MyDugsiStart learning

Surah As-Saf in Kannada: translation and audio

Surah 61 · الصف · The Ranks · 14 verses

Surah As-Saf verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah As-Saf word by word in English.

Verse 1

سَبَّحَ لِلَّهِ مَا فِى ٱلسَّمَـٰوَٰتِ وَمَا فِى ٱلْأَرْضِ ۖ وَهُوَ ٱلْعَزِيزُ ٱلْحَكِيمُ

Transliteration sabbaḥa lillahi mā fī l-samāwāti wamā fī l-arḍi wahuwa l-ʿazīzu l-ḥakīmu

Kannada ಆಕಾಶ-ಭೂಮಿಗಳಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನ ಪರಿಶುದ್ಧತೆಯನ್ನು ಕೊಂಡಾ ಡಿವೆ. ಅವನು ಅಜೇಯನೂ ಯುಕ್ತಿವಂತನೂ ಆಗಿರುವನು.

Verse 2

يَـٰٓأَيُّهَا ٱلَّذِينَ ءَامَنُوا۟ لِمَ تَقُولُونَ مَا لَا تَفْعَلُونَ

Transliteration yāayyuhā alladhīna āmanū lima taqūlūna mā lā tafʿalūna

Kannada ಓ ಸತ್ಯವಿಶ್ವಾಸಿಗಳೇ, ನೀವು ಮಾಡದ್ದನ್ನು ಆಡುತ್ತೀರೇಕೆ ?

Verse 3

كَبُرَ مَقْتًا عِندَ ٱللَّهِ أَن تَقُولُوا۟ مَا لَا تَفْعَلُونَ

Transliteration kabura maqtan ʿinda l-lahi an taqūlū mā lā tafʿalūna

Kannada ನೀವು ಮಾಡದ್ದನ್ನು ಆಡುವುದು ಅಲ್ಲಾಹನ ಬಳಿ ಬಹಳ ಕ್ರೋಧದ ವಿಚಾರವಾಗಿದೆ.

Verse 4

إِنَّ ٱللَّهَ يُحِبُّ ٱلَّذِينَ يُقَـٰتِلُونَ فِى سَبِيلِهِۦ صَفًّا كَأَنَّهُم بُنْيَـٰنٌ مَّرْصُوصٌ

Transliteration inna l-laha yuḥibbu alladhīna yuqātilūna fī sabīlihi ṣaffan ka-annahum bun'yānun marṣūṣun

Kannada (ಕಲ್ಲುಗಳನ್ನು) ಪರಸ್ಪರ ಬಂಧಿಸಿ ನಿರ್ಮಿಸಲ್ಪಟ್ಟ ಒಂದು ಕಟ್ಟಡದಂತೆ ಪಂಕ್ತಿಬದ್ಧರಾಗಿ ತನ್ನ ಮಾರ್ಗದಲ್ಲಿ ಹೋರಾಡುವವರನ್ನು ಅಲ್ಲಾಹನು ಖಂಡಿತ ಮೆಚ್ಚುತ್ತಾನೆ.

Verse 5

وَإِذْ قَالَ مُوسَىٰ لِقَوْمِهِۦ يَـٰقَوْمِ لِمَ تُؤْذُونَنِى وَقَد تَّعْلَمُونَ أَنِّى رَسُولُ ٱللَّهِ إِلَيْكُمْ ۖ فَلَمَّا زَاغُوٓا۟ أَزَاغَ ٱللَّهُ قُلُوبَهُمْ ۚ وَٱللَّهُ لَا يَهْدِى ٱلْقَوْمَ ٱلْفَـٰسِقِينَ

Transliteration wa-idh qāla mūsā liqawmihi yāqawmi lima tu'dhūnanī waqad taʿlamūna annī rasūlu l-lahi ilaykum falammā zāghū azāgha l-lahu qulūbahum wal-lahu lā yahdī l-qawma l-fāsiqīna

Kannada ಮೂಸಾ, ತಮ್ಮ ಜನಾಂಗದೊಡನೆ ಹೇಳಿದ ಸಂದರ್ಭ (ಸ್ಮರಿಸಿರಿ) “ನನ್ನ ಜನಾಂಗದವರೇ, ನಾನು ನಿಮ್ಮ ಕಡೆಗೆ ಕಳುಹಿಸಲ್ಪಟ್ಟ ಅಲ್ಲಾಹನ ದೂತನೆಂದು ನಿಮಗೆ ಚೆನ್ನಾಗಿ ತಿಳಿದಿದ್ದರೂ ನೀವು ನನ್ನನ್ನೇಕೆ ಹಿಂಸಿಸುತ್ತೀರಿ?” ತರುವಾಯ ಅವರು ಸತ್ಯದಿಂದ ತಪ್ಪಿ ಹೋದಾಗ ಅಲ್ಲಾಹನು ಅವರ ಹೃದಯಗಳನ್ನು ತಪ್ಪಿಸಿ ಬಿಟ್ಟನು. ಅಲ್ಲಾಹನು ಧಿಕ್ಕಾರಿಗಳಾದ ಜನತೆಗೆ ಮಾರ್ಗದರ್ಶನ ನೀಡಲಾರನು.

Verse 6

وَإِذْ قَالَ عِيسَى ٱبْنُ مَرْيَمَ يَـٰبَنِىٓ إِسْرَٰٓءِيلَ إِنِّى رَسُولُ ٱللَّهِ إِلَيْكُم مُّصَدِّقًا لِّمَا بَيْنَ يَدَىَّ مِنَ ٱلتَّوْرَىٰةِ وَمُبَشِّرًۢا بِرَسُولٍ يَأْتِى مِنۢ بَعْدِى ٱسْمُهُۥٓ أَحْمَدُ ۖ فَلَمَّا جَآءَهُم بِٱلْبَيِّنَـٰتِ قَالُوا۟ هَـٰذَا سِحْرٌ مُّبِينٌ

Transliteration wa-idh qāla ʿīsā ub'nu maryama yābanī is'rāīla innī rasūlu l-lahi ilaykum muṣaddiqan limā bayna yadayya mina l-tawrāti wamubashiran birasūlin yatī min baʿdī us'muhu aḥmadu falammā jāahum bil-bayināti qālū hādhā siḥ'run mubīnun

Kannada ಮರ್ಯಮರ ಪುತ್ರ ಈಸಾ ಹೇಳಿದ ಸಂದರ್ಭ (ಸ್ಮರಿಸಿರಿ) “ಇಸ್ರಾಈಲ್ ಸಂತತಿಗಳೇ, ನಾನು, ನನಗಿಂತ ಮೊದಲು ಬಂದಿರುವ ತೌರಾತನ್ನು ದೃಢೀಕರಿಸುವವನಾಗಿಯೂ ನನ್ನ ಬಳಿಕ ಬರಲಿರುವ ಅಹ್ಮದ್ ಎಂಬ ಹೆಸರಿನ ಓರ್ವ ದೂತರ ಕುರಿತು ಸುವಾರ್ತೆ ನೀಡುವವನಾಗಿಯೂ ನಿಮ್ಮ ಕಡೆಗೆ ಅಲ್ಲಾಹನಿಂದ ಕಳುಹಿಸಲಾದ ದೂತನಾಗಿರುತ್ತೇನೆ”. ಅಂತೆಯೇ, ಅವರು ಸುಸ್ಪಷ್ಟ ನಿದರ್ಶನದೊಂದಿಗೆ ಅವರ ಬಳಿಗೆ ಹೋದಾಗ ‘ಇದು ಸ್ಪಷ್ಟ ಜಾಲ ವಿದ್ಯೆ’ ಎಂದು ಅವರು ಹೇಳಿ ಬಿಟ್ಟರು .

Verse 7

وَمَنْ أَظْلَمُ مِمَّنِ ٱفْتَرَىٰ عَلَى ٱللَّهِ ٱلْكَذِبَ وَهُوَ يُدْعَىٰٓ إِلَى ٱلْإِسْلَـٰمِ ۚ وَٱللَّهُ لَا يَهْدِى ٱلْقَوْمَ ٱلظَّـٰلِمِينَ

Transliteration waman aẓlamu mimmani if'tarā ʿalā l-lahi l-kadhiba wahuwa yud'ʿā ilā l-is'lāmi wal-lahu lā yahdī l-qawma l-ẓālimīna

Kannada ಒಬ್ಬನನ್ನು ಇಸ್ಲಾಮಿನೆಡೆಗೆ ಕರೆಯಲಾದಾಗ ಅವನು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದರೆ ಅವನಿಗಿಂತ ದೊಡ್ಡ ಅಕ್ರಮಿ ಯಾರಿದ್ದಾನೆ? ಅಕ್ರಮಿಗಳಾದ ಜನತೆಗೆ ಅಲ್ಲಾಹನು ಮಾರ್ಗದರ್ಶನ ನೀಡಲಾರನು.

Verse 8

يُرِيدُونَ لِيُطْفِـُٔوا۟ نُورَ ٱللَّهِ بِأَفْوَٰهِهِمْ وَٱللَّهُ مُتِمُّ نُورِهِۦ وَلَوْ كَرِهَ ٱلْكَـٰفِرُونَ

Transliteration yurīdūna liyuṭ'fiū nūra l-lahi bi-afwāhihim wal-lahu mutimmu nūrihi walaw kariha l-kāfirūna

Kannada ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿಂದ ಊದಿ ನಂದಿಸಲಿಚ್ಚಿಸುತ್ತಾರೆ. ಸತ್ಯನಿಷೇಧಿಗಳಿಗೆ ಅಪ್ರಿಯವಾಗಿದ್ದರೂ ಅಲ್ಲಾಹನು ತನ್ನ ಪ್ರಕಾಶವನ್ನು ಪೂರ್ತಿಮಾಡುವನು.

Verse 9

هُوَ ٱلَّذِىٓ أَرْسَلَ رَسُولَهُۥ بِٱلْهُدَىٰ وَدِينِ ٱلْحَقِّ لِيُظْهِرَهُۥ عَلَى ٱلدِّينِ كُلِّهِۦ وَلَوْ كَرِهَ ٱلْمُشْرِكُونَ

Transliteration huwa alladhī arsala rasūlahu bil-hudā wadīni l-ḥaqi liyuẓ'hirahu ʿalā l-dīni kullihi walaw kariha l-mush'rikūna

Kannada ಸನ್ಮಾರ್ಗ ಮತ್ತು ಸತ್ಯಧರ್ಮದೊಂದಿಗೆ ಉಳಿದ ಧರ್ಮಗಳಿಗಿಂತ ಅದನ್ನು ಮೇಲಾಗಿ ಬೆಳಕಿಗೆತರುವ ಸಲುವಾಗಿ ತನ್ನ ದೂತನನ್ನು ಕಳುಹಿಸಿರುವವನು ಅವನೇ. ಬಹುದೇವ ವಿಶ್ವಾಸಿಗಳಿಗೆ ಇದು ಎಷ್ಟೇ ಅಪ್ರಿಯವಾದರೂ ಸರಿಯೇ.

Verse 10

يَـٰٓأَيُّهَا ٱلَّذِينَ ءَامَنُوا۟ هَلْ أَدُلُّكُمْ عَلَىٰ تِجَـٰرَةٍ تُنجِيكُم مِّنْ عَذَابٍ أَلِيمٍ

Transliteration yāayyuhā alladhīna āmanū hal adullukum ʿalā tijāratin tunjīkum min ʿadhābin alīmin

Kannada ಸತ್ಯವಿಶ್ವಾಸಿಗಳೇ, ನಿಮ್ಮನ್ನು ವೇದನಾಜನಕ ಶಿಕ್ಷೆಯಿಂದ ರಕ್ಷಿಸುವಂತಹ ಒಂದು ವ್ಯಾಪಾರದ ಬಗ್ಗೆ ನಿಮಗೆ ತಿಳಿಸಿಕೊಡಲೇ?

Verse 11

تُؤْمِنُونَ بِٱللَّهِ وَرَسُولِهِۦ وَتُجَـٰهِدُونَ فِى سَبِيلِ ٱللَّهِ بِأَمْوَٰلِكُمْ وَأَنفُسِكُمْ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ

Transliteration tu'minūna bil-lahi warasūlihi watujāhidūna fī sabīli l-lahi bi-amwālikum wa-anfusikum dhālikum khayrun lakum in kuntum taʿlamūna

Kannada (ಅದೇನೆಂದರೆ) ಅಲ್ಲಾಹು ಮತ್ತು ಅವನ ಸಂದೇಶ ವಾಹಕರಲ್ಲಿ ವಿಶ್ವಾಸವಿರಿಸುವುದು, ನಿಮ್ಮ ಸಂಪತ್ತುಗಳಿಂದಲೂ ಶರೀರಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದು. ನಿಮ್ಮ ಪಾಲಿಗೆ ಅದು ಅತಿ ಉತ್ತಮವಾಗಿದೆ. ನೀವು ತಿಳುವಳಿಕೆಯುಳ್ಳವರಾಗಿದ್ದರೆ.

Verse 12

يَغْفِرْ لَكُمْ ذُنُوبَكُمْ وَيُدْخِلْكُمْ جَنَّـٰتٍ تَجْرِى مِن تَحْتِهَا ٱلْأَنْهَـٰرُ وَمَسَـٰكِنَ طَيِّبَةً فِى جَنَّـٰتِ عَدْنٍ ۚ ذَٰلِكَ ٱلْفَوْزُ ٱلْعَظِيمُ

Transliteration yaghfir lakum dhunūbakum wayud'khil'kum jannātin tajrī min taḥtihā l-anhāru wamasākina ṭayyibatan fī jannāti ʿadnin dhālika l-fawzu l-ʿaẓīmu

Kannada (ಹಾಗಾದರೆ) ಅಲ್ಲಾಹನು ನಿಮ್ಮ ಪಾಪಗಳನ್ನು ಕ್ಷಮಿಸುವನು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ಮತ್ತು ಸ್ಥಿರವಾಸಕ್ಕಿರುವ ಸ್ವರ್ಗಧಾಮಗಳಲ್ಲಿಯ ವಿಶಿಷ್ಟ ವಸತಿಗಳಲ್ಲಿ ಅವನು ನಿಮ್ಮನ್ನು ಪ್ರವೇಶಗೊಳಿಸುವನು. ಅದುವೇ ದಿಗ್ವಿಜಯ.

Verse 13

وَأُخْرَىٰ تُحِبُّونَهَا ۖ نَصْرٌ مِّنَ ٱللَّهِ وَفَتْحٌ قَرِيبٌ ۗ وَبَشِّرِ ٱلْمُؤْمِنِينَ

Transliteration wa-ukh'rā tuḥibbūnahā naṣrun mina l-lahi wafatḥun qarībun wabashiri l-mu'minīna

Kannada ನೀವು ಇಷ್ಟಪಡುವ ಇನ್ನೊಂದು ವಸ್ತುವನ್ನೂ (ನಿಮಗೆ ಕೊಡುವನು.) ಅಂದರೆ (ಅದು) ಅಲ್ಲಾ ಹನ ಕಡೆಯಿಂದ ಸಹಾಯ ಮತ್ತು ಆಸನ್ನವಾದ ವಿಜಯ. (ನಬಿಯರೇ,) ಸತ್ಯವಿಶ್ವಾಸಿಗಳಿಗೆ (ಇದರ) ಸುವಾರ್ತೆ ನೀಡಿರಿ.

Verse 14

يَـٰٓأَيُّهَا ٱلَّذِينَ ءَامَنُوا۟ كُونُوٓا۟ أَنصَارَ ٱللَّهِ كَمَا قَالَ عِيسَى ٱبْنُ مَرْيَمَ لِلْحَوَارِيِّـۧنَ مَنْ أَنصَارِىٓ إِلَى ٱللَّهِ ۖ قَالَ ٱلْحَوَارِيُّونَ نَحْنُ أَنصَارُ ٱللَّهِ ۖ فَـَٔامَنَت طَّآئِفَةٌ مِّنۢ بَنِىٓ إِسْرَٰٓءِيلَ وَكَفَرَت طَّآئِفَةٌ ۖ فَأَيَّدْنَا ٱلَّذِينَ ءَامَنُوا۟ عَلَىٰ عَدُوِّهِمْ فَأَصْبَحُوا۟ ظَـٰهِرِينَ

Transliteration yāayyuhā alladhīna āmanū kūnū anṣāra l-lahi kamā qāla ʿīsā ub'nu maryama lil'ḥawāriyyīna man anṣārī ilā l-lahi qāla l-ḥawāriyūna naḥnu anṣāru l-lahi faāmanat ṭāifatun min banī is'rāīla wakafarat ṭāifatun fa-ayyadnā alladhīna āmanū ʿalā ʿaduwwihim fa-aṣbaḥū ẓāhirīna

Kannada ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನ ಸಹಾಯಕರಾಗಿರಿ, ಮರ್ಯಮರ ಪುತ್ರ ಈಸಾ ಹವಾರಿಗಳೊಡನೆ (ಶಿಷ್ಯರೊಂದಿಗೆ) ‘ಅಲ್ಲಾಹನ ಕಡೆಗೆ ಕರೆ ನೀಡುವಲ್ಲಿ ನನ್ನ ಸಹಾಯಕರು ಯಾರಿದ್ದಾರೆ?’ ಎಂದು ಹೇಳಿದ್ದಂತೆ. ಹವಾರಿಗಳು ಹೇಳಿದರು; ನಾವು ಅಲ್ಲಾಹನ ಸಹಾಯಕರು. ಆಗ ಇಸ್ರಾಈಲ ಸಂತತಿಗಳ ಪೈಕಿ ಒಂದು ವಿಭಾಗ ಸತ್ಯವಿಶ್ವಾಸವನ್ನು ಸ್ವೀಕರಿಸಿತು ಮತ್ತು ಇನ್ನೊಂದು ವಿಭಾಗವು ನಿರಾಕರಿಸಿತು. ತರುವಾಯ ನಾವು ಸತ್ಯವಿಶ್ವಾಸಿಗಳಿಗೆ ಅವರ ಶತ್ರುಗಳ ವಿರುದ್ಧ ಬಲ ನೀಡಿದೆವು. ಹಾಗೆ ಅವರು ವಿಜಯಿಗಳಾಗಿ ಬಿಟ್ಟರು .

Read Surah As-Saf in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.