾಗಿಯೂ ಅತ್ಯಂತ ನಿಕೃಷ್ಟ ಕೂಟದಲ್ಲಾಗಿದ್ದಾರೆ.

Verse 21

كَتَبَ ٱللَّهُ لَأَغْلِبَنَّ أَنَا۠ وَرُسُلِىٓ ۚ إِنَّ ٱللَّهَ قَوِىٌّ عَزِيزٌ

Transliteration kataba l-lahu la-aghlibanna anā warusulī inna l-laha qawiyyun ʿazīzun

Kannada ನಾನು ಮತ್ತು ನನ್ನ ದೂತರುಗಳು ವಿಜಯಿಗಳಾಗುವೆವೆಂದು ಅಲ್ಲಾಹನು ವಿಧಿ ಬರೆದಿರುವನು. ಖಂಡಿತ ಅಲ್ಲಾಹನು ಅತ್ಯಂತ ಬಲಿಷ್ಠನೂ ಅಜೇಯನೂ ಆಗಿರುತ್ತಾನೆ.

Verse 22

لَّا تَجِدُ قَوْمًا يُؤْمِنُونَ بِٱللَّهِ وَٱلْيَوْمِ ٱلْـَٔاخِرِ يُوَآدُّونَ مَنْ حَآدَّ ٱللَّهَ وَرَسُولَهُۥ وَلَوْ كَانُوٓا۟ ءَابَآءَهُمْ أَوْ أَبْنَآءَهُمْ أَوْ إِخْوَٰنَهُمْ أَوْ عَشِيرَتَهُمْ ۚ أُو۟لَـٰٓئِكَ كَتَبَ فِى قُلُوبِهِمُ ٱلْإِيمَـٰنَ وَأَيَّدَهُم بِرُوحٍ مِّنْهُ ۖ وَيُدْخِلُهُمْ جَنَّـٰتٍ تَجْرِى مِن تَحْتِهَا ٱلْأَنْهَـٰرُ خَـٰلِدِينَ فِيهَا ۚ رَضِىَ ٱللَّهُ عَنْهُمْ وَرَضُوا۟ عَنْهُ ۚ أُو۟لَـٰٓئِكَ حِزْبُ ٱللَّهِ ۚ أَلَآ إِنَّ حِزْبَ ٱللَّهِ هُمُ ٱلْمُفْلِحُونَ

Transliteration lā tajidu qawman yu'minūna bil-lahi wal-yawmi l-ākhiri yuwāddūna man ḥādda l-laha warasūlahu walaw kānū ābāahum aw abnāahum aw ikh'wānahum aw ʿashīratahum ulāika kataba fī qulūbihimu l-īmāna wa-ayyadahum birūḥin min'hu wayud'khiluhum jannātin tajrī min taḥtihā l-anhāru khālidīna fīhā raḍiya l-lahu ʿanhum waraḍū ʿanhu ulāika ḥiz'bu l-lahi alā inna ḥiz'ba l-lahi humu l-muf'liḥūna

Kannada ಅಲ್ಲಾಹು ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿರಿ ಸುವ ಒಂದು ಜನತೆ ಅಲ್ಲಾಹು ಮತ್ತು ಅವನ ಸಂದೇಶವಾಹಕರ ವಿರುದ್ಧ ಸ್ಪರ್ಧಿಸುವವರೊಂದಿಗೆ ಮೈತ್ರಿ ಬೆಳೆಸುವುದನ್ನು ತಾವೆಂದೂ ಕಾಣಲಾರಿರಿ. ಅಂಥವರು ಅವರ ತಂದೆಯೋ, ಪುತ್ರ ರೋ ಸಹೋದರರೋ ಮತ್ತು ಆಪ್ತಬಂಧುಗಳೋ ಆಗಿದ್ದರೂ ಸರಿಯೇ. ಅವರ ಹೃದಯಗಳಲ್ಲಿ ಅಲ್ಲಾಹನು ಸತ್ಯವಿಶ್ವಾಸವನ್ನು ದಾಖಲು ಮಾಡಿರುತ್ತಾನೆ. ಮತ್ತು ತನ್ನ ಕಡೆಯಿಂದ ಒಂದು ಆತ್ಮ ಚೈತನ್ಯದ ಮೂಲಕ ಅವರಿಗೆ ರಟ್ಟೆಬಲ ನೀಡಿರುತ್ತಾನೆ. ಅವನು ಅವರನ್ನು, ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು. ಅವುಗಳಲ್ಲಿ ಅವರು ಸದಾಕಾಲ ವಾಸಿಸುವರು, ಅಲ್ಲಾಹು ಅವರನ್ನು ತೃಪ್ತಿಪಟ್ಟಿರುವನು ಮತ್ತು ಅವರು ಅಲ್ಲಾಹನನ್ನೂ ತೃಪ್ತಿಪಟ್ಟಿರುವರು. ಅವರು ಅಲ್ಲಾಹನ ಪಕ್ಷದವರು, ತಿಳಿಯಿರಿ, ಅಲ್ಲಾಹನ ಪಕ್ಷದವರೇ ವಿಜಯಿಗಳು.

Read Surah Al-Mujadila in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.