Surah Al-A'raf in Kannada: translation and audio
Surah 7 · الأعراف · The Heights · 206 verses
Surah Al-A'raf verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-A'raf word by word in English.
Verse 1
الٓمٓصٓ
Transliteration alif-lam-meem-sad
Kannada ಅಲಿಫ್ ಲಾಮ್ಮೀಮ್ ಸ್ವಾದ್.
Verse 2
كِتَـٰبٌ أُنزِلَ إِلَيْكَ فَلَا يَكُن فِى صَدْرِكَ حَرَجٌ مِّنْهُ لِتُنذِرَ بِهِۦ وَذِكْرَىٰ لِلْمُؤْمِنِينَ
Transliteration kitābun unzila ilayka falā yakun fī ṣadrika ḥarajun min'hu litundhira bihi wadhik'rā lil'mu'minīna
Kannada ಇದು ನಿಮ್ಮೆಡೆಗೆ ಅವತೀರ್ಣಗೊಳಿಸಲಾದ ದಿವ್ಯ ಗ್ರಂಥ. ಆದುದರಿಂದ (ಓ ಪೈಗಂಬರರೇ) ಇದರಿಂದ ನಿಮ್ಮ ಹೃದಯದಲ್ಲಿ ಅಳುಕುಂಟಾಗದಿರಲಿ . ಈ ಗ್ರಂಥದ ಉದ್ದೇಶವು ನೀವು ಇದರ ಮೂಲಕ ಎಚ್ಚರಿಕೆ ನೀಡಬೇಕು ಮತ್ತು ವಿಶ್ವಾಸಿಗಳಿಗೆ ಉಪದೇಶ ನೀಡಬೇಕು ಎನ್ನುವುದಾಗಿದೆ.
Verse 3
ٱتَّبِعُوا۟ مَآ أُنزِلَ إِلَيْكُم مِّن رَّبِّكُمْ وَلَا تَتَّبِعُوا۟ مِن دُونِهِۦٓ أَوْلِيَآءَ ۗ قَلِيلًا مَّا تَذَكَّرُونَ
Transliteration ittabiʿū mā unzila ilaykum min rabbikum walā tattabiʿū min dūnihi awliyāa qalīlan mā tadhakkarūna
Kannada (ಓ ಜನರೇ,) ನಿಮ್ಮ ಪ್ರಭುವಿನಿಂದ ಅವತೀರ್ಣ ಗೊಂಡುದನ್ನು (ಖುರ್‍ಆನನ್ನು) ಅನುಸರಿಸಿರಿ ಮತ್ತು ಅವನನ್ನು ಬಿಟ್ಟು ಇತರ ರಕ್ಷಕ ಮಿತ್ರರನ್ನಾಗಿ ಮಾಡಿ ಅನುಸರಿಸಬೇಡಿರಿ. ಆದರೆ ನೀವು ಬಹಳ ಕಡಿಮೆ ಯೋಚಿಸುತ್ತಿರುವಿರಿ.
Verse 4
وَكَم مِّن قَرْيَةٍ أَهْلَكْنَـٰهَا فَجَآءَهَا بَأْسُنَا بَيَـٰتًا أَوْ هُمْ قَآئِلُونَ
Transliteration wakam min qaryatin ahlaknāhā fajāahā basunā bayātan aw hum qāilūna
Kannada ಎಷ್ಟೋ ನಾಡುಗಳನ್ನು ನಾವು ನಾಶಪಡಿಸಿದೆವು. ಆಗ ನಾವು ಅವರಿಗೆ ವಿಧಿಸಿದ ಶಿಕ್ಷೆಯು ರಾತ್ರಿ ಯೋ, ಮಧ್ಯಾಹ್ನ ನಿದ್ದೆಯ ವೇಳೆಯೋ ಬಂದೆರಗಿತು.
Verse 5
فَمَا كَانَ دَعْوَىٰهُمْ إِذْ جَآءَهُم بَأْسُنَآ إِلَّآ أَن قَالُوٓا۟ إِنَّا كُنَّا ظَـٰلِمِينَ
Transliteration famā kāna daʿwāhum idh jāahum basunā illā an qālū innā kunnā ẓālimīna
Kannada ಆ ರೀತಿ ನಮ್ಮ ಶಿಕ್ಷೆ ಅವರಿಗೆ ಬಂದಾಗ `ನಿಜಕ್ಕೂ ನಾವು ಅಕ್ರಮಿಗಳಾಗಿದ್ದೆವಲ್ಲ’ ಎನ್ನುವುದಾಗಿತ್ತು ಅವರ ಆರ್ತ ನುಡಿ.
Verse 6
فَلَنَسْـَٔلَنَّ ٱلَّذِينَ أُرْسِلَ إِلَيْهِمْ وَلَنَسْـَٔلَنَّ ٱلْمُرْسَلِينَ
Transliteration falanasalanna alladhīna ur'sila ilayhim walanasalanna l-mur'salīna
Kannada ಆದ್ದರಿಂದ ಯಾರ ಕಡೆಗೆ ನಾವು ಸಂದೇಶ ವಾಹಕರನ್ನು ಕಳುಹಿಸಿದ್ದೇವೆಯೋ ಅವರನ್ನೆಲ್ಲಾ ನಾವು ಖಂಡಿತ ವಿಚಾರಣೆಗೊಳಪಡಿಸಲಿದ್ದೇವೆ. ಮತ್ತು ಸಂದೇಶವಾಹಕರನ್ನೂ (ಅವರ ದೌತ್ಯ ನಿರ್ವಹಣೆಯ ಬಗ್ಗೆ) ವಿಚಾರಣೆ ನಡೆಸಲಿದ್ದೇವೆ.
Verse 7
فَلَنَقُصَّنَّ عَلَيْهِم بِعِلْمٍ ۖ وَمَا كُنَّا غَآئِبِينَ
Transliteration falanaquṣṣanna ʿalayhim biʿil'min wamā kunnā ghāibīna
Kannada ಆಗ ನಾವು ಸಂಪೂರ್ಣ ಜ್ಞಾನದೊಂದಿಗೆ ಎಲ್ಲವನ್ನೂ ಅವರಿಗೆ ವಿವರಿಸುವೆವು. ನಾವೆಂದೂ ಅಗೋಚರವಾಗಿಲ್ಲ.
Verse 8
وَٱلْوَزْنُ يَوْمَئِذٍ ٱلْحَقُّ ۚ فَمَن ثَقُلَتْ مَوَٰزِينُهُۥ فَأُو۟لَـٰٓئِكَ هُمُ ٱلْمُفْلِحُونَ
Transliteration wal-waznu yawma-idhin l-ḥaqu faman thaqulat mawāzīnuhu fa-ulāika humu l-muf'liḥūna
Kannada ನೀತಿ ನಿಷ್ಠೆಯ ತೂಕವು ಅಂದು ನಡೆಯಲಿರುವುದು. ಯಾರ ತೂಕವು ಭಾರ ತೂಗುವುದೋ ಅವರೇ ಜಯಜೀತರು.
Verse 9
وَمَنْ خَفَّتْ مَوَٰزِينُهُۥ فَأُو۟لَـٰٓئِكَ ٱلَّذِينَ خَسِرُوٓا۟ أَنفُسَهُم بِمَا كَانُوا۟ بِـَٔايَـٰتِنَا يَظْلِمُونَ
Transliteration waman khaffat mawāzīnuhu fa-ulāika alladhīna khasirū anfusahum bimā kānū biāyātinā yaẓlimūna
Kannada ಮತ್ತು ಯಾರ ಭಾರವು ಕಡಿಮೆಯಾಯಿತೋ ಅವರೇ ಸ್ವಯಂ ತಮ್ಮನ್ನು ನಷ್ಟಕ್ಕೊಳಪಡಿಸಿಕೊಂಡವರು. ಅವರು ನಮ್ಮ ನಿದರ್ಶನಗಳನ್ನು ನಿಷೇಧಿಸುತ್ತಿದ್ದ ಕಾರಣವಾಗಿ.
Verse 10
وَلَقَدْ مَكَّنَّـٰكُمْ فِى ٱلْأَرْضِ وَجَعَلْنَا لَكُمْ فِيهَا مَعَـٰيِشَ ۗ قَلِيلًا مَّا تَشْكُرُونَ
Transliteration walaqad makkannākum fī l-arḍi wajaʿalnā lakum fīhā maʿāyisha qalīlan mā tashkurūna
Kannada ನಾವು ನಿಮಗೆ ಭೂಮಿಯಲ್ಲಿ ಎಲ್ಲ ಸೌಕರ್ಯ ಗಳನ್ನೂ ಒದಗಿಸಿದೆವು. ಹಾಗೂ ಎಲ್ಲ ಜೀವನಾವ ಶ್ಯಕ ವಸ್ತುಗಳನ್ನು ಸಿದ್ಧಗೊಳಿಸಿದೆವು. ಆದರೆ ನೀವು ಅತ್ಯಲ್ಪವೇ ಕೃತಜ್ಞತೆ ತೋರಿಸುತ್ತಿರುವಿರಿ.
Verse 11
وَلَقَدْ خَلَقْنَـٰكُمْ ثُمَّ صَوَّرْنَـٰكُمْ ثُمَّ قُلْنَا لِلْمَلَـٰٓئِكَةِ ٱسْجُدُوا۟ لِـَٔادَمَ فَسَجَدُوٓا۟ إِلَّآ إِبْلِيسَ لَمْ يَكُن مِّنَ ٱلسَّـٰجِدِينَ
Transliteration walaqad khalaqnākum thumma ṣawwarnākum thumma qul'nā lil'malāikati us'judū liādama fasajadū illā ib'līsa lam yakun mina l-sājidīna
Kannada ನಿಜಕ್ಕೂ ನಿಮ್ಮನ್ನು ನಾವು ಸೃಷ್ಟಿಸಿದೆವು. ಅನಂತರ ನಾವು ನಿಮಗೆ ರೂಪ ಕೊಟ್ಟೆವು. ನಂತರ ಆದಮ ನಿಗೆ ಸಾಷ್ಟಾಂಗವೆರಗಿರಿ ಎಂದು ದೇವಚರ ರೊಡನೆ ಹೇಳಿದೆವು. ಆಗ ಎಲ್ಲರೂ ಸಾಷ್ಟಾಂಗವೆರಗಿದರು. ಆದರೆ ಇಬ್ಲೀಸನು ಸಾಷ್ಟಾಂಗ ಮಾಡುವವರೊಂದಿಗೆ ಸೇರಲಿಲ್ಲ .
Verse 12
قَالَ مَا مَنَعَكَ أَلَّا تَسْجُدَ إِذْ أَمَرْتُكَ ۖ قَالَ أَنَا۠ خَيْرٌ مِّنْهُ خَلَقْتَنِى مِن نَّارٍ وَخَلَقْتَهُۥ مِن طِينٍ
Transliteration qāla mā manaʿaka allā tasjuda idh amartuka qāla anā khayrun min'hu khalaqtanī min nārin wakhalaqtahu min ṭīnin
Kannada ಅಲ್ಲಾಹನು ಕೇಳಿದ; ‘ನಾನು ನಿನಗೆ ಆದೇಶ ಕೊಟ್ಟಿದ್ದಾಗ, ಸುಜೂದ್ ಮಾಡುವುದರಿಂದ ನಿನ್ನನ್ನು ತಡೆದ ವಿಷಯ ಯಾವುದು?’ ಆಗ ಇಬ್ಲೀಸನು, ‘ನಾನು ಅವನಿಗಿಂತ ಶ್ರೇಷ್ಟನಾಗಿರುತ್ತೇನೆ. ನೀನು ನನ್ನನ್ನು ಅಗ್ನಿಯಿಂದ ಮತ್ತು ಅವನನ್ನು ಕೊಜೆ ಮಣ್ಣಿನಿಂದ ಸೃಷ್ಟಿಸಿರುತ್ತಿ’ ಎಂದು ಹೇಳಿದನು.
Verse 13
قَالَ فَٱهْبِطْ مِنْهَا فَمَا يَكُونُ لَكَ أَن تَتَكَبَّرَ فِيهَا فَٱخْرُجْ إِنَّكَ مِنَ ٱلصَّـٰغِرِينَ
Transliteration qāla fa-ih'biṭ min'hā famā yakūnu laka an tatakabbara fīhā fa-ukh'ruj innaka mina l-ṣāghirīna
Kannada ಆಗ ಅಲ್ಲಾಹನು ಆಜ್ಞಾಪಿಸಿದ : ನೀನು ಇಲ್ಲಿಂದ ಇಳಿದು ಹೋಗು. ಇಲ್ಲಿ ಮೇಲ್ಮೆಯ ಅಹಂಕಾರ ಪಡುವುದು ನಿನಗೆ ಯುಕ್ತವಲ್ಲ. ಆದ್ದರಿಂದ ತೊಲಗು, ಖಂಡಿತ ನೀನು ನಿಂದ್ಯರಲ್ಲೊಬ್ಬನಾಗಿರುವಿ.
Verse 14
قَالَ أَنظِرْنِىٓ إِلَىٰ يَوْمِ يُبْعَثُونَ
Transliteration qāla anẓir'nī ilā yawmi yub'ʿathūna
Kannada ಆಗ ಅವನು, ‘ಜನರನ್ನು ಇನ್ನೊಮ್ಮೆ ಎಚ್ಚರಗೊಳಿಸಲ್ಪಡುವ ದಿನದವರೆಗೆ ನನಗೆ ಅವಧಿ ಕೊಡು’ ಎಂದನು.
Verse 15
قَالَ إِنَّكَ مِنَ ٱلْمُنظَرِينَ
Transliteration qāla innaka mina l-munẓarīna
Kannada ಆಗ ಅಲ್ಲಾಹನ ನುಡಿ : ಖಂಡಿತ ‘ಅವಧಿ ಮುಂದುವರಿಸಲ್ಪಟ್ಟವರ ಕೂಟದಲ್ಲಿ ನೀನೂ ಒಬ್ಬನಾಗಿದ್ದೀಯಾ’.
Verse 16
قَالَ فَبِمَآ أَغْوَيْتَنِى لَأَقْعُدَنَّ لَهُمْ صِرَٰطَكَ ٱلْمُسْتَقِيمَ
Transliteration qāla fabimā aghwaytanī la-aqʿudanna lahum ṣirāṭaka l-mus'taqīma
Kannada ಆಗ ಅವನು, ‘ಹಾಗಾದರೆ ನೀನು ನನ್ನನ್ನು ಪಥ ಭ್ರಷ್ಟತೆಗೊಳಪಡಿಸಿದಂತೆಯೇ ಖಂಡಿತ ನಾನು ನಿನ್ನ ನೇರಮಾರ್ಗದಲ್ಲಿ ಈ ಮಾನವರ ನಡೆಗೆ ತಡೆಯೊಡ್ಡುತ್ತಿರುವೆನು.
Verse 17
ثُمَّ لَـَٔاتِيَنَّهُم مِّنۢ بَيْنِ أَيْدِيهِمْ وَمِنْ خَلْفِهِمْ وَعَنْ أَيْمَـٰنِهِمْ وَعَن شَمَآئِلِهِمْ ۖ وَلَا تَجِدُ أَكْثَرَهُمْ شَـٰكِرِينَ
Transliteration thumma laātiyannahum min bayni aydīhim wamin khalfihim waʿan aymānihim waʿan shamāilihim walā tajidu aktharahum shākirīna
Kannada ಅವರ ಮುಂದಿನಿಂದಲೂ ಅವರ ಹಿಂದಿನಿಂದಲೂ ಅವರ ಬಲಭಾಗದಿಂದಲೂ ಎಡಭಾಗದಿಂದಲೂ ಅವರನ್ನು ಅಡ್ಡಗಟ್ಟುವೆನು. ನೀನು ಅವರ ಪೈಕಿ ಬಹುಮಂದಿಯನ್ನು ಕೃತಜ್ಞರನ್ನಾಗಿ ಕಾಣಲಾರೆ’ ಎಂದನು.
Verse 18
قَالَ ٱخْرُجْ مِنْهَا مَذْءُومًا مَّدْحُورًا ۖ لَّمَن تَبِعَكَ مِنْهُمْ لَأَمْلَأَنَّ جَهَنَّمَ مِنكُمْ أَجْمَعِينَ
Transliteration qāla ukh'ruj min'hā madhūman madḥūran laman tabiʿaka min'hum la-amla-anna jahannama minkum ajmaʿīna
Kannada ಅಲ್ಲಾಹನು ಹೀಗೆಂದನು: “ನೀನು ಇಲ್ಲಿಂದ ನಿಂದ್ಯನೂ ಬಹಿಷ್ಕøತನೂ ಆಗಿ ತೊಲಗು. ಅವರ ಪೈಕಿ ಯಾರು ನಿನ್ನನ್ನು ಅನುಸರಿಸುತ್ತಾರೋ ನಿಮ್ಮ ನ್ನೆಲ್ಲ ನಿಸ್ಸಂದೇಹವಾಗಿ ನರಕಕ್ಕೆ ತಳ್ಳುವೆನು .
Verse 19
وَيَـٰٓـَٔادَمُ ٱسْكُنْ أَنتَ وَزَوْجُكَ ٱلْجَنَّةَ فَكُلَا مِنْ حَيْثُ شِئْتُمَا وَلَا تَقْرَبَا هَـٰذِهِ ٱلشَّجَرَةَ فَتَكُونَا مِنَ ٱلظَّـٰلِمِينَ
Transliteration wayāādamu us'kun anta wazawjuka l-janata fakulā min ḥaythu shi'tumā walā taqrabā hādhihi l-shajarata fatakūnā mina l-ẓālimīna
Kannada ಓ ಆದಮ್, ನೀನು ಮತ್ತು ನಿನ್ನ ಪತ್ನಿ - ಇಬ್ಬರೂ ಈ ಸ್ವರ್ಗದಲ್ಲಿ ವಾಸಿಸಿರಿ. ನೀವಿಲ್ಲಿ ನಿಮಗೆ ಇಷ್ಟ ಬಂದುದನ್ನು ಉಣ್ಣಿರಿ. ಆದರೆ ಈ ವೃಕ್ಷದ ಬಳಿ ಮಾತ್ರ ಸುಳಿಯಬಾರದು. ತಪ್ಪಿದರೆ ನೀವಿಬ್ಬರೂ ಅಕ್ರಮಿಗಳ ಸಾಲಿಗೆ ಸೇರುವಿರಿ”.
Verse 20
فَوَسْوَسَ لَهُمَا ٱلشَّيْطَـٰنُ لِيُبْدِىَ لَهُمَا مَا وُۥرِىَ عَنْهُمَا مِن سَوْءَٰتِهِمَا وَقَالَ مَا نَهَىٰكُمَا رَبُّكُمَا عَنْ هَـٰذِهِ ٱلشَّجَرَةِ إِلَّآ أَن تَكُونَا مَلَكَيْنِ أَوْ تَكُونَا مِنَ ٱلْخَـٰلِدِينَ
Transliteration fawaswasa lahumā l-shayṭānu liyub'diya lahumā mā wūriya ʿanhumā min sawātihimā waqāla mā nahākumā rabbukumā ʿan hādhihi l-shajarati illā an takūnā malakayni aw takūnā mina l-khālidīna
Kannada ಅನಂತರ, ಅವರಿಂದ ಮುಚ್ಚಲ್ಪಟ್ಟ ಅವರ ಲಜ್ಜಾಂ ಗಗಳನ್ನು ಅವರಿಗೆ ಅನಾವರಣ ಗೊಳಿಸಲೆಂದು ಶೈತಾನನು ಅವರಿಬ್ಬರನ್ನು ಚಾಂಚಲ್ಯಕ್ಕೊಳ ಪಡಿಸಿದನು. ಅವನು ಅವರೊಡನೆ, ‘ನಿಮ್ಮ ಪ್ರಭು ನಿಮ್ಮನ್ನು ಈ ವೃಕ್ಷದಿಂದ ತಡೆದಿರುವುದು ನೀವಿ ಬ್ಬರು ದೇವಚರರಾಗಿ ಬಿಡಬಾರದು ಅಥವಾ ನೀವು ಶಾಶ್ವತವಾಗಿ ನೆಲೆಸುವಂತಾಗಬಾರದು ಎಂಬ ಕಾರಣದಿಂದ ಮಾತ್ರ’ ಎಂದನು.
Verse 21
وَقَاسَمَهُمَآ إِنِّى لَكُمَا لَمِنَ ٱلنَّـٰصِحِينَ
Transliteration waqāsamahumā innī lakumā lamina l-nāṣiḥīna
Kannada ಖಂಡಿತಾ ನಾನು ನಿಮ್ಮ ನೈಜ ಹಿತಚಿಂತಕ ನಾಗಿದ್ದೇನೆಂದು ಅವರೊಡನೆ ಆಣೆ ಹಾಕಿ ಹೇಳಿದನು.
Verse 22
فَدَلَّىٰهُمَا بِغُرُورٍ ۚ فَلَمَّا ذَاقَا ٱلشَّجَرَةَ بَدَتْ لَهُمَا سَوْءَٰتُهُمَا وَطَفِقَا يَخْصِفَانِ عَلَيْهِمَا مِن وَرَقِ ٱلْجَنَّةِ ۖ وَنَادَىٰهُمَا رَبُّهُمَآ أَلَمْ أَنْهَكُمَا عَن تِلْكُمَا ٱلشَّجَرَةِ وَأَقُل لَّكُمَآ إِنَّ ٱلشَّيْطَـٰنَ لَكُمَا عَدُوٌّ مُّبِينٌ
Transliteration fadallāhumā bighurūrin falammā dhāqā l-shajarata badat lahumā sawātuhumā waṭafiqā yakhṣifāni ʿalayhimā min waraqi l-janati wanādāhumā rabbuhumā alam anhakumā ʿan til'kumā l-shajarati wa-aqul lakumā inna l-shayṭāna lakumā ʿaduwwun mubīnun
Kannada ಹೀಗೆ ಅವನು ಅವರಿಬ್ಬರನ್ನೂ ಮೋಸದಿಂದ ಬೀಳಿಸಿದನು. ಕೊನೆಗೆ ಅವರಿಬ್ಬರೂ ಆ ವೃಕ್ಷ (ಫಲ)ವನ್ನು ಸವಿದಾಗ ಅವರ ಗುಪ್ತಾಂಗಗಳು ಅವರಿಬ್ಬರಿಗೆ ಪರಸ್ಪರ ಕಾಣಿಸಿಕೊಂಡವು ಮತ್ತು ಅವರಿಬ್ಬರೂ ತಮ್ಮ ದೇಹಗಳಿಗೆ ಸ್ವರ್ಗದ ಎಲೆಗ ಳನ್ನು ಒತ್ತಿ ಹಿಡಿದು ಕೊಂಡರು. ಆಗ ಅವರ ಪ್ರಭು ಅವರನ್ನು ಕರೆದು, ‘ನಾನು ನಿಮ್ಮನ್ನು ಈ ವೃಕ್ಷದಿಂದ ತಡೆದಿರಲಿಲ್ಲವೇ? ಹಾಗೂ ಶೈತಾ ನನು ನಿಮ್ಮ ಪ್ರತ್ಯಕ್ಷ ಶತ್ರುವೆಂದು ನಿಮಗೆ ಹೇಳಿ ರಲಿಲ್ಲವೇ?’ ಎಂದು ಕೇಳಿದನು.
Verse 23
قَالَا رَبَّنَا ظَلَمْنَآ أَنفُسَنَا وَإِن لَّمْ تَغْفِرْ لَنَا وَتَرْحَمْنَا لَنَكُونَنَّ مِنَ ٱلْخَـٰسِرِينَ
Transliteration qālā rabbanā ẓalamnā anfusanā wa-in lam taghfir lanā watarḥamnā lanakūnanna mina l-khāsirīna
Kannada ಅವರಿಬ್ಬರೂ, ‘ಓ ನಮ್ಮ ಪ್ರಭೂ, ನಾವು ಆತ್ಮ ದ್ರೋಹ ಮಾಡಿಕೊಂಡೆವು, ಆದ್ದರಿಂದ ನೀನು ನಮ್ಮನ್ನು ಕ್ಷಮಿಸದಿದ್ದರೆ ಹಾಗೂ ನಮ್ಮ ಮೇಲೆ ಕೃಪೆ ತೋರದಿದ್ದರೆ ನಿಶ್ಚಯವಾಗಿಯೂ ನಾವು ನಷ್ಟ ಹೊಂದುವವರ ಸಾಲಿಗೆ ಸೇರುವೆವು’ ಎಂದು ಹೇಳಿದರು.
Verse 24
قَالَ ٱهْبِطُوا۟ بَعْضُكُمْ لِبَعْضٍ عَدُوٌّ ۖ وَلَكُمْ فِى ٱلْأَرْضِ مُسْتَقَرٌّ وَمَتَـٰعٌ إِلَىٰ حِينٍ
Transliteration qāla ih'biṭū baʿḍukum libaʿḍin ʿaduwwun walakum fī l-arḍi mus'taqarrun wamatāʿun ilā ḥīnin
Kannada ಆಗ ಅಲ್ಲಾಹನು ಹೇಳಿದನು; ‘ಇಳಿದು ಬಿಡಿರಿ, ನೀವು ಪರಸ್ಪರ ಶತ್ರುಗಳಾಗಿರುತ್ತೀರಿ ಮತ್ತು ನಿಮಗಾಗಿ ಒಂದು ನಿರ್ದಿಷ್ಟ ಕಾಲಾವಧಿಯವರೆಗೆ ಭೂಮಿಯಲ್ಲಿ ವಾಸಸ್ಥಾನ ಮತ್ತು ಸುಖ ಭೋಗಗಳಿವೆ .
Verse 25
قَالَ فِيهَا تَحْيَوْنَ وَفِيهَا تَمُوتُونَ وَمِنْهَا تُخْرَجُونَ
Transliteration qāla fīhā taḥyawna wafīhā tamūtūna wamin'hā tukh'rajūna
Kannada `ಅಲ್ಲಿ ನೀವು ಬಾಳುವಿರಿ. ಆಮೇಲೆ ಸಾಯುವಿರಿ. ಕೊನೆಗೆ ಅಲ್ಲಿಂದಲೇ ನಿಮ್ಮನ್ನು ಎಬ್ಬಿಸಲಾಗು ವುದು’ ಎಂದೂ ಹೇಳಿದನು.
Verse 26
يَـٰبَنِىٓ ءَادَمَ قَدْ أَنزَلْنَا عَلَيْكُمْ لِبَاسًا يُوَٰرِى سَوْءَٰتِكُمْ وَرِيشًا ۖ وَلِبَاسُ ٱلتَّقْوَىٰ ذَٰلِكَ خَيْرٌ ۚ ذَٰلِكَ مِنْ ءَايَـٰتِ ٱللَّهِ لَعَلَّهُمْ يَذَّكَّرُونَ
Transliteration yābanī ādama qad anzalnā ʿalaykum libāsan yuwārī sawātikum warīshan walibāsu l-taqwā dhālika khayrun dhālika min āyāti l-lahi laʿallahum yadhakkarūna
Kannada ಓ ಆದಮನ ಸಂತತಿಯೇ, ನಿಮ್ಮ ದೇಹದ ಗುಹ್ಯ ಭಾಗಗಳನ್ನು ಮರೆಸುವ ಉಡುಪನ್ನೂ, ಅಲಂಕಾರದ ಮೇಲುಡುಪನ್ನೂ ನಿಮಗೆ ನಾವು ಇಳಿಸಿರುತ್ತೇವೆ. ಆದರೆ ಭಯ ಭಕ್ತಿಯ ಉಡು ಪೆಂದರೆ ಅದೇ ಉತ್ತಮ. ಇದು ಅಲ್ಲಾಹನ ದೃಷ್ಟಾಂತಗಳಲ್ಲೊಂದು. ಅವರು ಪಾಠ ಕಲಿತು ವಿಶ್ವಾಸ ವಿರಿಸಲಿಕ್ಕಾಗಿ.
Verse 27
يَـٰبَنِىٓ ءَادَمَ لَا يَفْتِنَنَّكُمُ ٱلشَّيْطَـٰنُ كَمَآ أَخْرَجَ أَبَوَيْكُم مِّنَ ٱلْجَنَّةِ يَنزِعُ عَنْهُمَا لِبَاسَهُمَا لِيُرِيَهُمَا سَوْءَٰتِهِمَآ ۗ إِنَّهُۥ يَرَىٰكُمْ هُوَ وَقَبِيلُهُۥ مِنْ حَيْثُ لَا تَرَوْنَهُمْ ۗ إِنَّا جَعَلْنَا ٱلشَّيَـٰطِينَ أَوْلِيَآءَ لِلَّذِينَ لَا يُؤْمِنُونَ
Transliteration yābanī ādama lā yaftinannakumu l-shayṭānu kamā akhraja abawaykum mina l-janati yanziʿu ʿanhumā libāsahumā liyuriyahumā sawātihimā innahu yarākum huwa waqabīluhu min ḥaythu lā tarawnahum innā jaʿalnā l-shayāṭīna awliyāa lilladhīna lā yu'minūna
Kannada ಓ ಆದಮರ ಸಂತತಿಯೇ, ಶೈತಾನನು ನಿಮ್ಮ ಮಾತಾಪಿತರನ್ನು ಅವರ ಲಜ್ಜಾಂಗಗಳು ಅವರಿಗೆ ಗೋಚರಿಸುವಂತೆ ಮಾಡಲು ಅವರ ಉಡುಪ ನ್ನು ಅವರ ಮೇಲಿಂದ ಕಳಚಿದ ಸ್ಥಿತಿಯಲ್ಲಿ ಸ್ವರ್ಗದಿಂದ ಹೊರಹಾಕಿದಂತೆ ನಿಮ್ಮನ್ನು ದಾರಿ ತಪ್ಪಿಸದಿರಲಿ. ಅವನು ಮತ್ತು ಅವನ ಪಡೆಗಳು ನಿಮ್ಮನ್ನು ನೋಡುವರು. ಆದರೆ ನೀವು ಅವರನ್ನು ನೋಡಲಾಗದ ಸ್ಥಿತಿಯಲ್ಲಿ. ನಾವು ಶೈತಾನರನ್ನು ಅವಿಶ್ವಾಸಿಗಳ ಮಿತ್ರರಾಗಿ ಮಾಡಿದ್ದೇವೆ.
Verse 28
وَإِذَا فَعَلُوا۟ فَـٰحِشَةً قَالُوا۟ وَجَدْنَا عَلَيْهَآ ءَابَآءَنَا وَٱللَّهُ أَمَرَنَا بِهَا ۗ قُلْ إِنَّ ٱللَّهَ لَا يَأْمُرُ بِٱلْفَحْشَآءِ ۖ أَتَقُولُونَ عَلَى ٱللَّهِ مَا لَا تَعْلَمُونَ
Transliteration wa-idhā faʿalū fāḥishatan qālū wajadnā ʿalayhā ābāanā wal-lahu amaranā bihā qul inna l-laha lā yamuru bil-faḥshāi ataqūlūna ʿalā l-lahi mā lā taʿlamūna
Kannada ಇವರು ಯಾವುದಾದರೊಂದು ಅಶ್ಲೀಲ ಕಾರ್ಯ ವೆಸಗಿದಾಗ, ‘ನಮ್ಮ ಪೂರ್ವಿಕರು ಹೀಗೆ ಮಾಡು ವುದನ್ನು ನಾವು ಕಂಡಿದ್ದೇವೆ ಮತ್ತು ಅಲ್ಲಾಹನೇ ನಮಗೆ ಹೀಗೆ ಮಾಡುವ ಆದೇಶ ಕೊಟ್ಟಿದ್ದಾನೆ’ ಎಂದು ಹೇಳುತ್ತಾರೆ. ಹೇಳಿರಿ; ಅಲ್ಲಾಹನು ಅಶ್ಲೀಲ ಕಾರ್ಯಗಳನ್ನು ಮಾಡುವಂತೆ ಆದೇಶ ಕೊಡಲಾರ. ಅಲ್ಲಾಹನ ಮೇಲೆ ನೀವೇಕೆ ನಿಮಗರಿವಿಲ್ಲದನ್ನು ಹೇಳುತ್ತೀರಿ?
Verse 29
قُلْ أَمَرَ رَبِّى بِٱلْقِسْطِ ۖ وَأَقِيمُوا۟ وُجُوهَكُمْ عِندَ كُلِّ مَسْجِدٍ وَٱدْعُوهُ مُخْلِصِينَ لَهُ ٱلدِّينَ ۚ كَمَا بَدَأَكُمْ تَعُودُونَ
Transliteration qul amara rabbī bil-qis'ṭi wa-aqīmū wujūhakum ʿinda kulli masjidin wa-id'ʿūhu mukh'liṣīna lahu l-dīna kamā bada-akum taʿūdūna
Kannada (ಓ ಪೈಗಂಬರರೇ,) ಹೇಳಿರಿ. ನನ್ನ ಪ್ರಭು ನ್ಯಾಯಪಾಲನೆಯ ಆಜ್ಞೆಯನ್ನಿತ್ತಿದ್ದಾನೆ. ಪ್ರತಿಯೊಂದು ಸಾಷ್ಟಾಂಗದ ಸಂದರ್ಭದಲ್ಲಿ ನಿಮ್ಮ ಮುಖಗಳನ್ನು ಸ್ಥಿರಗೊಳಿಸಬೇಕೆಂದೂ ಧರ್ಮವನ್ನು (ಶಿರ್ಕ್‍ನಿಂದ) ನಿಷ್ಕಳಂಕಗೊಳಿಸಿ ಅವನನ್ನೇ ಆರಾಧಿಸಬೇಕೆಂದೂ ಅವನ ಆಜ್ಞೆಯಾಗಿರುತ್ತದೆ. ನಿಮ್ಮನ್ನು ಪ್ರಥಮವಾಗಿ ಹೇಗೆ ಸೃಷ್ಟಿಸಲಾಯಿತೋ ಅದೇ ಸ್ಥಿತಿಯಲ್ಲಿ ನಿಮ್ಮನ್ನು ಮರಳಿಸಲಾಗುವುದು.
Verse 30
فَرِيقًا هَدَىٰ وَفَرِيقًا حَقَّ عَلَيْهِمُ ٱلضَّلَـٰلَةُ ۗ إِنَّهُمُ ٱتَّخَذُوا۟ ٱلشَّيَـٰطِينَ أَوْلِيَآءَ مِن دُونِ ٱللَّهِ وَيَحْسَبُونَ أَنَّهُم مُّهْتَدُونَ
Transliteration farīqan hadā wafarīqan ḥaqqa ʿalayhimu l-ḍalālatu innahumu ittakhadhū l-shayāṭīna awliyāa min dūni l-lahi wayaḥsabūna annahum muh'tadūna
Kannada ಅವನು ಒಂದು ವಿಭಾಗವನ್ನು ನೇರ ಮಾರ್ಗಕ್ಕೆ ಹಚ್ಚಿದನು. ಇನ್ನೊಂದು ವಿಭಾಗದ ಮೇಲೆ ಪಥಭ್ರಷ್ಟತೆ ನಿಜಗೊಂಡಿದೆ. ಏಕೆಂದರೆ, ಅವರು ಅಲ್ಲಾಹನ ಬದಲಿಗೆ ಶೈತಾನರನ್ನು ತಮ್ಮ ಮಿತ್ರರಾಗಿ ಮಾಡಿಕೊಂಡಿರುತ್ತಾರೆ ಹಾಗೂ ತಾವು ನೇರ ಮಾರ್ಗದಲ್ಲಿದ್ದೇವೆಂದು ಅವರು ಭಾವಿಸಿ ಕೊಂಡಿದ್ದಾರೆ.
Verse 31
۞ يَـٰبَنِىٓ ءَادَمَ خُذُوا۟ زِينَتَكُمْ عِندَ كُلِّ مَسْجِدٍ وَكُلُوا۟ وَٱشْرَبُوا۟ وَلَا تُسْرِفُوٓا۟ ۚ إِنَّهُۥ لَا يُحِبُّ ٱلْمُسْرِفِينَ
Transliteration yābanī ādama khudhū zīnatakum ʿinda kulli masjidin wakulū wa-ish'rabū walā tus'rifū innahu lā yuḥibbu l-mus'rifīna
Kannada ಓ ಆದಮರ ಸಂತತಿಯವರೇ, ಎಲ್ಲ ನಮಾಝ್‍ಗಳ ವೇಳೆ ನಿಮ್ಮ ಗೌಪ್ಯ ಪಾಲನೆಯನ್ನು ಅನುಸರಿಸಿರಿ. ಉಣ್ಣಿರಿ, ಕುಡಿಯಿರಿ ಮತ್ತು ದುವ್ರ್ಯಯ ಮಾಡದಿರಿ. ದುವ್ರ್ಯಯ ಮಾಡುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ .
Verse 32
قُلْ مَنْ حَرَّمَ زِينَةَ ٱللَّهِ ٱلَّتِىٓ أَخْرَجَ لِعِبَادِهِۦ وَٱلطَّيِّبَـٰتِ مِنَ ٱلرِّزْقِ ۚ قُلْ هِىَ لِلَّذِينَ ءَامَنُوا۟ فِى ٱلْحَيَوٰةِ ٱلدُّنْيَا خَالِصَةً يَوْمَ ٱلْقِيَـٰمَةِ ۗ كَذَٰلِكَ نُفَصِّلُ ٱلْـَٔايَـٰتِ لِقَوْمٍ يَعْلَمُونَ
Transliteration qul man ḥarrama zīnata l-lahi allatī akhraja liʿibādihi wal-ṭayibāti mina l-riz'qi qul hiya lilladhīna āmanū fī l-ḥayati l-dun'yā khāliṣatan yawma l-qiyāmati kadhālika nufaṣṣilu l-āyāti liqawmin yaʿlamūna
Kannada (ಓ ಪೈಗಂಬರರೇ,) ಕೇಳಿರಿ, ಅಲ್ಲಾಹನು ತನ್ನ ದಾಸರಿಗಾಗಿ ಹೊರತೆಗೆದಿರುವ ಅಲಂಕಾರ ವನ್ನೂ ಉತ್ತಮ ಆಹಾರ ಸಾಮಾಗ್ರಿಗಳನ್ನೂ ನಿಷಿದ್ಧ ಗೊಳಿಸಿದವನಾರು? ಹೇಳಿರಿ, ಇವು ಇಹ ಜೀವನದಲ್ಲಿ ಸತ್ಯವಿಶ್ವಾಸಿಗಳಿಗೆ ಸೇರಿವೆ. ಮತ್ತು ಪುನರುತ್ಥಾನ ದಿನದಲ್ಲಿ ಇವು ಕೇವಲ ಅವರಿಗೆ ಮಾತ್ರವಿರುತ್ತವೆ. ಇದೇ ರೀತಿಯಲ್ಲಿ ನಾವು ಜ್ಞಾನವುಳ್ಳವರಿಗೆ ಪುರಾವೆಗಳನ್ನು ಸುಸ್ಪಷ್ಟವಾಗಿ ವಿವರಿಸುತ್ತೇವೆ.
Verse 33
قُلْ إِنَّمَا حَرَّمَ رَبِّىَ ٱلْفَوَٰحِشَ مَا ظَهَرَ مِنْهَا وَمَا بَطَنَ وَٱلْإِثْمَ وَٱلْبَغْىَ بِغَيْرِ ٱلْحَقِّ وَأَن تُشْرِكُوا۟ بِٱللَّهِ مَا لَمْ يُنَزِّلْ بِهِۦ سُلْطَـٰنًا وَأَن تَقُولُوا۟ عَلَى ٱللَّهِ مَا لَا تَعْلَمُونَ
Transliteration qul innamā ḥarrama rabbiya l-fawāḥisha mā ẓahara min'hā wamā baṭana wal-ith'ma wal-baghya bighayri l-ḥaqi wa-an tush'rikū bil-lahi mā lam yunazzil bihi sul'ṭānan wa-an taqūlū ʿalā l-lahi mā lā taʿlamūna
Kannada ಹೇಳಿರಿ : ನಿಜವಾಗಿಯೂ ನನ್ನ ಪ್ರಭುವು ನಿಷಿದ್ಧ ಗೊಳಿಸಿರುವುದು ಪ್ರತ್ಯಕ್ಷ ಮತ್ತು ರಹಸ್ಯವಾದ ನೀಚ ಕಾರ್ಯಗಳನ್ನು, ಪಾಪ ಕರ್ಮಗಳನ್ನು, ನ್ಯಾಯೋಚಿತವಲ್ಲದ ಅತಿಕ್ರಮಣವನ್ನು, ಅಲ್ಲಾಹನಿಂದ ಯಾವುದೇ ಪುರಾವೆ ಇಳಿದಿಲ್ಲದವುಗಳನ್ನು ಅವನಿಗೆ ಸಹಭಾಗಿ ಮಾಡುವುದನ್ನು ಮತ್ತು ನಿಮಗೆ ಗೊತ್ತಿಲ್ಲದ ವಿಚಾರವನ್ನು ಅಲ್ಲಾಹನ ಹೆಸರಲ್ಲಿ ಹೇಳುವುದನ್ನಾಗಿದೆ .
Verse 34
وَلِكُلِّ أُمَّةٍ أَجَلٌ ۖ فَإِذَا جَآءَ أَجَلُهُمْ لَا يَسْتَأْخِرُونَ سَاعَةً ۖ وَلَا يَسْتَقْدِمُونَ
Transliteration walikulli ummatin ajalun fa-idhā jāa ajaluhum lā yastakhirūna sāʿatan walā yastaqdimūna
Kannada ಪ್ರತಿಯೊಂದು ಸಮುದಾಯಕ್ಕೂ ಒಂದು ನಿಗದಿತ ಗಡುವು ಇದೆ. ಆ ಗಡುವು ಬಂದು ಬಿಟ್ಟರೆ, ನಂತರ ಅದನ್ನು ಅವರ ಪಾಲಿಗೆ ಒಂದು ಕ್ಷಣದ ಮಟ್ಟಿಗೂ ಹಿಂದೂಡಲಾಗುವುದಿಲ್ಲ, ಮುಂದೂಡ ಲಾಗುವುದೂ ಇಲ್ಲ
Verse 35
يَـٰبَنِىٓ ءَادَمَ إِمَّا يَأْتِيَنَّكُمْ رُسُلٌ مِّنكُمْ يَقُصُّونَ عَلَيْكُمْ ءَايَـٰتِى ۙ فَمَنِ ٱتَّقَىٰ وَأَصْلَحَ فَلَا خَوْفٌ عَلَيْهِمْ وَلَا هُمْ يَحْزَنُونَ
Transliteration yābanī ādama immā yatiyannakum rusulun minkum yaquṣṣūna ʿalaykum āyātī famani ittaqā wa-aṣlaḥa falā khawfun ʿalayhim walā hum yaḥzanūna
Kannada ಓ ಆದಮರ ಸಂತತಿಯವರೇ! ನಿಮ್ಮಿಂದಲೇ ಪ್ರವಾದಿಗಳು ನಿಮ್ಮ ಬಳಿಗೆ ಬಂದು ನಮ್ಮ ಪುರಾವೆಗಳನ್ನು ಓದಿ ಹೇಳುವ ಸ್ಥಿತಿಯಲ್ಲಿ ಯಾರು ಶಿರ್ಕ್‍ನಿಂದ ಮುಕ್ತರಾಗಿ ಸುಕೃತದಿಂದ ಸುಧಾರಣೆಗೊಳ್ಳುತ್ತಾರೋ ಅವರ ಮೇಲೆ ಯಾವುದೇ ಭಯವಿಲ್ಲ. ಅವರು ದುಃಖಕ್ಕೀಡಾಗುವವರೂ ಅಲ್ಲ.
Verse 36
وَٱلَّذِينَ كَذَّبُوا۟ بِـَٔايَـٰتِنَا وَٱسْتَكْبَرُوا۟ عَنْهَآ أُو۟لَـٰٓئِكَ أَصْحَـٰبُ ٱلنَّارِ ۖ هُمْ فِيهَا خَـٰلِدُونَ
Transliteration wa-alladhīna kadhabū biāyātinā wa-is'takbarū ʿanhā ulāika aṣḥābu l-nāri hum fīhā khālidūna
Kannada ನಮ್ಮ ನಿದರ್ಶನಗಳನ್ನು ಸುಳ್ಳಾಗಿಸುವವರು ಮತ್ತು ಅವುಗಳ ವಿರುದ್ಧ ದರ್ಪ ತೋರುವವರೇ ನರಕಾಗ್ನಿಯವರಾಗಿದ್ದು ಅಲ್ಲಿ ಅವರು ಸದಾಕಾಲ ವಾಸಿಸುವರು.
Verse 37
فَمَنْ أَظْلَمُ مِمَّنِ ٱفْتَرَىٰ عَلَى ٱللَّهِ كَذِبًا أَوْ كَذَّبَ بِـَٔايَـٰتِهِۦٓ ۚ أُو۟لَـٰٓئِكَ يَنَالُهُمْ نَصِيبُهُم مِّنَ ٱلْكِتَـٰبِ ۖ حَتَّىٰٓ إِذَا جَآءَتْهُمْ رُسُلُنَا يَتَوَفَّوْنَهُمْ قَالُوٓا۟ أَيْنَ مَا كُنتُمْ تَدْعُونَ مِن دُونِ ٱللَّهِ ۖ قَالُوا۟ ضَلُّوا۟ عَنَّا وَشَهِدُوا۟ عَلَىٰٓ أَنفُسِهِمْ أَنَّهُمْ كَانُوا۟ كَـٰفِرِينَ
Transliteration faman aẓlamu mimmani if'tarā ʿalā l-lahi kadhiban aw kadhaba biāyātihi ulāika yanāluhum naṣībuhum mina l-kitābi ḥattā idhā jāathum rusulunā yatawaffawnahum qālū ayna mā kuntum tadʿūna min dūni l-lahi qālū ḍallū ʿannā washahidū ʿalā anfusihim annahum kānū kāfirīna
Kannada ಅಲ್ಲಾಹನ ಮೇಲೆ ಸುಳ್ಳನ್ನು ಹೊರಿಸುವವನಿ ಗಿಂತ ಅಥವಾ ಅಲ್ಲಾಹನ ವಚನಗಳನ್ನು ಸುಳ್ಳಾಗಿಸುವವನಿಗಿಂತ ದೊಡ್ಡ ಅಕ್ರಮಿ ಇನ್ನಾರು? ಇಂಥವರು ನಮ್ಮ ದೂತರು (ದೇವಚರರು) ಅವರ ಪ್ರಾಣ ತೆಗೆಯಲು ಬಂದು ತಲಪುವವರೆಗೂ ವಿಧಿಲಿಖಿತ ಪ್ರಕಾರ ತಮಗಿರುವ ಇಹದ ಪಾಲನ್ನು ಪಡೆಯುತ್ತಲೇ ಇರುವರು. ಆಗ ದೇವಚರರು ಅವರೊಡನೆ, ‘ನೀವು ಅಲ್ಲಾಹನ ಹೊರತಾಗಿ ಆರಾಧಿಸುತ್ತಿದ್ದವರು ಎಲ್ಲಿದ್ದಾರೆ?’ ಎಂದು ಕೇಳುವರು, ‘ಅವರು ನಮ್ಮಿಂದ ಕಾಣೆಯಾಗಿದ್ದಾರೆ’ ಎಂದು ಇವರು ಹೇಳುವರು. ಅವರು ನಿಜಕ್ಕೂ ಸತ್ಯ ನಿಷೇಧಿಗಳಾಗಿದ್ದರೆಂದು ಅವರು ತಮ್ಮ ವಿರುದ್ಧ ತಾವೇ ಸಾಕ್ಷಿ ಹೇಳುವರು.
Verse 38
قَالَ ٱدْخُلُوا۟ فِىٓ أُمَمٍ قَدْ خَلَتْ مِن قَبْلِكُم مِّنَ ٱلْجِنِّ وَٱلْإِنسِ فِى ٱلنَّارِ ۖ كُلَّمَا دَخَلَتْ أُمَّةٌ لَّعَنَتْ أُخْتَهَا ۖ حَتَّىٰٓ إِذَا ٱدَّارَكُوا۟ فِيهَا جَمِيعًا قَالَتْ أُخْرَىٰهُمْ لِأُولَىٰهُمْ رَبَّنَا هَـٰٓؤُلَآءِ أَضَلُّونَا فَـَٔاتِهِمْ عَذَابًا ضِعْفًا مِّنَ ٱلنَّارِ ۖ قَالَ لِكُلٍّ ضِعْفٌ وَلَـٰكِن لَّا تَعْلَمُونَ
Transliteration qāla ud'khulū fī umamin qad khalat min qablikum mina l-jini wal-insi fī l-nāri kullamā dakhalat ummatun laʿanat ukh'tahā ḥattā idhā iddārakū fīhā jamīʿan qālat ukh'rāhum liūlāhum rabbanā hāulāi aḍallūnā faātihim ʿadhāban ḍiʿ'fan mina l-nāri qāla likullin ḍiʿ'fun walākin lā taʿlamūna
Kannada ಅಲ್ಲಾಹನು ಹೇಳುವನು; ನಿಮಗಿಂತ ಮುಂಚೆ ಗತಿಸಿ ಹೋದ ಖೇಚರ ಮತ್ತು ಮಾನವ ಸಮುದಾಯಗಳ ಕೂಟದಲ್ಲಿ ನೀವು ನರಕಾಗ್ನಿಗೆ ಪ್ರವೇಶಿಸಿರಿ. ಪ್ರತಿಯೊಂದು ಸಮುದಾಯವೂ ನರಕಾಗ್ನಿಯೊಳಗೆ ಪ್ರವೇಶಿಸುವಾಗ ತನಗಿಂತ ಮುಂಚಿನ ಸೋದರ ಸಮುದಾಯವನ್ನು ಶಪಿಸುವುದು. ಹೀಗೆ ಎಲ್ಲರೂ ಅಲ್ಲಿ ಒಟ್ಟು ಸೇರಿದಾಗ ಅವರ ಪೈಕಿ ಹಿಂದಿನವರು ಅವರ ಮುಂಚಿನ ಸಮುದಾಯದ ಬಗ್ಗೆ, ಹೀಗೆ ಹೇಳುವರು; “ಓ ನಮ್ಮ ಪ್ರಭೂ, ನಮ್ಮನ್ನು ಪಥಭ್ರಷ್ಟರಾಗಿ ಮಾಡಿದವರು ಇವರೇ. ಆದುದರಿಂದ ಇವರಿಗೆ ನರಕಾಗ್ನಿಯಿಂದ ಇಮ್ಮಡಿ ಶಿಕ್ಷೆ ಕೊಡು”. ಆಗ ಅಲ್ಲಾಹನು `ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನಿಮಗೆ ತಿಳಿದಿರುವುದಿಲ್ಲ’ ಎನ್ನುವನು .
Verse 39
وَقَالَتْ أُولَىٰهُمْ لِأُخْرَىٰهُمْ فَمَا كَانَ لَكُمْ عَلَيْنَا مِن فَضْلٍ فَذُوقُوا۟ ٱلْعَذَابَ بِمَا كُنتُمْ تَكْسِبُونَ
Transliteration waqālat ūlāhum li-ukh'rāhum famā kāna lakum ʿalaynā min faḍlin fadhūqū l-ʿadhāba bimā kuntum taksibūna
Kannada ಅವರ ಮೊದಲಿನ ಸಮುದಾಯವು ಅನಂತರದ ಸಮುದಾಯದೊಡನೆ, ‘ನಿಮಗೆ ನಮಗಿಂತ ಶ್ರೇಷ್ಠತೆಯೇನೂ ಇರುವುದಿಲ್ಲ’ ಎನ್ನುವುದು. ನಿಮ್ಮ ಗಳಿಕೆಯ ಫಲವಾಗಿ ಈಗ ಶಿಕ್ಷೆಯನ್ನು ಅನುಭವಿಸಿರಿ (ಎಂದು ಅಲ್ಲಾಹನು ಹೇಳು ವನು).
Verse 40
إِنَّ ٱلَّذِينَ كَذَّبُوا۟ بِـَٔايَـٰتِنَا وَٱسْتَكْبَرُوا۟ عَنْهَا لَا تُفَتَّحُ لَهُمْ أَبْوَٰبُ ٱلسَّمَآءِ وَلَا يَدْخُلُونَ ٱلْجَنَّةَ حَتَّىٰ يَلِجَ ٱلْجَمَلُ فِى سَمِّ ٱلْخِيَاطِ ۚ وَكَذَٰلِكَ نَجْزِى ٱلْمُجْرِمِينَ
Transliteration inna alladhīna kadhabū biāyātinā wa-is'takbarū ʿanhā lā tufattaḥu lahum abwābu l-samāi walā yadkhulūna l-janata ḥattā yalija l-jamalu fī sammi l-khiyāṭi wakadhālika najzī l-muj'rimīna
Kannada ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಮತ್ತು ಅವುಗಳ ವಿರುದ್ಧ ಅಹಂಕಾರ ತೋರಿದ ಜನರ ಪಾಲಿಗೆ ಆಕಾಶದ ಬಾಗಿಲುಗಳನ್ನು ತೆರೆಯಲಾಗುವುದಿಲ್ಲ . ಸೂಜಿಯ ರಂಧ್ರದೊಳಗೆ ಒಂಟೆ ಪ್ರವೇಶಿಸುವವರೆಗೆ ಅವರು ಸ್ವರ್ಗಕ್ಕೆ ಪ್ರವೇಶಿಸಲಾರರು. ಅಪರಾಧಿಗಳಿಗೆ ನಾವು ಇಂಥದೇ ಪ್ರತಿಫಲ ಕೊಡುತ್ತೇವೆ.
Verse 41
لَهُم مِّن جَهَنَّمَ مِهَادٌ وَمِن فَوْقِهِمْ غَوَاشٍ ۚ وَكَذَٰلِكَ نَجْزِى ٱلظَّـٰلِمِينَ
Transliteration lahum min jahannama mihādun wamin fawqihim ghawāshin wakadhālika najzī l-ẓālimīna
Kannada ಅವರಿಗೆ ಬೆಂಕಿಯ ಹಾಸಿಗೆ ಇರುವುದು. ಅವರ ಮೇಲ್ಭಾಗದಿಂದ ಬೆಂಕಿಯ ಹೊದಿಕೆಯೂ ಇರುವುದು. ನಾವು ಅಕ್ರಮಿಗಳಿಗೆ ಇಂಥದೇ ಪ್ರತಿಫಲ ಕೊಡುತ್ತೇವೆ.
Verse 42
وَٱلَّذِينَ ءَامَنُوا۟ وَعَمِلُوا۟ ٱلصَّـٰلِحَـٰتِ لَا نُكَلِّفُ نَفْسًا إِلَّا وُسْعَهَآ أُو۟لَـٰٓئِكَ أَصْحَـٰبُ ٱلْجَنَّةِ ۖ هُمْ فِيهَا خَـٰلِدُونَ
Transliteration wa-alladhīna āmanū waʿamilū l-ṣāliḥāti lā nukallifu nafsan illā wus'ʿahā ulāika aṣḥābu l-janati hum fīhā khālidūna
Kannada ಸತ್ಯವಿಶ್ವಾಸವನ್ನಿರಿಸಿದ ಮತ್ತು ಸತ್ಕರ್ಮವೆಸಗಿ ದವರು-ನಾವು ಪ್ರತಿಯೊಬ್ಬನನ್ನು ಅವನ ಶಕ್ತಿ ಗನುಸಾರ ಮಾತ್ರ ಹೊಣೆಗಾರನನ್ನಾಗಿ ಮಾಡುತ್ತೇವೆ - ಅವರೇ ಸ್ವರ್ಗದವರು. ಅಲ್ಲಿ ಅವರು ಸದಾಕಾಲ ನೆಲೆಸುವರು.
Verse 43
وَنَزَعْنَا مَا فِى صُدُورِهِم مِّنْ غِلٍّ تَجْرِى مِن تَحْتِهِمُ ٱلْأَنْهَـٰرُ ۖ وَقَالُوا۟ ٱلْحَمْدُ لِلَّهِ ٱلَّذِى هَدَىٰنَا لِهَـٰذَا وَمَا كُنَّا لِنَهْتَدِىَ لَوْلَآ أَنْ هَدَىٰنَا ٱللَّهُ ۖ لَقَدْ جَآءَتْ رُسُلُ رَبِّنَا بِٱلْحَقِّ ۖ وَنُودُوٓا۟ أَن تِلْكُمُ ٱلْجَنَّةُ أُورِثْتُمُوهَا بِمَا كُنتُمْ تَعْمَلُونَ
Transliteration wanazaʿnā mā fī ṣudūrihim min ghillin tajrī min taḥtihimu l-anhāru waqālū l-ḥamdu lillahi alladhī hadānā lihādhā wamā kunnā linahtadiya lawlā an hadānā l-lahu laqad jāat rusulu rabbinā bil-ḥaqi wanūdū an til'kumu l-janatu ūrith'tumūhā bimā kuntum taʿmalūna
Kannada ಅವರ ಹೃದಯಗಳಲ್ಲಿ ಇರುವ ಪರಸ್ಪರ ಹಗೆತನವನ್ನು ನಾವು ನಿವಾರಿಸುವೆವು . ಅವರ ಕೆಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವುವು. “ನಮ ಗೆ ಈ ಮಾರ್ಗವನ್ನು ತೋರಿಸಿಕೊಟ್ಟ ಅಲ್ಲಾಹನಿಗೇ ಸರ್ವಸ್ತುತಿಯು. ಅಲ್ಲಾಹನು ನಮಗೆ ಮಾರ್ಗ ದರ್ಶನ ನೀಡದಿರುತ್ತಿದ್ದರೆ, ನಾವು ಸ್ವಯಂ ಮಾರ್ಗದರ್ಶನ ಹೊಂದುತ್ತಿರಲಿಲ್ಲ. ನಮ್ಮ ಪ್ರಭು ವಿನ ದೂತರು ನಿಜಕ್ಕೂ ಸತ್ಯವನ್ನೇ ತಂದಿದ್ದರು” ಎಂದು ಅವರು ಹೇಳುವರು. ಆಗ, “ನಿಮ್ಮನ್ನು ವಾರೀಸುದಾರರಾಗಿ ಮಾಡಲ್ಪಟ್ಟಿರುವ ಈ ಸ್ವರ್ಗವು ನೀವು ಮಾಡುತ್ತಿದ್ದ ಕರ್ಮಗಳ ಪ್ರತಿಫಲವಾಗಿ ನಿಮಗೆ ಸಿಕ್ಕಿದೆ” ಎಂದು ಕೂಗಿ ಹೇಳಲಾಗುವುದು.
Verse 44
وَنَادَىٰٓ أَصْحَـٰبُ ٱلْجَنَّةِ أَصْحَـٰبَ ٱلنَّارِ أَن قَدْ وَجَدْنَا مَا وَعَدَنَا رَبُّنَا حَقًّا فَهَلْ وَجَدتُّم مَّا وَعَدَ رَبُّكُمْ حَقًّا ۖ قَالُوا۟ نَعَمْ ۚ فَأَذَّنَ مُؤَذِّنٌۢ بَيْنَهُمْ أَن لَّعْنَةُ ٱللَّهِ عَلَى ٱلظَّـٰلِمِينَ
Transliteration wanādā aṣḥābu l-janati aṣḥāba l-nāri an qad wajadnā mā waʿadanā rabbunā ḥaqqan fahal wajadttum mā waʿada rabbukum ḥaqqan qālū naʿam fa-adhana mu-adhinun baynahum an laʿnatu l-lahi ʿalā l-ẓālimīna
Kannada ಸ್ವರ್ಗದವರು ನರಕದವರನ್ನು ಕೂಗಿ ಹೀಗೆ ಹೇಳುವರು, “ನಮ್ಮ ಪ್ರಭು ನಮಗೆ ವಾಗ್ದಾನ ಮಾಡಿದ ಪ್ರತಿಫಲವು ನಿಜವಾಗಿದೆ. ಅದನ್ನು ನಾವು ಪಡೆದಿದ್ದೇವೆ. ಆದರೆ ನಿಮ್ಮ ಪ್ರಭು ನಿಮಗೆ ವಾಗ್ದಾನ ಮಾಡಿದ್ದನ್ನು (ಶಿಕ್ಷೆ) ನೀವು ಪಡಕೊಂಡಿರಾ?” ಅವರು ಹೌದೆನ್ನುವರು. ಆಗ ಅವರ ನಡುವೆ ಘೋಷಿಸುವವನೊಬ್ಬನು “ದ್ರೋಹಿಗಳಿಗೆ ಅಲ್ಲಾಹನ ಶಾಪವಿರಲಿ” ಎಂದು ಘೋಷಿಸುವನು.
Verse 45
ٱلَّذِينَ يَصُدُّونَ عَن سَبِيلِ ٱللَّهِ وَيَبْغُونَهَا عِوَجًا وَهُم بِٱلْـَٔاخِرَةِ كَـٰفِرُونَ
Transliteration alladhīna yaṣuddūna ʿan sabīli l-lahi wayabghūnahā ʿiwajan wahum bil-ākhirati kāfirūna
Kannada ಅವರು ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುತ್ತಿದ್ದರು. ಅದಕ್ಕೆ ವಕ್ರತೆಯನ್ನು ಹುಡುಕುತ್ತಿದ್ದರು ಹಾಗೂ ಪರಲೋಕವನ್ನು ನಿರಾಕರಿಸುತ್ತಿದ್ದರು.
Verse 46
وَبَيْنَهُمَا حِجَابٌ ۚ وَعَلَى ٱلْأَعْرَافِ رِجَالٌ يَعْرِفُونَ كُلًّۢا بِسِيمَىٰهُمْ ۚ وَنَادَوْا۟ أَصْحَـٰبَ ٱلْجَنَّةِ أَن سَلَـٰمٌ عَلَيْكُمْ ۚ لَمْ يَدْخُلُوهَا وَهُمْ يَطْمَعُونَ
Transliteration wabaynahumā ḥijābun waʿalā l-aʿrāfi rijālun yaʿrifūna kullan bisīmāhum wanādaw aṣḥāba l-janati an salāmun ʿalaykum lam yadkhulūhā wahum yaṭmaʿūna
Kannada ಇವೆರಡೂ ವರ್ಗಗಳ ಮಧ್ಯೆ ಒಂದು ತಡೆಯಿ ರುವುದು. ‘ಅಅïರಾಫ್’ನಲ್ಲಿ (ಸ್ವರ್ಗದ ಗಡಿಯ ಬಳಿ) ಕೆಲವರಿರುವರು. ಇವರು ಪ್ರತಿಯೊಬ್ಬನನ್ನು ಅವನ ಮುಖ ಮುದ್ರೆಯಿಂದಲೇ ಗುರುತು ಹಿಡಿಯುವರು. ಅವರು ಸ್ವರ್ಗದವರೊಡನೆ, ‘ನಿಮಗೆ ಶುಭವಾಗಲಿ’ ಎಂದು ಕೂಗಿ ಹೇಳುವರು. ಇವರು ಸ್ವರ್ಗದೊಳಗೆ ಪ್ರವೇಶಿಸಲಿಲ್ಲ. ಆದರೆ ಅವರು ಆಶೆಪಡುವರು
Verse 47
۞ وَإِذَا صُرِفَتْ أَبْصَـٰرُهُمْ تِلْقَآءَ أَصْحَـٰبِ ٱلنَّارِ قَالُوا۟ رَبَّنَا لَا تَجْعَلْنَا مَعَ ٱلْقَوْمِ ٱلظَّـٰلِمِينَ
Transliteration wa-idhā ṣurifat abṣāruhum til'qāa aṣḥābi l-nāri qālū rabbanā lā tajʿalnā maʿa l-qawmi l-ẓālimīna
Kannada ಇವರ ದೃಷ್ಟಿಗಳು ನರಕದವರ ಕಡೆಗೆ ತಿರುಗಿದಾಗ ಇವರು, “ಓ ನಮ್ಮ ಪ್ರಭೂ, ನಮ್ಮನ್ನು ಈ ಅಕ್ರಮಿ ಗಳೊಂದಿಗೆ ಸೇರಿಸಬೇಡ” ಎಂದು ಹೇಳುವರು.
Verse 48
وَنَادَىٰٓ أَصْحَـٰبُ ٱلْأَعْرَافِ رِجَالًا يَعْرِفُونَهُم بِسِيمَىٰهُمْ قَالُوا۟ مَآ أَغْنَىٰ عَنكُمْ جَمْعُكُمْ وَمَا كُنتُمْ تَسْتَكْبِرُونَ
Transliteration wanādā aṣḥābu l-aʿrāfi rijālan yaʿrifūnahum bisīmāhum qālū mā aghnā ʿankum jamʿukum wamā kuntum tastakbirūna
Kannada ಅನಂತರ ಈ ತ್ರಿಶಂಕು ಸ್ಥಿತಿಯವರು ನರಕದ ಕೆಲವು ಜನರನ್ನು ಅವರ ಲಕ್ಷಣಗಳಿಂದಲೇ ಗುರುತು ಹಿಡಿದು, ಕೂಗಿ ಹೇಳುವರು; “ನಿಮ್ಮ (ಐಹಿಕ) ಶೇಖರಣೆಯೂ ನೀವು ಅಹಂಕಾರಪಡುತ್ತಿದ್ದ ವಸ್ತುಗಳೂ ಇಂದು ನಿಮಗೆ ಯಾವ ಪ್ರಯೋಜನಕ್ಕೆ ಬಂದಿವೆ?
Verse 49
أَهَـٰٓؤُلَآءِ ٱلَّذِينَ أَقْسَمْتُمْ لَا يَنَالُهُمُ ٱللَّهُ بِرَحْمَةٍ ۚ ٱدْخُلُوا۟ ٱلْجَنَّةَ لَا خَوْفٌ عَلَيْكُمْ وَلَآ أَنتُمْ تَحْزَنُونَ
Transliteration ahāulāi alladhīna aqsamtum lā yanāluhumu l-lahu biraḥmatin ud'khulū l-janata lā khawfun ʿalaykum walā antum taḥzanūna
Kannada (ದುರ್ಬಲ ಮುಸಲ್ಮಾನರನ್ನು ಬೊಟ್ಟು ಮಾಡಿ ಅವರು ಕೇಳುವರು;) ಇವರಿಗೆ ಅಲ್ಲಾಹನು ಯಾವುದೇ ಅನುಗ್ರಹವನ್ನು ನೀಡಲಾರನೆಂದು ನೀವು ಆಣೆ ಹಾಕಿ ಹೇಳುತ್ತಿದ್ದುದು ಇವರ ಕುರಿತೇ? ಸ್ವರ್ಗದಲ್ಲಿ ಪ್ರವೇಶಿಸಿರಿ. ನಿಮಗೆ ಭಯವೂ ಇಲ್ಲ ವ್ಯಥೆಯೂ ಇಲ್ಲ ಎಂದು (ಅವರಿಗೆ ಹೇಳಲಾಗಿದೆ).
Verse 50
وَنَادَىٰٓ أَصْحَـٰبُ ٱلنَّارِ أَصْحَـٰبَ ٱلْجَنَّةِ أَنْ أَفِيضُوا۟ عَلَيْنَا مِنَ ٱلْمَآءِ أَوْ مِمَّا رَزَقَكُمُ ٱللَّهُ ۚ قَالُوٓا۟ إِنَّ ٱللَّهَ حَرَّمَهُمَا عَلَى ٱلْكَـٰفِرِينَ
Transliteration wanādā aṣḥābu l-nāri aṣḥāba l-janati an afīḍū ʿalaynā mina l-māi aw mimmā razaqakumu l-lahu qālū inna l-laha ḥarramahumā ʿalā l-kāfirīna
Kannada ನರಕದವರು ಸ್ವರ್ಗದವರನ್ನು ಕೂಗಿ, “ನಮ್ಮ ಮೇಲೆ ಒಂದಿಷ್ಟು ನೀರನ್ನು ಸುರಿದುಬಿಡಿರಿ ಅಥವಾ ಅಲ್ಲಾಹನು ನಿಮಗೆ ನೀಡಿದ ಆಹಾರದಿಂದ ಸ್ವಲ್ಪ ನೀಡಿರಿ” ಎನ್ನುವರು. ಆದರೆ “ಅವೆರ ಡನ್ನೂ ಸತ್ಯನಿಷೇಧಿಗಳಿಗೆ ಅಲ್ಲಾಹನು ನಿಸ್ಸಂದೇಹವಾಗಿ ನಿಷಿದ್ಧಗೊಳಿಸಿದ್ದಾನೆ” ಎಂದು ಅವರು ಪ್ರತಿಕ್ರಯಿಸುವರು.
Verse 51
ٱلَّذِينَ ٱتَّخَذُوا۟ دِينَهُمْ لَهْوًا وَلَعِبًا وَغَرَّتْهُمُ ٱلْحَيَوٰةُ ٱلدُّنْيَا ۚ فَٱلْيَوْمَ نَنسَىٰهُمْ كَمَا نَسُوا۟ لِقَآءَ يَوْمِهِمْ هَـٰذَا وَمَا كَانُوا۟ بِـَٔايَـٰتِنَا يَجْحَدُونَ
Transliteration alladhīna ittakhadhū dīnahum lahwan walaʿiban wagharrathumu l-ḥayatu l-dun'yā fal-yawma nansāhum kamā nasū liqāa yawmihim hādhā wamā kānū biāyātinā yajḥadūna
Kannada ‘ಅವರು ತಮ್ಮ ಧರ್ಮವನ್ನು ವಿನೋದ ಹಾಗೂ ಆಟವನ್ನಾಗಿ ಪರಿಗಣಿಸಿದ್ದರು. ಐಹಿಕ ಬದುಕು ಅವರನ್ನು ವಂಚಿಸಿತು. ಅವರು ಇಂದಿನ ಭೇಟಿ ಯನ್ನು ಮರೆತುಬಿಟ್ಟಂತೆಯೇ ಮತ್ತು ನಮ್ಮ ದೃಷ್ಟಾಂತಗಳನ್ನು ನಿರಾಕರಿಸಿದಂತೆಯೇ ಇಂದು ನಾವೂ ಅವರನ್ನು ಮರೆತು ಬಿಡುತ್ತೇವೆ’.
Verse 52
وَلَقَدْ جِئْنَـٰهُم بِكِتَـٰبٍ فَصَّلْنَـٰهُ عَلَىٰ عِلْمٍ هُدًى وَرَحْمَةً لِّقَوْمٍ يُؤْمِنُونَ
Transliteration walaqad ji'nāhum bikitābin faṣṣalnāhu ʿalā ʿil'min hudan waraḥmatan liqawmin yu'minūna
Kannada ನಿಸ್ಸಂದೇಹವಾಗಿ ನಾವು ಅವರಿಗೊಂದು ಗ್ರಂಥ ನೀಡಿದೆವು. ಪ್ರಜ್ಞಾಪೂರ್ವಕವಾಗಿ ಅದನ್ನು ಅವರಿಗೆ ವಿವರಿಸಿಕೊಟ್ಟೆವು; ವಿಶ್ವಾಸವಿಡುವವರಿಗೆ ಮಾರ್ಗದರ್ಶನವೂ, ಕಾರುಣ್ಯ ಪರವೂ ಆಗತಕ್ಕ ವಿಧದಲ್ಲಿ.
Verse 53
هَلْ يَنظُرُونَ إِلَّا تَأْوِيلَهُۥ ۚ يَوْمَ يَأْتِى تَأْوِيلُهُۥ يَقُولُ ٱلَّذِينَ نَسُوهُ مِن قَبْلُ قَدْ جَآءَتْ رُسُلُ رَبِّنَا بِٱلْحَقِّ فَهَل لَّنَا مِن شُفَعَآءَ فَيَشْفَعُوا۟ لَنَآ أَوْ نُرَدُّ فَنَعْمَلَ غَيْرَ ٱلَّذِى كُنَّا نَعْمَلُ ۚ قَدْ خَسِرُوٓا۟ أَنفُسَهُمْ وَضَلَّ عَنْهُم مَّا كَانُوا۟ يَفْتَرُونَ
Transliteration hal yanẓurūna illā tawīlahu yawma yatī tawīluhu yaqūlu alladhīna nasūhu min qablu qad jāat rusulu rabbinā bil-ḥaqi fahal lanā min shufaʿāa fayashfaʿū lanā aw nuraddu fanaʿmala ghayra alladhī kunnā naʿmalu qad khasirū anfusahum waḍalla ʿanhum mā kānū yaftarūna
Kannada ಅದರ ಮುನ್ನೆಚ್ಚರಿಕೆಯ ಪರಿಣಾಮವನ್ನಲ್ಲದೆ ಇನ್ನೇನನ್ನೂ ಅವರು ನಿರೀಕ್ಷಿಸುತ್ತಿಲ್ಲವೆ ? ಈ ಹಿಂದೆ ಅದನ್ನು ಮರೆತು ಬಿಟ್ಟವರು ಅದರ ಪರಿಣಾಮವು ಬಂದೆರಗಿದ ದಿನ ಹೀಗೆ ಹೇಳುವರು: “ನಿಜಕ್ಕೂ ನಮ್ಮ ಪ್ರಭುವಿನ ದೂತರು ಸತ್ಯವನ್ನೇ ತಂದಿದ್ದರು. ಆದ್ದರಿಂದ ನಮ್ಮ ಪರವಾಗಿ ಶಿಫಾರಸ್ಸು ಮಾಡಲು ನಮಗೆ ಯಾರಾದರೂ ಶಿಫಾ ರಸ್ಸುದಾರರು ಸಿಗುವರೇ? ಅಥವಾ ನಾವು ಹಿಂದೆ ಮಾಡುತ್ತಿದ್ದ ಕರ್ಮಕ್ಕೆ ಬದಲು ಇನ್ನು ಬೇರೆ ಕರ್ಮವೆಸಗಲಿಕ್ಕಾಗಿ ನಮ್ಮನ್ನು ಇನ್ನೊಮ್ಮೆ ಹಿಂದಕ್ಕೆ ಕಳುಹಿಸಲಾಗುವುದೇ?” ಅವರು ತಮ್ಮನ್ನು ತಾವೇ ನಷ್ಟಕ್ಕೆ ಗುರಿಪಡಿಸಿಕೊಂಡರು. ಅವರು ಹೆಣೆದುಕೊಂಡಿದ್ದ ಎಲ್ಲ ಸುಳ್ಳುಗಳೂ ಇಂದು ಅವರಿಂದ ಮಾಯವಾಗಿವೆ .
Verse 54
إِنَّ رَبَّكُمُ ٱللَّهُ ٱلَّذِى خَلَقَ ٱلسَّمَـٰوَٰتِ وَٱلْأَرْضَ فِى سِتَّةِ أَيَّامٍ ثُمَّ ٱسْتَوَىٰ عَلَى ٱلْعَرْشِ يُغْشِى ٱلَّيْلَ ٱلنَّهَارَ يَطْلُبُهُۥ حَثِيثًا وَٱلشَّمْسَ وَٱلْقَمَرَ وَٱلنُّجُومَ مُسَخَّرَٰتٍۭ بِأَمْرِهِۦٓ ۗ أَلَا لَهُ ٱلْخَلْقُ وَٱلْأَمْرُ ۗ تَبَارَكَ ٱللَّهُ رَبُّ ٱلْعَـٰلَمِينَ
Transliteration inna rabbakumu l-lahu alladhī khalaqa l-samāwāti wal-arḍa fī sittati ayyāmin thumma is'tawā ʿalā l-ʿarshi yugh'shī al-layla l-nahāra yaṭlubuhu ḥathīthan wal-shamsa wal-qamara wal-nujūma musakharātin bi-amrihi alā lahu l-khalqu wal-amru tabāraka l-lahu rabbu l-ʿālamīna
Kannada ಆರು ದಿನಗಳಲ್ಲಿ ಭೂಮಿ-ಆಕಾಶಗಳನ್ನು ಸೃಷ್ಟಿಸಿದ ಅಲ್ಲಾಹನೇ ಆಗಿರುವನು ನಿಮ್ಮ ರಕ್ಷಕನು. ತರುವಾಯ ಅವನಿಗೆ ಸಂಗತವಾದ ವಿಧದಲ್ಲಿ ಅರ್ಶ್‍ನ ಮೇಲೆ ಇಸ್ತಿವಾ ಹೊಂದಿದನು. ರಾತ್ರಿ ಯನ್ನು ಹಗಲು ಬೆಂಬತ್ತಿ ಬರುವಂತೆ ಅವನು ಇರುಳನ್ನು ಹಗಲಿಗೆ ಮುಚ್ಚುವನು. ಅವನು ಸೂರ್ಯನನ್ನೂ ಚಂದ್ರನನ್ನೂ ನಕ್ಷತ್ರಗಳನ್ನೂ ಅವನ ಆಜ್ಞೆಗೆ ವಿಧೇಯವಾಗಿ ಸೃಷ್ಟಿಸಿದನು. ತಿಳಿಯಿರಿ! ಅವನದೇ ಸೃಷ್ಟಿ ಹಾಗೂ ಅಪ್ಪಣೆ ! ಸರ್ವಲೋಕಗಳ ಪ್ರಭುವಾಗಿರುವ ಅಲ್ಲಾಹನು ಮಹಾ ಸಮೃದ್ಧನು.
Verse 55
ٱدْعُوا۟ رَبَّكُمْ تَضَرُّعًا وَخُفْيَةً ۚ إِنَّهُۥ لَا يُحِبُّ ٱلْمُعْتَدِينَ
Transliteration id'ʿū rabbakum taḍarruʿan wakhuf'yatan innahu lā yuḥibbu l-muʿ'tadīna
Kannada ಭಯ ವಿನಯದೊಂದಿಗೆ ಮತ್ತು ರಹಸ್ಯವಾಗಿ ನಿಮ್ಮ ಪ್ರಭುವನ್ನು ಪ್ರಾರ್ಥಿಸಿರಿ. ಅವನು ಹದ್ದು ಮೀರುವವರನ್ನು ಖಂಡಿತ ಮೆಚ್ಚುವುದಿಲ್ಲ .
Verse 56
وَلَا تُفْسِدُوا۟ فِى ٱلْأَرْضِ بَعْدَ إِصْلَـٰحِهَا وَٱدْعُوهُ خَوْفًا وَطَمَعًا ۚ إِنَّ رَحْمَتَ ٱللَّهِ قَرِيبٌ مِّنَ ٱلْمُحْسِنِينَ
Transliteration walā tuf'sidū fī l-arḍi baʿda iṣ'lāḥihā wa-id'ʿūhu khawfan waṭamaʿan inna raḥmata l-lahi qarībun mina l-muḥ'sinīna
Kannada ಭೂಮಿಯಲ್ಲಿ ಸುಧಾರಣೆಯಾದ ಬಳಿಕ ಕ್ಷೋಭೆಯನ್ನು ಹರಡಬೇಡಿರಿ. ಭಯವುಳ್ಳವರಾಗಿಯೂ, ಬಯಕೆಯುಳ್ಳವರಾಗಿಯೂ ಅವನಲ್ಲಿ ಪ್ರಾರ್ಥಿಸಿರಿ. ನಿಶ್ಚಯವಾಗಿಯೂ ಅಲ್ಲಾಹನ ಕೃಪೆಯು ಸಜ್ಜನರ ಸಮೀಪದಲ್ಲಿದೆ.
Verse 57
وَهُوَ ٱلَّذِى يُرْسِلُ ٱلرِّيَـٰحَ بُشْرًۢا بَيْنَ يَدَىْ رَحْمَتِهِۦ ۖ حَتَّىٰٓ إِذَآ أَقَلَّتْ سَحَابًا ثِقَالًا سُقْنَـٰهُ لِبَلَدٍ مَّيِّتٍ فَأَنزَلْنَا بِهِ ٱلْمَآءَ فَأَخْرَجْنَا بِهِۦ مِن كُلِّ ٱلثَّمَرَٰتِ ۚ كَذَٰلِكَ نُخْرِجُ ٱلْمَوْتَىٰ لَعَلَّكُمْ تَذَكَّرُونَ
Transliteration wahuwa alladhī yur'silu l-riyāḥa bush'ran bayna yaday raḥmatihi ḥattā idhā aqallat saḥāban thiqālan suq'nāhu libaladin mayyitin fa-anzalnā bihi l-māa fa-akhrajnā bihi min kulli l-thamarāti kadhālika nukh'riju l-mawtā laʿallakum tadhakkarūna
Kannada ತನ್ನ ಅನುಗ್ರಹದ (ವರ್ಷಧಾರೆಗೆ) ಮುಂದಾಗಿ ಸಂತೋಷ ವಾರ್ತೆಯನ್ನರುಹಿ ಮಾರುತಗಳನ್ನು ಕಳುಹಿಸುವವನು ಅಲ್ಲಾಹನೇ ಆಗಿರುತ್ತಾನೆ. ಆಮೇಲೆ ಆ ಮಾರುತಗಳು ಘನೀಕೃತ ಮೇಘಗ ಳನ್ನು ವಹಿಸಿಕೊಂಡಾಗ ನಾವು ನಿರ್ಜೀವ ನಾಡಿಗೆ ಜಲಸೇಚನ ಮಾಡುತ್ತೇವೆ. ಹಾಗೆ ನಾಡಿಗೆ ನೀರುಣಿಸಿ ಆ ನೀರಿನಿಂದ ನಾನಾ ವಿಧ ಫಲ ಬೆಳೆಗಳನ್ನು ನಾವು ಉತ್ಪಾದಿಸುತ್ತೇವೆ. ಮೃತ ರನ್ನು ಸಜೀವಗೊಳಿಸಿ ನಾವು ಎಬ್ಬಿಸುವುದು ಅದೇ ರೀತಿಯಲ್ಲಾಗಿದೆ. ನೀವು ಚಿಂತಿಸಲಿಕ್ಕಾಗಿ (ಈ ವಿಚಾರವನ್ನು ಹೇಳಲಾಗಿದೆ).
Verse 58
وَٱلْبَلَدُ ٱلطَّيِّبُ يَخْرُجُ نَبَاتُهُۥ بِإِذْنِ رَبِّهِۦ ۖ وَٱلَّذِى خَبُثَ لَا يَخْرُجُ إِلَّا نَكِدًا ۚ كَذَٰلِكَ نُصَرِّفُ ٱلْـَٔايَـٰتِ لِقَوْمٍ يَشْكُرُونَ
Transliteration wal-baladu l-ṭayibu yakhruju nabātuhu bi-idh'ni rabbihi wa-alladhī khabutha lā yakhruju illā nakidan kadhālika nuṣarrifu l-āyāti liqawmin yashkurūna
Kannada ಫಲವತ್ತಾದ ನೆಲದಲ್ಲಿ ಶ್ರೇಷ್ಠ ಸಸ್ಯ ಉತ್ಪಾದನೆ ಯಾಗುತ್ತದೆ. ಆ ನೆಲದೊಡೆಯನ ಅನುಮತಿಯಿಂದ. ಕೆಟ್ಟ ನೆಲದಿಂದಲೋ, ಕೆಟ್ಟ ಬೆಳೆಯ ನ್ನಲ್ಲದೆ ಬೇರೇನೂ ನಿರೀಕ್ಷಿಸಲಾಗದು. ಅದೇ ರೀತಿ ಕೃತಜ್ಞರಾದವರಿಗೆ ನಾವು ದೃಷ್ಟಾಂತಗಳನ್ನು ನಿರೂಪಿಸುತ್ತೇವೆ.
Verse 59
لَقَدْ أَرْسَلْنَا نُوحًا إِلَىٰ قَوْمِهِۦ فَقَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥٓ إِنِّىٓ أَخَافُ عَلَيْكُمْ عَذَابَ يَوْمٍ عَظِيمٍ
Transliteration laqad arsalnā nūḥan ilā qawmihi faqāla yāqawmi uʿ'budū l-laha mā lakum min ilāhin ghayruhu innī akhāfu ʿalaykum ʿadhāba yawmin ʿaẓīmin
Kannada ನೂಹರನ್ನು ಅವರ ಜನಾಂಗದ ಕಡೆಗೆ ನಾವು ಕಳುಹಿಸಿದೆವು. ಅವರು ಹೇಳಿದರು, `ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೊಬ್ಬ ಆರಾಧ್ಯನಿಲ್ಲ. ನಿಮ್ಮ ಪಾಲಿಗೆ ಒಂದು ಭಯಾನಕ ದಿನದ ಯಾತನೆಯ ಕುರಿತು ನಾನು ಭಯಪಡುತ್ತಿದ್ದೇನೆ’.
Verse 60
قَالَ ٱلْمَلَأُ مِن قَوْمِهِۦٓ إِنَّا لَنَرَىٰكَ فِى ضَلَـٰلٍ مُّبِينٍ
Transliteration qāla l-mala-u min qawmihi innā lanarāka fī ḍalālin mubīnin
Kannada ಅವರ ಜನಾಂಗದ ಮುಂದಾಳುಗಳು ಹೇಳಿದರು: ‘ನಮಗಂತೂ ನೀನು ಸುವ್ಯಕ್ತ ಪಥಭ್ರ ಷ್ಟತೆಯಲ್ಲಿ ಸಿಲುಕಿರುವಂತೆ ಕಾಣಿಸುತ್ತಿರುವೆ’.
Verse 61
قَالَ يَـٰقَوْمِ لَيْسَ بِى ضَلَـٰلَةٌ وَلَـٰكِنِّى رَسُولٌ مِّن رَّبِّ ٱلْعَـٰلَمِينَ
Transliteration qāla yāqawmi laysa bī ḍalālatun walākinnī rasūlun min rabbi l-ʿālamīna
Kannada ನೂಹರ ಪ್ರತಿಕ್ರಿಯೆ - `ಓ ನನ್ನ ಜನಾಂಗ ಬಾಂಧ ವರೇ, ನನ್ನಲ್ಲಿ ಯಾವುದೇ ಪಥಭ್ರಷ್ಟತೆ ಇರು ವುದಿಲ್ಲ . ನಿಜವಾಗಿಯೂ ನಾನು ಸರ್ವಲೋಕ ಪಾಲಕನ ದೂತನಾಗಿದ್ದೇನೆ.
Verse 62
أُبَلِّغُكُمْ رِسَـٰلَـٰتِ رَبِّى وَأَنصَحُ لَكُمْ وَأَعْلَمُ مِنَ ٱللَّهِ مَا لَا تَعْلَمُونَ
Transliteration uballighukum risālāti rabbī wa-anṣaḥu lakum wa-aʿlamu mina l-lahi mā lā taʿlamūna
Kannada ನಿಮಗೆ ನನ್ನ ಪ್ರಭುವಿನ ಸಂದೇಶಗಳನ್ನು ತಲುಪಿಸುತ್ತಿದ್ದೇನೆ. ನಾನು ನಿಮ್ಮ ಹಿತಚಿಂತಕನಾಗಿರುತ್ತೇನೆ. ನಿಮಗೆ ತಿಳಿಯದಿರುವುದು ಅಲ್ಲಾಹನ ಕಡೆಯಿಂದ ನನಗೆ ತಿಳಿದಿದೆ.
Verse 63
أَوَعَجِبْتُمْ أَن جَآءَكُمْ ذِكْرٌ مِّن رَّبِّكُمْ عَلَىٰ رَجُلٍ مِّنكُمْ لِيُنذِرَكُمْ وَلِتَتَّقُوا۟ وَلَعَلَّكُمْ تُرْحَمُونَ
Transliteration awaʿajib'tum an jāakum dhik'run min rabbikum ʿalā rajulin minkum liyundhirakum walitattaqū walaʿallakum tur'ḥamūna
Kannada ನಿಮ್ಮ ಪೈಕಿ ಓರ್ವ ವ್ಯಕ್ತಿಯ ಮೂಲಕ ನಿಮ್ಮ ಪ್ರಭುವಿನಿಂದ ಉಪದೇಶ ಬರುವುದು ಹಾಗೂ ನಿಮಗೆ ಮುನ್ನೆಚ್ಚರಿಕೆ ಹಾಗೂ ದೇವಭಯಕ್ಕೆ ಕರೆ ನೀಡಿ ನಿಮಗೆ ದೇವನೊಲುಮೆ ದೊರೆಯು ವಂತಾಗುವುದು ನಿಮಗೆ ಆಶ್ಚರ್ಯದ ವಿಷಯವೇ?
Verse 64
فَكَذَّبُوهُ فَأَنجَيْنَـٰهُ وَٱلَّذِينَ مَعَهُۥ فِى ٱلْفُلْكِ وَأَغْرَقْنَا ٱلَّذِينَ كَذَّبُوا۟ بِـَٔايَـٰتِنَآ ۚ إِنَّهُمْ كَانُوا۟ قَوْمًا عَمِينَ
Transliteration fakadhabūhu fa-anjaynāhu wa-alladhīna maʿahu fī l-ful'ki wa-aghraqnā alladhīna kadhabū biāyātinā innahum kānū qawman ʿamīna
Kannada ಆದರೆ ಅವರು ಇವರ ಮಾತನ್ನು ನಿಷೇಧಿಸಿ ಬಿಟ್ಟರು. ಹಾಗಾಗಿ ನಾವು ಇವರನ್ನು ಹಾಗೂ ಇವರ ಜೊತೆ ನಾವೆಯಲ್ಲಿದ್ದವರನ್ನು (ಮುಳುಗು ವಿಕೆಯಿಂದ) ರಕ್ಷಿಸಿದೆವು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದ್ದವರನ್ನು ಮುಳುಗಿಸಿ ಬಿಟ್ಟೆವು. ವಾಸ್ತವದಲ್ಲಿ ಅವರು (ಸತ್ಯದ ವಿರುದ್ಧ) ಕುರುಡರಾದ ಜನಾಂಗವಾಗಿದ್ದರು.
Verse 65
۞ وَإِلَىٰ عَادٍ أَخَاهُمْ هُودًا ۗ قَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥٓ ۚ أَفَلَا تَتَّقُونَ
Transliteration wa-ilā ʿādin akhāhum hūdan qāla yāqawmi uʿ'budū l-laha mā lakum min ilāhin ghayruhu afalā tattaqūna
Kannada `ಆದ್' ಜನಾಂಗದ ಕಡೆಗೆ ಅವರ ಸೋದರ `ಹೂದ'ರನ್ನು ನಾವು ಕಳುಹಿಸಿದೆವು . ಅವರು ಹೇಳಿದರು; `ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನಲ್ಲದೆ ನಿಮಗೆ ಬೇರೊಬ್ಬ ದೇವನಿಲ್ಲ. ನೀವು ಜಾಗೃತರಾಗುವುದಿಲ್ಲವೇ?
Verse 66
قَالَ ٱلْمَلَأُ ٱلَّذِينَ كَفَرُوا۟ مِن قَوْمِهِۦٓ إِنَّا لَنَرَىٰكَ فِى سَفَاهَةٍ وَإِنَّا لَنَظُنُّكَ مِنَ ٱلْكَـٰذِبِينَ
Transliteration qāla l-mala-u alladhīna kafarū min qawmihi innā lanarāka fī safāhatin wa-innā lanaẓunnuka mina l-kādhibīna
Kannada ಅವರ ಜನಾಂಗದ ಸತ್ಯನಿಷೇಧಿ ಮುಂದಾಳುಗಳು ಹೇಳಿದರು; ನಾವು ನಿನ್ನನ್ನು ಮೂರ್ಖ ತನದಲ್ಲಿ ಕಾಣುತ್ತೇವೆ. ನೀನು ಸುಳ್ಳುಗಾರನೆಂದು ನಾವು ಭಾವಿಸುತ್ತೇವೆ.
Verse 67
قَالَ يَـٰقَوْمِ لَيْسَ بِى سَفَاهَةٌ وَلَـٰكِنِّى رَسُولٌ مِّن رَّبِّ ٱلْعَـٰلَمِينَ
Transliteration qāla yāqawmi laysa bī safāhatun walākinnī rasūlun min rabbi l-ʿālamīna
Kannada ಅವರು ಹೇಳಿದರು; `ಓ ನನ್ನ ಜನಾಂಗ ಬಾಂಧವರೇ, ನನ್ನಲ್ಲಿ ಮೂರ್ಖತನವಿಲ್ಲ. ನಿಜ ವಾಗಿ ನಾನು ಸರ್ವಲೋಕಪಾಲಕನ ದೂತನಾಗಿದ್ದೇನೆ.
Verse 68
أُبَلِّغُكُمْ رِسَـٰلَـٰتِ رَبِّى وَأَنَا۠ لَكُمْ نَاصِحٌ أَمِينٌ
Transliteration uballighukum risālāti rabbī wa-anā lakum nāṣiḥun amīnun
Kannada ನಿಮಗೆ ನನ್ನ ರಕ್ಷಕ ಪ್ರಭುವಿನ ಸಂದೇಶಗಳನ್ನು ತಲಪಿಸುತ್ತೇನೆ ಮತ್ತು ನಿಮಗೆ ನಾನು ಪ್ರಾಮಾ ಣಿಕ ಹಿತೈಷಿಯಾಗಿರುತ್ತೇನೆ.
Verse 69
أَوَعَجِبْتُمْ أَن جَآءَكُمْ ذِكْرٌ مِّن رَّبِّكُمْ عَلَىٰ رَجُلٍ مِّنكُمْ لِيُنذِرَكُمْ ۚ وَٱذْكُرُوٓا۟ إِذْ جَعَلَكُمْ خُلَفَآءَ مِنۢ بَعْدِ قَوْمِ نُوحٍ وَزَادَكُمْ فِى ٱلْخَلْقِ بَصْۜطَةً ۖ فَٱذْكُرُوٓا۟ ءَالَآءَ ٱللَّهِ لَعَلَّكُمْ تُفْلِحُونَ
Transliteration awaʿajib'tum an jāakum dhik'run min rabbikum ʿalā rajulin minkum liyundhirakum wa-udh'kurū idh jaʿalakum khulafāa min baʿdi qawmi nūḥin wazādakum fī l-khalqi baṣ'ṭatan fa-udh'kurū ālāa l-lahi laʿallakum tuf'liḥūna
Kannada ನಿಮ್ಮನ್ನು ಎಚ್ಚರಿಸಲು ನಿಮ್ಮ ಪ್ರಭುವಿನ ಕಡೆಯಿಂದಿರುವ ಬೋಧನೆಯು ನಿಮ್ಮದೇ ನಡುವಿನ ಒಬ್ಬ ವ್ಯಕ್ತಿಯ ಬಳಿಗೆ ಬಂದಿರುವ ಬಗ್ಗೆ ನೀವು ಅಚ್ಚರಿಪಡುತ್ತೀರಾ? ನಿಮ್ಮ ಪ್ರಭು ನೂಹರ ಜನಾಂಗದ ತರುವಾಯ ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನೂ ನಿಮಗೆ ಸೃಷ್ಟಿಯಲ್ಲಿ ವಿಶಾಲತೆಯನ್ನು ಹೆಚ್ಚಿಸಿದ್ದನ್ನೂ ನೆನಪಿಸಿರಿ. ಆದ್ದರಿಂದ ಅಲ್ಲಾಹನ ವರದಾನಗಳನ್ನು ನೆನೆಯಿರಿ. ನೀವು ಯಶಸ್ವಿಯಾಗಬಹುದು.
Verse 70
قَالُوٓا۟ أَجِئْتَنَا لِنَعْبُدَ ٱللَّهَ وَحْدَهُۥ وَنَذَرَ مَا كَانَ يَعْبُدُ ءَابَآؤُنَا ۖ فَأْتِنَا بِمَا تَعِدُنَآ إِن كُنتَ مِنَ ٱلصَّـٰدِقِينَ
Transliteration qālū aji'tanā linaʿbuda l-laha waḥdahu wanadhara mā kāna yaʿbudu ābāunā fatinā bimā taʿidunā in kunta mina l-ṣādiqīna
Kannada ಅವರು ಕೇಳಿದರು; `ನಾವು ಏಕಮಾತ್ರ ಅಲ್ಲಾಹನನ್ನು ಆರಾಧಿಸಬೇಕು ಮತ್ತು ನಮ್ಮ ಪೂರ್ವಿ ಕರು ಆರಾಧಿಸುತ್ತಿದ್ದುದನ್ನು ಬಿಟ್ಟುಬಿಡಬೇಕೆಂದು ನೀನು ನಮಗೆ ಹೇಳಲು ಬಂದಿರುವೆಯಾ? ನಿಜಕ್ಕೂ ನೀನು ಸತ್ಯವಂತನಾಗಿದ್ದರೆ ನೀನು ನಮಗೆ ಭೀತಿ ಹುಟ್ಟಿಸುತ್ತಿರುವ ಆ ಯಾತನೆಯನ್ನು ಇಲ್ಲಿಗೆ ತರಿಸು, ನೋಡೋಣ’.
Verse 71
قَالَ قَدْ وَقَعَ عَلَيْكُم مِّن رَّبِّكُمْ رِجْسٌ وَغَضَبٌ ۖ أَتُجَـٰدِلُونَنِى فِىٓ أَسْمَآءٍ سَمَّيْتُمُوهَآ أَنتُمْ وَءَابَآؤُكُم مَّا نَزَّلَ ٱللَّهُ بِهَا مِن سُلْطَـٰنٍ ۚ فَٱنتَظِرُوٓا۟ إِنِّى مَعَكُم مِّنَ ٱلْمُنتَظِرِينَ
Transliteration qāla qad waqaʿa ʿalaykum min rabbikum rij'sun waghaḍabun atujādilūnanī fī asmāin sammaytumūhā antum waābāukum mā nazzala l-lahu bihā min sul'ṭānin fa-intaẓirū innī maʿakum mina l-muntaẓirīna
Kannada ಅವರು ಹೇಳಿದರು; ನಿಮ್ಮ ಮೇಲೆ ನಿಮ್ಮ ಪ್ರಭುವಿನ ಕಡೆಯ ಶಿಕ್ಷೆಯೂ, ಕ್ರೋಧವೂ ನಿಜವಾಗಿಯೂ ಸ್ಥಿರಪಟ್ಟಿದೆ. ನೀವು ಮತ್ತು ನಿಮ್ಮ ಪೂರ್ವಿಕರು ಇಟ್ಟುಕೊಂಡಂತಹ, ಅಲ್ಲಾಹನು ಯಾವುದೇ ಆಧಾರ ಪ್ರಮಾಣವನ್ನು ಅವತರಣಗೊಳಿಸದಂತಹ ವಿಗ್ರಹಗಳ ಹೆಸರುಗಳ ತಳಹದಿಯಲ್ಲಿ ನೀವು ನನ್ನೊಂದಿಗೆ ಜಗಳ ವಾಡುತ್ತೀರಾ? ನೀವೂ ಕಾಯುತ್ತಿರಿ. ನಿಮ್ಮೊಂದಿಗೆ ಖಂಡಿತಾ ನಾನೂ ಕಾಯುತ್ತಿರುತ್ತೇನೆ.
Verse 72
فَأَنجَيْنَـٰهُ وَٱلَّذِينَ مَعَهُۥ بِرَحْمَةٍ مِّنَّا وَقَطَعْنَا دَابِرَ ٱلَّذِينَ كَذَّبُوا۟ بِـَٔايَـٰتِنَا ۖ وَمَا كَانُوا۟ مُؤْمِنِينَ
Transliteration fa-anjaynāhu wa-alladhīna maʿahu biraḥmatin minnā waqaṭaʿnā dābira alladhīna kadhabū biāyātinā wamā kānū mu'minīna
Kannada ಕೊನೆಗೆ ಹೂದ್ ಮತ್ತು ಅವರ ಸಂಗಡಿಗರನ್ನು ನಮ್ಮ ಕಾರುಣ್ಯದಿಂದ ನಾವು ರಕ್ಷಿಸಿದೆವು ಮತ್ತು ನಮ್ಮ ನಿದರ್ಶನಗಳನ್ನು ಸುಳ್ಳಾಗಿಸಿದ ಮತ್ತು ವಿಶ್ವಾಸವಿರಿಸದವರ ಬೇರನ್ನೇ ಕಡಿಸಿಬಿಟ್ಟೆವು.
Verse 73
وَإِلَىٰ ثَمُودَ أَخَاهُمْ صَـٰلِحًا ۗ قَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥ ۖ قَدْ جَآءَتْكُم بَيِّنَةٌ مِّن رَّبِّكُمْ ۖ هَـٰذِهِۦ نَاقَةُ ٱللَّهِ لَكُمْ ءَايَةً ۖ فَذَرُوهَا تَأْكُلْ فِىٓ أَرْضِ ٱللَّهِ ۖ وَلَا تَمَسُّوهَا بِسُوٓءٍ فَيَأْخُذَكُمْ عَذَابٌ أَلِيمٌ
Transliteration wa-ilā thamūda akhāhum ṣāliḥan qāla yāqawmi uʿ'budū l-laha mā lakum min ilāhin ghayruhu qad jāatkum bayyinatun min rabbikum hādhihi nāqatu l-lahi lakum āyatan fadharūhā takul fī arḍi l-lahi walā tamassūhā bisūin fayakhudhakum ʿadhābun alīmun
Kannada `ಸಮೂದ್' ಜನಾಂಗದ ಕಡೆಗೆ ನಾವು ಅವರ ಸಹೋದರ ಸಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು; ‘ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಯಾವ ಆರಾಧ್ಯನೂ ಇಲ್ಲ. ನಿಮ್ಮ ಬಳಿಗೆ ನಿಮ್ಮ ಪ್ರಭುವಿನ ಕಡೆಯಿಂದ ಸ್ಪಷ್ಟ ಪ್ರಮಾಣ ಬಂದಿರುತ್ತದೆ. ಅಲ್ಲಾಹನ ಈ ಒಂಟೆಯು ನಿಮಗೊಂದು ದೃಷ್ಟಾಂತ. ಅಲ್ಲಾಹನ ಭೂಮಿಯಲ್ಲಿ ಇದನ್ನು ಮೇಯಲು ಬಿಡಿರಿ. ಅದಕ್ಕೆ ಯಾವುದೇ ವಿಧ ತೊಂದರೆ ನೀಡಬೇಡಿರಿ. ತೊಂದರೆ ನೀಡಿದರೆ ಒಂದು ವೇದನಾಯುಕ್ತ ಶಿಕ್ಷೆ ನಿಮ್ಮನ್ನು ಆಕ್ರಮಿಸುವುದು.
Verse 74
وَٱذْكُرُوٓا۟ إِذْ جَعَلَكُمْ خُلَفَآءَ مِنۢ بَعْدِ عَادٍ وَبَوَّأَكُمْ فِى ٱلْأَرْضِ تَتَّخِذُونَ مِن سُهُولِهَا قُصُورًا وَتَنْحِتُونَ ٱلْجِبَالَ بُيُوتًا ۖ فَٱذْكُرُوٓا۟ ءَالَآءَ ٱللَّهِ وَلَا تَعْثَوْا۟ فِى ٱلْأَرْضِ مُفْسِدِينَ
Transliteration wa-udh'kurū idh jaʿalakum khulafāa min baʿdi ʿādin wabawwa-akum fī l-arḍi tattakhidhūna min suhūlihā quṣūran watanḥitūna l-jibāla buyūtan fa-udh'kurū ālāa l-lahi walā taʿthaw fī l-arḍi muf'sidīna
Kannada ಅಲ್ಲಾಹನು `ಆದ್' ಜನಾಂಗದ ತರುವಾಯ ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದುದನ್ನು ಸ್ಮರಿಸಿರಿ. ನಿಮ್ಮನ್ನು ಅವನು ನಾಡಿನಲ್ಲಿ ವಾಸಗೊಳಿಸಿದನು. ನೀವು ಅದರ ಸಮತಟ್ಟಾದ ಪ್ರದೇಶಗಳಲ್ಲಿ ಭವ್ಯ ಭವನಗಳನ್ನು ಕಟ್ಟುತ್ತಿರುವಿರಿ. ಮತ್ತು ಅದರ ಪರ್ವತಗಳನ್ನು ನಿವಾಸಗ ಳಾಗಿ ಕೊರೆಯುತ್ತಿರುವಿರಿ. ಹಾಗಾಗಿ ಆ ಅಲ್ಲಾ ಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಕಿಡಿ ಗೇಡಿಗಳಾಗಿ ಭೂಮಿಯಲ್ಲಿ ಕೇಡು ಹರಡದಿರಿ.
Verse 75
قَالَ ٱلْمَلَأُ ٱلَّذِينَ ٱسْتَكْبَرُوا۟ مِن قَوْمِهِۦ لِلَّذِينَ ٱسْتُضْعِفُوا۟ لِمَنْ ءَامَنَ مِنْهُمْ أَتَعْلَمُونَ أَنَّ صَـٰلِحًا مُّرْسَلٌ مِّن رَّبِّهِۦ ۚ قَالُوٓا۟ إِنَّا بِمَآ أُرْسِلَ بِهِۦ مُؤْمِنُونَ
Transliteration qāla l-mala-u alladhīna is'takbarū min qawmihi lilladhīna us'tuḍ'ʿifū liman āmana min'hum ataʿlamūna anna ṣāliḥan mur'salun min rabbihi qālū innā bimā ur'sila bihi mu'minūna
Kannada ಅವರ ಜನಾಂಗದ ದುರಹಂಕಾರಿ ನಾಯಕರು, ವಿಶ್ವಾಸವಿಟ್ಟಿದ್ದ ದುರ್ಬಲ ವರ್ಗದವರೊಡನೆ ಹೇಳಿದರು; - ಸಾಲಿಹರು ತಮ್ಮ ಪ್ರಭುವಿನ ಕಡೆ ಯಿಂದ ನಿಯುಕ್ತರಾದ ದೂತರೆಂದು ನಿಜಕ್ಕೂ ನೀವು ಅರಿತಿರುವಿರಾ? ಅವರು ಹೇಳಿದರು; `ನಿಶ್ಚ ಯವಾಗಿಯೂ ಅವರು ಯಾವ ಸಂದೇಶದೊಂದಿಗೆ ಕಳುಹಿಸಲ್ಪಟ್ಟಿರುತ್ತಾರೋ ಅದನ್ನು ನಾವು ನಂಬುತ್ತೇವೆ’.
Verse 76
قَالَ ٱلَّذِينَ ٱسْتَكْبَرُوٓا۟ إِنَّا بِٱلَّذِىٓ ءَامَنتُم بِهِۦ كَـٰفِرُونَ
Transliteration qāla alladhīna is'takbarū innā bi-alladhī āmantum bihi kāfirūna
Kannada ಆ ದುರಹಂಕಾರಿಗಳು ಹೇಳಿದರು; ‘ನೀವು ವಿಶ್ವಾಸವಿರಿಸಿರುವುದನ್ನು ನಾವು ನಿಷೇಧಿಸುತ್ತೇವೆ’.
Verse 77
فَعَقَرُوا۟ ٱلنَّاقَةَ وَعَتَوْا۟ عَنْ أَمْرِ رَبِّهِمْ وَقَالُوا۟ يَـٰصَـٰلِحُ ٱئْتِنَا بِمَا تَعِدُنَآ إِن كُنتَ مِنَ ٱلْمُرْسَلِينَ
Transliteration faʿaqarū l-nāqata waʿataw ʿan amri rabbihim waqālū yāṣāliḥu i'tinā bimā taʿidunā in kunta mina l-mur'salīna
Kannada ತರುವಾಯ ಅವರು ಆ ಒಂಟೆಯ ಕತ್ತು ಕೊಯ್ದರು. ತಮ್ಮ ಪ್ರಭುವಿನ ಆಜ್ಞೆಯನ್ನು ಧಿಕ್ಕರಿಸಿದರು. ಅವರು ಹೀಗೆಂದರು; ಓ ಸಾಲಿಹ್, ನೀನು ನಮಗೆ ಬೆದರಿಕೆ ಹಾಕುತ್ತಿರುವ ಆ ಶಿಕ್ಷೆಯನ್ನು ನಮಗೆ ತಂದೊಡ್ಡು! ನೀನು ಪ್ರವಾದಿಗಳಲ್ಲೊಬ್ಬನಾಗಿದ್ದರೆ !
Verse 78
فَأَخَذَتْهُمُ ٱلرَّجْفَةُ فَأَصْبَحُوا۟ فِى دَارِهِمْ جَـٰثِمِينَ
Transliteration fa-akhadhathumu l-rajfatu fa-aṣbaḥū fī dārihim jāthimīna
Kannada ಆಗ ಅವರಿಗೆ ಭೂಕಂಪನ ಬಾಧಿಸಿತು. ಅವರು ತಮ್ಮ ಊರಲ್ಲಿ ಮಂಡಿಯೂರಿದ ಸ್ಥಿತಿಯಲ್ಲಿ ಸತ್ತು ಬಿದ್ದರು !
Verse 79
فَتَوَلَّىٰ عَنْهُمْ وَقَالَ يَـٰقَوْمِ لَقَدْ أَبْلَغْتُكُمْ رِسَالَةَ رَبِّى وَنَصَحْتُ لَكُمْ وَلَـٰكِن لَّا تُحِبُّونَ ٱلنَّـٰصِحِينَ
Transliteration fatawallā ʿanhum waqāla yāqawmi laqad ablaghtukum risālata rabbī wanaṣaḥtu lakum walākin lā tuḥibbūna l-nāṣiḥīna
Kannada ಆಗ ಸ್ವಾಲಿಹರು ಅಲ್ಲಿಂದ ನಿರ್ಗಮಿಸುತ್ತಾ `ಓ ನನ್ನ ಜನಾಂಗವೇ, ನಾನು ನನ್ನ ಪ್ರಭುವಿನ ಸಂದೇಶವನ್ನು ನಿಮಗೆ ತಲುಪಿಸಿದೆ. ನಿಮ ಗಾಗಿ ನಾನು ಹಿತೋಪದೇಶ ನೀಡಿದೆ. ಆದರೆ ಹಿತೋಪದೇಶಕರನ್ನು ನೀವು ಮೆಚ್ಚುವುದಿಲ್ಲ’ ಎಂದರು.
Verse 80
وَلُوطًا إِذْ قَالَ لِقَوْمِهِۦٓ أَتَأْتُونَ ٱلْفَـٰحِشَةَ مَا سَبَقَكُم بِهَا مِنْ أَحَدٍ مِّنَ ٱلْعَـٰلَمِينَ
Transliteration walūṭan idh qāla liqawmihi atatūna l-fāḥishata mā sabaqakum bihā min aḥadin mina l-ʿālamīna
Kannada ಲೂಥರು ತಮ್ಮ ಜನಾಂಗದವರನ್ನುದ್ದೇಶಿಸಿ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ನಿಮಗಿಂತ ಮುಂಚೆ ಜಗತ್ತಿನಲ್ಲಿ ಇನ್ನಾರೂ ಮಾಡದಿರುವಂಥ ನೀಚ ಕಾರ್ಯಕ್ಕೆ ಹೋಗುತ್ತಿರುವಿರಾ?
Verse 81
إِنَّكُمْ لَتَأْتُونَ ٱلرِّجَالَ شَهْوَةً مِّن دُونِ ٱلنِّسَآءِ ۚ بَلْ أَنتُمْ قَوْمٌ مُّسْرِفُونَ
Transliteration innakum latatūna l-rijāla shahwatan min dūni l-nisāi bal antum qawmun mus'rifūna
Kannada ನೀವು ಸ್ತ್ರೀಯರನ್ನು ಬಿಟ್ಟು ಪುರುಷರ ಬಳಿಗೆ ಕಾಮಾಭಿಲಾಷೆಯಿಂದ ಹೋಗುತ್ತಿರುವಿರಿ. ವಾಸ್ತವದಲ್ಲಿ ನೀವು ಹದ್ದು ಮೀರಿದ ಜನಾಂಗವಾಗಿರುವಿರಿ.
Verse 82
وَمَا كَانَ جَوَابَ قَوْمِهِۦٓ إِلَّآ أَن قَالُوٓا۟ أَخْرِجُوهُم مِّن قَرْيَتِكُمْ ۖ إِنَّهُمْ أُنَاسٌ يَتَطَهَّرُونَ
Transliteration wamā kāna jawāba qawmihi illā an qālū akhrijūhum min qaryatikum innahum unāsun yataṭahharūna
Kannada `ಇವರನ್ನು ನಿಮ್ಮ ನಾಡಿನಿಂದ ಹೊರ ದಬ್ಬಿರಿ. ಭಾರೀ ಪರಿಶುದ್ಧರಿವರು! ಎನ್ನುವುದರವಿನಾ ಆ ಜನಾಂಗಕ್ಕೆ ಬೇರೆ ಉತ್ತರವಿರಲಿಲ್ಲ.
Verse 83
فَأَنجَيْنَـٰهُ وَأَهْلَهُۥٓ إِلَّا ٱمْرَأَتَهُۥ كَانَتْ مِنَ ٱلْغَـٰبِرِينَ
Transliteration fa-anjaynāhu wa-ahlahu illā im'ra-atahu kānat mina l-ghābirīna
Kannada ಕೊನೆಗೆ ನಾವು ಲೂಥರನ್ನೂ ಅವರ ಮನೆಯವರನ್ನೂ - ರಕ್ಷಿಸಿ ಒಯ್ದೆವು. ಅವರ ಪತ್ನಿಯ ಹೊರತಾಗಿ. ಅವಳು ನಾಶ ಹೊಂದುವವರ ಕೂಟದವಳಾಗಿದ್ದಳು.
Verse 84
وَأَمْطَرْنَا عَلَيْهِم مَّطَرًا ۖ فَٱنظُرْ كَيْفَ كَانَ عَـٰقِبَةُ ٱلْمُجْرِمِينَ
Transliteration wa-amṭarnā ʿalayhim maṭaran fa-unẓur kayfa kāna ʿāqibatu l-muj'rimīna
Kannada ಆಮೇಲೆ ಅವರ ಮೇಲೆ ನಾವು (ಸುಡುಗಲ್ಲಿನ) ಮಳೆಗರೆದೆವು . ಆಗ ಆ ಅಪರಾಧಿಗಳ ಪಾಡೇ ನಾಯಿತೆಂದು ನೋಡಿರಿ.
Verse 85
وَإِلَىٰ مَدْيَنَ أَخَاهُمْ شُعَيْبًا ۗ قَالَ يَـٰقَوْمِ ٱعْبُدُوا۟ ٱللَّهَ مَا لَكُم مِّنْ إِلَـٰهٍ غَيْرُهُۥ ۖ قَدْ جَآءَتْكُم بَيِّنَةٌ مِّن رَّبِّكُمْ ۖ فَأَوْفُوا۟ ٱلْكَيْلَ وَٱلْمِيزَانَ وَلَا تَبْخَسُوا۟ ٱلنَّاسَ أَشْيَآءَهُمْ وَلَا تُفْسِدُوا۟ فِى ٱلْأَرْضِ بَعْدَ إِصْلَـٰحِهَا ۚ ذَٰلِكُمْ خَيْرٌ لَّكُمْ إِن كُنتُم مُّؤْمِنِينَ
Transliteration wa-ilā madyana akhāhum shuʿayban qāla yāqawmi uʿ'budū l-laha mā lakum min ilāhin ghayruhu qad jāatkum bayyinatun min rabbikum fa-awfū l-kayla wal-mīzāna walā tabkhasū l-nāsa ashyāahum walā tuf'sidū fī l-arḍi baʿda iṣ'lāḥihā dhālikum khayrun lakum in kuntum mu'minīna
Kannada ಮದ್‍ಯನರ ಕಡೆಗೆ ಅವರ ಸಹೋದರ `ಶುಐಬ್'ರನ್ನು ಕಳುಹಿಸಿದೆವು . ಅವರು ಹೇಳಿದರು `ಓ ನನ್ನ ಜನಾಂಗ ಬಾಂಧವರೇ, ನೀವು ಅಲ್ಲಾಹ ನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೊಬ್ಬ ಆರಾಧ್ಯನಿಲ್ಲ. ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಸುವ್ಯಕ್ತ ನಿದರ್ಶನ ಬಂದಿರುತ್ತದೆ. ಆದುದರಿಂದ ಅಳತೆ ಮತ್ತು ತೂಕ ವನ್ನು ಸಂಪೂರ್ಣಗೊಳಿಸಿರಿ. ಜನರಿಗೆ ಅವರ ವಸ್ತು ಗಳನ್ನು ಕಡಿತಗೊಳಿಸಿಕೊಡಬೇಡಿರಿ ಮತ್ತು ಭೂಮಿಯಲ್ಲಿ ಸುಧಾರಣೆಯಾದ ಬಳಿಕ ಕ್ಷೋಭೆಯನ್ನುಂಟು ಮಾಡಬೇಡಿರಿ. ಇದುವೇ ನಿಮಗೆ ಶ್ರೇಯಸ್ಸು. ನೀವು ನಿಜಕ್ಕೂ ವಿಶ್ವಾಸಿಗಳಾಗಿದ್ದರೆ.
Verse 86
وَلَا تَقْعُدُوا۟ بِكُلِّ صِرَٰطٍ تُوعِدُونَ وَتَصُدُّونَ عَن سَبِيلِ ٱللَّهِ مَنْ ءَامَنَ بِهِۦ وَتَبْغُونَهَا عِوَجًا ۚ وَٱذْكُرُوٓا۟ إِذْ كُنتُمْ قَلِيلًا فَكَثَّرَكُمْ ۖ وَٱنظُرُوا۟ كَيْفَ كَانَ عَـٰقِبَةُ ٱلْمُفْسِدِينَ
Transliteration walā taqʿudū bikulli ṣirāṭin tūʿidūna wataṣuddūna ʿan sabīli l-lahi man āmana bihi watabghūnahā ʿiwajan wa-udh'kurū idh kuntum qalīlan fakatharakum wa-unẓurū kayfa kāna ʿāqibatu l-muf'sidīna
Kannada ಜನರನ್ನು ಬೆದರಿಸುತ್ತ ಎಲ್ಲ ದಾರಿಗಳಲ್ಲಿ (ದೋಚಲು) ಕೂರಬೇಡಿರಿ. ಸತ್ಯವಿಶ್ವಾಸಿಗಳನ್ನು ಅಲ್ಲಾಹನ ಮಾರ್ಗದಿಂದ ತಡೆಯಬೇಡಿರಿ. ಸತ್ಯದ ದಾರಿಯಲ್ಲಿ ವಕ್ರತೆಯನ್ನು ಹುಡುಕ ಬೇಡಿರಿ. ಕಡಿಮೆ ಸಂಖ್ಯೆಯಲ್ಲಿದ್ದ ನಿಮ್ಮನ್ನು ಅಲ್ಲಾಹು ಬಹು ಸಂಖ್ಯೆಯವರನ್ನಾಗಿ ಮಾಡಿ ದ್ದನ್ನು ಸ್ಮರಿಸಿರಿ. ಕೆಟ್ಟವರ ಪರ್ಯವಸಾನ ಹೇಗಾಗಿ ದೆಯೆಂಬುದನ್ನು ನೀವು ಆಲೋಚಿಸಿ ನೋಡಿರಿ.
Verse 87
وَإِن كَانَ طَآئِفَةٌ مِّنكُمْ ءَامَنُوا۟ بِٱلَّذِىٓ أُرْسِلْتُ بِهِۦ وَطَآئِفَةٌ لَّمْ يُؤْمِنُوا۟ فَٱصْبِرُوا۟ حَتَّىٰ يَحْكُمَ ٱللَّهُ بَيْنَنَا ۚ وَهُوَ خَيْرُ ٱلْحَـٰكِمِينَ
Transliteration wa-in kāna ṭāifatun minkum āmanū bi-alladhī ur'sil'tu bihi waṭāifatun lam yu'minū fa-iṣ'birū ḥattā yaḥkuma l-lahu baynanā wahuwa khayru l-ḥākimīna
Kannada ಅಲ್ಲಾಹನು ಅವತೀರ್ಣಗೊಳಿಸಿದ ಸಂದೇಶಗ ಳಲ್ಲಿ ನಿಮ್ಮ ಪೈಕಿ ಕೆಲವರು ವಿಶ್ವಾಸವಿಡುತ್ತಲೂ, ಇನ್ನು ಕೆಲವರು ವಿಶ್ವಾಸವಿಡದೆಯೂ ಇರುವು ದಾದರೆ ಅಲ್ಲಾಹನು ನಮ್ಮ ನಡುವೆ ಒಂದು ತೀರ್ಮಾನ ಮಾಡುವವರೆಗೂ ಸಹನೆಯೊಂದಿಗೆ ಕಾಯುತ್ತಿರಿ. ಅವನು ಪರಮ ಶ್ರೇಷ್ಠ ತೀರ್ಪು ಗಾರನು.
Verse 88
۞ قَالَ ٱلْمَلَأُ ٱلَّذِينَ ٱسْتَكْبَرُوا۟ مِن قَوْمِهِۦ لَنُخْرِجَنَّكَ يَـٰشُعَيْبُ وَٱلَّذِينَ ءَامَنُوا۟ مَعَكَ مِن قَرْيَتِنَآ أَوْ لَتَعُودُنَّ فِى مِلَّتِنَا ۚ قَالَ أَوَلَوْ كُنَّا كَـٰرِهِينَ
Transliteration qāla l-mala-u alladhīna is'takbarū min qawmihi lanukh'rijannaka yāshuʿaybu wa-alladhīna āmanū maʿaka min qaryatinā aw lataʿūdunna fī millatinā qāla awalaw kunnā kārihīna
Kannada ಅವರ ಜನಾಂಗದ ಅಹಂಭಾವಿಗಳಾದ ನೇತಾರರು ಅವರೊಡನೆ ಹೇಳಿದರು. `ಓ ಶುಐಬ್, ನಾವು ನಿನ್ನನ್ನೂ ನಿನ್ನೊಂದಿಗೆ ವಿಶ್ವಾಸ ವಿಟ್ಟವ ರನ್ನೂ ನಮ್ಮ ನಾಡಿನಿಂದ ಖಂಡಿತ ಹೊರಹಾ ಕುವೆವು. ಅದಲ್ಲದಿದ್ದರೆ ನೀವು ನಮ್ಮ ಧರ್ಮಕ್ಕೆ ಮರಳಿ ಬರಲೇ ಬೇಕು’. ಶುಐಬರು ಕೇಳಿದರು; ನಾವು ನಿಮ್ಮ ಧರ್ಮವನ್ನು ಅನಿಷ್ಟಪಡುತ್ತಿರುವಾಗ ಅದಕ್ಕೆ ಮರಳುವುದೇ?
Verse 89
قَدِ ٱفْتَرَيْنَا عَلَى ٱللَّهِ كَذِبًا إِنْ عُدْنَا فِى مِلَّتِكُم بَعْدَ إِذْ نَجَّىٰنَا ٱللَّهُ مِنْهَا ۚ وَمَا يَكُونُ لَنَآ أَن نَّعُودَ فِيهَآ إِلَّآ أَن يَشَآءَ ٱللَّهُ رَبُّنَا ۚ وَسِعَ رَبُّنَا كُلَّ شَىْءٍ عِلْمًا ۚ عَلَى ٱللَّهِ تَوَكَّلْنَا ۚ رَبَّنَا ٱفْتَحْ بَيْنَنَا وَبَيْنَ قَوْمِنَا بِٱلْحَقِّ وَأَنتَ خَيْرُ ٱلْفَـٰتِحِينَ
Transliteration qadi if'taraynā ʿalā l-lahi kadhiban in ʿud'nā fī millatikum baʿda idh najjānā l-lahu min'hā wamā yakūnu lanā an naʿūda fīhā illā an yashāa l-lahu rabbunā wasiʿa rabbunā kulla shayin ʿil'man ʿalā l-lahi tawakkalnā rabbanā if'taḥ baynanā wabayna qawminā bil-ḥaqi wa-anta khayru l-fātiḥīna
Kannada ನಿಮ್ಮ ಧರ್ಮದಿಂದ ಅಲ್ಲಾಹನು ನಮ್ಮನ್ನು ಮುಕ್ತ ಗೊಳಿಸಿರುವಾಗ ನಾವು ಅದಕ್ಕೆ ಮರಳಿ ಬಂದರೆ ನಾವು ಅಲ್ಲಾಹನ ಮೇಲೆ ಸುಳ್ಳನ್ನು ಸೃಷ್ಟಿ ಸುವವರಾಗುವೆವು. ನಮ್ಮ ರಕ್ಷಕನಾದ ಅಲ್ಲಾ ಹನು ಇಚ್ಛಿಸುವ ಹೊರತಾಗಿ ನಮಗಂತೂ ಅದರ ಕಡೆಗೆ ಮರಳಲು ಎಂದಿಗೂ ಸಾಧ್ಯವಾಗದು. ನಮ್ಮ ಪ್ರಭುವಿನ ಜ್ಞಾನವು ಸಕಲ ವಸ್ತುಗಳನ್ನಾವರಿಸಿ ಕೊಂಡಿದೆ. ನಾವು ಅವನ ಮೇಲೆಯೇ ಭರವಸೆಯನ್ನಿರಿಸಿದ್ದೇವೆ. ಓ ನಮ್ಮ ಪ್ರಭೂ, ನಮ್ಮ ಮತ್ತು ನಮ್ಮ ಜನಾಂಗದ ನಡುವೆ ನೀನು ಸತ್ಯ ಪ್ರಕಾರ ತೀರ್ಮಾನ ಮಾಡಿಬಿಡು. ನೀನು ತೀರ್ಪುಗಾರರಲ್ಲಿ ಅತ್ಯುತ್ತಮನಾಗಿರುವಿ’.
Verse 90
وَقَالَ ٱلْمَلَأُ ٱلَّذِينَ كَفَرُوا۟ مِن قَوْمِهِۦ لَئِنِ ٱتَّبَعْتُمْ شُعَيْبًا إِنَّكُمْ إِذًا لَّخَـٰسِرُونَ
Transliteration waqāla l-mala-u alladhīna kafarū min qawmihi la-ini ittabaʿtum shuʿayban innakum idhan lakhāsirūna
Kannada ಅವರ ಜನಾಂಗದ ಸತ್ಯನಿಷೇಧಿಗಳಾದ ಮುಂದಾಳುಗಳು ತಮ್ಮೊಳಗೆ ಹೀಗೆ ಹೇಳಿದರು. `ನೀವು ಶುಐಬರ ಅನುಸರಣೆ ಮಾಡಿದರೆ ನಿಸ್ಸಂದೇಹವಾಗಿ ನಷ್ಟವಂತರಾಗುವಿರಿ’.
Verse 91
فَأَخَذَتْهُمُ ٱلرَّجْفَةُ فَأَصْبَحُوا۟ فِى دَارِهِمْ جَـٰثِمِينَ
Transliteration fa-akhadhathumu l-rajfatu fa-aṣbaḥū fī dārihim jāthimīna
Kannada ಆಗ ಒಂದು ಭೀಕರ ವಿಪತ್ತು ಬಂದು ಅವರನ್ನು ಆಕ್ರಮಿಸಿತು. ಅದರ ಫಲವಾಗಿ ಅವರೆಲ್ಲರೂ ತಮ್ಮ ಮನೆಗಳಲ್ಲಿ ಮಂಡಿಯೂರಿ ಮೃತ್ಯು ವಶವಾದರು.
Verse 92
ٱلَّذِينَ كَذَّبُوا۟ شُعَيْبًا كَأَن لَّمْ يَغْنَوْا۟ فِيهَا ۚ ٱلَّذِينَ كَذَّبُوا۟ شُعَيْبًا كَانُوا۟ هُمُ ٱلْخَـٰسِرِينَ
Transliteration alladhīna kadhabū shuʿayban ka-an lam yaghnaw fīhā alladhīna kadhabū shuʿayban kānū humu l-khāsirīna
Kannada ಶುಐಬರನ್ನು ನಿಷೇಧಿಸಿದವರು ತಮ್ಮ ಮನೆ ಗಳಲ್ಲಿ ವಾಸಿಸಲೇ ಇಲ್ಲವೋ ಎಂಬಂತೆ ಅಳಿದು ಹೋದರು. ಅಂತೂ ಶುಐಬರನ್ನು ನಿಷೇಧಿಸಿದವರೇ ನಷ್ಟವಂತರಾದರು.
Verse 93
فَتَوَلَّىٰ عَنْهُمْ وَقَالَ يَـٰقَوْمِ لَقَدْ أَبْلَغْتُكُمْ رِسَـٰلَـٰتِ رَبِّى وَنَصَحْتُ لَكُمْ ۖ فَكَيْفَ ءَاسَىٰ عَلَىٰ قَوْمٍ كَـٰفِرِينَ
Transliteration fatawallā ʿanhum waqāla yāqawmi laqad ablaghtukum risālāti rabbī wanaṣaḥtu lakum fakayfa āsā ʿalā qawmin kāfirīna
Kannada ಶುಐಬರು, ಅವರಿಂದ ದೂರ ಸರಿದರು. `ಓ ನನ್ನ ಜನಾಂಗ ಬಾಂಧವರೇ, ನಾನು ನನ್ನ ಪ್ರಭುವಿನ ಸಂದೇಶಗಳನ್ನು ನಿಮಗೆ ತಲಪಿಸಿದೆ. ನಿಮಗೆ ಹಿತವನ್ನೇ ಬಯಸಿದೆ. ಇದೀಗ ನಾನು ಸತ್ಯವನ್ನು ನಿರಾಕರಿಸಿದ ಜನಾಂಗಕ್ಕಾಗಿ ಖೇದ ಪಡುವುದೇನಿದೆ?’
Verse 94
وَمَآ أَرْسَلْنَا فِى قَرْيَةٍ مِّن نَّبِىٍّ إِلَّآ أَخَذْنَآ أَهْلَهَا بِٱلْبَأْسَآءِ وَٱلضَّرَّآءِ لَعَلَّهُمْ يَضَّرَّعُونَ
Transliteration wamā arsalnā fī qaryatin min nabiyyin illā akhadhnā ahlahā bil-basāi wal-ḍarāi laʿallahum yaḍḍarraʿūna
Kannada ಒಂದು ನಾಡಿಗೆ ಓರ್ವ ಪ್ರವಾದಿಯನ್ನು ಕಳುಹಿ ಸಿದರೆ ಆ ನಾಡಿನ ಜನರನ್ನು ಬಡತನ, ರೋಗಗಳಿಂದ ನಾವು ಸಂಕಷ್ಟಗಳಿಗೊಳಪಡಿಸದೆ ಬಿಟ್ಟಿರಲಿಲ್ಲ. ಕಾರಣ - ಅವರಲ್ಲಿ ವಿಧೇಯತೆ ಉಂಟಾಗಲೆನ್ನುವುದು.
Verse 95
ثُمَّ بَدَّلْنَا مَكَانَ ٱلسَّيِّئَةِ ٱلْحَسَنَةَ حَتَّىٰ عَفَوا۟ وَّقَالُوا۟ قَدْ مَسَّ ءَابَآءَنَا ٱلضَّرَّآءُ وَٱلسَّرَّآءُ فَأَخَذْنَـٰهُم بَغْتَةً وَهُمْ لَا يَشْعُرُونَ
Transliteration thumma baddalnā makāna l-sayi-ati l-ḥasanata ḥattā ʿafaw waqālū qad massa ābāanā l-ḍarāu wal-sarāu fa-akhadhnāhum baghtatan wahum lā yashʿurūna
Kannada ತರುವಾಯ ನಾವು ಕಷ್ಟದ ಸ್ಥಾನದಲ್ಲಿ ಸುಖವನ್ನು ಬದಲಿಸಿಕೊಟ್ಟೆವು. ಕೊನೆಗೆ ಅವರು ಚೆನ್ನಾಗಿ ಅಭಿವೃದ್ಧಿ ಹೊಂದಿದರು. ಆಗ ಅವರು, ನಮ್ಮ ಪೂರ್ವಿಕರಿಗೂ ಕಷ್ಟ - ಸುಖಗಳು ಬರುತ್ತಲೇ ಇದ್ದುವು ಎಂದು ಹೇಳತೊಡಗಿದರು. ಆಗ ಅವರಿಗರಿವಾಗದಂತೆ ನಾವು ಅವರನ್ನು ಹಠಾತ್ತನೆ ಶಿಕ್ಷಿಸಿದೆವು .
Verse 96
وَلَوْ أَنَّ أَهْلَ ٱلْقُرَىٰٓ ءَامَنُوا۟ وَٱتَّقَوْا۟ لَفَتَحْنَا عَلَيْهِم بَرَكَـٰتٍ مِّنَ ٱلسَّمَآءِ وَٱلْأَرْضِ وَلَـٰكِن كَذَّبُوا۟ فَأَخَذْنَـٰهُم بِمَا كَانُوا۟ يَكْسِبُونَ
Transliteration walaw anna ahla l-qurā āmanū wa-ittaqaw lafataḥnā ʿalayhim barakātin mina l-samāi wal-arḍi walākin kadhabū fa-akhadhnāhum bimā kānū yaksibūna
Kannada ಆ ನಾಡಿನವರು ವಿಶ್ವಾಸವಿರಿಸುತ್ತಿದ್ದರೆ ಮತ್ತು ಜಾಗ್ರತೆ ಪಾಲಿಸುತ್ತಿದ್ದರೆ, ನಾವು ಅವರಿಗೆ ಆಕಾಶ ಮತ್ತು ಭೂಮಿಯಿಂದ ಸಮೃದ್ಧಿಯ ಬಾಗಿಲುಗಳನ್ನು ತೆರೆದು ಕೊಡುತ್ತಿದ್ದೆವು. ಆದರೆ ಅವರು ನಿಷೇಧಿಸಿದರು. ಆದುದರಿಂದ ಅವರ ಪ್ರವೃತ್ತಿಗಳಿಗನುಸಾರವಾಗಿ ಅವರನ್ನು ನಾವು ಶಿಕ್ಷಿಸಿದೆವು.
Verse 97
أَفَأَمِنَ أَهْلُ ٱلْقُرَىٰٓ أَن يَأْتِيَهُم بَأْسُنَا بَيَـٰتًا وَهُمْ نَآئِمُونَ
Transliteration afa-amina ahlu l-qurā an yatiyahum basunā bayātan wahum nāimūna
Kannada ಆ ನಾಡಿನವರು ರಾತ್ರೆ ನಿದ್ರಿಸುತ್ತಿದ್ದಾಗ ನಮ್ಮ ಶಿಕ್ಷೆಯು ಬಂದೆರಗುವ ಬಗ್ಗೆ ಅವರು ನಿರ್ಭೀತ ರಾಗಿರುವರೇ?
Verse 98
أَوَأَمِنَ أَهْلُ ٱلْقُرَىٰٓ أَن يَأْتِيَهُم بَأْسُنَا ضُحًى وَهُمْ يَلْعَبُونَ
Transliteration awa-amina ahlu l-qurā an yatiyahum basunā ḍuḥan wahum yalʿabūna
Kannada ಅಥವಾ ಆ ನಾಡಿನವರು ಹಗಲು ಹೊತ್ತಿನಲ್ಲಿ ಕ್ರೀಡಾ ಮಗ್ನರಾಗಿದ್ದಾಗ ನಮ್ಮ ಶಿಕ್ಷೆಯು ಎರ ಗುವ ಬಗ್ಗೆ ಅವರೇನು ನಿಶ್ಚಿಂತರಾಗಿರುವರೇ?
Verse 99
أَفَأَمِنُوا۟ مَكْرَ ٱللَّهِ ۚ فَلَا يَأْمَنُ مَكْرَ ٱللَّهِ إِلَّا ٱلْقَوْمُ ٱلْخَـٰسِرُونَ
Transliteration afa-aminū makra l-lahi falā yamanu makra l-lahi illā l-qawmu l-khāsirūna
Kannada ಅವರು ಅಲ್ಲಾಹನ ನಿಗೂಢ ಕಾರ್ಯತಂತ್ರದ ಬಗ್ಗೆ ನಿರ್ಭೀತರಾಗಿರುವರೇ? ವಾಸ್ತವದಲ್ಲಿ ನಷ್ಟ ಕ್ಕೊಳಗಾದ ಜನಾಂಗ ಮಾತ್ರವೇ ಅಲ್ಲಾಹನ ನಿಗೂಢ ತಂತ್ರದಿಂದ ನಿರ್ಭೀತವಾಗಿರುವುದು
Verse 100
أَوَلَمْ يَهْدِ لِلَّذِينَ يَرِثُونَ ٱلْأَرْضَ مِنۢ بَعْدِ أَهْلِهَآ أَن لَّوْ نَشَآءُ أَصَبْنَـٰهُم بِذُنُوبِهِمْ ۚ وَنَطْبَعُ عَلَىٰ قُلُوبِهِمْ فَهُمْ لَا يَسْمَعُونَ
Transliteration awalam yahdi lilladhīna yarithūna l-arḍa min baʿdi ahlihā an law nashāu aṣabnāhum bidhunūbihim wanaṭbaʿu ʿalā qulūbihim fahum lā yasmaʿūna
Kannada ಭೂಮಿಯ ಪೂರ್ವ ನಿವಾಸಿಗಳ ಅನಂತರ ಅದರ ವಾರೀಸುದಾರರಾಗಿರುವವರಿಗೆ ನಾವಿಚ್ಛಿ ಸಿದರೆ ಅವರ ಪಾಪಗಳಿಗಾಗಿ ಅವರನ್ನು ಶಿಕ್ಷಿಸ ಬಲ್ಲೆವೆಂಬ ಪ್ರಜ್ಞೆಯು ಅವರನ್ನು ನೇರ ದಾರಿಗೆ ಹಚ್ಚಲಾರದೇ? ನಾವು ಅವರ ಹೃದಯಗಳ ಮೇಲೆ ಮುದ್ರೆಯೊತ್ತುತ್ತೇವೆ. ಅನಂತರ ಅವರು ಏನನ್ನೂ ಆಲಿಸುವುದಿಲ್ಲ.
Verse 101
تِلْكَ ٱلْقُرَىٰ نَقُصُّ عَلَيْكَ مِنْ أَنۢبَآئِهَا ۚ وَلَقَدْ جَآءَتْهُمْ رُسُلُهُم بِٱلْبَيِّنَـٰتِ فَمَا كَانُوا۟ لِيُؤْمِنُوا۟ بِمَا كَذَّبُوا۟ مِن قَبْلُ ۚ كَذَٰلِكَ يَطْبَعُ ٱللَّهُ عَلَىٰ قُلُوبِ ٱلْكَـٰفِرِينَ
Transliteration til'ka l-qurā naquṣṣu ʿalayka min anbāihā walaqad jāathum rusuluhum bil-bayināti famā kānū liyu'minū bimā kadhabū min qablu kadhālika yaṭbaʿu l-lahu ʿalā qulūbi l-kāfirīna
Kannada ಆ ಪ್ರದೇಶಗಳ ಚರಿತ್ರೆಗಳಿಂದ ಕೆಲವನ್ನು ತಮ ಗೆ ನಾವು ವಿವರಿಸುತ್ತೇವೆ. ತಮ್ಮ ದೂತರು ಸುವ್ಯಕ್ತ ದೃಷ್ಟಾಂತಗಳ ಸಹಿತ ಅವರ ಬಳಿ ತಲುಪಿದರು. ಆಗ ಅವರು ಮೊದಲು ನಿಷೇಧಿಸಿದುದನ್ನು ಪುನಃ ಸ್ವೀಕರಿಸುವವರಾಗಿರಲಿಲ್ಲ. ನಾವು ಇದೇ ರೀತಿಯಲ್ಲಿ ಸತ್ಯನಿಷೇಧಿಗಳ ಹೃದಯಗಳ ಮೇಲೆ ಅಲ್ಲಾಹನು ಮುದ್ರೆಯೊತ್ತಿ ಬಿಡುವನು.
Verse 102
وَمَا وَجَدْنَا لِأَكْثَرِهِم مِّنْ عَهْدٍ ۖ وَإِن وَجَدْنَآ أَكْثَرَهُمْ لَفَـٰسِقِينَ
Transliteration wamā wajadnā li-aktharihim min ʿahdin wa-in wajadnā aktharahum lafāsiqīna
Kannada ನಾವು ಅವರ ಪೈಕಿ ಹೆಚ್ಚಿನವರಲ್ಲಿ ಯಾವ ಕರಾರು ಪಾಲನೆಯನ್ನೂ ಕಾಣಲಿಲ್ಲ. ಮಾತ್ರವಲ್ಲ ಹೆಚ್ಚಿನವರು ಧಿಕ್ಕಾರಿಗಳಾಗಿರುವುದನ್ನೇ ಕಂಡೆವು.
Verse 103
ثُمَّ بَعَثْنَا مِنۢ بَعْدِهِم مُّوسَىٰ بِـَٔايَـٰتِنَآ إِلَىٰ فِرْعَوْنَ وَمَلَإِي۟هِۦ فَظَلَمُوا۟ بِهَا ۖ فَٱنظُرْ كَيْفَ كَانَ عَـٰقِبَةُ ٱلْمُفْسِدِينَ
Transliteration thumma baʿathnā min baʿdihim mūsā biāyātinā ilā fir'ʿawna wamala-ihi faẓalamū bihā fa-unẓur kayfa kāna ʿāqibatu l-muf'sidīna
Kannada ಬಳಿಕ ಆ ಜನಾಂಗಗಳ ತರುವಾಯ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳ ಸಹಿತ ಫಿರ್‍ಔನ್ ಮತ್ತು ಅವರ ಜನಾಂಗದ ಸರದಾರರ ಬಳಿಗೆ ಕಳುಹಿಸಿದೆವು. ಆದರೆ ಅವರು ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದರು. ಆ ಕೆಡುಕರ ಪರಿಣಾಮವೇನಾಯಿತೆಂದು ನೋಡಿರಿ.
Verse 104
وَقَالَ مُوسَىٰ يَـٰفِرْعَوْنُ إِنِّى رَسُولٌ مِّن رَّبِّ ٱلْعَـٰلَمِينَ
Transliteration waqāla mūsā yāfir'ʿawnu innī rasūlun min rabbi l-ʿālamīna
Kannada ಮೂಸಾ ಹೇಳಿದರು; `ಓ ಫಿರ್‍ಔನ್, ನಾನು ಸರ್ವಲೋಕ ಪಾಲಕನ ಕಡೆಯಿಂದ ನಿಯುಕ್ತ ನಾದ ದೂತನಾಗಿದ್ದೇನೆ.
Verse 105
حَقِيقٌ عَلَىٰٓ أَن لَّآ أَقُولَ عَلَى ٱللَّهِ إِلَّا ٱلْحَقَّ ۚ قَدْ جِئْتُكُم بِبَيِّنَةٍ مِّن رَّبِّكُمْ فَأَرْسِلْ مَعِىَ بَنِىٓ إِسْرَٰٓءِيلَ
Transliteration ḥaqīqun ʿalā an lā aqūla ʿalā l-lahi illā l-ḥaqa qad ji'tukum bibayyinatin min rabbikum fa-arsil maʿiya banī is'rāīla
Kannada ಅಲ್ಲಾಹನ ನಾಮವೆತ್ತಿ ಸತ್ಯದ ಹೊರತು ಇನ್ನೇನನ್ನೂ ಹೇಳದಿರುವುದೇ ಸಮಂಜಸ ವಾಗಿರುವುದು. ನಾನು ನಿಮ್ಮ ಬಳಿಗೆ ನನ್ನ ಪ್ರಭುವಿನ ಕಡೆಯಿಂದ ಸುವ್ಯಕ್ತ ಪ್ರಮಾಣ ದೊಂದಿಗೆ ಬಂದಿರುತ್ತೇನೆ. ಆದುದರಿಂದ ನೀನು ಬನೂ ಇಸ್‍ರಾಈಲರನ್ನು ನನ್ನ ಸಂಗಡ ಕಳುಹಿಸಿ ಕೊಡು .
Verse 106
قَالَ إِن كُنتَ جِئْتَ بِـَٔايَةٍ فَأْتِ بِهَآ إِن كُنتَ مِنَ ٱلصَّـٰدِقِينَ
Transliteration qāla in kunta ji'ta biāyatin fati bihā in kunta mina l-ṣādiqīna
Kannada ಫಿರ್‍ಔನನು ಹೇಳಿದನು. `ನೀನು ದೃಷ್ಟಾಂತ ದೊಂದಿಗೆ ಬಂದಿದ್ದರೆ ಅದನ್ನು ಮುಂದಿಡು. ನೀನು ಸತ್ಯವಂತನಾಗಿದ್ದರೆ !
Verse 107
فَأَلْقَىٰ عَصَاهُ فَإِذَا هِىَ ثُعْبَانٌ مُّبِينٌ
Transliteration fa-alqā ʿaṣāhu fa-idhā hiya thuʿ'bānun mubīnun
Kannada ಮೂಸಾ ತಮ್ಮ ದಂಡವನ್ನು ಎಸೆದರು. ಹಠಾತ್ತನೆ ಅದೊಂದು ಜೀವಂತ ಹೆಬ್ಬಾವಾಗಿ ಮಾರ್ಪಟ್ಟಿತು.
Verse 108
وَنَزَعَ يَدَهُۥ فَإِذَا هِىَ بَيْضَآءُ لِلنَّـٰظِرِينَ
Transliteration wanazaʿa yadahu fa-idhā hiya bayḍāu lilnnāẓirīna
Kannada ಅವರು ತಮ್ಮ ಜೇಬಿನಿಂದ ಕೈ ಹೊರತೆಗೆದರು. ಆಗ ಅದು ಪ್ರೇಕ್ಷಕರ ಮುಂದೆ ಬೆಳ್ಳಗೆ ಹೊಳೆಯಿತು.
Verse 109
قَالَ ٱلْمَلَأُ مِن قَوْمِ فِرْعَوْنَ إِنَّ هَـٰذَا لَسَـٰحِرٌ عَلِيمٌ
Transliteration qāla l-mala-u min qawmi fir'ʿawna inna hādhā lasāḥirun ʿalīmun
Kannada ಫಿರ್‍ಔನನ ಜನಾಂಗದ ಸರದಾರರು ಪರಸ್ಪರ ಹೇಳಿದರು; ಖಂಡಿತ ಇವನೊಬ್ಬ ನಿಪುಣ ಮಾಟಗಾರನಾಗಿರುತ್ತಾನೆ.
Verse 110
يُرِيدُ أَن يُخْرِجَكُم مِّنْ أَرْضِكُمْ ۖ فَمَاذَا تَأْمُرُونَ
Transliteration yurīdu an yukh'rijakum min arḍikum famādhā tamurūna
Kannada ಅವನು ನಿಮ್ಮನ್ನು ನಿಮ್ಮ ನಾಡಿನಿಂದ ಹೊರ ಹಾಕಲಿಚ್ಛಿಸುತ್ತಿದ್ದಾನೆ. ಈಗ ನೀವೇನು ಆದೇಶ ಕೊಡುವಿರಿ?
Verse 111
قَالُوٓا۟ أَرْجِهْ وَأَخَاهُ وَأَرْسِلْ فِى ٱلْمَدَآئِنِ حَـٰشِرِينَ
Transliteration qālū arjih wa-akhāhu wa-arsil fī l-madāini ḥāshirīna
Kannada ಅವರು ಹೇಳಿದರು; ತಾವು ಅವನಿಗೂ ಅವನ ಸಹೋದರನಿಗೂ ಕಾಲಾವಕಾಶ ನೀಡಿರಿ. ಹಾಗೂ ನಗರಗಳಲ್ಲಿ ಜನರನ್ನು ಒಗ್ಗೂಡಿಸಲು ಆಳುಗಳನ್ನು ಕಳುಹಿಸಿರಿ.
Verse 112
يَأْتُوكَ بِكُلِّ سَـٰحِرٍ عَلِيمٍ
Transliteration yatūka bikulli sāḥirin ʿalīmin
Kannada ಅವರು ತಮ್ಮ ಬಳಿಗೆ ಎಲ್ಲ ನಿಪುಣ ಮಾಟಗಾರರನ್ನು ಕರೆದು ತರಲಿಕ್ಕಾಗಿ.
Verse 113
وَجَآءَ ٱلسَّحَرَةُ فِرْعَوْنَ قَالُوٓا۟ إِنَّ لَنَا لَأَجْرًا إِن كُنَّا نَحْنُ ٱلْغَـٰلِبِينَ
Transliteration wajāa l-saḥaratu fir'ʿawna qālū inna lanā la-ajran in kunnā naḥnu l-ghālibīna
Kannada ಅಂತೆಯೇ ಮಾಟಗಾರರು ಫಿರ್‍ಔನನ ಬಳಿಗೆ ಬಂದರು. ಅವರು ಹೀಗೆ ಹೇಳಿದರು; ‘ನಾವು ಗೆದ್ದರೆ ನಮಗೆ ಪ್ರತಿಫಲವಿರುವುದು ಖಂಡಿತ ತಾನೇ?
Verse 114
قَالَ نَعَمْ وَإِنَّكُمْ لَمِنَ ٱلْمُقَرَّبِينَ
Transliteration qāla naʿam wa-innakum lamina l-muqarabīna
Kannada ಫಿರ್‍ಔನನು ಹೇಳಿದನು; ಹೌದು. ಜೊತೆಗೇ ನೀವು ನಮ್ಮ ನಿಕಟವರ್ತಿಗಳೂ ಆಗುವಿರಿ.
Verse 115
قَالُوا۟ يَـٰمُوسَىٰٓ إِمَّآ أَن تُلْقِىَ وَإِمَّآ أَن نَّكُونَ نَحْنُ ٱلْمُلْقِينَ
Transliteration qālū yāmūsā immā an tul'qiya wa-immā an nakūna naḥnu l-mul'qīna
Kannada ಮಾಟಗಾರರು ಹೇಳಿದರು; “ಓ ಮೂಸಾ, ಒಂದೋ ಮೊದಲು ನೀವು ನಿಮ್ಮ ದಂಡವನ್ನು ಎಸೆಯಿರಿ. ಇಲ್ಲವೇ ನಾವೇ ಎಸೆಯುತ್ತೇವೆ.
Verse 116
قَالَ أَلْقُوا۟ ۖ فَلَمَّآ أَلْقَوْا۟ سَحَرُوٓا۟ أَعْيُنَ ٱلنَّاسِ وَٱسْتَرْهَبُوهُمْ وَجَآءُو بِسِحْرٍ عَظِيمٍ
Transliteration qāla alqū falammā alqaw saḥarū aʿyuna l-nāsi wa-is'tarhabūhum wajāū bisiḥ'rin ʿaẓīmin
Kannada ಮೂಸಾರವರು, “ನೀವೇ ಎಸೆಯಿರಿ” ಎಂ ದರು. ಅವರು ತಮ್ಮ (ದಂಡ ಹಾಗೂ ಹಗ್ಗಗ ಳನ್ನು) ಎಸೆದಾಗ ಜನರ ದೃಷ್ಟಿಗಳನ್ನು ವಶೀಕ ರಿಸಿದರು. ಮತ್ತು ಜನರನ್ನು ಭಯ ಗ್ರಸ್ತಗೊ ಳಿಸಿದರು. ಅವರು ಭಾರೀ ದೊಡ್ಡ ಮಾಟವನ್ನೇ ಪ್ರಕಟಿಸಿದರು.
Verse 117
۞ وَأَوْحَيْنَآ إِلَىٰ مُوسَىٰٓ أَنْ أَلْقِ عَصَاكَ ۖ فَإِذَا هِىَ تَلْقَفُ مَا يَأْفِكُونَ
Transliteration wa-awḥaynā ilā mūsā an alqi ʿaṣāka fa-idhā hiya talqafu mā yafikūna
Kannada ಆಗ ನಾವು ಮೂಸಾರಿಗೆ ಸಂದೇಶ ಕೊಟ್ಟೆವು. ‘ದಂಡವನ್ನು ಎಸೆಯಿರಿ’ ಎಂದು. ಅದನ್ನು ಎಸೆದೊಡನೆ ಅದು ಅವರ ಕೃತ್ರಿಮ ಮಾಟ ಸೃಷ್ಟಿ ಗಳನ್ನೆಲ್ಲ ನುಂಗುತ್ತಾ ಸಾಗಿತು.
Verse 118
فَوَقَعَ ٱلْحَقُّ وَبَطَلَ مَا كَانُوا۟ يَعْمَلُونَ
Transliteration fawaqaʿa l-ḥaqu wabaṭala mā kānū yaʿmalūna
Kannada ಹೀಗೆ ಸತ್ಯ ಸತ್ಯವಾಗಿ ಪರಿಣಮಿಸಿತು. ಅವರ ಕೃತಕ ಸೃಷ್ಟಿ ಮಿಥ್ಯವಾಯಿತು.
Verse 119
فَغُلِبُوا۟ هُنَالِكَ وَٱنقَلَبُوا۟ صَـٰغِرِينَ
Transliteration faghulibū hunālika wa-inqalabū ṣāghirīna
Kannada ಫಿರ್‍ಔನ್ ಮತ್ತು ಅವನ ಸಂಗಡಿಗರು ಸ್ಪರ್ಧಾ ರಂಗದಲ್ಲಿ ಪರಾಜಿತರಾಗಿ ಅವಮಾನಗೊಳ್ಳು ವಂತಾಯಿತು.
Verse 120
وَأُلْقِىَ ٱلسَّحَرَةُ سَـٰجِدِينَ
Transliteration wa-ul'qiya l-saḥaratu sājidīna
Kannada ಮಾಟಗಾರರು ಸಾಷ್ಟಾಂಗವೆರಗುವಂತೆ ಬೀಳಿ ಸಲ್ಪಟ್ಟರು.
Verse 121
قَالُوٓا۟ ءَامَنَّا بِرَبِّ ٱلْعَـٰلَمِينَ
Transliteration qālū āmannā birabbi l-ʿālamīna
Kannada “ನಾವು ಸರ್ವಲೋಕಪಾಲಕನನ್ನು ನಂಬಿದೆವು.
Verse 122
رَبِّ مُوسَىٰ وَهَـٰرُونَ
Transliteration rabbi mūsā wahārūna
Kannada ಮೂಸಾ ಮತ್ತು ಹಾರೂನ್ ನಂಬುವ ಪ್ರಭು ವನ್ನು” ಎಂದರವರು.
Verse 123
قَالَ فِرْعَوْنُ ءَامَنتُم بِهِۦ قَبْلَ أَنْ ءَاذَنَ لَكُمْ ۖ إِنَّ هَـٰذَا لَمَكْرٌ مَّكَرْتُمُوهُ فِى ٱلْمَدِينَةِ لِتُخْرِجُوا۟ مِنْهَآ أَهْلَهَا ۖ فَسَوْفَ تَعْلَمُونَ
Transliteration qāla fir'ʿawnu āmantum bihi qabla an ādhana lakum inna hādhā lamakrun makartumūhu fī l-madīnati litukh'rijū min'hā ahlahā fasawfa taʿlamūna
Kannada ಫಿರ್‍ಔನನು ಹೇಳಿದನು; `ನಾನು ನಿಮಗೆ ಅಪ್ಪಣೆಕೊಡುವ ಮುನ್ನ ನೀವು ಅವನ ಮೇಲೆ ವಿಶ್ವಾಸವಿಟ್ಟಿರಾ? ಈ ನಾಡಿನಿಂದ ಇಲ್ಲಿಯ ನಿವಾಸಿಗಳನ್ನು ಹೊರಗಟ್ಟುವುದಕ್ಕಾಗಿ ನೀವು ಇತ್ತಂಡದವರು ಸೇರಿ ಹೂಡಿದ ಒಳಸಂಚಾಗಿತ್ತು ಇದು. ಇದರ ಪರಿಣಾಮವನ್ನು ನೀವು ಆಮೇಲೆ ತಿಳಿಯಲಿರುವಿರಿ.
Verse 124
لَأُقَطِّعَنَّ أَيْدِيَكُمْ وَأَرْجُلَكُم مِّنْ خِلَـٰفٍ ثُمَّ لَأُصَلِّبَنَّكُمْ أَجْمَعِينَ
Transliteration la-uqaṭṭiʿanna aydiyakum wa-arjulakum min khilāfin thumma la-uṣallibannakum ajmaʿīna
Kannada ನಾನು ನಿಮ್ಮ ಕೈಗಳನ್ನೂ ಕಾಲುಗಳನ್ನೂ ವಿರುದ್ಧ ದಿಕ್ಕಿನಿಂದ ಕಡಿಸಿ ಬಿಡುವೆನು. ಅನಂತರ ನಿಮ್ಮೆಲ್ಲರನ್ನು ಶಿಲುಬೆಗೇರಿಸುವೆನು ಖಂಡಿತ’.
Verse 125
قَالُوٓا۟ إِنَّآ إِلَىٰ رَبِّنَا مُنقَلِبُونَ
Transliteration qālū innā ilā rabbinā munqalibūna
Kannada ಅವರು ಪ್ರತಿಕ್ರಿಯಿಸಿದರು; ‘ನಾವಂತು ನಮ್ಮ ಪ್ರಭುವಿನ ಕಡೆಗೇ ಮರಳುವವರಾಗಿದ್ದೇವೆ.
Verse 126
وَمَا تَنقِمُ مِنَّآ إِلَّآ أَنْ ءَامَنَّا بِـَٔايَـٰتِ رَبِّنَا لَمَّا جَآءَتْنَا ۚ رَبَّنَآ أَفْرِغْ عَلَيْنَا صَبْرًا وَتَوَفَّنَا مُسْلِمِينَ
Transliteration wamā tanqimu minnā illā an āmannā biāyāti rabbinā lammā jāatnā rabbanā afrigh ʿalaynā ṣabran watawaffanā mus'limīna
Kannada ನಮ್ಮ ಪ್ರಭುವಿನ ದೃಷ್ಟಾಂತಗಳು ನಮಗೆ ಬಂದಾಗ ನಾವು ಅವುಗಳ ಮೇಲೆ ವಿಶ್ವಾಸವಿರಿ ಸಿದೆವೆಂಬ ಕಾರಣಕ್ಕಾಗಿಯೇ ವಿನಾ ನೀನು ನಮ್ಮನ್ನು ಶಿಕ್ಷಿಸುತ್ತಿಲ್ಲ. ಓ ನಮ್ಮ ಪ್ರಭೂ, ನಮಗೆ ಸಹನೆಯನ್ನು ಸುರಿಸಿಕೊಡು. ಮುಸ್ಲಿ ಮರಾಗಿರುವ ಸ್ಥಿತಿಯಲ್ಲಿ ನೀನು ನಮ್ಮನ್ನು ಮರಣಗೊಳಿಸು’ .
Verse 127
وَقَالَ ٱلْمَلَأُ مِن قَوْمِ فِرْعَوْنَ أَتَذَرُ مُوسَىٰ وَقَوْمَهُۥ لِيُفْسِدُوا۟ فِى ٱلْأَرْضِ وَيَذَرَكَ وَءَالِهَتَكَ ۚ قَالَ سَنُقَتِّلُ أَبْنَآءَهُمْ وَنَسْتَحْىِۦ نِسَآءَهُمْ وَإِنَّا فَوْقَهُمْ قَـٰهِرُونَ
Transliteration waqāla l-mala-u min qawmi fir'ʿawna atadharu mūsā waqawmahu liyuf'sidū fī l-arḍi wayadharaka waālihataka qāla sanuqattilu abnāahum wanastaḥyī nisāahum wa-innā fawqahum qāhirūna
Kannada ಫಿರ್‍ಔನನ ಜನಾಂಗದ ಸರದಾರರು ಹೀಗೆಂದರು ; ‘ದೇಶದಲ್ಲಿ ಗೊಂದಲಗಳನ್ನು ಹಬ್ಬಿಸು ತ್ತಿರುವ ಹಾಗೂ ನಿನ್ನನ್ನೂ ನಿನ್ನ ಆರಾಧ್ಯರ ಆರಾಧನೆಯನ್ನು ತೊರೆಯಲುದ್ದೇಶಿಸಿದ ಮೂಸಾ ಮತ್ತು ಅವನ ಜನಾಂಗವನ್ನು ಸುಮ್ಮನೆ ಬಿಟ್ಟು ಬಿಡುವೆಯಾ?’ ಫಿರ್‍ಔನನು ಹೇಳಿದನು; ನಾವು ಅವರ (ಇಸ್ರಾಈಲರ) ಗಂಡು ಮಕ್ಕಳನ್ನು ಕೊಲೆ ಮಾಡಿಸುವೆವು. ಮತ್ತು ಅವರ ಹೆಣ್ಮಕ್ಕಳನ್ನು ಜೀವಂತವಿರಲು ಬಿಡುವೆವು. ನಿಸ್ಸಂದೇಹವಾಗಿ ನಾವು ಅವರ ಮೇಲೆ ಅಧಿಕಾರ ಹೊಂದಿರುತ್ತೇವೆ.
Verse 128
قَالَ مُوسَىٰ لِقَوْمِهِ ٱسْتَعِينُوا۟ بِٱللَّهِ وَٱصْبِرُوٓا۟ ۖ إِنَّ ٱلْأَرْضَ لِلَّهِ يُورِثُهَا مَن يَشَآءُ مِنْ عِبَادِهِۦ ۖ وَٱلْعَـٰقِبَةُ لِلْمُتَّقِينَ
Transliteration qāla mūsā liqawmihi is'taʿīnū bil-lahi wa-iṣ'birū inna l-arḍa lillahi yūrithuhā man yashāu min ʿibādihi wal-ʿāqibatu lil'muttaqīna
Kannada ಮೂಸಾ ತಮ್ಮ ಜನಾಂಗದೊಡನೆ ಹೇಳಿದರು; ನೀವು ಅಲ್ಲಾಹನೊಡನೆ ಸಹಾಯ ಯಾಚಿಸಿರಿ ಮತ್ತು ತಾಳ್ಮೆವಹಿಸಿರಿ. ಭೂಮಿ ಅಲ್ಲಾಹನದು. ಅವನು ತನ್ನ ದಾಸರ ಪೈಕಿ ತಾನಿಚ್ಛಿಸಿದವರನ್ನು ಅದರ ವಾರಿಸುದಾರರಾಗಿ ಮಾಡುತ್ತಾನೆ. ಅಂತಿಮ ವಿಜಯವು ಧರ್ಮನಿಷ್ಠರ ಪರವಾಗಿರುತ್ತದೆ.
Verse 129
قَالُوٓا۟ أُوذِينَا مِن قَبْلِ أَن تَأْتِيَنَا وَمِنۢ بَعْدِ مَا جِئْتَنَا ۚ قَالَ عَسَىٰ رَبُّكُمْ أَن يُهْلِكَ عَدُوَّكُمْ وَيَسْتَخْلِفَكُمْ فِى ٱلْأَرْضِ فَيَنظُرَ كَيْفَ تَعْمَلُونَ
Transliteration qālū ūdhīnā min qabli an tatiyanā wamin baʿdi mā ji'tanā qāla ʿasā rabbukum an yuh'lika ʿaduwwakum wayastakhlifakum fī l-arḍi fayanẓura kayfa taʿmalūna
Kannada ಅವರ ಜನಾಂಗದವರು ಹೇಳಿದರು; ನೀವು ನಮ್ಮ ಬಳಿಗೆ (ದೂತರಾಗಿ) ಬರುವುದಕ್ಕೆ ಮುಂಚೆ ಯೂ ನೀವು ಬಂದ ಬಳಿಕವೂ ನಾವು ಮರ್ಧಿಸಲ್ಪಟ್ಟೆವು. ಆಗ ಮೂಸಾ ಹೇಳಿದರು; - ನಿಮ್ಮ ಪ್ರಭು ಬಹುಶಃ ನಿಮ್ಮ ಶತ್ರುವನ್ನು ನಾಶಗೊಳಿಸಿ ಯಾನು. ಹಾಗೂ ನಿಮ್ಮನ್ನು ಭೂಮಿಯಲ್ಲಿ ಪ್ರತಿನಿಧಿಗಳನ್ನಾಗಿ ಮಾಡುವನು. ಆಗ ಅವನು ನೀವು ಹೇಗೆ ವರ್ತಿಸುತ್ತೀರೆಂದು ನೋಡುವನು.
Verse 130
وَلَقَدْ أَخَذْنَآ ءَالَ فِرْعَوْنَ بِٱلسِّنِينَ وَنَقْصٍ مِّنَ ٱلثَّمَرَٰتِ لَعَلَّهُمْ يَذَّكَّرُونَ
Transliteration walaqad akhadhnā āla fir'ʿawna bil-sinīna wanaqṣin mina l-thamarāti laʿallahum yadhakkarūna
Kannada ಫಿರ್‍ಔನನ ಜನರನ್ನು ನಾವು ಅನೇಕ ವರ್ಷಗಳ ವರೆಗೆ ಬರಗಾಲ ಮತ್ತು ಫಲಗಳ ಇಳಿಮುಖದ ಮೂಲಕ ಶಿಕ್ಷಿಸಿದೆವು. ಅವರು ಯೋಚಿಸಿ ಗ್ರಹಿಸಲಿಕ್ಕಾಗಿ.
Verse 131
فَإِذَا جَآءَتْهُمُ ٱلْحَسَنَةُ قَالُوا۟ لَنَا هَـٰذِهِۦ ۖ وَإِن تُصِبْهُمْ سَيِّئَةٌ يَطَّيَّرُوا۟ بِمُوسَىٰ وَمَن مَّعَهُۥٓ ۗ أَلَآ إِنَّمَا طَـٰٓئِرُهُمْ عِندَ ٱللَّهِ وَلَـٰكِنَّ أَكْثَرَهُمْ لَا يَعْلَمُونَ
Transliteration fa-idhā jāathumu l-ḥasanatu qālū lanā hādhihi wa-in tuṣib'hum sayyi-atun yaṭṭayyarū bimūsā waman maʿahu alā innamā ṭāiruhum ʿinda l-lahi walākinna aktharahum lā yaʿlamūna
Kannada ಆದರೆ, ಅವರಿಗೆ ಸುಭಿಕ್ಷೆ ಬಂದಾಗ ಅವರು, ‘ನಾವು ಇದಕ್ಕೆ ಅರ್ಹರು’ ಎನ್ನುವರು. ಕೆಡುಕು ಬಂದಾಗ ‘ಇದು ಮೂಸಾ ಮತ್ತು ಅವರ ಸಂಗ ಡಿಗರ ಅಪಶಕುನ’ ಎನ್ನುವರು. ಆದರೆ ಅವರ ಅಪಶಕುನವು ಅಲ್ಲಾಹನ ಬಳಿಯಲ್ಲೇ ಇದೆ. ಆ ಕುರಿತು ಅವರಲ್ಲಿ ಹೆಚ್ಚಿನವರು ಅರಿಯು ವುದಿಲ್ಲ.
Verse 132
وَقَالُوا۟ مَهْمَا تَأْتِنَا بِهِۦ مِنْ ءَايَةٍ لِّتَسْحَرَنَا بِهَا فَمَا نَحْنُ لَكَ بِمُؤْمِنِينَ
Transliteration waqālū mahmā tatinā bihi min āyatin litasḥaranā bihā famā naḥnu laka bimu'minīna
Kannada ಅವರು ಮೂಸಾರೊಡನೆ, ‘ನೀನು ನಮ್ಮನ್ನು ವಶೀಕರಿಸಲು ಎಂತಹ ದೃಷ್ಟಾಂತವನ್ನು ತಂದರೂ ನಾವು ನಿನ್ನನ್ನು ನಂಬುವವರಲ್ಲ’ ಎಂದರು .
Verse 133
فَأَرْسَلْنَا عَلَيْهِمُ ٱلطُّوفَانَ وَٱلْجَرَادَ وَٱلْقُمَّلَ وَٱلضَّفَادِعَ وَٱلدَّمَ ءَايَـٰتٍ مُّفَصَّلَـٰتٍ فَٱسْتَكْبَرُوا۟ وَكَانُوا۟ قَوْمًا مُّجْرِمِينَ
Transliteration fa-arsalnā ʿalayhimu l-ṭūfāna wal-jarāda wal-qumala wal-ḍafādiʿa wal-dama āyātin mufaṣṣalātin fa-is'takbarū wakānū qawman muj'rimīna
Kannada ಆಗ ನಾವು ಅವರ ಕಡೆಗೆ ಜಲ ಪ್ರವಾಹ, ಕತ್ತರಿ ಗಿಳಿ, ಕೀಟ, ಕಪ್ಪೆಗಳು ಹಾಗೂ (ನೀರಿನಲ್ಲಿ) ರಕ್ತವನ್ನು ವ್ಯಕ್ತವಾದ ದೃಷ್ಟಾಂತಗಳನ್ನಾಗಿ ಕಳುಹಿಸಿದೆವು. ಆದರೆ, ಅವರು ಅಹಂಕಾರ ವೆಸಗುತ್ತಲೇ ಸಾಗಿದರು. ಅವರು ದುಷ್ಟ ಜನಾಂಗವಾಗಿದ್ದರು.
Verse 134
وَلَمَّا وَقَعَ عَلَيْهِمُ ٱلرِّجْزُ قَالُوا۟ يَـٰمُوسَى ٱدْعُ لَنَا رَبَّكَ بِمَا عَهِدَ عِندَكَ ۖ لَئِن كَشَفْتَ عَنَّا ٱلرِّجْزَ لَنُؤْمِنَنَّ لَكَ وَلَنُرْسِلَنَّ مَعَكَ بَنِىٓ إِسْرَٰٓءِيلَ
Transliteration walammā waqaʿa ʿalayhimu l-rij'zu qālū yāmūsā ud'ʿu lanā rabbaka bimā ʿahida ʿindaka la-in kashafta ʿannā l-rij'za lanu'minanna laka walanur'silanna maʿaka banī is'rāīla
Kannada ಅವರಿಗೆ ಶಿಕ್ಷೆ ಬಾಧಿಸಿದಾಗ ಅವರು ಹೇಳಿದರು; `ಓ ಮೂಸಾ, ನಿನ್ನ ಪ್ರಭು ನಿನಗೆ ಕೊಟ್ಟ ವಚನದ ಆಧಾರದಲ್ಲಿ ನಮಗಾಗಿ ಅವನಲ್ಲಿ ಪ್ರಾರ್ಥಿಸು. ನೀನು ನಮ್ಮ ಮೇಲಿಂದ ಈ ವಿಪತ್ತನ್ನು ನಿವಾರಿಸಿ ಬಿಟ್ಟರೆ ನಾವು ನಿನ್ನ ಧರ್ಮದಲ್ಲಿ ವಿಶ್ವಾ ಸವಿರಿಸುವೆವು ಮತ್ತು ಬನೂಇಸ್‍ರಾಈಲರನ್ನು ನಿನ್ನೊಂದಿಗೆ ಕಳುಹಿಸುವೆವು’.
Verse 135
فَلَمَّا كَشَفْنَا عَنْهُمُ ٱلرِّجْزَ إِلَىٰٓ أَجَلٍ هُم بَـٰلِغُوهُ إِذَا هُمْ يَنكُثُونَ
Transliteration falammā kashafnā ʿanhumu l-rij'za ilā ajalin hum bālighūhu idhā hum yankuthūna
Kannada ಅಂತೆಯೇ ಅವರು ತಲುಪಲಿರುವ ಒಂದು ನಿಶ್ಚಿತ ಅವಧಿಯವರೆಗೆ ಶಿಕ್ಷೆಯನ್ನು ನಾವು ದೂರೀಕರಿಸಿದಾಗ ಅವರು ವಚನ ಭಂಗ ಮಾಡಿದರು.
Verse 136
فَٱنتَقَمْنَا مِنْهُمْ فَأَغْرَقْنَـٰهُمْ فِى ٱلْيَمِّ بِأَنَّهُمْ كَذَّبُوا۟ بِـَٔايَـٰتِنَا وَكَانُوا۟ عَنْهَا غَـٰفِلِينَ
Transliteration fa-intaqamnā min'hum fa-aghraqnāhum fī l-yami bi-annahum kadhabū biāyātinā wakānū ʿanhā ghāfilīna
Kannada ಹಾಗೆ ನಾವು ಅವರನ್ನು ಶಿಕ್ಷಿಸಿದೆವು. ಅವರನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟೆವು. ಏಕೆಂದರೆ, ಅವರು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿ ದ್ದರು ಮತ್ತು ಅವುಗಳ ಬಗ್ಗೆ ಅಲಕ್ಷ್ಯರಾಗಿದ್ದರು .
Verse 137
وَأَوْرَثْنَا ٱلْقَوْمَ ٱلَّذِينَ كَانُوا۟ يُسْتَضْعَفُونَ مَشَـٰرِقَ ٱلْأَرْضِ وَمَغَـٰرِبَهَا ٱلَّتِى بَـٰرَكْنَا فِيهَا ۖ وَتَمَّتْ كَلِمَتُ رَبِّكَ ٱلْحُسْنَىٰ عَلَىٰ بَنِىٓ إِسْرَٰٓءِيلَ بِمَا صَبَرُوا۟ ۖ وَدَمَّرْنَا مَا كَانَ يَصْنَعُ فِرْعَوْنُ وَقَوْمُهُۥ وَمَا كَانُوا۟ يَعْرِشُونَ
Transliteration wa-awrathnā l-qawma alladhīna kānū yus'taḍʿafūna mashāriqa l-arḍi wamaghāribahā allatī bāraknā fīhā watammat kalimatu rabbika l-ḥus'nā ʿalā banī is'rāīla bimā ṣabarū wadammarnā mā kāna yaṣnaʿu fir'ʿawnu waqawmuhu wamā kānū yaʿrishūna
Kannada ದುರ್ಬಲಗೊಳಿಸಲ್ಪಟ್ಟಿದ್ದ ಆ ಜನರನ್ನು ನಾವು ಸಮೃದ್ಧಿಯನ್ನಿರಿಸಿದ್ದ ಭೂಭಾಗದ ಪೂರ್ವ- ಪಶ್ಚಿಮಗಳ ವಾರೀಸುದಾರರನ್ನಾಗಿ ಮಾಡಿದೆವು. ಈ ರೀತಿಯಲ್ಲಿ ಇಸ್‍ರಾಈಲ ಸಂತತಿಗ ಳಿಗೆ ನೀಡಿದ್ದ ನಿನ್ನ ಪ್ರಭುವಿನ ಉತ್ತಮ ವಾಗ್ದಾನವು ನೆರವೇರಿತು. ಅವರು ತಾಳ್ಮೆ ವಹಿಸಿದ್ದಕ್ಕಾಗಿ! ಫಿರ್‍ಔನ್ ಮತ್ತು ಅವನ ಜನಾಂಗದವರು ನಿರ್ಮಿಸಿದ್ದ ಕಾಮಗಾರಿ ಹಾಗೂ ಕಟ್ಟಡಗಳನ್ನೆಲ್ಲ ನಾವು ಸರ್ವನಾಶ ಮಾಡಿಬಿಟ್ಟೆವು.
Verse 138
وَجَـٰوَزْنَا بِبَنِىٓ إِسْرَٰٓءِيلَ ٱلْبَحْرَ فَأَتَوْا۟ عَلَىٰ قَوْمٍ يَعْكُفُونَ عَلَىٰٓ أَصْنَامٍ لَّهُمْ ۚ قَالُوا۟ يَـٰمُوسَى ٱجْعَل لَّنَآ إِلَـٰهًا كَمَا لَهُمْ ءَالِهَةٌ ۚ قَالَ إِنَّكُمْ قَوْمٌ تَجْهَلُونَ
Transliteration wajāwaznā bibanī is'rāīla l-baḥra fa-ataw ʿalā qawmin yaʿkufūna ʿalā aṣnāmin lahum qālū yāmūsā ij'ʿal lanā ilāhan kamā lahum ālihatun qāla innakum qawmun tajhalūna
Kannada ನಾವು ಇಸ್‍ರಾಈಲ ಸಂತತಿಗಳನ್ನು ಸಮು ದ್ರದಿಂದ ದಾಟಿಸಿದೆವು. ಅನಂತರ ಅವರು ಮುಂದೆ ಸಾಗಿದರು. ದಾರಿಯಲ್ಲಿ ತಮ್ಮ ವಿಗ್ರಹಗಳ ಮುಂದೆ ಜಪ ಕೂತ್ತಿದ್ದ ಒಂದು ಜನಾಂಗದ ಬಳಿಗೆ ತಲಪಿದಾಗ, ‘ಓ ಮೂಸಾ, ಇವರಿಗೆ ದೇವರು ಇರುವಂತೆ ನಮಗೂ ಒಂದು ದೇವರನ್ನು ಮಾಡಿಕೊಡು’ ಎಂದರು. ಮೂಸಾ ಹೇಳಿದರು, ‘ನಿಜಕ್ಕೂ ನೀವು ಅಜ್ಞಾನಿಗಳು.
Verse 139
إِنَّ هَـٰٓؤُلَآءِ مُتَبَّرٌ مَّا هُمْ فِيهِ وَبَـٰطِلٌ مَّا كَانُوا۟ يَعْمَلُونَ
Transliteration inna hāulāi mutabbarun mā hum fīhi wabāṭilun mā kānū yaʿmalūna
Kannada ಇವರು ತಮ್ಮ ಧರ್ಮದಲ್ಲಿ ನಾಶವಾಗುವವರು. ಮತ್ತು ಇವರು ಮಾಡುತ್ತಿರುವುದು ಕೇವಲ ವ್ಯರ್ಥ ಕಾರ್ಯ’.
Verse 140
قَالَ أَغَيْرَ ٱللَّهِ أَبْغِيكُمْ إِلَـٰهًا وَهُوَ فَضَّلَكُمْ عَلَى ٱلْعَـٰلَمِينَ
Transliteration qāla aghayra l-lahi abghīkum ilāhan wahuwa faḍḍalakum ʿalā l-ʿālamīna
Kannada ಮೂಸಾ ಹೇಳಿದರು; ನಾನು ನಿಮಗೆ ಅಲ್ಲಾಹ ನಲ್ಲದ ಬೇರೊಬ್ಬ ದೇವನನ್ನು ಹುಡುಕಬೇಕೇ? (ಸಮಕಾಲೀನ) ಸರ್ವ ಜಗತ್ತಿನವರಿಗಿಂತ ನಿಮಗೆ ಶ್ರೇಷ್ಟತೆ ಪ್ರದಾನ ಮಾಡಿದವನು ಅಲ್ಲಾ ಹನೇ ಆಗಿದ್ದಾನಲ್ಲ?
Verse 141
وَإِذْ أَنجَيْنَـٰكُم مِّنْ ءَالِ فِرْعَوْنَ يَسُومُونَكُمْ سُوٓءَ ٱلْعَذَابِ ۖ يُقَتِّلُونَ أَبْنَآءَكُمْ وَيَسْتَحْيُونَ نِسَآءَكُمْ ۚ وَفِى ذَٰلِكُم بَلَآءٌ مِّن رَّبِّكُمْ عَظِيمٌ
Transliteration wa-idh anjaynākum min āli fir'ʿawna yasūmūnakum sūa l-ʿadhābi yuqattilūna abnāakum wayastaḥyūna nisāakum wafī dhālikum balāon min rabbikum ʿaẓīmun
Kannada ನಿಮ್ಮನ್ನು ಕಠಿಣವಾಗಿ ದಂಡಿಸುತ್ತಿದ್ದ ಫಿರ್‍ಔ ನನ ಕೂಟದಿಂದ ನಾವು ನಿಮ್ಮನ್ನು ರಕ್ಷಿಸಿದ ಸಂದರ್ಭ. ಅವರು ನಿಮ್ಮ ಗಂಡು ಮಕ್ಕಳನ್ನು ವಧಿಸುತ್ತಿದ್ದರು ಮತ್ತು ನಿಮ್ಮ ಹೆಣ್ಮಕ್ಕಳನ್ನು ಬದುಕಲು ಬಿಡುತ್ತಿದ್ದರು. ಅದರಲ್ಲಿ ನಿಮ್ಮ ಪ್ರಭುವಿನ ಕಡೆಯಿಂದ ನಿಮಗೊಂದು ದೊಡ್ಡ ಪರೀಕ್ಷೆ ಇತ್ತು.
Verse 142
۞ وَوَٰعَدْنَا مُوسَىٰ ثَلَـٰثِينَ لَيْلَةً وَأَتْمَمْنَـٰهَا بِعَشْرٍ فَتَمَّ مِيقَـٰتُ رَبِّهِۦٓ أَرْبَعِينَ لَيْلَةً ۚ وَقَالَ مُوسَىٰ لِأَخِيهِ هَـٰرُونَ ٱخْلُفْنِى فِى قَوْمِى وَأَصْلِحْ وَلَا تَتَّبِعْ سَبِيلَ ٱلْمُفْسِدِينَ
Transliteration wawāʿadnā mūsā thalāthīna laylatan wa-atmamnāhā biʿashrin fatamma mīqātu rabbihi arbaʿīna laylatan waqāla mūsā li-akhīhi hārūna ukh'luf'nī fī qawmī wa-aṣliḥ walā tattabiʿ sabīla l-muf'sidīna
Kannada ನಾವು ಮೂಸಾರವರಿಗೆ ಮೂವತ್ತು ರಾತ್ರಿಗಳ ವಾಗ್ದಾನವಿತ್ತೆವು. ಹತ್ತು ದಿನಗಳನ್ನೂ ಸೇರಿಸಿ ಅದನ್ನು ಪೂರ್ತಿ ಮಾಡಿದೆವು. ಹೀಗೆ ಅವರ ಪ್ರಭು ನಿಶ್ಚಯಿಸಿದ್ದ ನಲ್ವತ್ತು ರಾತ್ರಿಗಳ ಕಾಲಾ ವಧಿ ಪೂರ್ಣಗೊಂಡಿತು. ಮೂಸಾ (ಸಂಭಾಷಣೆಗೆ ಪರ್ವತದ ಕಡೆಗೆ ಹೋಗುವ ವೇಳೆ) ತಮ್ಮ ಸಹೋದರ ಹಾರೂನರೊಡನೆ, ‘ನನ್ನ ಪರವಾಗಿ ನೀನು ನನ್ನ ಜನಾಂಗದ ಪ್ರಾತಿನಿಧ್ಯ ವನ್ನು ವಹಿಸಿಕೊಳ್ಳಬೇಕು. ಒಳ್ಳೆಯ ಕಾರ್ಯ ವೆಸಗಬೇಕು ಕೇಡುಂಟು ಮಾಡುವವರ ಮಾರ್ಗವನ್ನು ಅನುಸರಿಸಬಾರದು’ ಎಂದರು.
Verse 143
وَلَمَّا جَآءَ مُوسَىٰ لِمِيقَـٰتِنَا وَكَلَّمَهُۥ رَبُّهُۥ قَالَ رَبِّ أَرِنِىٓ أَنظُرْ إِلَيْكَ ۚ قَالَ لَن تَرَىٰنِى وَلَـٰكِنِ ٱنظُرْ إِلَى ٱلْجَبَلِ فَإِنِ ٱسْتَقَرَّ مَكَانَهُۥ فَسَوْفَ تَرَىٰنِى ۚ فَلَمَّا تَجَلَّىٰ رَبُّهُۥ لِلْجَبَلِ جَعَلَهُۥ دَكًّا وَخَرَّ مُوسَىٰ صَعِقًا ۚ فَلَمَّآ أَفَاقَ قَالَ سُبْحَـٰنَكَ تُبْتُ إِلَيْكَ وَأَنَا۠ أَوَّلُ ٱلْمُؤْمِنِينَ
Transliteration walammā jāa mūsā limīqātinā wakallamahu rabbuhu qāla rabbi arinī anẓur ilayka qāla lan tarānī walākini unẓur ilā l-jabali fa-ini is'taqarra makānahu fasawfa tarānī falammā tajallā rabbuhu lil'jabali jaʿalahu dakkan wakharra mūsā ṣaʿiqan falammā afāqa qāla sub'ḥānaka tub'tu ilayka wa-anā awwalu l-mu'minīna
Kannada ನಮ್ಮ ನಿಶ್ಚಿತ ಸಮಯಕ್ಕೆ ಸರಿಯಾಗಿ ಅವರು ತಲಪಿದಾಗ ಅವರ ಪ್ರಭು ಅವರೊಡನೆ ಮಾತನಾಡಿದನು. ಅವರು, `ಓ ನನ್ನ ಪ್ರಭೂ! ನನಗೆ ನಿನ್ನ ದರ್ಶನ ನೀಡು. ನಿನ್ನನ್ನು ನಾನು ನೋಡುವಂತಾಗಲಿ’ ಎಂದು ಭಿನ್ನವಿಸಿದಾಗ, ಅಲ್ಲಾಹನು ‘ನೀನು ನನ್ನನ್ನು ನೋಡಲಾರೆ. ಆದರೆ ನೀನು ಆ ಪರ್ವತವನ್ನು ನೋಡು. ಅದು ತನ್ನ ಸ್ಥಾನದಲ್ಲಿ ಸ್ಥಿರವಾಗಿ ನಿಂತರೆ ನಂತರ ನೀನು ನನ್ನನ್ನು ನೋಡಬಲ್ಲೆ’ ಎಂದನು. ಹಾಗೆ ಅವರ ಪ್ರಭು ಪರ್ವತಕ್ಕೆ ದರ್ಶನ ನೀಡಿದಾಗ ಅದು ಧೂಳೀಪಟವಾಯಿತು. ಮೂಸಾ ಮೂರ್ಛೆ ತಪ್ಪಿ ಬಿದ್ದರು. ಬಂದಾಗ ಹೀಗೆಂದರು, ‘ನಿನ್ನ ಪರಮ ಪರಿಶುದ್ಧತೆಯನ್ನು ನಾನು ಕೊಂಡಾಡು ತ್ತಿದ್ದೇನೆ. ನಾನು ನಿನ್ನಲ್ಲಿ ಪಶ್ಚಾತ್ತಾಪ ಪಡುತ್ತೇನೆ ಮತ್ತು ಎಲ್ಲರಿಗಿಂತಲೂ ಮೊದಲು ವಿಶ್ವಾಸವಿಡು ವವನು ನಾನಾಗಿರುತ್ತೇನೆ’.
Verse 144
قَالَ يَـٰمُوسَىٰٓ إِنِّى ٱصْطَفَيْتُكَ عَلَى ٱلنَّاسِ بِرِسَـٰلَـٰتِى وَبِكَلَـٰمِى فَخُذْ مَآ ءَاتَيْتُكَ وَكُن مِّنَ ٱلشَّـٰكِرِينَ
Transliteration qāla yāmūsā innī iṣ'ṭafaytuka ʿalā l-nāsi birisālātī wabikalāmī fakhudh mā ātaytuka wakun mina l-shākirīna
Kannada ಅಲ್ಲಾಹನು `ಓ ಮೂಸಾ, ನನ್ನ ಸಂದೇಶ ರವಾನೆಗೂ ನನ್ನೊಂದಿಗೆ ನೇರ ಸಂಭಾಷಣೆಗೂ ಎಲ್ಲರಿಗಿಂತಲೂ ಮಿಗಿಲಾಗಿ ನಿಮ್ಮನ್ನು ಆರಿಸಿ ಕೊಂಡಿದ್ದೇನೆ. ಆದ ಕಾರಣ ನಾವು ನಿಮಗೆ ಕೊಟ್ಟುದನ್ನು ಸ್ವೀಕರಿಸಿರಿ. ಕೃತಜ್ಞರ ಸಾಲಿಗೆ ಸೇರಿರಿ’ ಎಂದನು.
Verse 145
وَكَتَبْنَا لَهُۥ فِى ٱلْأَلْوَاحِ مِن كُلِّ شَىْءٍ مَّوْعِظَةً وَتَفْصِيلًا لِّكُلِّ شَىْءٍ فَخُذْهَا بِقُوَّةٍ وَأْمُرْ قَوْمَكَ يَأْخُذُوا۟ بِأَحْسَنِهَا ۚ سَأُو۟رِيكُمْ دَارَ ٱلْفَـٰسِقِينَ
Transliteration wakatabnā lahu fī l-alwāḥi min kulli shayin mawʿiẓatan watafṣīlan likulli shayin fakhudh'hā biquwwatin wamur qawmaka yakhudhū bi-aḥsanihā sa-urīkum dāra l-fāsiqīna
Kannada ಎಲ್ಲ ಕಾರ್ಯಗಳಿಗೆ ಸಂಬಂಧಿಸಿದ ತತ್ವೋಪ ದೇಶ ಗಳನ್ನೂ, ಎಲ್ಲ ವಿಚಾರಗಳಿಗೆ ಕುರಿತಾದ ವಿಷದೀಕರಣಗಳನ್ನೂ ಅವರಿಗೆ ನಾವು ಫಲಕಗಳ ಮೇಲೆ ಬರೆದುಕೊಟ್ಟೆವು. ಮತ್ತು ಹೀಗೆಂದೆವು: ಈ ಮಾರ್ಗದರ್ಶನಗಳನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ ಮತ್ತು ಇವುಗಳ ಅತ್ಯಂತ ಉತ್ತಮ ಕಾರ್ಯಗಳನ್ನು ಸ್ವೀಕರಿಸುವಂತೆ ನಿಮ್ಮ ಜನಾಂಗಕ್ಕೆ ಅಪ್ಪಣೆ ಕೊಡಿರಿ. ಧಿಕ್ಕಾರಿಗಳ ನಿವಾಸವನ್ನು ಸದ್ಯವೇ ನಿಮಗೆ ತೋರಿಸಿಕೊಡುವೆನು .
Verse 146
سَأَصْرِفُ عَنْ ءَايَـٰتِىَ ٱلَّذِينَ يَتَكَبَّرُونَ فِى ٱلْأَرْضِ بِغَيْرِ ٱلْحَقِّ وَإِن يَرَوْا۟ كُلَّ ءَايَةٍ لَّا يُؤْمِنُوا۟ بِهَا وَإِن يَرَوْا۟ سَبِيلَ ٱلرُّشْدِ لَا يَتَّخِذُوهُ سَبِيلًا وَإِن يَرَوْا۟ سَبِيلَ ٱلْغَىِّ يَتَّخِذُوهُ سَبِيلًا ۚ ذَٰلِكَ بِأَنَّهُمْ كَذَّبُوا۟ بِـَٔايَـٰتِنَا وَكَانُوا۟ عَنْهَا غَـٰفِلِينَ
Transliteration sa-aṣrifu ʿan āyātiya alladhīna yatakabbarūna fī l-arḍi bighayri l-ḥaqi wa-in yaraw kulla āyatin lā yu'minū bihā wa-in yaraw sabīla l-rush'di lā yattakhidhūhu sabīlan wa-in yaraw sabīla l-ghayi yattakhidhūhu sabīlan dhālika bi-annahum kadhabū biāyātinā wakānū ʿanhā ghāfilīna
Kannada ಅನ್ಯಾಯವಾಗಿ ಭೂಮಿಯಲ್ಲಿ ಅಹಂಕಾರ ಪಡುವವರನ್ನು ನನ್ನ ನಿದರ್ಶನಗಳಿಂದ ತಿರುಗಿಸಿಬಿಡುವೆನು. ಅವರು ಎಲ್ಲ ನಿದರ್ಶನಗಳನ್ನು ಕಂಡರೂ ಅವುಗಳಲ್ಲಿ ವಿಶ್ವಾಸವಿಡು ವವರಲ್ಲ. ಅವರು ನೇರ ಮಾರ್ಗವನ್ನು ಕಂಡರೂ ಅದನ್ನವರು ತಮ್ಮ ಮಾರ್ಗವನ್ನಾಗಿ ಸ್ವೀಕರಿಸಲಾರರು ಮತ್ತು ವಾಮಮಾರ್ಗವನ್ನು ಕಂಡರೆ ಅದನ್ನು ಮಾರ್ಗವಾಗಿ ಸ್ವೀಕರಿಸು ವರು. ಹೀಗೆ ಅವರನ್ನು ತಿರುಗಿಸಿ ಬಿಟ್ಟದ್ದು ಅವರು ನಮ್ಮ ನಿದರ್ಶನಗಳನ್ನು ನಿಷೇಧಿಸಿದ ಮತ್ತು ಅವುಗಳ ಬಗ್ಗೆ ಅಲಕ್ಷ್ಯರಾಗಿದ್ದ ಕಾರಣದಿಂದಾಗಿದೆ.
Verse 147
وَٱلَّذِينَ كَذَّبُوا۟ بِـَٔايَـٰتِنَا وَلِقَآءِ ٱلْـَٔاخِرَةِ حَبِطَتْ أَعْمَـٰلُهُمْ ۚ هَلْ يُجْزَوْنَ إِلَّا مَا كَانُوا۟ يَعْمَلُونَ
Transliteration wa-alladhīna kadhabū biāyātinā waliqāi l-ākhirati ḥabiṭat aʿmāluhum hal yuj'zawna illā mā kānū yaʿmalūna
Kannada ನಮ್ಮ ನಿದರ್ಶನಗಳನ್ನೂ ಪರಲೋಕದ ಭೇಟಿಯನ್ನೂ ನಿಷೇಧಿಸಿದವರ ಕರ್ಮಗಳು ನಿಷ್ಫಲ ವಾಗುವುವು. ಅವರ ಕರ್ಮಫಲವಲ್ಲದೆ ಬೇರೆ ಫಲ ಅವರಿಗೆ ನೀಡಲಾಗುವುದಿಲ್ಲ.
Verse 148
وَٱتَّخَذَ قَوْمُ مُوسَىٰ مِنۢ بَعْدِهِۦ مِنْ حُلِيِّهِمْ عِجْلًا جَسَدًا لَّهُۥ خُوَارٌ ۚ أَلَمْ يَرَوْا۟ أَنَّهُۥ لَا يُكَلِّمُهُمْ وَلَا يَهْدِيهِمْ سَبِيلًا ۘ ٱتَّخَذُوهُ وَكَانُوا۟ ظَـٰلِمِينَ
Transliteration wa-ittakhadha qawmu mūsā min baʿdihi min ḥuliyyihim ʿij'lan jasadan lahu khuwārun alam yaraw annahu lā yukallimuhum walā yahdīhim sabīlan ittakhadhūhu wakānū ẓālimīna
Kannada ಮೂಸಾರವರು ಹೋದ ನಂತರ ಜನಾಂಗದ ವರು ತಮ್ಮ ಆಭರಣಗಳಿಂದ ತಯಾರಿಸಿದ ಸ್ವರ ಹೊರಡಿಸುವ ಒಂದು ಕರುವಿನ ದೇಹವನ್ನು ದೇವರನ್ನಾಗಿ ಮಾಡಿದರು. ಅದು ಅವರೊಡನೆ ಮಾತಾಡುವುದಿಲ್ಲವೆಂದೂ ಮಾರ್ಗದರ್ಶನ ಮಾಡುವುದಿಲ್ಲವೆಂದೂ ಅವರು ಕಾಣದಾದರೇ? ಆದರೂ ಅವರು ಅದನ್ನು ಆರಾಧ್ಯವನ್ನಾಗಿ ಮಾಡಿಕೊಂಡರು. ಹಾಗೆ ಅವರು ಅಕ್ರಮಿ ಗಳಾದರು.
Verse 149
وَلَمَّا سُقِطَ فِىٓ أَيْدِيهِمْ وَرَأَوْا۟ أَنَّهُمْ قَدْ ضَلُّوا۟ قَالُوا۟ لَئِن لَّمْ يَرْحَمْنَا رَبُّنَا وَيَغْفِرْ لَنَا لَنَكُونَنَّ مِنَ ٱلْخَـٰسِرِينَ
Transliteration walammā suqiṭa fī aydīhim wara-aw annahum qad ḍallū qālū la-in lam yarḥamnā rabbunā wayaghfir lanā lanakūnanna mina l-khāsirīna
Kannada ಅನಂತರ ತಾವು ದಾರಿ ತಪ್ಪಿದ್ದೇವೆನ್ನುವುದು ಅವರಿಗೆ ಮನವರಿಕೆಯಾಗಿ ದುಃಖಿಸಬೇಕಾಗಿ ಬಂದ ಸಂದರ್ಭದಲ್ಲಿ ಅವರು “ನಮ್ಮ ಪ್ರಭು ನಮ್ಮ ಮೇಲೆ ಕೃಪೆ ತೋರದಿದ್ದರೆ ಮತ್ತು ನಮ್ಮನ್ನು ಕ್ಷಮಿಸದಿದ್ದರೆ ನಾವು ಹತಭಾಗ್ಯರ ಸಾಲಿಗೆ ಸೇರುವೆವು” ಎಂದು ಹೇಳತೊಡ ಗಿದರು.
Verse 150
وَلَمَّا رَجَعَ مُوسَىٰٓ إِلَىٰ قَوْمِهِۦ غَضْبَـٰنَ أَسِفًا قَالَ بِئْسَمَا خَلَفْتُمُونِى مِنۢ بَعْدِىٓ ۖ أَعَجِلْتُمْ أَمْرَ رَبِّكُمْ ۖ وَأَلْقَى ٱلْأَلْوَاحَ وَأَخَذَ بِرَأْسِ أَخِيهِ يَجُرُّهُۥٓ إِلَيْهِ ۚ قَالَ ٱبْنَ أُمَّ إِنَّ ٱلْقَوْمَ ٱسْتَضْعَفُونِى وَكَادُوا۟ يَقْتُلُونَنِى فَلَا تُشْمِتْ بِىَ ٱلْأَعْدَآءَ وَلَا تَجْعَلْنِى مَعَ ٱلْقَوْمِ ٱلظَّـٰلِمِينَ
Transliteration walammā rajaʿa mūsā ilā qawmihi ghaḍbāna asifan qāla bi'samā khalaftumūnī min baʿdī aʿajil'tum amra rabbikum wa-alqā l-alwāḥa wa-akhadha birasi akhīhi yajurruhu ilayhi qāla ib'na umma inna l-qawma is'taḍʿafūnī wakādū yaqtulūnanī falā tush'mit biya l-aʿdāa walā tajʿalnī maʿa l-qawmi l-ẓālimīna
Kannada ಕುಪಿತರಾಗಿಯೂ, ದುಃಖಿತರಾಗಿಯೂ ಹಿಂದಿ ರುಗಿದ ಮೂಸಾರವರು; `ನನ್ನ ಅನುಪಸ್ಥಿತಿಯಲ್ಲಿ ನೀವು ಅತ್ಯಂತ ಕೆಟ್ಟ ರೀತಿಯಲ್ಲಿ ನನ್ನನ್ನು ಪ್ರತಿನಿಧೀಕರಿಸಿದಿರಿ! ನಿಮ್ಮ ಪ್ರಭುವಿನ ಆಜ್ಞೆಗೆ ಕಾಯದೆ ಅವಸರಪಟ್ಟಿರಲ್ಲವೇ?’ ಎಂದರು. ಫಲಕಗಳನ್ನು ಎಸೆದು ಬಿಟ್ಟರು ಮತ್ತು ತಮ್ಮ ಸಹೋದರನ ತಲೆಗೂದಲನ್ನು ಹಿಡಿದು ತನ್ನೆಡೆಗೆ ಎಳೆದರು. ಹಾರೂನರು “ಓ ನನ್ನ ಮಾತೆಯ ಪುತ್ರನೇ, ಇವರು ನನ್ನನ್ನು ದುರ್ಬಲನನ್ನಾಗಿ ಮಾಡಿಬಿಟ್ಟರು. ನನ್ನನ್ನು ಕೊಂದು ಬಿಡುವುದರಲ್ಲಿದ್ದರು. ಆದ್ದರಿಂದ ಶತ್ರುಗಳಿಗೆ ನನ್ನ ಮೇಲೆ ನಗುವ ಸಂದರ್ಭ ಕೊಡಬೇಡ ಮತ್ತು ಅಕ್ರಮಿ ಜನಾಂಗದೊಂದಿಗೆ ನನ್ನನ್ನು ಸೇರಿಸಬೇಡ” ಎಂದರು .
Verse 151
قَالَ رَبِّ ٱغْفِرْ لِى وَلِأَخِى وَأَدْخِلْنَا فِى رَحْمَتِكَ ۖ وَأَنتَ أَرْحَمُ ٱلرَّٰحِمِينَ
Transliteration qāla rabbi igh'fir lī wali-akhī wa-adkhil'nā fī raḥmatika wa-anta arḥamu l-rāḥimīna
Kannada ಆಗ ಮೂಸಾ! ‘ಓ ನನ್ನ ಪ್ರಭೂ, ನನ್ನನ್ನೂ ನನ್ನ ಸಹೋದರನನ್ನೂ ಕ್ಷಮಿಸು. ನಿನ್ನ ಕರುಣಾ ಕಟಾಕ್ಷದಲ್ಲಿ ನಮ್ಮನ್ನು ಸೇರಿಸು. ನೀನು ಕರುಣಾಳುಗಳಲ್ಲಿ ಅತಿ ಶ್ರೇಷ್ಟ ಕರುಣಾಳು’ ಎಂದರು.
Verse 152
إِنَّ ٱلَّذِينَ ٱتَّخَذُوا۟ ٱلْعِجْلَ سَيَنَالُهُمْ غَضَبٌ مِّن رَّبِّهِمْ وَذِلَّةٌ فِى ٱلْحَيَوٰةِ ٱلدُّنْيَا ۚ وَكَذَٰلِكَ نَجْزِى ٱلْمُفْتَرِينَ
Transliteration inna alladhīna ittakhadhū l-ʿij'la sayanāluhum ghaḍabun min rabbihim wadhillatun fī l-ḥayati l-dun'yā wakadhālika najzī l-muf'tarīna
Kannada ಪಶುವಿನ ಕರುವನ್ನು ಆರಾಧ್ಯನಾಗಿಸಿದವರಿಗೆ ಅವರ ಪ್ರಭುವಿನ ಕ್ರೋಧ ತಟ್ಟುವುದು. ಐಹಿಕ ಜೀವನದಲ್ಲಿ ನಿಂದೆ ಬಾಧಿಸುವುದು. ಅದೇ ರೀತಿ ಸುಳ್ಳಾರೋಪಗಾರರನ್ನು ನಾವು ಶಿಕ್ಷಿಸುವೆವು .
Verse 153
وَٱلَّذِينَ عَمِلُوا۟ ٱلسَّيِّـَٔاتِ ثُمَّ تَابُوا۟ مِنۢ بَعْدِهَا وَءَامَنُوٓا۟ إِنَّ رَبَّكَ مِنۢ بَعْدِهَا لَغَفُورٌ رَّحِيمٌ
Transliteration wa-alladhīna ʿamilū l-sayiāti thumma tābū min baʿdihā waāmanū inna rabbaka min baʿdihā laghafūrun raḥīmun
Kannada ದುಷ್ಕರ್ಮಗಳನ್ನೆಸಗಿ ಅನಂತರ ಅದರಿಂದ ಪಶ್ಚಾತ್ತಾಪಪಟ್ಟು (ಅಲ್ಲಾಹನಲ್ಲಿ) ವಿಶ್ವಾಸ ಸ್ವೀಕರಿಸಿದವರು. ನಿಶ್ಚಯವಾಗಿಯೂ ಅದರ (ಪಶ್ಚಾತ್ತಾಪದ) ಬಳಿಕ ನಿನ್ನ ಪ್ರಭು ಕ್ಷಮಿಸುವವನೂ ಕರುಣಾಮಯಿಯೂ ಆಗಿರುತ್ತಾನೆ.
Verse 154
وَلَمَّا سَكَتَ عَن مُّوسَى ٱلْغَضَبُ أَخَذَ ٱلْأَلْوَاحَ ۖ وَفِى نُسْخَتِهَا هُدًى وَرَحْمَةٌ لِّلَّذِينَ هُمْ لِرَبِّهِمْ يَرْهَبُونَ
Transliteration walammā sakata ʿan mūsā l-ghaḍabu akhadha l-alwāḥa wafī nus'khatihā hudan waraḥmatun lilladhīna hum lirabbihim yarhabūna
Kannada ಮೂಸಾರವರ ಕೋಪ ತಣಿದಾಗ ಅವರು ಆ ಫಲಕಗಳನ್ನು ಎತ್ತಿಕೊಂಡರು. ತಮ್ಮ ಪ್ರಭುವನ್ನು ಭಯಪಡುವವರಿಗೆ ಅದರಲ್ಲಿ ಮಾರ್ಗದರ್ಶನ ಮತ್ತು ಅನುಗ್ರಹ ಲಿಖಿತ ಗೊಂಡಿತ್ತು.
Verse 155
وَٱخْتَارَ مُوسَىٰ قَوْمَهُۥ سَبْعِينَ رَجُلًا لِّمِيقَـٰتِنَا ۖ فَلَمَّآ أَخَذَتْهُمُ ٱلرَّجْفَةُ قَالَ رَبِّ لَوْ شِئْتَ أَهْلَكْتَهُم مِّن قَبْلُ وَإِيَّـٰىَ ۖ أَتُهْلِكُنَا بِمَا فَعَلَ ٱلسُّفَهَآءُ مِنَّآ ۖ إِنْ هِىَ إِلَّا فِتْنَتُكَ تُضِلُّ بِهَا مَن تَشَآءُ وَتَهْدِى مَن تَشَآءُ ۖ أَنتَ وَلِيُّنَا فَٱغْفِرْ لَنَا وَٱرْحَمْنَا ۖ وَأَنتَ خَيْرُ ٱلْغَـٰفِرِينَ
Transliteration wa-ikh'tāra mūsā qawmahu sabʿīna rajulan limīqātinā falammā akhadhathumu l-rajfatu qāla rabbi law shi'ta ahlaktahum min qablu wa-iyyāya atuh'likunā bimā faʿala l-sufahāu minnā in hiya illā fit'natuka tuḍillu bihā man tashāu watahdī man tashāu anta waliyyunā fa-igh'fir lanā wa-ir'ḥamnā wa-anta khayru l-ghāfirīna
Kannada ನಮ್ಮ ನಿಶ್ಚಿತ ಸಮಯಕ್ಕೆ ಸರಿಯಾಗಿ ತಮ್ಮ ಜನಾಂಗದ ಎಪ್ಪತ್ತು ಮಂದಿಯನ್ನು ಮೂಸಾ ಆರಿಸಿಕೊಂಡರು . ಒಂದು ಪ್ರಚಂಡ ಭೂಕಂಪವು ಅವರನ್ನು ಬಾಧಿಸಿದಾಗ ಮೂಸಾರು ಹೀಗೆಂದರು; “ಓ ನನ್ನ ಪ್ರಭೂ, ನೀನಿಚ್ಚಿಸುತ್ತಿದ್ದರೆ ಇವರನ್ನೂ ನನ್ನನ್ನೂ ಈ ಮೊದಲೇ ನಾಶಪಡಿಸಬಹುದಿತ್ತು. ನಮ್ಮ ಪೈಕಿ ಕೆಲವು ತಿಳಿಗೇಡಿಗಳು ಮಾಡಿದ್ದ ಅಪರಾಧಕ್ಕಾಗಿ ನಮ್ಮನ್ನು ನಾಶಗೊಳಿಸುವೆಯಾ? ಇದು ನಿನ್ನ ಪರೀಕ್ಷೆಯೇ ಸರಿ. ನೀನು ಇದರ ಮೂಲಕ ನಿನಗಿಷ್ಟ ಬಂದವರನ್ನು ಪಥಭ್ರಷ್ಟಗೊಳಿಸುತ್ತೀ ಮತ್ತು ನಿನಗಿಷ್ಟ ಬಂದವರಿಗೆ ಸನ್ಮಾರ್ಗದರ್ಶನ ನೀಡುತ್ತೀ. ನೀನೇ ನಮ್ಮ ಉಸ್ತುವಾರಿದಾರನು. ನಮ್ಮನ್ನು ಕ್ಷಮಿಸು. ನಮಗೆ ಕೃಪೆದೋರು, ನೀನು ಕ್ಷಮಿಸುವವರಲ್ಲಿ ಅತಿ ಶ್ರೇಷ್ಠನಾಗಿರುವೆ.
Verse 156
۞ وَٱكْتُبْ لَنَا فِى هَـٰذِهِ ٱلدُّنْيَا حَسَنَةً وَفِى ٱلْـَٔاخِرَةِ إِنَّا هُدْنَآ إِلَيْكَ ۚ قَالَ عَذَابِىٓ أُصِيبُ بِهِۦ مَنْ أَشَآءُ ۖ وَرَحْمَتِى وَسِعَتْ كُلَّ شَىْءٍ ۚ فَسَأَكْتُبُهَا لِلَّذِينَ يَتَّقُونَ وَيُؤْتُونَ ٱلزَّكَوٰةَ وَٱلَّذِينَ هُم بِـَٔايَـٰتِنَا يُؤْمِنُونَ
Transliteration wa-uk'tub lanā fī hādhihi l-dun'yā ḥasanatan wafī l-ākhirati innā hud'nā ilayka qāla ʿadhābī uṣību bihi man ashāu waraḥmatī wasiʿat kulla shayin fasa-aktubuhā lilladhīna yattaqūna wayu'tūna l-zakata wa-alladhīna hum biāyātinā yu'minūna
Kannada ಈ ಇಹಲೋಕದಲ್ಲೂ ಪರಲೋಕದಲ್ಲೂ ನಮಗೆ ಒಳಿತನ್ನು ಲಿಖಿತಗೊಳಿಸು. ನಾವು ನಿನ್ನ ಕಡೆಗೆ ಮರಳಿದ್ದೇವೆ”. ಅವನು (ಅಲ್ಲಾಹು) ಹೇಳಿದನು; ನನ್ನ ಶಿಕ್ಷೆಯನ್ನು ನಾನಿಚ್ಚಿಸಿ ದವರಿಗೆ ತಗಲಿಸುತ್ತೇನೆ. ಆದರೆ ನನ್ನ ಕರುಣೆಯು ಸರ್ವ ವಸ್ತುವನ್ನೂ ವ್ಯಾಪಿಸಿ ಕೊಂಡಿದೆ . (ಅಲ್ಲಾಹನನ್ನು) ಭಯಪಟ್ಟು ಜೀವಿಸುವ, ಝಕಾತ್ ಕೊಡುವ ಮತ್ತು ನನ್ನ ನಿದರ್ಶನಗಳ ಮೇಲೆ ವಿಶ್ವಾಸ ವಿರಿಸುವ ವರಿಗಾಗಿ (ಪರಲೋಕದಲ್ಲಿ) ಆ ಕರುಣೆಯನ್ನು ನಾನು ಲಿಖಿತಗೊಳಿಸುವೆನು.
Verse 157
ٱلَّذِينَ يَتَّبِعُونَ ٱلرَّسُولَ ٱلنَّبِىَّ ٱلْأُمِّىَّ ٱلَّذِى يَجِدُونَهُۥ مَكْتُوبًا عِندَهُمْ فِى ٱلتَّوْرَىٰةِ وَٱلْإِنجِيلِ يَأْمُرُهُم بِٱلْمَعْرُوفِ وَيَنْهَىٰهُمْ عَنِ ٱلْمُنكَرِ وَيُحِلُّ لَهُمُ ٱلطَّيِّبَـٰتِ وَيُحَرِّمُ عَلَيْهِمُ ٱلْخَبَـٰٓئِثَ وَيَضَعُ عَنْهُمْ إِصْرَهُمْ وَٱلْأَغْلَـٰلَ ٱلَّتِى كَانَتْ عَلَيْهِمْ ۚ فَٱلَّذِينَ ءَامَنُوا۟ بِهِۦ وَعَزَّرُوهُ وَنَصَرُوهُ وَٱتَّبَعُوا۟ ٱلنُّورَ ٱلَّذِىٓ أُنزِلَ مَعَهُۥٓ ۙ أُو۟لَـٰٓئِكَ هُمُ ٱلْمُفْلِحُونَ
Transliteration alladhīna yattabiʿūna l-rasūla l-nabiya l-umiya alladhī yajidūnahu maktūban ʿindahum fī l-tawrāti wal-injīli yamuruhum bil-maʿrūfi wayanhāhum ʿani l-munkari wayuḥillu lahumu l-ṭayibāti wayuḥarrimu ʿalayhimu l-khabāitha wayaḍaʿu ʿanhum iṣ'rahum wal-aghlāla allatī kānat ʿalayhim fa-alladhīna āmanū bihi waʿazzarūhu wanaṣarūhu wa-ittabaʿū l-nūra alladhī unzila maʿahu ulāika humu l-muf'liḥūna
Kannada ಅವರೆಂದರೆ, ತಮ್ಮ ಬಳಿಯಲ್ಲಿರುವ (ಪ್ರವಾದಿ ಮಹಿಮೆಯನ್ನು) ಬರೆಯಲಾದ `ತೌರಾತ್' ಮತ್ತು `ಇನ್‍ಜೀಲ್'ಗಳಲ್ಲಿ ಪ್ರಸ್ತಾಪಿಸಲ್ಪಟ್ಟಿರುವ ದೇವದೂತ ನಿರಕ್ಷರಿ ಪ್ರವಾದಿಯ ಅನುಸರಣೆಯನ್ನು ಸ್ವೀಕರಿಸಿ ದವರು . ಇವರು ಅವರಿಗೆ ಸತ್ಕರ್ಮದ ಆದೇಶ ನೀಡುತ್ತಾರೆ ಮತ್ತು ದುಷ್ಕøತ್ಯದಿಂದ ತಡೆಯುತ್ತಾರೆ. ಅವರಿಗೆ ಶುದ್ಧ ವಸ್ತುಗಳನ್ನು ಅನುವದನೀಯಗೊಳಿಸುತ್ತಾರೆ ಮತ್ತು ಅಶುದ್ಧ ವಸ್ತುಗಳನ್ನು ನಿಷಿದ್ಧಗೊಳಿಸುತ್ತಾರೆ. ಅವರ ಮೇಲೆ ಹೇರಲಾದ ಹೊರೆಗಳನ್ನು ಇಳಿಸುತ್ತಾರೆ . ಅವರಿಗೆ ಬಿಗಿಯಲಾದ ಸಂಕೋಲೆಗಳನ್ನು ಬಿಡಿಸುತ್ತಾರೆ. ಆದುದರಿಂದ ಇವರ ಮೇಲೆ ವಿಶ್ವಾಸವಿರಿಸುವವರು, ಇವರನ್ನು ಗೌರವಿಸು ವವರು, ಇವರಿಗೆ ಸಹಾಯ ಮಾಡುವವರು ಮತ್ತು ಇವರೊಂದಿಗೆ ಇಳಿಸಲಾದ ಪ್ರಕಾಶ ವನ್ನು (ಖುರ್‍ಆನನ್ನು) ಅನುಸರಿಸುವವರು ಯಾರೋ ಅವರೇ ಜಯಜೀತರು.
Verse 158
قُلْ يَـٰٓأَيُّهَا ٱلنَّاسُ إِنِّى رَسُولُ ٱللَّهِ إِلَيْكُمْ جَمِيعًا ٱلَّذِى لَهُۥ مُلْكُ ٱلسَّمَـٰوَٰتِ وَٱلْأَرْضِ ۖ لَآ إِلَـٰهَ إِلَّا هُوَ يُحْىِۦ وَيُمِيتُ ۖ فَـَٔامِنُوا۟ بِٱللَّهِ وَرَسُولِهِ ٱلنَّبِىِّ ٱلْأُمِّىِّ ٱلَّذِى يُؤْمِنُ بِٱللَّهِ وَكَلِمَـٰتِهِۦ وَٱتَّبِعُوهُ لَعَلَّكُمْ تَهْتَدُونَ
Transliteration qul yāayyuhā l-nāsu innī rasūlu l-lahi ilaykum jamīʿan alladhī lahu mul'ku l-samāwāti wal-arḍi lā ilāha illā huwa yuḥ'yī wayumītu faāminū bil-lahi warasūlihi l-nabiyi l-umiyi alladhī yu'minu bil-lahi wakalimātihi wa-ittabiʿūhu laʿallakum tahtadūna
Kannada (ಓ ನಬಿಯರೇ,) ಹೇಳಿರಿ ; `ಓ ಜನರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ-ಆಕಾಶಗಳ ಆಧಿಪತ್ಯ ಹೊಂದಿರುವ ಅಲ್ಲಾಹನ ದೂತ ನಾಗಿರುತ್ತೇನೆ . ಅವನ ಹೊರತು ಆರಾಧ್ಯ ನಿಲ್ಲ. ಅವನೇ ಜೀವನ ನೀಡುವವನು. ಅವನೇ ಮರಣ ಕೊಡುವವನು. ಹಾಗಾಗಿ ಅಲ್ಲಾಹ ನಲ್ಲೂ, ಮತ್ತು ಅಲ್ಲಾಹು ಹಾಗೂ ಅವನ ವಚ ನಗಳಲ್ಲಿ ವಿಶ್ವಾಸವಿರಿಸಿದ ನಿರಕ್ಷರಿ ಪ್ರವಾದಿ ಯಾಗಿರುವ ಅವನ ಸಂದೇಶವಾಹಕರಲ್ಲೂ ನೀವು ವಿಶ್ವಾಸವಿರಿಸಿರಿ ಮತ್ತು ಅವರನ್ನು ಅನು ಸರಿಸಿರಿ. ನಿಮಗೆ ಸನ್ಮಾರ್ಗ ಪ್ರಾಪ್ತಿಯಾಗುವುದು.
Verse 159
وَمِن قَوْمِ مُوسَىٰٓ أُمَّةٌ يَهْدُونَ بِٱلْحَقِّ وَبِهِۦ يَعْدِلُونَ
Transliteration wamin qawmi mūsā ummatun yahdūna bil-ḥaqi wabihi yaʿdilūna
Kannada ಸತ್ಯಾನುಸಾರ ಮಾರ್ಗದರ್ಶನಗೈಯುತ್ತಲೂ, ಅದಕ್ಕನುಸರಿಸಿ ನೀತಿ ಪಾಲಿಸುತ್ತಲೂ ಇರುವ ಒಂದು ತಂಡ ಮೂಸಾ (ನಬಿಯವ)ರ ಜನ ಸಮುದಾಯದಲ್ಲಿದೆ.
Verse 160
وَقَطَّعْنَـٰهُمُ ٱثْنَتَىْ عَشْرَةَ أَسْبَاطًا أُمَمًا ۚ وَأَوْحَيْنَآ إِلَىٰ مُوسَىٰٓ إِذِ ٱسْتَسْقَىٰهُ قَوْمُهُۥٓ أَنِ ٱضْرِب بِّعَصَاكَ ٱلْحَجَرَ ۖ فَٱنۢبَجَسَتْ مِنْهُ ٱثْنَتَا عَشْرَةَ عَيْنًا ۖ قَدْ عَلِمَ كُلُّ أُنَاسٍ مَّشْرَبَهُمْ ۚ وَظَلَّلْنَا عَلَيْهِمُ ٱلْغَمَـٰمَ وَأَنزَلْنَا عَلَيْهِمُ ٱلْمَنَّ وَٱلسَّلْوَىٰ ۖ كُلُوا۟ مِن طَيِّبَـٰتِ مَا رَزَقْنَـٰكُمْ ۚ وَمَا ظَلَمُونَا وَلَـٰكِن كَانُوٓا۟ أَنفُسَهُمْ يَظْلِمُونَ
Transliteration waqaṭṭaʿnāhumu ith'natay ʿashrata asbāṭan umaman wa-awḥaynā ilā mūsā idhi is'tasqāhu qawmuhu ani iḍ'rib biʿaṣāka l-ḥajara fa-inbajasat min'hu ith'natā ʿashrata ʿaynan qad ʿalima kullu unāsin mashrabahum waẓallalnā ʿalayhimu l-ghamāma wa-anzalnā ʿalayhimu l-mana wal-salwā kulū min ṭayyibāti mā razaqnākum wamā ẓalamūnā walākin kānū anfusahum yaẓlimūna
Kannada ನಾವು ಆ ಜನಾಂಗವನ್ನು ಹನ್ನೆರಡು ಗೋತ್ರ ಗಳಾಗಿ ವಿಭಾಗಿಸಿ, ಪಂಗಡಗಳಾಗಿ ರೂಪಿಸಿದ್ದೆವು. ಆ ಜನಾಂಗವು ಮೂಸಾರೊಡನೆ ಕುಡಿಯಲು ನೀರು ಕೇಳಿದಾಗ ಬಂಡೆಯ ಮೇಲೆ ತಮ್ಮ ದಂಡದಿಂದ ಹೊಡೆಯುವಂತೆ ನಾವು ದಿವ್ಯ ಸಂದೇಶ ನೀಡಿದೆವು. ಆ ಪ್ರಕಾರ ಆ ಬಂಡೆಯಿಂದ ಹನ್ನೆರಡು ಚಿಲುಮೆಗಳು ಉಕ್ಕಿ ಹರಿದವು. ಪ್ರತಿಯೊಂದು ಪಂಗಡವು ನೀರು ಪಡೆಯಬೇಕಾದ ಸ್ಥಳವನ್ನು ಅರಿತು ಕೊಂಡಿತು. ನಾವು ಅವರ ಮೇಲೆ ಮೋಡದ ನೆರಳನ್ನು ನೀಡಿದೆವು. ಅವರಿಗೆ `ಮನ್ನ್' (ಫಲಾಹಾರ) ಮತ್ತು `ಸಲ್ವಾ' (ಕಾಡಪಕ್ಷಿ ಮಾಂಸ) ಇಳಿಸಿದೆವು. ನಾವು ನಿಮಗೆ ದಯಪಾಲಿಸಿದ ಶುದ್ಧ ವಸ್ತುಗಳನ್ನು ಉಣ್ಣಿರಿ ಎಂದೆವು. ಅವರು ನಮ್ಮನ್ನು ದ್ರೋಹಿಸಲಿಲ್ಲ. ನಿಜವಾಗಿ ಅವರು ತಮ್ಮನ್ನೇ ದ್ರೋಹಿಸುವವ ರಾಗಿದ್ದರು.
Verse 161
وَإِذْ قِيلَ لَهُمُ ٱسْكُنُوا۟ هَـٰذِهِ ٱلْقَرْيَةَ وَكُلُوا۟ مِنْهَا حَيْثُ شِئْتُمْ وَقُولُوا۟ حِطَّةٌ وَٱدْخُلُوا۟ ٱلْبَابَ سُجَّدًا نَّغْفِرْ لَكُمْ خَطِيٓـَٔـٰتِكُمْ ۚ سَنَزِيدُ ٱلْمُحْسِنِينَ
Transliteration wa-idh qīla lahumu us'kunū hādhihi l-qaryata wakulū min'hā ḥaythu shi'tum waqūlū ḥiṭṭatun wa-ud'khulū l-bāba sujjadan naghfir lakum khaṭīātikum sanazīdu l-muḥ'sinīna
Kannada ನೀವು ಈ ಪಟ್ಟಣದಲ್ಲಿ ವಾಸಿಸಿರಿ; ನೀವು ಬಯಸುವ ಕಡೆಯಿಂದ ಆಹಾರ ಪಡೆಯಿರಿ ಮತ್ತು `ಹಿತ್ತಃ' (ಪಾಪ ಮುಕ್ತಿ) ಎನ್ನುತ್ತ ಪಟ್ಟಣದ ದ್ವಾರದೊಳಗೆ ಶಿರಬಾಗುತ್ತ ಪ್ರವೇಶಿಸಿರಿ, ನಾವು ನಿಮ್ಮ ಅಪರಾಧಗಳನ್ನು ಕ್ಷಮಿಸುವೆವು ಮತ್ತು ಸದಾಚಾರಿಗಳಿಗೆ ಇನ್ನಷ್ಟು ಪ್ರತಿಫಲವನ್ನು ಹೆಚ್ಚಿಸಿಕೊಡುವೆವು ಎಂದು ಅವರೊಡನೆ ಹೇಳಿದ್ದ ಸಂದರ್ಭವನ್ನು ಸ್ಮರಿಸಿರಿ.
Verse 162
فَبَدَّلَ ٱلَّذِينَ ظَلَمُوا۟ مِنْهُمْ قَوْلًا غَيْرَ ٱلَّذِى قِيلَ لَهُمْ فَأَرْسَلْنَا عَلَيْهِمْ رِجْزًا مِّنَ ٱلسَّمَآءِ بِمَا كَانُوا۟ يَظْلِمُونَ
Transliteration fabaddala alladhīna ẓalamū min'hum qawlan ghayra alladhī qīla lahum fa-arsalnā ʿalayhim rij'zan mina l-samāi bimā kānū yaẓlimūna
Kannada ಆದರೆ ಅವರ ಪೈಕಿ ಅಕ್ರಮಿಗಳಾಗಿದ್ದವರು ತಮಗೆ ಆದೇಶಿಸಲಾದ ಮಾತನ್ನು ಬದಲಿಸಿ ಬೇರೆ ಮಾತನ್ನು ತಂದರು. ಆಗ ನಾವು ಅವರ ಅಕ್ರಮದ ಪ್ರತಿಫಲವಾಗಿ ಆಕಾಶದಿಂದ ಕಠಿಣ ವಾದ ಶಿಕ್ಷೆಯನ್ನು ಅವರ ಮೇಲೆ ಇಳಿಸಿದೆವು.
Verse 163
وَسْـَٔلْهُمْ عَنِ ٱلْقَرْيَةِ ٱلَّتِى كَانَتْ حَاضِرَةَ ٱلْبَحْرِ إِذْ يَعْدُونَ فِى ٱلسَّبْتِ إِذْ تَأْتِيهِمْ حِيتَانُهُمْ يَوْمَ سَبْتِهِمْ شُرَّعًا وَيَوْمَ لَا يَسْبِتُونَ ۙ لَا تَأْتِيهِمْ ۚ كَذَٰلِكَ نَبْلُوهُم بِمَا كَانُوا۟ يَفْسُقُونَ
Transliteration wasalhum ʿani l-qaryati allatī kānat ḥāḍirata l-baḥri idh yaʿdūna fī l-sabti idh tatīhim ḥītānuhum yawma sabtihim shurraʿan wayawma lā yasbitūna lā tatīhim kadhālika nablūhum bimā kānū yafsuqūna
Kannada (ಓ ಪೈಗಂಬರರೇ,) ಸಮುದ್ರ ತೀರದಲ್ಲಿದ್ದ ಆ ನಾಡಿನವರ ಕುರಿತು ಇವರನ್ನು ವಿಚಾರಿಸಿರಿ . ಅಲ್ಲಿಯವರು ಪ್ರತಿ ಶನಿವಾರ ಅಲ್ಲಾ ಹನ ಆಜ್ಞೆಗಳನ್ನು ಉಲ್ಲಂಘಿಸುತ್ತಿದ್ದರು. ಅವರ ಶನಿವಾರ ದಿನವೇ ಮೀನುಗಳು ಉಕ್ಕಿ ಮೇಲೆ ಬರುತ್ತಿದ್ದುವು ಮತ್ತು ಶನಿವಾರದ ಹೊರತು ಇತರ ದಿನಗಳಲ್ಲಿ ಬರುತ್ತಿರಲಿಲ್ಲ. ಅವರ ಆಜ್ಞೋ ಲ್ಲಂಘನೆಯ ಕಾರಣ ಅವರನ್ನು ನಾವು ಈ ರೀತಿ ಪರೀಕ್ಷೆಗೊಳಪಡಿಸುತ್ತೇವೆ.
Verse 164
وَإِذْ قَالَتْ أُمَّةٌ مِّنْهُمْ لِمَ تَعِظُونَ قَوْمًا ۙ ٱللَّهُ مُهْلِكُهُمْ أَوْ مُعَذِّبُهُمْ عَذَابًا شَدِيدًا ۖ قَالُوا۟ مَعْذِرَةً إِلَىٰ رَبِّكُمْ وَلَعَلَّهُمْ يَتَّقُونَ
Transliteration wa-idh qālat ummatun min'hum lima taʿiẓūna qawman l-lahu muh'likuhum aw muʿadhibuhum ʿadhāban shadīdan qālū maʿdhiratan ilā rabbikum walaʿallahum yattaqūna
Kannada ಅವರ ಪೈಕಿ ಒಂದು ಪಂಗಡವು `ಅಲ್ಲಾಹನು ನಾಶಗೊಳಿಸಲಿರುವ ಅಥವಾ ಕಠಿಣ ಶಿಕ್ಷೆಗೊಳ ಪಡಿಸಲಿರುವ ಒಂದು ಜನಾಂಗಕ್ಕೆ ನೀವೇಕೆ ಉಪದೇಶ ನೀಡುತ್ತೀರಿ? ಎಂದು ಕೇಳಿದ ಸಂದರ್ಭವೂ ಸ್ಮರಣೀಯ. ಅವರು ಹೀಗೆ ಉತ್ತ ರಿಸಿದರು; ‘ನಾವು ನಿಮ್ಮ ಪ್ರಭುವಿನ ಸನ್ನಿಧಿಯಲ್ಲಿ ನಿರಪರಾಧಿತ್ವವನ್ನು ಸಾಬೀತುಪಡಿಸುವುದಕ್ಕಾಗಿಯೂ ಅವರು ಜಾಗರೂಕರಾಗುವುದಕ್ಕಾಗಿಯೂ ಹೀಗೆ ಮಾಡುತ್ತೇವೆ’.
Verse 165
فَلَمَّا نَسُوا۟ مَا ذُكِّرُوا۟ بِهِۦٓ أَنجَيْنَا ٱلَّذِينَ يَنْهَوْنَ عَنِ ٱلسُّوٓءِ وَأَخَذْنَا ٱلَّذِينَ ظَلَمُوا۟ بِعَذَابٍۭ بَـِٔيسٍۭ بِمَا كَانُوا۟ يَفْسُقُونَ
Transliteration falammā nasū mā dhukkirū bihi anjaynā alladhīna yanhawna ʿani l-sūi wa-akhadhnā alladhīna ẓalamū biʿadhābin baīsin bimā kānū yafsuqūna
Kannada ಅವರಿಗೆ ನೀಡಲಾಗಿದ್ದ ಉಪದೇಶವನ್ನು ಅವರು ಸಂಪೂರ್ಣ ಮರೆತು ಬಿಟ್ಟಾಗ ಕೆಡುಕಿ ನಿಂದ ತಡೆಯುತ್ತಿದ್ದವರನ್ನು ನಾವು ರಕ್ಷಿಸಿದೆವು ಮತ್ತು ಅಕ್ರಮವೆಸಗುತ್ತಿದ್ದ ಜನರನ್ನು ಅವರ ಆಜ್ಞೋಲ್ಲಂಘನೆಗಾಗಿ ಕಠಿಣ ಶಿಕ್ಷೆಗೊಳ ಪಡಿಸಿದೆವು .
Verse 166
فَلَمَّا عَتَوْا۟ عَن مَّا نُهُوا۟ عَنْهُ قُلْنَا لَهُمْ كُونُوا۟ قِرَدَةً خَـٰسِـِٔينَ
Transliteration falammā ʿataw ʿan mā nuhū ʿanhu qul'nā lahum kūnū qiradatan khāsiīna
Kannada ಅಂತೆಯೇ ತಮಗೆ ನಿಷೇಧಿಸಲ್ಪಟ್ಟಿದ್ದ ವಿಚಾರ ಗಳನ್ನು ಧಿಕ್ಕರಿಸಿ ಕಾರ್ಯಪ್ರವೃತ್ತರಾದಾಗ ಅವರಿಗೆ ನಾವು ಹೇಳಿದೆವು; ‘ನೀವು ನೀಚರಾದ ಕಪಿಗಳಾಗಿರಿ’.
Verse 167
وَإِذْ تَأَذَّنَ رَبُّكَ لَيَبْعَثَنَّ عَلَيْهِمْ إِلَىٰ يَوْمِ ٱلْقِيَـٰمَةِ مَن يَسُومُهُمْ سُوٓءَ ٱلْعَذَابِ ۗ إِنَّ رَبَّكَ لَسَرِيعُ ٱلْعِقَابِ ۖ وَإِنَّهُۥ لَغَفُورٌ رَّحِيمٌ
Transliteration wa-idh ta-adhana rabbuka layabʿathanna ʿalayhim ilā yawmi l-qiyāmati man yasūmuhum sūa l-ʿadhābi inna rabbaka lasarīʿu l-ʿiqābi wa-innahu laghafūrun raḥīmun
Kannada ಪುನರುತ್ಥಾನ ದಿನದವರೆಗೂ ಅವರಿಗೆ (ಅವರ ವಂಶದವರಿಗೆ) ಕಠಿಣ ಶಿಕ್ಷೆ ಕೊಡುವಂಥವರನ್ನು ಕಳುಹಿಸುತ್ತಲೇ ಇರುವೆನೆಂದು ನಿಮ್ಮ ಪ್ರಭು ಘೋಷಿಸಿದುದನ್ನು ಸ್ಮರಿಸಿರಿ . ನಿಶ್ಚಯ ವಾಗಿಯೂ ನಿಮ್ಮ ಪ್ರಭು ಶಿಕ್ಷೆ ಕೊಡುವುದರಲ್ಲಿ ಅತಿ ಶೀಘ್ರನು ಮತ್ತು ನಿಶ್ಚಯವಾಗಿಯೂ ಕ್ಷಮಾಶೀಲನೂ ಕರುಣಾಮಯಿಯೂ ಆಗಿರುತ್ತಾನೆ.
Verse 168
وَقَطَّعْنَـٰهُمْ فِى ٱلْأَرْضِ أُمَمًا ۖ مِّنْهُمُ ٱلصَّـٰلِحُونَ وَمِنْهُمْ دُونَ ذَٰلِكَ ۖ وَبَلَوْنَـٰهُم بِٱلْحَسَنَـٰتِ وَٱلسَّيِّـَٔاتِ لَعَلَّهُمْ يَرْجِعُونَ
Transliteration waqaṭṭaʿnāhum fī l-arḍi umaman min'humu l-ṣāliḥūna wamin'hum dūna dhālika wabalawnāhum bil-ḥasanāti wal-sayiāti laʿallahum yarjiʿūna
Kannada ನಾವು ಅವರನ್ನು ಭೂಮಿಯ ಮೇಲೆ ಹಲವು ಜನ ಪಂಗಡಗಳನ್ನಾಗಿ ವಿಭಜಿಸಿದೆವು. ಅವರ ಪೈಕಿ ಸಜ್ಜನರೂ, ದುರ್ಜನರೂ ಇರುವರು. ಸನ್ಮಾರ್ಗದ ಕಡೆಗೆ ಅವರು ಮರಳಲೆಂದು ನಾವು ಅವರನ್ನು ಅನುಕೂಲ ಮತ್ತು ಪ್ರತಿಕೂಲ ಪರಿಸ್ಥಿತಿಗಳನ್ನೊಡ್ಡಿ ಪರೀಕ್ಷೆಗೊಳಪಡಿಸಿದೆವು.
Verse 169
فَخَلَفَ مِنۢ بَعْدِهِمْ خَلْفٌ وَرِثُوا۟ ٱلْكِتَـٰبَ يَأْخُذُونَ عَرَضَ هَـٰذَا ٱلْأَدْنَىٰ وَيَقُولُونَ سَيُغْفَرُ لَنَا وَإِن يَأْتِهِمْ عَرَضٌ مِّثْلُهُۥ يَأْخُذُوهُ ۚ أَلَمْ يُؤْخَذْ عَلَيْهِم مِّيثَـٰقُ ٱلْكِتَـٰبِ أَن لَّا يَقُولُوا۟ عَلَى ٱللَّهِ إِلَّا ٱلْحَقَّ وَدَرَسُوا۟ مَا فِيهِ ۗ وَٱلدَّارُ ٱلْـَٔاخِرَةُ خَيْرٌ لِّلَّذِينَ يَتَّقُونَ ۗ أَفَلَا تَعْقِلُونَ
Transliteration fakhalafa min baʿdihim khalfun warithū l-kitāba yakhudhūna ʿaraḍa hādhā l-adnā wayaqūlūna sayugh'faru lanā wa-in yatihim ʿaraḍun mith'luhu yakhudhūhu alam yu'khadh ʿalayhim mīthāqu l-kitābi an lā yaqūlū ʿalā l-lahi illā l-ḥaqa wadarasū mā fīhi wal-dāru l-ākhiratu khayrun lilladhīna yattaqūna afalā taʿqilūna
Kannada ಅವರ ನಂತರ ವೇದಗ್ರಂಥಗಳ ವಾರೀಸುದಾರ ರಾಗಿ ಮತ್ತೊಂದು ಕೂಟದವರು ಬಂದರು. ಅವರು ಈ ಅಧೋಲೋಕದ ತುಚ್ಛ ಲಾಭಗಳನ್ನು ಪಡೆಯುತ್ತಿದ್ದರು. ನಮಗೆ ಕ್ಷಮೆ ದೊರೆಯುತ್ತದೆ ಎಂದೂ ಹೇಳುತ್ತಿದ್ದರು. ಅದೇ ವೇಳೆ ಅದಕ್ಕೆ ಸಮಾನವಾದ ಲಾಭವು ಪುನಃ ಅವರ ಮುಂದೆ ಬಂದಾಗ ಅವರು ಅದನ್ನು ಪಡೆಯುವರು. ಅಲ್ಲಾಹನ ಹೆಸರಲ್ಲಿ ಸತ್ಯವನ್ನು ಮಾತ್ರ ಹೇಳಬೇಕೆಂದು ಗ್ರಂಥದ ಪ್ರಮಾಣವನ್ನು ಅವರಿಂದ ಪಡೆಯಲಾಗಿಲ್ಲವೇ? ಗ್ರಂಥದಲ್ಲಿ ಲಿಖಿತಗೊಂಡಿರುವುದನ್ನು ಅವರು ಸ್ವತಃ ಓದಿರುತ್ತಾರೆ. ಧರ್ಮೋಚಿತವಾಗಿ ನಡೆಯುವವ ರಿಗೆ ಪರಲೋಕ ವಾಸವೇ ಅತ್ಯುತ್ತಮ ವಾದುದು. ನೀವು ಯೋಚಿಸುತ್ತಿಲ್ಲವೇ?
Verse 170
وَٱلَّذِينَ يُمَسِّكُونَ بِٱلْكِتَـٰبِ وَأَقَامُوا۟ ٱلصَّلَوٰةَ إِنَّا لَا نُضِيعُ أَجْرَ ٱلْمُصْلِحِينَ
Transliteration wa-alladhīna yumassikūna bil-kitābi wa-aqāmū l-ṣalata innā lā nuḍīʿu ajra l-muṣ'liḥīna
Kannada ಗ್ರಂಥವನ್ನು ಅನುಸರಿಸುವವರಿಗೆ ಮತ್ತು ನಮಾಝನ್ನು ಸಂಸ್ಥಾಪಿಸಿಕೊಂಡವರಿಗೆ - ಖಂಡಿತ ಸದಾಚಾರಿಗಳ ಸತ್ಫಲವನ್ನು ವ್ಯರ್ಥ ಗೊಳಿಸಲಾರೆವು.
Verse 171
۞ وَإِذْ نَتَقْنَا ٱلْجَبَلَ فَوْقَهُمْ كَأَنَّهُۥ ظُلَّةٌ وَظَنُّوٓا۟ أَنَّهُۥ وَاقِعٌۢ بِهِمْ خُذُوا۟ مَآ ءَاتَيْنَـٰكُم بِقُوَّةٍ وَٱذْكُرُوا۟ مَا فِيهِ لَعَلَّكُمْ تَتَّقُونَ
Transliteration wa-idh nataqnā l-jabala fawqahum ka-annahu ẓullatun waẓannū annahu wāqiʿun bihim khudhū mā ātaynākum biquwwatin wa-udh'kurū mā fīhi laʿallakum tattaqūna
Kannada ಅವರ ಮೇಲೆ ಕೊಡೆಯಂತೆ ನಾವು ಒಂದು ಪರ್ವತವನ್ನು ಎತ್ತಿ ಹಿಡಿಯುತ್ತಲೂ, ಅದು ತಮ್ಮ ಮೇಲೆ ಬೀಳಬಹುದೆಂದು ಅವರು ಶಂಕಿಸಿಯೂ ಇದ್ದ ಸಂದರ್ಭವನ್ನು ಸ್ಮರಿಸಿರಿ. ಆಗ ನಾವು ಅವರೊಡನೆ ‘ನಿಮಗೆ ನಾವು ನೀಡಿದ ಗ್ರಂಥವನ್ನು ಬಿಗಿಯಾಗಿ ಹಿಡಿಯಿರಿ ಮತ್ತು ಅದರಲ್ಲಿ ದಾಖಲಾಗಿರುವುದನ್ನು ಗ್ರಹಿಸಿರಿ. ನೀವು ಧರ್ಮನಿಷ್ಟರಾಗುವಿರಿ’ ಎಂದು ಹೇಳಿದ್ದೆವು .
Verse 172
وَإِذْ أَخَذَ رَبُّكَ مِنۢ بَنِىٓ ءَادَمَ مِن ظُهُورِهِمْ ذُرِّيَّتَهُمْ وَأَشْهَدَهُمْ عَلَىٰٓ أَنفُسِهِمْ أَلَسْتُ بِرَبِّكُمْ ۖ قَالُوا۟ بَلَىٰ ۛ شَهِدْنَآ ۛ أَن تَقُولُوا۟ يَوْمَ ٱلْقِيَـٰمَةِ إِنَّا كُنَّا عَنْ هَـٰذَا غَـٰفِلِينَ
Transliteration wa-idh akhadha rabbuka min banī ādama min ẓuhūrihim dhurriyyatahum wa-ashhadahum ʿalā anfusihim alastu birabbikum qālū balā shahid'nā an taqūlū yawma l-qiyāmati innā kunnā ʿan hādhā ghāfilīna
Kannada (ಓ ಪೈಗಂಬರರೇ,) ನಿಮ್ಮ ಪ್ರಭು ಆದಮರ ಪೀಳಿಗೆಯಿಂದ ಅವರ ಸಂತತಿಯನ್ನು ಹೊರ ತಂದಿದ್ದ ಹಾಗೂ ಅವರನ್ನು ಸ್ವತಃ ಅವರ ಮೇಲೆ ಸಾಕ್ಷಿಗಳಾಗಿ ಮಾಡುತ್ತಾ `ನಾನು ನಿಮ್ಮ ಪ್ರಭುವಲ್ಲವೇ?’ ಎಂದು ಕೇಳಿದ್ದ ಸಂದರ್ಭವನ್ನು ಜನರಿಗೆ ನೆನಪಿಸಿರಿ. ಆಗ ಅವರು, ‘ಹೌದು, ಖಂಡಿತವಾಗಿಯೂ ನೀನೇ ನಮ್ಮ ಪ್ರಭು. ನಾವು ಇದಕ್ಕೆ ಸಾಕ್ಷ್ಯವಹಿಸುತ್ತೇವೆ’ ಎಂದರು . ನೀವು ಪುನರುತ್ಥಾನ ದಿನದಂದು ‘ನಾವು ಈ ಬಗ್ಗೆ ಅಶೃದ್ಧರಾಗಿದ್ದೆವು’ ಎಂದು ಹೇಳಿ ಬಿಡಬಾರದೆಂದು
Verse 173
أَوْ تَقُولُوٓا۟ إِنَّمَآ أَشْرَكَ ءَابَآؤُنَا مِن قَبْلُ وَكُنَّا ذُرِّيَّةً مِّنۢ بَعْدِهِمْ ۖ أَفَتُهْلِكُنَا بِمَا فَعَلَ ٱلْمُبْطِلُونَ
Transliteration aw taqūlū innamā ashraka ābāunā min qablu wakunnā dhurriyyatan min baʿdihim afatuh'likunā bimā faʿala l-mub'ṭilūna
Kannada ಅಥವಾ ನಮಗಿಂತ ಮುಂಚೆ ನಮ್ಮ ಪೂರ್ವಿ ಕರು ಶಿರ್ಕ್ ಮಾಡಿದ್ದರು, ನಾವು ಅವರ ನಂತರ ಜನಿಸಿ ಬಂದವರು. ಹಾಗಾಗಿ ಮಿಥ್ಯಾಚಾರಿಗಳು ಮಾಡಿದ ಅಪರಾಧಕ್ಕಾಗಿ ನೀನು ನಮ್ಮನ್ನು ಶಿಕ್ಷಿಸುವೆಯಾ? ಎಂದು ಕೇಳಿಬಿಡಬಾರದೆಂದು ನಾವು ಹೀಗೆ ಮಾಡಿದ್ದೆವು.
Verse 174
وَكَذَٰلِكَ نُفَصِّلُ ٱلْـَٔايَـٰتِ وَلَعَلَّهُمْ يَرْجِعُونَ
Transliteration wakadhālika nufaṣṣilu l-āyāti walaʿallahum yarjiʿūna
Kannada ಈ ರೀತಿ ನಾವು ದೃಷ್ಟಾಂತಗಳನ್ನು ಸುಸ್ಪಷ್ಟ ವಾಗಿ ವಿವರಿಸುತ್ತೇವೆ. ಇವರು ಮರಳಿ ಬರಬೇಕೆಂಬ ಉದ್ದೇಶದಿಂದ.
Verse 175
وَٱتْلُ عَلَيْهِمْ نَبَأَ ٱلَّذِىٓ ءَاتَيْنَـٰهُ ءَايَـٰتِنَا فَٱنسَلَخَ مِنْهَا فَأَتْبَعَهُ ٱلشَّيْطَـٰنُ فَكَانَ مِنَ ٱلْغَاوِينَ
Transliteration wa-ut'lu ʿalayhim naba-a alladhī ātaynāhu āyātinā fa-insalakha min'hā fa-atbaʿahu l-shayṭānu fakāna mina l-ghāwīna
Kannada (ಓ ಪೈಗಂಬರರೇ,) ಒಬ್ಬನ ವೃತ್ತಾಂತವನ್ನು ಅವರಿಗೆ ಓದಿ ಹೇಳಿರಿ. ಆತನಿಗೆ ನಮ್ಮ ಅನೇಕ ದೃಷ್ಟಾಂತಗಳನ್ನು ನೀಡಿದ್ದೆವು. ಆದರೆ ಅವನು ಅದರಿಂದ ಕಳಚಿಕೊಂಡನು. ಶೈತಾ ನನು ಆತನನ್ನು ಅನುಸರಿಸಿದನು. ಹಾಗೆ ಆತ ಪಥಭ್ರಷ್ಟರಲ್ಲೊಬ್ಬನಾಗಿದ್ದನಷ್ಟೇ.
Verse 176
وَلَوْ شِئْنَا لَرَفَعْنَـٰهُ بِهَا وَلَـٰكِنَّهُۥٓ أَخْلَدَ إِلَى ٱلْأَرْضِ وَٱتَّبَعَ هَوَىٰهُ ۚ فَمَثَلُهُۥ كَمَثَلِ ٱلْكَلْبِ إِن تَحْمِلْ عَلَيْهِ يَلْهَثْ أَوْ تَتْرُكْهُ يَلْهَث ۚ ذَّٰلِكَ مَثَلُ ٱلْقَوْمِ ٱلَّذِينَ كَذَّبُوا۟ بِـَٔايَـٰتِنَا ۚ فَٱقْصُصِ ٱلْقَصَصَ لَعَلَّهُمْ يَتَفَكَّرُونَ
Transliteration walaw shi'nā larafaʿnāhu bihā walākinnahu akhlada ilā l-arḍi wa-ittabaʿa hawāhu famathaluhu kamathali l-kalbi in taḥmil ʿalayhi yalhath aw tatruk'hu yalhath dhālika mathalu l-qawmi alladhīna kadhabū biāyātinā fa-uq'ṣuṣi l-qaṣaṣa laʿallahum yatafakkarūna
Kannada ನಾವು ಉದ್ದೇಶಿಸಿದ್ದರೆ ಆ ದೃಷ್ಟಾಂತಗಳ ಮೂಲಕ ಅವನಿಗೆ ಔನ್ನತ್ಯ ದಯಪಾಲಿಸು ತ್ತಿದ್ದೆವು. ಆದರೆ ಅವನು ಇಹಲೋಕದೆಡೆಗೇ ವಾಲುತ್ತಾ ತನ್ನಿಚ್ಛೆಯನ್ನೇ ಹಿಂಬಾಲಿಸಿದನು. ಅದರ ಪರಿಣಾಮವಾಗಿ ಅವನ ಪರಿಸ್ಥಿತಿಯು ನಾಯಿಯಂತಾಯಿತು. ನೀವು ಅದನ್ನು ಅಟ್ಟಿ ದರೆ ಅದು ತನ್ನ ನಾಲಗೆಯನ್ನು ಹೊರಚಾಚುತ್ತದೆ. ಅದನ್ನು ಅಟ್ಟದೆ ಬಿಟ್ಟು ಬಿಟ್ಟರೂ ಅದು ನಾಲಗೆ ಹೊರಚಾಚಿ ಕೊಂಡಿರುವುದು. ಇದುವೇ ನಮ್ಮ ದೃಷ್ಟಾಂತಗಳನ್ನು ನಿಷೇಧಿಸುವವರಿಗೆ ಉಪಮೆ. ನೀವು ಈ ವೃತ್ತಾಂತಗಳನ್ನು ಇವರಿಗೆ ಹೇಳುತ್ತಲಿರಿ. ಇವರು ಚಿಂತಿಸುವಂತಾಗಲಿ.
Verse 177
سَآءَ مَثَلًا ٱلْقَوْمُ ٱلَّذِينَ كَذَّبُوا۟ بِـَٔايَـٰتِنَا وَأَنفُسَهُمْ كَانُوا۟ يَظْلِمُونَ
Transliteration sāa mathalan l-qawmu alladhīna kadhabū biāyātinā wa-anfusahum kānū yaẓlimūna
Kannada ನಮ್ಮ ನಿದರ್ಶನಗಳನ್ನು ನಿಷೇಧಿಸಿದವರ ಉದಾಹರಣೆಯು ಅತ್ಯಂತ ನಿಕೃಷ್ಟವಾಗಿದೆ. ಅವರು ತಮ್ಮ ಮೇಲೆ ತಾವೇ ಅಕ್ರಮವೆಸಗುತ್ತಿದ್ದಾರೆ.
Verse 178
مَن يَهْدِ ٱللَّهُ فَهُوَ ٱلْمُهْتَدِى ۖ وَمَن يُضْلِلْ فَأُو۟لَـٰٓئِكَ هُمُ ٱلْخَـٰسِرُونَ
Transliteration man yahdi l-lahu fahuwa l-muh'tadī waman yuḍ'lil fa-ulāika humu l-khāsirūna
Kannada ಅಲ್ಲಾಹನು ಯಾರಿಗೆ ಸನ್ಮಾರ್ಗದರ್ಶನ ಮಾಡುತ್ತಾನೋ ಅವನಿಗೇ ಸನ್ಮಾರ್ಗ ಪ್ರಾಪ್ತವಾಗುತ್ತದೆ. ಮತ್ತು ಅಲ್ಲಾಹನು ಯಾರನ್ನು ದಾರಿ ತಪ್ಪಿಸುತ್ತಾನೋ ಅವರೇ ಹತಭಾಗ್ಯರು.
Verse 179
وَلَقَدْ ذَرَأْنَا لِجَهَنَّمَ كَثِيرًا مِّنَ ٱلْجِنِّ وَٱلْإِنسِ ۖ لَهُمْ قُلُوبٌ لَّا يَفْقَهُونَ بِهَا وَلَهُمْ أَعْيُنٌ لَّا يُبْصِرُونَ بِهَا وَلَهُمْ ءَاذَانٌ لَّا يَسْمَعُونَ بِهَآ ۚ أُو۟لَـٰٓئِكَ كَٱلْأَنْعَـٰمِ بَلْ هُمْ أَضَلُّ ۚ أُو۟لَـٰٓئِكَ هُمُ ٱلْغَـٰفِلُونَ
Transliteration walaqad dharanā lijahannama kathīran mina l-jini wal-insi lahum qulūbun lā yafqahūna bihā walahum aʿyunun lā yub'ṣirūna bihā walahum ādhānun lā yasmaʿūna bihā ulāika kal-anʿāmi bal hum aḍallu ulāika humu l-ghāfilūna
Kannada ಅನೇಕ ಜಿನ್ನ್ ಮತ್ತು ಮನುಷ್ಯರನ್ನು ನಾವು ನರಕಕ್ಕಾಗಿಯೇ ಕಾದಿರಿಸಿದ್ದೇವೆ. ಅವರಿಗೆ ಹೃದಯಗಳಿವೆ. ಆದರೆ ಅವರು ಅದರಿಂದ ವಿವೇಚಿ ಸುವುದಿಲ್ಲ. ಅವರಿಗೆ ಕಣ್ಣುಗಳಿವೆ. ಆದರೆ ಅವರು ಆ ಮೂಲಕ ನೋಡುವುದಿಲ್ಲ. ಅವರಿಗೆ ಕಿವಿ ಗಳಿವೆ. ಆದರೆ ಅವರು ಅವುಗಳಿಂದ ಆಲಿಸುವು ದಿಲ್ಲ. ಅವರು ಪ್ರಾಣಿಗಳಂತಿದ್ದಾರೆ, ಮಾತ್ರವಲ್ಲ ಅವುಗಳಿಗಿಂತಲೂ ಪಥಭ್ರಷ್ಟರು. ಅವರೇ ಪ್ರಜ್ಞಾ ಶೂನ್ಯರಾದವರು.
Verse 180
وَلِلَّهِ ٱلْأَسْمَآءُ ٱلْحُسْنَىٰ فَٱدْعُوهُ بِهَا ۖ وَذَرُوا۟ ٱلَّذِينَ يُلْحِدُونَ فِىٓ أَسْمَـٰٓئِهِۦ ۚ سَيُجْزَوْنَ مَا كَانُوا۟ يَعْمَلُونَ
Transliteration walillahi l-asmāu l-ḥus'nā fa-id'ʿūhu bihā wadharū alladhīna yul'ḥidūna fī asmāihi sayuj'zawna mā kānū yaʿmalūna
Kannada ಅಲ್ಲಾಹನಿಗೆ ಅತಿ ವಿಶಿಷ್ಟ ನಾಮಗಳಿವೆ. ಹಾಗಾಗಿ ಆ ನಾಮಗಳಿಂದಲೇ ಅವನನ್ನು ಕರೆ ಯಿರಿ. ಅವನ ನಾಮಗಳಲ್ಲಿ ಅಕೃತ್ಯವೆಸಗು ವವರನ್ನು ಬಿಟ್ಟು ಬಿಡಿರಿ. ಅವರ ಕರ್ಮದ ಪ್ರತಿಫಲವನ್ನು ಅವರೇ ಪಡೆಯಲಿರುವರು.
Verse 181
وَمِمَّنْ خَلَقْنَآ أُمَّةٌ يَهْدُونَ بِٱلْحَقِّ وَبِهِۦ يَعْدِلُونَ
Transliteration wamimman khalaqnā ummatun yahdūna bil-ḥaqi wabihi yaʿdilūna
Kannada ಋುಜುವಾಗಿ ಸತ್ಪಥ ಹೊಂದುವ ಹಾಗೂ ತನ್ಮೂಲಕ ನೀತಿ ಪಾಲಿಸುವ ಒಂದು ಸಮುದಾಯವು ನಮ್ಮ ಸೃಷ್ಟಿಯಲ್ಲಿದೆ.
Verse 182
وَٱلَّذِينَ كَذَّبُوا۟ بِـَٔايَـٰتِنَا سَنَسْتَدْرِجُهُم مِّنْ حَيْثُ لَا يَعْلَمُونَ
Transliteration wa-alladhīna kadhabū biāyātinā sanastadrijuhum min ḥaythu lā yaʿlamūna
Kannada ನಮ್ಮ ಋುಜುವಾತುಗಳನ್ನು ನಿಷೇಧಿಸಿದವರನ್ನು ಅವರಿಗೆ ಅರಿವೇ ಆಗದಂತೆ ನಾವು ಮೆಲ್ಲ ಮೆಲ್ಲನೆ ವಿನಾಶದ ಕಡೆಗೆ ಒಯ್ಯುವೆವು.
Verse 183
وَأُمْلِى لَهُمْ ۚ إِنَّ كَيْدِى مَتِينٌ
Transliteration wa-um'lī lahum inna kaydī matīnun
Kannada ನಾನು ಅವರಿಗೆ ಅವಕಾಶ ನೀಡುತ್ತೇನೆ. ನಿಸ್ಸಂದೇಹವಾಗಿಯೂ ನನ್ನ ತಂತ್ರವು ಅತ್ಯಂತ ಅಬೇಧ್ಯವಾದುದು.
Verse 184
أَوَلَمْ يَتَفَكَّرُوا۟ ۗ مَا بِصَاحِبِهِم مِّن جِنَّةٍ ۚ إِنْ هُوَ إِلَّا نَذِيرٌ مُّبِينٌ
Transliteration awalam yatafakkarū mā biṣāḥibihim min jinnatin in huwa illā nadhīrun mubīnun
Kannada ಅವರೆಂದೂ ಚಿಂತಿಸಿಲ್ಲವೇ? ಅವರ ಸಂಗಡಿಗನಿಗೆ ಯಾವುದೇ ಮತಿಭ್ರಮಣೆ ಇಲ್ಲವೆಂದೂ, ಇವರು ಪ್ರತ್ಯಕ್ಷ ಮುನ್ನೆಚ್ಚರಿಕೆದಾರ ಮಾತ್ರ ವೆಂದೂ?
Verse 185
أَوَلَمْ يَنظُرُوا۟ فِى مَلَكُوتِ ٱلسَّمَـٰوَٰتِ وَٱلْأَرْضِ وَمَا خَلَقَ ٱللَّهُ مِن شَىْءٍ وَأَنْ عَسَىٰٓ أَن يَكُونَ قَدِ ٱقْتَرَبَ أَجَلُهُمْ ۖ فَبِأَىِّ حَدِيثٍۭ بَعْدَهُۥ يُؤْمِنُونَ
Transliteration awalam yanẓurū fī malakūti l-samāwāti wal-arḍi wamā khalaqa l-lahu min shayin wa-an ʿasā an yakūna qadi iq'taraba ajaluhum fabi-ayyi ḥadīthin baʿdahu yu'minūna
Kannada ಭೂಮಿ - ಆಕಾಶಗಳ ಆಧಿಪತ್ಯದಲ್ಲೂ, ಅಲ್ಲಾ ಹನು ಸೃಷ್ಟಿಸಿರುವ ಸರ್ವ ವಸ್ತುವಿನಲ್ಲೂ ಎಂದಾ ದರೂ ಅವರು ವಿವೇಚಿಸಲಿಲ್ಲವೇ? ಅವರ ಅವಧಿ ಹತ್ತಿರವಾಗುತ್ತಿರಬಹುದು ಎಂದೂ! ಈ ಖುರ್ ಆನನ್ನು ಬಿಟ್ಟು ಯಾವ ವರ್ತಮಾನದಲ್ಲಿ ಅವರು ವಿಶ್ವಾಸವಿಡಲಿದ್ದಾರೆ?
Verse 186
مَن يُضْلِلِ ٱللَّهُ فَلَا هَادِىَ لَهُۥ ۚ وَيَذَرُهُمْ فِى طُغْيَـٰنِهِمْ يَعْمَهُونَ
Transliteration man yuḍ'lili l-lahu falā hādiya lahu wayadharuhum fī ṭugh'yānihim yaʿmahūna
Kannada ಅಲ್ಲಾಹನು ಯಾರನ್ನಾದರೂ ದಾರಿತಪ್ಪಿಸಿದರೆ ಅವನನ್ನು ಸರಿದಾರಿಗೆ ತರುವವರಿಲ್ಲ ಮತ್ತು ಅಲ್ಲಾಹನು ಅವರನ್ನು ಅವರ ದುರ್ಮಾರ್ಗದಲ್ಲೇ ಅಲೆದಾಡುತ್ತಿರಲು ಬಿಟ್ಟುಬಿಡುತ್ತಾನೆ.
Verse 187
يَسْـَٔلُونَكَ عَنِ ٱلسَّاعَةِ أَيَّانَ مُرْسَىٰهَا ۖ قُلْ إِنَّمَا عِلْمُهَا عِندَ رَبِّى ۖ لَا يُجَلِّيهَا لِوَقْتِهَآ إِلَّا هُوَ ۚ ثَقُلَتْ فِى ٱلسَّمَـٰوَٰتِ وَٱلْأَرْضِ ۚ لَا تَأْتِيكُمْ إِلَّا بَغْتَةً ۗ يَسْـَٔلُونَكَ كَأَنَّكَ حَفِىٌّ عَنْهَا ۖ قُلْ إِنَّمَا عِلْمُهَا عِندَ ٱللَّهِ وَلَـٰكِنَّ أَكْثَرَ ٱلنَّاسِ لَا يَعْلَمُونَ
Transliteration yasalūnaka ʿani l-sāʿati ayyāna mur'sāhā qul innamā ʿil'muhā ʿinda rabbī lā yujallīhā liwaqtihā illā huwa thaqulat fī l-samāwāti wal-arḍi lā tatīkum illā baghtatan yasalūnaka ka-annaka ḥafiyyun ʿanhā qul innamā ʿil'muhā ʿinda l-lahi walākinna akthara l-nāsi lā yaʿlamūna
Kannada ‘ಲೋಕದ ಅವಸಾನ ಘಳಿಗೆ ಯಾವಾಗ?’ ಎಂದು ಇವರು ನಿಮ್ಮೊಡನೆ ಕೇಳುತ್ತಾರೆ. ‘ಅದರ ಜ್ಞಾನವು ನನ್ನ ಪ್ರಭುವಿನ ಬಳಿಯೇ ಇದೆ. ಅದನ್ನು ಅದರ ನಿಶ್ಚಿತ ಸಮಯದಲ್ಲಿ ಅವನಲ್ಲದೆ ಪ್ರಕಟಗೊಳಿಸುವುದಿಲ್ಲ. ಭೂಮಿ - ಆಕಾಶಗಳಲ್ಲಿ ಅದು ಅತ್ಯಂತ ಕಠಿಣ ಕಾಲವಾಗಿರುವುದು. ಅದು ನಿಮ್ಮ ಮೇಲೆ ಹಠಾತ್ತನೆ ಬರುವುದು’ ಎಂದು ಹೇಳಿರಿ. ನೀವು ಅದರ ಬಗ್ಗೆ ಕೇಳಿ ತಿಳಿಯುವಲ್ಲಿ ತೀವ್ರ ಆಸಕ್ತರೋ ಶೋಧನೆ ಯಲ್ಲೇ ಬಿದ್ದಿರುವಿರೋ ಎಂಬಂತೆ ಇವರು ಅದರ ಕುರಿ ತಾಗಿ ನಿಮ್ಮೊಡನೆ ಪ್ರಶ್ನಿಸುತ್ತಾರೆ. ಹೇಳಿರಿ; ಅದರ ಅರಿವು ಅಲ್ಲಾಹನಿಗೆ ಮಾತ್ರವಿದೆ. ಆದರೆ ಹೆಚ್ಚಿನ ವರು ಈ ವಾಸ್ತವಿಕತೆಯ ಕುರಿತು ಅರಿಯಲಾರರು.
Verse 188
قُل لَّآ أَمْلِكُ لِنَفْسِى نَفْعًا وَلَا ضَرًّا إِلَّا مَا شَآءَ ٱللَّهُ ۚ وَلَوْ كُنتُ أَعْلَمُ ٱلْغَيْبَ لَٱسْتَكْثَرْتُ مِنَ ٱلْخَيْرِ وَمَا مَسَّنِىَ ٱلسُّوٓءُ ۚ إِنْ أَنَا۠ إِلَّا نَذِيرٌ وَبَشِيرٌ لِّقَوْمٍ يُؤْمِنُونَ
Transliteration qul lā amliku linafsī nafʿan walā ḍarran illā mā shāa l-lahu walaw kuntu aʿlamu l-ghayba la-is'takthartu mina l-khayri wamā massaniya l-sūu in anā illā nadhīrun wabashīrun liqawmin yu'minūna
Kannada (ಓ ಪೈಗಂಬರರೇ,) ಹೀಗೆ ಹೇಳಿರಿ : ಅಲ್ಲಾಹನ ಉದ್ದೇಶದ ಹೊರತಾಗಿ ನನ್ನ ಸ್ವಂತಕ್ಕೆ ಒಂದು ಉಪಕಾರವೋ, ಅಪಕಾರವೋ ಮಾಡುವ ಸ್ವಾತಂತ್ರ್ಯ ನನಗಿಲ್ಲ. ಅದೃಶ್ಯ ವಿಚಾರಗಳ ಕುರಿತು ಜ್ಞಾನವಿರುತ್ತಿದ್ದರೆ ನಾನು ಬಹಳಷ್ಟು ಹಿತವನ್ನು ಸಂಗ್ರಹಿಸಿಡುತ್ತಿದ್ದೆ . ಮತ್ತು ನನಗೆ ಯಾವ ಹಾನಿಯೂ ತಟ್ಟುತ್ತಿರಲಿಲ್ಲ. ನಾನು ಕೇವಲ ಎಚ್ಚರಿಕೆ ಕೊಡುವವನೂ ವಿಶ್ವಾಸಿಗಳಾದ ಜನತೆಗೆ ಸುವಾರ್ತೆ ನೀಡುವವನೂ ಆಗಿರುತ್ತೇನೆ.
Verse 189
۞ هُوَ ٱلَّذِى خَلَقَكُم مِّن نَّفْسٍ وَٰحِدَةٍ وَجَعَلَ مِنْهَا زَوْجَهَا لِيَسْكُنَ إِلَيْهَا ۖ فَلَمَّا تَغَشَّىٰهَا حَمَلَتْ حَمْلًا خَفِيفًا فَمَرَّتْ بِهِۦ ۖ فَلَمَّآ أَثْقَلَت دَّعَوَا ٱللَّهَ رَبَّهُمَا لَئِنْ ءَاتَيْتَنَا صَـٰلِحًا لَّنَكُونَنَّ مِنَ ٱلشَّـٰكِرِينَ
Transliteration huwa alladhī khalaqakum min nafsin wāḥidatin wajaʿala min'hā zawjahā liyaskuna ilayhā falammā taghashāhā ḥamalat ḥamlan khafīfan famarrat bihi falammā athqalat daʿawā l-laha rabbahumā la-in ātaytanā ṣāliḥan lanakūnanna mina l-shākirīna
Kannada ಒಂದೇ ಶರೀರದಿಂದ ನಿಮ್ಮನ್ನು ಸೃಷ್ಟಿಸಿದವನು ಅವನು. ಆ ಶರೀರದಿಂದಲೇ ಅದರ ಜೋಡಿ ಯನ್ನೂ ಅದರೊಂದಿಗೆ ಮಿಲನಗೊಳ್ಳುವುದಕ್ಕಾಗಿ ಅವನು ಸೃಷ್ಟಿಸಿದನು. ಅಂತೆಯೇ ಆ ಜೋಡಿ ಜೊತೆ ಸೇರಿದಾಗ ಆಕೆಗೆ ಲಘು ಗರ್ಭ ಧಾರಣೆಯಾಯಿತು. ಅವಳು ಅದನ್ನು ಹೊತ್ತು ಕೊಂಡೇ ನಡೆದಳು. ಅದು ಭಾರವಾದಾಗ ಅವರಿಬ್ಬರು ತಮ್ಮ ಪ್ರಭುವಾದ ಅಲ್ಲಾಹನೊಡನೆ, ‘ನೀನು ನಮಗೆ ಉತ್ತಮ ಮಗುವನ್ನಿತ್ತರೆ ನಾವು ನಿನಗೆ ಕೃತಜ್ಞರಾಗುವೆವು’ ಎಂದು ಪ್ರಾರ್ಥಿಸಿದರು.
Verse 190
فَلَمَّآ ءَاتَىٰهُمَا صَـٰلِحًا جَعَلَا لَهُۥ شُرَكَآءَ فِيمَآ ءَاتَىٰهُمَا ۚ فَتَعَـٰلَى ٱللَّهُ عَمَّا يُشْرِكُونَ
Transliteration falammā ātāhumā ṣāliḥan jaʿalā lahu shurakāa fīmā ātāhumā fataʿālā l-lahu ʿammā yush'rikūna
Kannada ಆದರೆ ಅಲ್ಲಾಹನು ಅವರಿಗೊಂದು ಉತ್ತಮ ಮಗುವನ್ನು ನೀಡಿದಾಗ ಅವರು ಅವನ ಕೊಡುಗೆಯಲ್ಲೇ ಇತರರನ್ನು ಅವನ ಸಹಭಾಗಿಗಳಾಗಿ ಮಾಡಿದರು. ಅಲ್ಲಾಹನು, ಅವರು ಸಹಭಾಗಿಗಳಾಗಿಸುವ ವಿಷಯಗಳಿಂದ ಪರಮ ಮುಕ್ತನಾಗಿರುತ್ತಾನೆ .
Verse 191
أَيُشْرِكُونَ مَا لَا يَخْلُقُ شَيْـًٔا وَهُمْ يُخْلَقُونَ
Transliteration ayush'rikūna mā lā yakhluqu shayan wahum yukh'laqūna
Kannada ಯಾವುದನ್ನೂ ಸೃಷ್ಟಿಸಲಾಗದ ಮತ್ತು ಸ್ವತಃ ಸೃಷ್ಟಿಸಲ್ಪಟ್ಟವುಗಳನ್ನು ಅಲ್ಲಾಹನ ಆರಾಧನೆ ಯಲ್ಲಿ ಸಹಭಾಗಿಗಳಾಗಿ ಮಾಡುತ್ತಿದ್ದಾರೆಯೇ?
Verse 192
وَلَا يَسْتَطِيعُونَ لَهُمْ نَصْرًا وَلَآ أَنفُسَهُمْ يَنصُرُونَ
Transliteration walā yastaṭīʿūna lahum naṣran walā anfusahum yanṣurūna
Kannada ಅವು ಇವರಿಗೆ ಸಹಾಯ ಮಾಡಲಾರವು. ಸ್ವತಃ ತಮಗೆ ಸಹಾಯ ಮಾಡಿಕೊಳ್ಳಲೂ ಅವು ಅಶಕ್ತವಾಗಿವೆ.
Verse 193
وَإِن تَدْعُوهُمْ إِلَى ٱلْهُدَىٰ لَا يَتَّبِعُوكُمْ ۚ سَوَآءٌ عَلَيْكُمْ أَدَعَوْتُمُوهُمْ أَمْ أَنتُمْ صَـٰمِتُونَ
Transliteration wa-in tadʿūhum ilā l-hudā lā yattabiʿūkum sawāon ʿalaykum adaʿawtumūhum am antum ṣāmitūna
Kannada ನೀವು ಅವರನ್ನು ಸನ್ಮಾರ್ಗದ ಕಡೆಗೆ ಬರಲು ಕರೆಕೊಟ್ಟರೆ ಅವರು ನಿಮ್ಮನ್ನು ಹಿಂಬಾಲಿಸರು. ನೀವು ಅವರನ್ನು ಕರೆದರೂ ಮೌನ ವಹಿಸಿದರೂ ಎರಡೂ ನಿಮ್ಮ ಮಟ್ಟಿಗೆ ಸರಿಸಮಾನವಿರುವುದು.
Verse 194
إِنَّ ٱلَّذِينَ تَدْعُونَ مِن دُونِ ٱللَّهِ عِبَادٌ أَمْثَالُكُمْ ۖ فَٱدْعُوهُمْ فَلْيَسْتَجِيبُوا۟ لَكُمْ إِن كُنتُمْ صَـٰدِقِينَ
Transliteration inna alladhīna tadʿūna min dūni l-lahi ʿibādun amthālukum fa-id'ʿūhum falyastajībū lakum in kuntum ṣādiqīna
Kannada ಅಲ್ಲಾಹನ ಹೊರತಾಗಿ ನೀವು ಆರಾಧಿಸುವ ಯಾರೇ ಆದರೂ ಅವರು ನಿಮ್ಮಂತಿರುವ ದಾಸ ರೇ ಆಗಿರುತ್ತಾರೆ. (ಅವರು ಆರಾಧ್ಯರುಗಳೆಂಬ ವಾದದಲ್ಲಿ) ನೀವು ಸತ್ಯವಂತರಾಗಿದ್ದರೆ ನೀವು ಅವರನ್ನೊಮ್ಮೆ ಪ್ರಾರ್ಥಿಸಿ. ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡುತ್ತಾರೋ ನೋಡಿರಿ.
Verse 195
أَلَهُمْ أَرْجُلٌ يَمْشُونَ بِهَآ ۖ أَمْ لَهُمْ أَيْدٍ يَبْطِشُونَ بِهَآ ۖ أَمْ لَهُمْ أَعْيُنٌ يُبْصِرُونَ بِهَآ ۖ أَمْ لَهُمْ ءَاذَانٌ يَسْمَعُونَ بِهَا ۗ قُلِ ٱدْعُوا۟ شُرَكَآءَكُمْ ثُمَّ كِيدُونِ فَلَا تُنظِرُونِ
Transliteration alahum arjulun yamshūna bihā am lahum aydin yabṭishūna bihā am lahum aʿyunun yub'ṣirūna bihā am lahum ādhānun yasmaʿūna bihā quli id'ʿū shurakāakum thumma kīdūni falā tunẓirūni
Kannada ಅವರಿಗೆ ನಡೆಯಲು ಕಾಲುಗಳಿವೆಯೇ? ಅವ ರಿಗೆ ಹಿಡಿಯಲು ಕೈಗಳಿವೆಯೇ? ಅವರಿಗೆ ನೋ ಡಲು ಕಣ್ಣುಗಳಿವೆಯೇ? ಅವರಿಗೆ ಕೇಳಲು ಕಿವಿಗಳಿವೆಯೇ? (ಓ ಪೈಗಂಬರರೇ ಇವ ರೊಡನೆ) ಹೇಳಿರಿ; ನಿಮ್ಮ ಭಾಗೀದಾರ ರನ್ನು ಕರೆದು ಕೊಳ್ಳಿರಿ. ತರುವಾಯ ನೀವು ನನ್ನ ವಿರುದ್ಧ ಏನೇ ಕುತಂತ್ರ ಪ್ರಯೋಗಿಸಿರಿ ಮತ್ತು ನನಗೆ ಕಿಂಚಿತ್ತೂ ಕಾಲಾವಕಾಶ ಕೊಡಬೇಡಿರಿ.
Verse 196
إِنَّ وَلِـِّۧىَ ٱللَّهُ ٱلَّذِى نَزَّلَ ٱلْكِتَـٰبَ ۖ وَهُوَ يَتَوَلَّى ٱلصَّـٰلِحِينَ
Transliteration inna waliyyiya l-lahu alladhī nazzala l-kitāba wahuwa yatawallā l-ṣāliḥīna
Kannada ನಿಸ್ಸಂದೇಹವಾಗಿ ಗ್ರಂಥವನ್ನು ಅವತೀರ್ಣ ಗೊಳಿಸಿದ ಅಲ್ಲಾಹನೇ ನನ್ನ ಉಸ್ತುವಾರಿದಾರನು. ಅವನು ಸಜ್ಜನರನ್ನು ಸಂರಕ್ಷಿಸುತ್ತಾನೆ.
Verse 197
وَٱلَّذِينَ تَدْعُونَ مِن دُونِهِۦ لَا يَسْتَطِيعُونَ نَصْرَكُمْ وَلَآ أَنفُسَهُمْ يَنصُرُونَ
Transliteration wa-alladhīna tadʿūna min dūnihi lā yastaṭīʿūna naṣrakum walā anfusahum yanṣurūna
Kannada ನೀವು ಅಲ್ಲಾಹನ ಹೊರತಾಗಿ ಯಾರನ್ನು ಆರಾಧಿಸುತ್ತೀರೋ ಅವರು ನಿಮಗೆ ಸಹಾಯ ಮಾಡುವ ಶಕ್ತಿಯನ್ನು ಹೊಂದಿಲ್ಲ ಮತ್ತು ತಮಗೆ ಸ್ವಯಂ ಸಹಾಯಕರಾಗಲೂ ಅವರಿಂದಾಗದು.
Verse 198
وَإِن تَدْعُوهُمْ إِلَى ٱلْهُدَىٰ لَا يَسْمَعُوا۟ ۖ وَتَرَىٰهُمْ يَنظُرُونَ إِلَيْكَ وَهُمْ لَا يُبْصِرُونَ
Transliteration wa-in tadʿūhum ilā l-hudā lā yasmaʿū watarāhum yanẓurūna ilayka wahum lā yub'ṣirūna
Kannada ನೀವು ಅವರನ್ನು ನೇರ ಮಾರ್ಗಕ್ಕೆ ಕರೆದರೆ ನಿಮ್ಮ ಮಾತನ್ನು ಅವರು ಕೇಳಲಾರರು. ಅವರು ನಿಮ್ಮೆಡೆಗೆ ನೋಡುತ್ತಿರುವಂತೆ ತೋರುತ್ತದೆ. ಆದರೆ ವಾಸ್ತವದಲ್ಲಿ ಅವರು ಏನನ್ನೂ ನೋಡು ವುದಿಲ್ಲ .
Verse 199
خُذِ ٱلْعَفْوَ وَأْمُرْ بِٱلْعُرْفِ وَأَعْرِضْ عَنِ ٱلْجَـٰهِلِينَ
Transliteration khudhi l-ʿafwa wamur bil-ʿur'fi wa-aʿriḍ ʿani l-jāhilīna
Kannada (ಓ ಪೈಗಂಬರರೇ,) ಕ್ಷಮೆ ಕೈಗೊಳ್ಳಿರಿ. ಒಳಿತನ್ನು ಬೋಧಿಸಿರಿ ಮತ್ತು ತಿಳಿಗೇಡಿಗಳಿಂದ ವಿಮುಖರಾಗಿರಿ.
Verse 200
وَإِمَّا يَنزَغَنَّكَ مِنَ ٱلشَّيْطَـٰنِ نَزْغٌ فَٱسْتَعِذْ بِٱللَّهِ ۚ إِنَّهُۥ سَمِيعٌ عَلِيمٌ
Transliteration wa-immā yanzaghannaka mina l-shayṭāni nazghun fa-is'taʿidh bil-lahi innahu samīʿun ʿalīmun
Kannada ಶೈತಾನನಿಂದ ಯಾವುದೇ ದುರ್ಭೋದನೆ ನಿಮಗೆ ಸೋಂಕಿದರೆ ಅಲ್ಲಾಹನ ಅಭಯ ಯಾಚಿಸಿರಿ. (ಮಾತನ್ನು) ಆಲಿಸುವವನೂ (ಪ್ರವೃತ್ತಿಯನ್ನು) ಅರಿಯುವವನೂ ಆಗಿರು ತ್ತಾನೆ.
Verse 201
إِنَّ ٱلَّذِينَ ٱتَّقَوْا۟ إِذَا مَسَّهُمْ طَـٰٓئِفٌ مِّنَ ٱلشَّيْطَـٰنِ تَذَكَّرُوا۟ فَإِذَا هُم مُّبْصِرُونَ
Transliteration inna alladhīna ittaqaw idhā massahum ṭāifun mina l-shayṭāni tadhakkarū fa-idhā hum mub'ṣirūna
Kannada ವಾಸ್ತವದಲ್ಲಿ ಧರ್ಮನಿಷ್ಟರಾದವರಿಗೆ ಶೈತಾನ ನಿಂದ ದುರಾಲೋಚನೆಗಳು ಸೋಂಕಿದರೆ ಅವರು ತಕ್ಷಣ ಅಲ್ಲಾಹನನ್ನು ಸ್ಮರಿಸುತ್ತಾರೆ. ಆಗ ಅವರಿಗೆ ಸತ್ಯವು ಸ್ಪಷ್ಟವಾಗಿ ಗೋಚರವಾಗುತ್ತದೆ.
Verse 202
وَإِخْوَٰنُهُمْ يَمُدُّونَهُمْ فِى ٱلْغَىِّ ثُمَّ لَا يُقْصِرُونَ
Transliteration wa-ikh'wānuhum yamuddūnahum fī l-ghayi thumma lā yuq'ṣirūna
Kannada ಶೈತಾನರು ತಮ್ಮ ಸಹೋದರರನ್ನು ದಾರಿಗೇ ಡಿನಲ್ಲಿ ದೀರ್ಘಗೊಳಿಸುತ್ತಾರೆ. ಆಮೇಲೆ ಈ ಸಹೋದರರು ದಾರಿಗೇಡಿನಿಂದ ಮುಕ್ತರಾಗುವುದಿಲ್ಲ.
Verse 203
وَإِذَا لَمْ تَأْتِهِم بِـَٔايَةٍ قَالُوا۟ لَوْلَا ٱجْتَبَيْتَهَا ۚ قُلْ إِنَّمَآ أَتَّبِعُ مَا يُوحَىٰٓ إِلَىَّ مِن رَّبِّى ۚ هَـٰذَا بَصَآئِرُ مِن رَّبِّكُمْ وَهُدًى وَرَحْمَةٌ لِّقَوْمٍ يُؤْمِنُونَ
Transliteration wa-idhā lam tatihim biāyatin qālū lawlā ij'tabaytahā qul innamā attabiʿu mā yūḥā ilayya min rabbī hādhā baṣāiru min rabbikum wahudan waraḥmatun liqawmin yu'minūna
Kannada (ಓ ಪೈಗಂಬರರೇ,) ನೀವು ಅವರ ಮುಂದೆ (ಅವರು ಕೇಳಿದ) ಯಾವುದಾದರೂ ನಿದರ್ಶ ನವನ್ನು ತರದಿದ್ದರೆ ‘ನೀವು ಸ್ವತಃ ಅದನ್ನು ನಿರ್ಮಿಸಲಿಲ್ಲವೇಕೆ?’ ಎಂದು ಇವರು ಕೇಳುತ್ತಾರೆ. ಹೇಳಿರಿ; ನನ್ನ ಪ್ರಭು ನನಗೆ ಅವತೀರ್ಣಗೊಳಿಸಿದ ಸಂದೇಶ ವಚನಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ಇವು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಅಂತಜ್ರ್ಞಾನ ಮತ್ತು ಅವುಗಳನ್ನು ನಂಬುವ ಜನರಿಗೆ ಮಾರ್ಗದರ್ಶನ ಮತ್ತು ಅನುಗ್ರಹವಾಗಿರುತ್ತದೆ.
Verse 204
وَإِذَا قُرِئَ ٱلْقُرْءَانُ فَٱسْتَمِعُوا۟ لَهُۥ وَأَنصِتُوا۟ لَعَلَّكُمْ تُرْحَمُونَ
Transliteration wa-idhā quri-a l-qur'ānu fa-is'tamiʿū lahu wa-anṣitū laʿallakum tur'ḥamūna
Kannada ಖುರ್‍ಆನ್ ಓದಲ್ಪಟ್ಟಾಗ ನೀವು ಅದನ್ನು ಲಕ್ಷ್ಯವಿಟ್ಟು ಕೇಳಿರಿ ಮತ್ತು ಮೌನವಾಗಿರಿ. ನೀವು ಅನುಗ್ರಹೀತರಾಗಬಹುದು.
Verse 205
وَٱذْكُر رَّبَّكَ فِى نَفْسِكَ تَضَرُّعًا وَخِيفَةً وَدُونَ ٱلْجَهْرِ مِنَ ٱلْقَوْلِ بِٱلْغُدُوِّ وَٱلْـَٔاصَالِ وَلَا تَكُن مِّنَ ٱلْغَـٰفِلِينَ
Transliteration wa-udh'kur rabbaka fī nafsika taḍarruʿan wakhīfatan wadūna l-jahri mina l-qawli bil-ghuduwi wal-āṣāli walā takun mina l-ghāfilīna
Kannada (ಓ ಪೈಗಂಬರರೇ,) ದೈನ್ಯತೆ ಹಾಗೂ ಭಯದೊಂದಿಗೆ ನಿಮ್ಮ ಪ್ರಭುವನ್ನು ಮನದಲ್ಲಿ ಧ್ಯಾನಿಸಿರಿ. ನುಡಿಯಲ್ಲಿ ಮಿತವಾದ ಧ್ವನಿಯಲ್ಲಿ ಸಂಜೆ ಮುಂಜಾನೆ ಸ್ಮರಿಸಿರಿ. ಅಶೃದ್ಧರ ಸಾಲಿಗೆ ಸೇರದಿರಿ.
Verse 206
إِنَّ ٱلَّذِينَ عِندَ رَبِّكَ لَا يَسْتَكْبِرُونَ عَنْ عِبَادَتِهِۦ وَيُسَبِّحُونَهُۥ وَلَهُۥ يَسْجُدُونَ ۩
Transliteration inna alladhīna ʿinda rabbika lā yastakbirūna ʿan ʿibādatihi wayusabbiḥūnahu walahu yasjudūna
Kannada ನಿಮ್ಮ ಪ್ರಭುವಿನ ಬಳಿ ಇರುವವರು (ದೇವ ಚರರು) ಅವನ ಆರಾಧನೆಯಿಂದ ವಿಮುಖ ರಾಗಿ ಅಹಂಕರಿಸುವುದಿಲ್ಲ. ಅವರು ಅವನ ಪರಿಶುದ್ಧತೆಯನ್ನು ಕೊಂಡಾಡುತ್ತಾರೆ. ಮತ್ತು ಅವನ ಮುಂದೆ ಸಾಷ್ಟಾಂಗವೆರಗುತ್ತಾರೆ .
Read Surah Al-A'raf in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.