Surah An-Nur in Kannada: translation and audio
Surah 24 · النور · The Light · 64 verses
Surah An-Nur verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah An-Nur word by word in English.
Verse 1
سُورَةٌ أَنزَلْنَـٰهَا وَفَرَضْنَـٰهَا وَأَنزَلْنَا فِيهَآ ءَايَـٰتٍۭ بَيِّنَـٰتٍ لَّعَلَّكُمْ تَذَكَّرُونَ
Transliteration sūratun anzalnāhā wafaraḍnāhā wa-anzalnā fīhā āyātin bayyinātin laʿallakum tadhakkarūna
Kannada ಇದೊಂದು ಮಹತ್ತರ ಅಧ್ಯಾಯ, ಇದನ್ನು ನಾವು ಅವತೀರ್ಣಗೊಳಿಸಿದ್ದೇವೆ, ಇದರ ವಿಧಿ ನಿಯಮಗಳನ್ನು ಕಡ್ಡಾಯಗೊಳಿಸಿದ್ದೇವೆ. ನೀವು ಯೋಚಿಸಲಿಕ್ಕಾಗಿ, ಇದರಲ್ಲಿ ನಾವು ಸುಸ್ಪಷ್ಟವಾದ ವಿವಿಧ ಆದೇಶಗಳನ್ನು ಅವತೀರ್ಣಗೊಳಿಸಿದ್ದೇವೆ.
Verse 2
ٱلزَّانِيَةُ وَٱلزَّانِى فَٱجْلِدُوا۟ كُلَّ وَٰحِدٍ مِّنْهُمَا مِا۟ئَةَ جَلْدَةٍ ۖ وَلَا تَأْخُذْكُم بِهِمَا رَأْفَةٌ فِى دِينِ ٱللَّهِ إِن كُنتُمْ تُؤْمِنُونَ بِٱللَّهِ وَٱلْيَوْمِ ٱلْـَٔاخِرِ ۖ وَلْيَشْهَدْ عَذَابَهُمَا طَآئِفَةٌ مِّنَ ٱلْمُؤْمِنِينَ
Transliteration al-zāniyatu wal-zānī fa-ij'lidū kulla wāḥidin min'humā mi-ata jaldatin walā takhudh'kum bihimā rafatun fī dīni l-lahi in kuntum tu'minūna bil-lahi wal-yawmi l-ākhiri walyashhad ʿadhābahumā ṭāifatun mina l-mu'minīna
Kannada ವ್ಯಭಿಚಾರಿ ಮತ್ತು ವ್ಯಭಿಚಾರಿಣಿ ಇವರಿಬ್ಬರಲ್ಲಿ ಪ್ರತಿಯೊಬ್ಬರಿಗೂ ನೂರು ಛಡಿಯೇಟು ಕೊಡಿರಿ. ನೀವು ಅಲ್ಲಾಹು ಹಾಗೂ ಅಂತಿಮ ದಿವಸದಲ್ಲಿ ವಿಶ್ವಾಸವುಳ್ಳವರಾಗಿದ್ದರೆ ಅಲ್ಲಾಹನ ಕಾನೂನು ಕ್ರಮ ಕೈಗೊಳ್ಳುವ ವಿಷಯದಲ್ಲಿ ಅವರಿಬ್ಬರಲ್ಲಿ ಯಾವುದೇ ಕನಿಕರವು ನಿಮ್ಮನ್ನು ತಡೆಹಿಡಿಯದಿರಲಿ. ಅವರಿಗೆ ಶಿಕ್ಷೆ ಕೊಡುವಾಗ ಸತ್ಯವಿಶ್ವಾಸಿಗಳ ಒಂದು ಸಮೂಹ ಉಪಸ್ಥಿತವಿರಲಿ.
Verse 3
ٱلزَّانِى لَا يَنكِحُ إِلَّا زَانِيَةً أَوْ مُشْرِكَةً وَٱلزَّانِيَةُ لَا يَنكِحُهَآ إِلَّا زَانٍ أَوْ مُشْرِكٌ ۚ وَحُرِّمَ ذَٰلِكَ عَلَى ٱلْمُؤْمِنِينَ
Transliteration al-zānī lā yankiḥu illā zāniyatan aw mush'rikatan wal-zāniyatu lā yankiḥuhā illā zānin aw mush'rikun waḥurrima dhālika ʿalā l-mu'minīna
Kannada ವ್ಯಭಿಚಾರಿಯು ವ್ಯಭಿಚಾರಿಣಿಯನ್ನೋ ಅಥವಾ ಬಹುದೇವ ವಿಶ್ವಾಸಿನಿಯನ್ನೋ ಹೊರತು ವಿವಾಹವಾಗಲಾರನು. ವ್ಯಭಿಚಾರಿಣಿಯನ್ನು ವ್ಯಭಿಚಾರಿ ಅಥವಾ ಬಹುದೈವ ವಿಶ್ವಾಸಿಯ ಹೊರತು ವಿವಾಹವಾಗಲಾರನು. ಇದನ್ನು ಸತ್ಯ ವಿಶ್ವಾಸಿಗಳ ಮೇಲೆ ನಿಷಿದ್ಧಗೊಳಿಸಲಾಗಿದೆ .
Verse 4
وَٱلَّذِينَ يَرْمُونَ ٱلْمُحْصَنَـٰتِ ثُمَّ لَمْ يَأْتُوا۟ بِأَرْبَعَةِ شُهَدَآءَ فَٱجْلِدُوهُمْ ثَمَـٰنِينَ جَلْدَةً وَلَا تَقْبَلُوا۟ لَهُمْ شَهَـٰدَةً أَبَدًا ۚ وَأُو۟لَـٰٓئِكَ هُمُ ٱلْفَـٰسِقُونَ
Transliteration wa-alladhīna yarmūna l-muḥ'ṣanāti thumma lam yatū bi-arbaʿati shuhadāa fa-ij'lidūhum thamānīna jaldatan walā taqbalū lahum shahādatan abadan wa-ulāika humu l-fāsiqūna
Kannada ಶೀಲವತಿಯರ ಮೇಲೆ ಹಾದರದ ಆರೋಪ ಹೊರಿಸಿ, ಆ ಬಳಿಕ ನಾಲ್ವರು ಸಾಕ್ಷಿದಾರರನ್ನು ತರದವರಿಗೆ ಎಂಬತ್ತು ಛಡಿಯೇಟು ಕೊಡಿರಿ. ಅವರ ಸಾಕ್ಷ್ಯವನ್ನು ಎಂದಿಗೂ ಸ್ವೀಕರಿಸಬೇಡಿರಿ. ಅವರೇ ಅಧರ್ಮಿಗಳು.
Verse 5
إِلَّا ٱلَّذِينَ تَابُوا۟ مِنۢ بَعْدِ ذَٰلِكَ وَأَصْلَحُوا۟ فَإِنَّ ٱللَّهَ غَفُورٌ رَّحِيمٌ
Transliteration illā alladhīna tābū min baʿdi dhālika wa-aṣlaḥū fa-inna l-laha ghafūrun raḥīmun
Kannada ಅದರ ಬಳಿಕ ಪಶ್ಚಾತ್ತಾಪಪಟ್ಟು ತಮ್ಮ ಬದುಕನ್ನು ಸುಧಾರಿಸಿಕೊಂಡವರ ಹೊರತು. ಅಲ್ಲಾಹನು ಅತ್ಯಂತ ಕ್ಷಮಾಶೀಲನೂ ಪರಮ ದಯಾನಿಧಿಯೂ ಆಗಿರುತ್ತಾನೆ.
Verse 6
وَٱلَّذِينَ يَرْمُونَ أَزْوَٰجَهُمْ وَلَمْ يَكُن لَّهُمْ شُهَدَآءُ إِلَّآ أَنفُسُهُمْ فَشَهَـٰدَةُ أَحَدِهِمْ أَرْبَعُ شَهَـٰدَٰتٍۭ بِٱللَّهِ ۙ إِنَّهُۥ لَمِنَ ٱلصَّـٰدِقِينَ
Transliteration wa-alladhīna yarmūna azwājahum walam yakun lahum shuhadāu illā anfusuhum fashahādatu aḥadihim arbaʿu shahādātin bil-lahi innahu lamina l-ṣādiqīna
Kannada ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರು, ತಮ್ಮ ಬಳಿ ಸ್ವಯಂ ತಾವಲ್ಲದೆ ಬೇರೆ ಯಾರೂ ಸಾಕ್ಷಿದಾರರಿಲ್ಲದಿದ್ದರೆ (ಶಿಕ್ಷೆಯಿಂದ ಪಾರಾಗಬೇಕಾದರೆ) ಅವರಲ್ಲಿ ಪ್ರತಿಯೊಬ್ಬನು ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ತಾನು ದೋಷಾ ರೋಪದಲ್ಲಿ ಸತ್ಯವಂತನೆಂದು ಸಾಕ್ಷ್ಯ ಹೇಳಬೇಕು.
Verse 7
وَٱلْخَـٰمِسَةُ أَنَّ لَعْنَتَ ٱللَّهِ عَلَيْهِ إِن كَانَ مِنَ ٱلْكَـٰذِبِينَ
Transliteration wal-khāmisatu anna laʿnata l-lahi ʿalayhi in kāna mina l-kādhibīna
Kannada ಐದನೇ ಬಾರಿ, `ತಾನು ಸುಳ್ಳಾರೋಪಿಯಾಗಿದ್ದರೆ ತನ್ನ ಮೇಲೆ ಅಲ್ಲಾಹನ ಶಾಪವಿರಲಿ’ ಎನ್ನಬೇಕು.
Verse 8
وَيَدْرَؤُا۟ عَنْهَا ٱلْعَذَابَ أَن تَشْهَدَ أَرْبَعَ شَهَـٰدَٰتٍۭ بِٱللَّهِ ۙ إِنَّهُۥ لَمِنَ ٱلْكَـٰذِبِينَ
Transliteration wayadra-u ʿanhā l-ʿadhāba an tashhada arbaʿa shahādātin bil-lahi innahu lamina l-kādhibīna
Kannada ಆಕೆ ನಾಲ್ಕು ಬಾರಿ ಅಲ್ಲಾಹನ ಆಣೆ ಹಾಕಿ ಈತನು ಸುಳ್ಳಾರೋಪಿಯೆಂದು ಸಾಕ್ಷ್ಯ ಹೇಳಿದರೆ ವ್ಯಭಿಚಾರದ ಶಿಕ್ಷೆಯನ್ನು ಅದು ಆಕೆಯಿಂದ ಪಾರು ಗೊಳಿಸುವುದು.
Verse 9
وَٱلْخَـٰمِسَةَ أَنَّ غَضَبَ ٱللَّهِ عَلَيْهَآ إِن كَانَ مِنَ ٱلصَّـٰدِقِينَ
Transliteration wal-khāmisata anna ghaḍaba l-lahi ʿalayhā in kāna mina l-ṣādiqīna
Kannada ಐದನೇ ಬಾರಿ, `ಆತನು ಸತ್ಯವಂತನಾಗಿದ್ದರೆ ನನ್ನ ಮೇಲೆ ಅಲ್ಲಾಹನ ಕ್ರೋಧವೆರಗಲಿ’ ಎಂದು ಆಕೆ ಹೇಳಬೇಕು.
Verse 10
وَلَوْلَا فَضْلُ ٱللَّهِ عَلَيْكُمْ وَرَحْمَتُهُۥ وَأَنَّ ٱللَّهَ تَوَّابٌ حَكِيمٌ
Transliteration walawlā faḍlu l-lahi ʿalaykum waraḥmatuhu wa-anna l-laha tawwābun ḥakīmun
Kannada ಅಲ್ಲಾಹನ ಔದಾರ್ಯವೂ ಅವನ ಕೃಪೆಯೂ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ಮತ್ತು ಅಲ್ಲಾಹನು ಪಶ್ಚಾತ್ತಾಪ ಸ್ವೀಕರಿಸುವವನೂ ಯುಕ್ತಿಪೂರ್ಣನೂ ಆಗಿರದಿರುತ್ತಿದ್ದರೆ (ಅವನು ನಿಜಸ್ಥಿತಿಯನ್ನು ಬಹಿರಂಗಗೊಳಿಸುತ್ತಿದ್ದನು ಮತ್ತು ತಪ್ಪಿತಸ್ಥರನ್ನು ತ್ವರಿತವಾಗಿ ಶಿಕ್ಷಿಸುತ್ತಿದ್ದನು.)
Verse 11
إِنَّ ٱلَّذِينَ جَآءُو بِٱلْإِفْكِ عُصْبَةٌ مِّنكُمْ ۚ لَا تَحْسَبُوهُ شَرًّا لَّكُم ۖ بَلْ هُوَ خَيْرٌ لَّكُمْ ۚ لِكُلِّ ٱمْرِئٍ مِّنْهُم مَّا ٱكْتَسَبَ مِنَ ٱلْإِثْمِ ۚ وَٱلَّذِى تَوَلَّىٰ كِبْرَهُۥ مِنْهُمْ لَهُۥ عَذَابٌ عَظِيمٌ
Transliteration inna alladhīna jāū bil-if'ki ʿuṣ'batun minkum lā taḥsabūhu sharran lakum bal huwa khayrun lakum likulli im'ri-in min'hum mā ik'tasaba mina l-ith'mi wa-alladhī tawallā kib'rahu min'hum lahu ʿadhābun ʿaẓīmun
Kannada ಈ ಸುಳ್ಳಾರೋಪವನ್ನು ತಂದವರು ನಿಮ್ಮಿಂದಲೇ ಇರುವ ಒಂದು ಸಂಘದವರು. (ಆಯಿಶಾರ ಕುಟುಂಬವೇ!) ಇದು ನಿಮ್ಮ ಪಾಲಿಗೆ ಕೆಟ್ಟದೆಂದು ಭಾವಿಸಬೇಡಿ. ಅಲ್ಲ, ಇದು ನಿಮಗೆ ಹಿತಕರವಾಗಿದೆ. ಅವರಲ್ಲಿ ಪ್ರತಿಯೊಬ್ಬನು ತಾನೆಸಗಿದ ತಪ್ಪಿಗೆ ಶಿಕ್ಷೆ ಅನುಭವಿಸುವನು. ಅವರಲ್ಲಿ ಇದರ ನಾಯಕತ್ವ ವಹಿಸಿಕೊಂಡವನಾರೋ, ಆತನಿಗೆ ಉಗ್ರ ಶಿಕ್ಷೆಯುಂಟು.
Verse 12
لَّوْلَآ إِذْ سَمِعْتُمُوهُ ظَنَّ ٱلْمُؤْمِنُونَ وَٱلْمُؤْمِنَـٰتُ بِأَنفُسِهِمْ خَيْرًا وَقَالُوا۟ هَـٰذَآ إِفْكٌ مُّبِينٌ
Transliteration lawlā idh samiʿ'tumūhu ẓanna l-mu'minūna wal-mu'minātu bi-anfusihim khayran waqālū hādhā if'kun mubīnun
Kannada ನೀವು ಅದನ್ನು ಕೇಳಿದಾಗ ಸತ್ಯವಿಶ್ವಾಸಿ ಸ್ತ್ರೀ- ಪುರುಷರು ತಮ್ಮ ಬಗ್ಗೆ ಪರಸ್ಪರ ಸದ್ಭಾವನೆಯ ನ್ನೇಕೆ ಇರಿಸಲಿಲ್ಲ ಮತ್ತು ಇದು ಅಪ್ಪಟ ಸುಳ್ಳಾರೋಪವೆಂದು ಏಕೆ ಹೇಳಲಿಲ್ಲ .
Verse 13
لَّوْلَا جَآءُو عَلَيْهِ بِأَرْبَعَةِ شُهَدَآءَ ۚ فَإِذْ لَمْ يَأْتُوا۟ بِٱلشُّهَدَآءِ فَأُو۟لَـٰٓئِكَ عِندَ ٱللَّهِ هُمُ ٱلْكَـٰذِبُونَ
Transliteration lawlā jāū ʿalayhi bi-arbaʿati shuhadāa fa-idh lam yatū bil-shuhadāi fa-ulāika ʿinda l-lahi humu l-kādhibūna
Kannada ಅವರು (ಆರೋಪ ಹೊರಿಸಿದವರು) ನಾಲ್ಕು ಸಾಕ್ಷಿ ದಾರರನ್ನೇಕೆ ತರಲಿಲ್ಲ? ಆದರೆ ಅವರು ಸಾಕ್ಷಿಗಳನ್ನು ತಾರದಿರುವುದರಿಂದ ಅಲ್ಲಾಹನ ಬಳಿ ಅವರೇ ಸುಳ್ಳುಗಾರರು.
Verse 14
وَلَوْلَا فَضْلُ ٱللَّهِ عَلَيْكُمْ وَرَحْمَتُهُۥ فِى ٱلدُّنْيَا وَٱلْـَٔاخِرَةِ لَمَسَّكُمْ فِى مَآ أَفَضْتُمْ فِيهِ عَذَابٌ عَظِيمٌ
Transliteration walawlā faḍlu l-lahi ʿalaykum waraḥmatuhu fī l-dun'yā wal-ākhirati lamassakum fī mā afaḍtum fīhi ʿadhābun ʿaẓīmun
Kannada ಇಹಲೋಕ ಮತ್ತು ಪರಲೋಕದಲ್ಲಿ ನಿಮ್ಮ ಮೇಲೆ ಅಲ್ಲಾಹನ ಔದಾರ್ಯವೂ ಕೃಪೆಯೂ ಇಲ್ಲದಿರುತ್ತಿ ದ್ದರೆ, ನೀವು ಹರಿಯಬಿಟ್ಟ ಸುಳ್ಳು ವದಂತಿಯ ಫಲವಾಗಿ ಭಯಂಕರ ಶಿಕ್ಷೆ ನಿಮಗೆ ತಟ್ಟುತ್ತಿತ್ತು.
Verse 15
إِذْ تَلَقَّوْنَهُۥ بِأَلْسِنَتِكُمْ وَتَقُولُونَ بِأَفْوَاهِكُم مَّا لَيْسَ لَكُم بِهِۦ عِلْمٌ وَتَحْسَبُونَهُۥ هَيِّنًا وَهُوَ عِندَ ٱللَّهِ عَظِيمٌ
Transliteration idh talaqqawnahu bi-alsinatikum wataqūlūna bi-afwāhikum mā laysa lakum bihi ʿil'mun wataḥsabūnahu hayyinan wahuwa ʿinda l-lahi ʿaẓīmun
Kannada ನೀವದನ್ನು ನಾಲಗೆಯಿಂದ ನಾಲಗೆಗೆ ಸಾಗಿ ಸುತ್ತ ನಿಮಗೆ ಯಾವುದೇ ಅರಿವಿಲ್ಲದ ವಿಷಯ ವನ್ನು ನಿಮ್ಮ ಬಾಯಿಯಿಂದ ಹೇಳುತ್ತಿದ್ದಾಗ (ಶಿಕ್ಷೆ ಎರಗುತ್ತಿತ್ತು). ಅದನ್ನು ಒಂದು ಕ್ಷುಲ್ಲಕ ವಿಷಯವೆಂದು ನೀವು ಭಾವಿಸುತ್ತಿದ್ದೀರಿ. ಆದರೆ ಅದು ಅಲ್ಲಾಹನ ಬಳಿ ಅತ್ಯಂತ ಗಂಭೀರ ವಿಷಯವಾಗಿತ್ತು.
Verse 16
وَلَوْلَآ إِذْ سَمِعْتُمُوهُ قُلْتُم مَّا يَكُونُ لَنَآ أَن نَّتَكَلَّمَ بِهَـٰذَا سُبْحَـٰنَكَ هَـٰذَا بُهْتَـٰنٌ عَظِيمٌ
Transliteration walawlā idh samiʿ'tumūhu qul'tum mā yakūnu lanā an natakallama bihādhā sub'ḥānaka hādhā buh'tānun ʿaẓīmun
Kannada ನೀವು ಅದನ್ನು ಕೇಳಿದಾಗ, “ನಾವು ಹೀಗೆ ಮಾತಾ ಡಿಕೊಳ್ಳುವುದು ನಮಗೆ ಭೂಷಣವಲ್ಲ. (ಓ ಅಲ್ಲಾಹ್) ನೀನು ಪರಮ ಪಾವನನು. ಇದೊಂದು ಗಂಭೀರ ಅಪವಾದವಾಗಿದೆ” ಎಂದೇಕೆ ಹೇಳಲಿಲ್ಲ?
Verse 17
يَعِظُكُمُ ٱللَّهُ أَن تَعُودُوا۟ لِمِثْلِهِۦٓ أَبَدًا إِن كُنتُم مُّؤْمِنِينَ
Transliteration yaʿiẓukumu l-lahu an taʿūdū limith'lihi abadan in kuntum mu'minīna
Kannada ನೀವು ಸತ್ಯವಿಶ್ವಾಸಿಗಳಾಗಿದ್ದರೆ ಇಂತಹ ಕೆಲಸ ಇನ್ನೆಂದೂ ಮಾಡಬೇಡಿರಿ ಎಂದು ಅಲ್ಲಾಹನು ನಿಮಗೆ ಉಪದೇಶ ಕೊಡುತ್ತಾನೆ.
Verse 18
وَيُبَيِّنُ ٱللَّهُ لَكُمُ ٱلْـَٔايَـٰتِ ۚ وَٱللَّهُ عَلِيمٌ حَكِيمٌ
Transliteration wayubayyinu l-lahu lakumu l-āyāti wal-lahu ʿalīmun ḥakīmun
Kannada ಅಲ್ಲಾಹು ನಿಮಗೆ ಆದೇಶಗಳನ್ನು ಸ್ಪಷ್ಟವಾಗಿ ವಿವರಿಸಿ ಕೊಡುತ್ತಾನೆ. ಅವನು ಸರ್ವಜ್ಞನೂ ಯುಕ್ತಿ ಪೂರ್ಣನು ಆಗಿರುತ್ತಾನೆ.
Verse 19
إِنَّ ٱلَّذِينَ يُحِبُّونَ أَن تَشِيعَ ٱلْفَـٰحِشَةُ فِى ٱلَّذِينَ ءَامَنُوا۟ لَهُمْ عَذَابٌ أَلِيمٌ فِى ٱلدُّنْيَا وَٱلْـَٔاخِرَةِ ۚ وَٱللَّهُ يَعْلَمُ وَأَنتُمْ لَا تَعْلَمُونَ
Transliteration inna alladhīna yuḥibbūna an tashīʿa l-fāḥishatu fī alladhīna āmanū lahum ʿadhābun alīmun fī l-dun'yā wal-ākhirati wal-lahu yaʿlamu wa-antum lā taʿlamūna
Kannada ಸತ್ಯವಿಶ್ವಾಸಿಗಳ ನಡುವೆ ಅಶ್ಲೀಲತೆ ಹರಡು ವುದನ್ನು ಇಷ್ಟಪಡುವವರಿಗೆ ಇಹಲೋಕದಲ್ಲೂ ಪರಲೋಕದಲ್ಲೂ ವೇದನಾಯುಕ್ತ ಶಿಕ್ಷೆಯುಂಟ. ಅಲ್ಲಾಹು ಬಲ್ಲವನು; ನೀವು ಬಲ್ಲವರಲ್ಲ.
Verse 20
وَلَوْلَا فَضْلُ ٱللَّهِ عَلَيْكُمْ وَرَحْمَتُهُۥ وَأَنَّ ٱللَّهَ رَءُوفٌ رَّحِيمٌ
Transliteration walawlā faḍlu l-lahi ʿalaykum waraḥmatuhu wa-anna l-laha raūfun raḥīmun
Kannada ಅಲ್ಲಾಹನ ಔದಾರ್ಯ ಮತ್ತು ಅವನ ಕೃಪೆ ನಿಮ್ಮ ಮೇಲೆ ಇಲ್ಲದಿರುತ್ತಿದ್ದರೆ ಮತ್ತು ಅಲ್ಲಾಹನು ಮಹಾವತ್ಸಲನೂ ದಯಾನಿಧಿಯೂ ಅಗಿಲ್ಲದಿರುತ್ತಿದ್ದರೆ (ಅವನು ನಿಮಗೆ ಶಿಕ್ಷೆಯನ್ನು ತ್ವರಿತಗೊಳಿಸುತ್ತಿದ್ದನು.)
Verse 21
۞ يَـٰٓأَيُّهَا ٱلَّذِينَ ءَامَنُوا۟ لَا تَتَّبِعُوا۟ خُطُوَٰتِ ٱلشَّيْطَـٰنِ ۚ وَمَن يَتَّبِعْ خُطُوَٰتِ ٱلشَّيْطَـٰنِ فَإِنَّهُۥ يَأْمُرُ بِٱلْفَحْشَآءِ وَٱلْمُنكَرِ ۚ وَلَوْلَا فَضْلُ ٱللَّهِ عَلَيْكُمْ وَرَحْمَتُهُۥ مَا زَكَىٰ مِنكُم مِّنْ أَحَدٍ أَبَدًا وَلَـٰكِنَّ ٱللَّهَ يُزَكِّى مَن يَشَآءُ ۗ وَٱللَّهُ سَمِيعٌ عَلِيمٌ
Transliteration yāayyuhā alladhīna āmanū lā tattabiʿū khuṭuwāti l-shayṭāni waman yattabiʿ khuṭuwāti l-shayṭāni fa-innahu yamuru bil-faḥshāi wal-munkari walawlā faḍlu l-lahi ʿalaykum waraḥmatuhu mā zakā minkum min aḥadin abadan walākinna l-laha yuzakkī man yashāu wal-lahu samīʿun ʿalīmun
Kannada ಸತ್ಯವಿಶ್ವಾಸಿಗಳೇ, ಶೈತಾನನ ಹೆಜ್ಜೆ ಗುರುತು ಗಳನ್ನು ಅನುಸರಿಸಬೇಡಿರಿ. ಯಾರು ಶೈತಾನನ ಹೆಜ್ಜೆ ಗುರುತುಗಳನ್ನು ಅನುಸರಿಸುತ್ತಾರೆ, ಅವನು ಆತನಿಗೆ ನೀಚ ವೃತ್ತಿ ಹಾಗೂ ದುರಾ ಚಾರದ ಆಜ್ಞೆಯನ್ನೇ ಕೊಡುವನು . ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ಕೃಪೆಯಿಲ್ಲದಿರುತ್ತಿದ್ದರೆ, ನಿಮ್ಮ ಪೈಕಿ ಒಬ್ಬನೂ ಯಾವತ್ತೂ ಪರಿಶುದ್ಧನಾಗಲಾರ. ಆದರೆ ಅಲ್ಲಾಹನು ತಾನಿಚ್ಛಿಸಿದವರನ್ನು ಪರಿಶುದ್ಧಗೊಳಿ ಸುತ್ತಾನೆ. ಅಲ್ಲಾಹು ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ.
Verse 22
وَلَا يَأْتَلِ أُو۟لُوا۟ ٱلْفَضْلِ مِنكُمْ وَٱلسَّعَةِ أَن يُؤْتُوٓا۟ أُو۟لِى ٱلْقُرْبَىٰ وَٱلْمَسَـٰكِينَ وَٱلْمُهَـٰجِرِينَ فِى سَبِيلِ ٱللَّهِ ۖ وَلْيَعْفُوا۟ وَلْيَصْفَحُوٓا۟ ۗ أَلَا تُحِبُّونَ أَن يَغْفِرَ ٱللَّهُ لَكُمْ ۗ وَٱللَّهُ غَفُورٌ رَّحِيمٌ
Transliteration walā yatali ulū l-faḍli minkum wal-saʿati an yu'tū ulī l-qur'bā wal-masākīna wal-muhājirīna fī sabīli l-lahi walyaʿfū walyaṣfaḥū alā tuḥibbūna an yaghfira l-lahu lakum wal-lahu ghafūrun raḥīmun
Kannada ನಿಮ್ಮಲ್ಲಿ ಶ್ರೇಷ್ಟರು ಮತ್ತು ಆರ್ಥಿಕ ಸಾಮಥ್ರ್ಯ ವುಳ್ಳವರು ತಮ್ಮ ಸಂಬಂಧಿಕರಿಗೂ ದರಿದ್ರರಿಗೂ ಅಲ್ಲಾಹನ ಮಾರ್ಗದಲ್ಲಿ (ಸ್ವದೇಶದಿಂದ) ಪಲಾಯನ ಮಾಡುವವರಿಗೂ ಧನಸಹಾಯ ಮಾಡುವುದಿಲ್ಲವೆಂದು (ಏನನ್ನೂ ಕೊಡಲಾರೆನೆಂದು) ಪ್ರತಿಜ್ಞೆ ಮಾಡಬಾರದು. ಅವರು ಮಾಫಿ ಕೊಡಲಿ, ರಿಯಾಯಿತಿ ತೋರಲಿ. ಅಲ್ಲಾಹು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ? ಅಲ್ಲಾಹನು, ಅತ್ಯಂತ ಕ್ಷಮಾಶೀಲನೂ ಕೃಪಾ ನಿಧಿಯೂ ಆಗಿರುತ್ತಾನೆ.
Verse 23
إِنَّ ٱلَّذِينَ يَرْمُونَ ٱلْمُحْصَنَـٰتِ ٱلْغَـٰفِلَـٰتِ ٱلْمُؤْمِنَـٰتِ لُعِنُوا۟ فِى ٱلدُّنْيَا وَٱلْـَٔاخِرَةِ وَلَهُمْ عَذَابٌ عَظِيمٌ
Transliteration inna alladhīna yarmūna l-muḥ'ṣanāti l-ghāfilāti l-mu'mināti luʿinū fī l-dun'yā wal-ākhirati walahum ʿadhābun ʿaẓīmun
Kannada ನೀಚ ವೃತ್ತಿಗಳಿಂದ ಅಶೃದ್ಧರಾದ ಪತಿವ್ರತ ಸತ್ಯ ವಿಶ್ವಾಸಿನಿಯರ ಮೇಲೆ ಹಾದರದ ಆರೋಪ ಹೊರಿಸುವವರನ್ನು ಈ ಲೋಕದಲ್ಲೂ ಪರಲೋಕದಲ್ಲೂ ಶಪಿಸಲಾಗಿದೆ. ಖಂಡಿತ ಅವರಿಗಾಗಿ ಭಯಂಕರ ಶಿಕ್ಷೆ ಇದೆ .
Verse 24
يَوْمَ تَشْهَدُ عَلَيْهِمْ أَلْسِنَتُهُمْ وَأَيْدِيهِمْ وَأَرْجُلُهُم بِمَا كَانُوا۟ يَعْمَلُونَ
Transliteration yawma tashhadu ʿalayhim alsinatuhum wa-aydīhim wa-arjuluhum bimā kānū yaʿmalūna
Kannada ಅವರು ತಮ್ಮ ಕೃತ್ಯಗಳ ಬಗ್ಗೆ ತಮ್ಮ ನಾಲಗೆಗಳೂ ಕೈಕಾಲುಗಳೂ ಸಾಕ್ಷ್ಯ ಹೇಳಲಿರುವ ದಿನವದು.
Verse 25
يَوْمَئِذٍ يُوَفِّيهِمُ ٱللَّهُ دِينَهُمُ ٱلْحَقَّ وَيَعْلَمُونَ أَنَّ ٱللَّهَ هُوَ ٱلْحَقُّ ٱلْمُبِينُ
Transliteration yawma-idhin yuwaffīhimu l-lahu dīnahumu l-ḥaqa wayaʿlamūna anna l-laha huwa l-ḥaqu l-mubīnu
Kannada ಅಂದು ಅಲ್ಲಾಹನು, ಅವರಿಗೆ ನ್ಯಾಯಯುಕ್ತ ಪ್ರತಿಫಲವನ್ನು ಸಂಪೂರ್ಣವಾಗಿ ಕೊಡುವನು. ಅಲ್ಲಾಹನೇ ಸ್ಪಷ್ಟವಾದ ಪರಮಸತ್ಯನು (ನೀತಿ ಪಾಲಕನು) ಎಂಬುದು ಅವರಿಗೆ ತಿಳಿಯುವುದು.
Verse 26
ٱلْخَبِيثَـٰتُ لِلْخَبِيثِينَ وَٱلْخَبِيثُونَ لِلْخَبِيثَـٰتِ ۖ وَٱلطَّيِّبَـٰتُ لِلطَّيِّبِينَ وَٱلطَّيِّبُونَ لِلطَّيِّبَـٰتِ ۚ أُو۟لَـٰٓئِكَ مُبَرَّءُونَ مِمَّا يَقُولُونَ ۖ لَهُم مَّغْفِرَةٌ وَرِزْقٌ كَرِيمٌ
Transliteration al-khabīthātu lil'khabīthīna wal-khabīthūna lil'khabīthāti wal-ṭayibātu lilṭṭayyibīna wal-ṭayibūna lilṭṭayyibāti ulāika mubarraūna mimmā yaqūlūna lahum maghfiratun wariz'qun karīmun
Kannada ನಡತೆಗೆಟ್ಟ ಸ್ತ್ರೀಯರು ನಡತೆಗೆಟ್ಟ ಪುರುಷರಿಗೂ, ನಡತೆಗೆಟ್ಟ ಪುರುಷರು ನಡತೆಗೆಟ್ಟ ಸ್ತ್ರೀಯರಿಗೂ ಅನುಯೋಜ್ಯರು. ಗುಣವಂತೆ ಸ್ತ್ರೀಯರು ಗುಣವಂತ ಪುರುಷರಿಗೂ, ಗುಣವಂತ ಪುರುಷರು ಗುಣವಂತೆ ಸ್ತ್ರೀಯರಿಗೂ ಅನುಯೋಜ್ಯರು. ಇವರು ಆಡುತ್ತಿರುವ ಮಾತುಗಳಿಂದ ಅವರು ಮುಕ್ತರು. ಅವರಿಗೆ ಪಾಪ ಮುಕ್ತಿಯೂ ಸನ್ಮಾನ್ಯ ಜೀವನಾಧಾರವೂ ಇದೆ.
Verse 27
يَـٰٓأَيُّهَا ٱلَّذِينَ ءَامَنُوا۟ لَا تَدْخُلُوا۟ بُيُوتًا غَيْرَ بُيُوتِكُمْ حَتَّىٰ تَسْتَأْنِسُوا۟ وَتُسَلِّمُوا۟ عَلَىٰٓ أَهْلِهَا ۚ ذَٰلِكُمْ خَيْرٌ لَّكُمْ لَعَلَّكُمْ تَذَكَّرُونَ
Transliteration yāayyuhā alladhīna āmanū lā tadkhulū buyūtan ghayra buyūtikum ḥattā tastanisū watusallimū ʿalā ahlihā dhālikum khayrun lakum laʿallakum tadhakkarūna
Kannada ಸತ್ಯವಿಶ್ವಾಸಿಗಳೇ, ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಪಡೆಯದೆ ಹಾಗೂ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬೇಡಿ. ಇದೇ ನಿಮಗೆ ಉತ್ತಮ. ನಿಮಗೆ ನೆನಪಿಸಲಿಕ್ಕಾಗಿ ಇದನ್ನು ಅವತೀರ್ಣಗೊಳಿಸಲಾಗಿದೆ.
Verse 28
فَإِن لَّمْ تَجِدُوا۟ فِيهَآ أَحَدًا فَلَا تَدْخُلُوهَا حَتَّىٰ يُؤْذَنَ لَكُمْ ۖ وَإِن قِيلَ لَكُمُ ٱرْجِعُوا۟ فَٱرْجِعُوا۟ ۖ هُوَ أَزْكَىٰ لَكُمْ ۚ وَٱللَّهُ بِمَا تَعْمَلُونَ عَلِيمٌ
Transliteration fa-in lam tajidū fīhā aḥadan falā tadkhulūhā ḥattā yu'dhana lakum wa-in qīla lakumu ir'jiʿū fa-ir'jiʿū huwa azkā lakum wal-lahu bimā taʿmalūna ʿalīmun
Kannada ಇನ್ನು (ಒಪ್ಪಿಗೆ ನೀಡಲು) ಅಲ್ಲಿ ಯಾರೂ ಕಾಣಿ ಸದಿದ್ದರೆ ನಿಮಗೆ ಅನುಮತಿ ಸಿಗುವವರೆಗೂ ಅದರೊಳಗೆ ಪ್ರವೇಶಿಸಬೇಡಿರಿ. ಮರಳಿ ಹೋಗಿರೆಂದು ನಿಮ್ಮೊಡನೆ ಹೇಳಲಾದರೆ ಮರಳಿರಿ. ಇದು ನಿಮ್ಮ ಪಾಲಿಗೆ ಹೆಚ್ಚು ಪರಿಶುದ್ಧವಾದ ಕ್ರಮ. ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ತಿಳಿದಿರುತ್ತಾನೆ.
Verse 29
لَّيْسَ عَلَيْكُمْ جُنَاحٌ أَن تَدْخُلُوا۟ بُيُوتًا غَيْرَ مَسْكُونَةٍ فِيهَا مَتَـٰعٌ لَّكُمْ ۚ وَٱللَّهُ يَعْلَمُ مَا تُبْدُونَ وَمَا تَكْتُمُونَ
Transliteration laysa ʿalaykum junāḥun an tadkhulū buyūtan ghayra maskūnatin fīhā matāʿun lakum wal-lahu yaʿlamu mā tub'dūna wamā taktumūna
Kannada ನಿಮಗೆ (ವಿಶ್ರಾಂತಿಯಂಥ ಏನಾದರೂ) ಉಪಯೋಗಕ್ಕಾಗಿ ಜನವಾಸವಿಲ್ಲದ ಮನೆಗಳಿಗೆ ಪ್ರವೇಶಿಸುವುದರಲ್ಲಿ ಅಡ್ಡಿಯಿಲ್ಲ. ನೀವು ಪ್ರಕಟಗೊಳಿಸುವುದನ್ನೂ ಬಚ್ಚಿಡುವುದನ್ನೂ ಅಲ್ಲಾಹು ಅರಿಯುವನು.
Verse 30
قُل لِّلْمُؤْمِنِينَ يَغُضُّوا۟ مِنْ أَبْصَـٰرِهِمْ وَيَحْفَظُوا۟ فُرُوجَهُمْ ۚ ذَٰلِكَ أَزْكَىٰ لَهُمْ ۗ إِنَّ ٱللَّهَ خَبِيرٌۢ بِمَا يَصْنَعُونَ
Transliteration qul lil'mu'minīna yaghuḍḍū min abṣārihim wayaḥfaẓū furūjahum dhālika azkā lahum inna l-laha khabīrun bimā yaṣnaʿūna
Kannada (ಪೈಗಂಬರರೇ,) ಸತ್ಯವಿಶ್ವಾಸಿಗಳಿಗೆ ಹೇಳಿರಿ; ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ, ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ. ಇದು ಅವರಿಗೆ ಹೆಚ್ಚು ಪರಿಶುದ್ಧವಾದ ಕ್ರಮ! ಅಲ್ಲಾಹನು ಅವರು ಮಾಡುತ್ತಿರುವುದರ ಬಗ್ಗೆ ಸೂಕ್ಷ್ಮ ಜ್ಞಾನಿಯು.
Verse 31
وَقُل لِّلْمُؤْمِنَـٰتِ يَغْضُضْنَ مِنْ أَبْصَـٰرِهِنَّ وَيَحْفَظْنَ فُرُوجَهُنَّ وَلَا يُبْدِينَ زِينَتَهُنَّ إِلَّا مَا ظَهَرَ مِنْهَا ۖ وَلْيَضْرِبْنَ بِخُمُرِهِنَّ عَلَىٰ جُيُوبِهِنَّ ۖ وَلَا يُبْدِينَ زِينَتَهُنَّ إِلَّا لِبُعُولَتِهِنَّ أَوْ ءَابَآئِهِنَّ أَوْ ءَابَآءِ بُعُولَتِهِنَّ أَوْ أَبْنَآئِهِنَّ أَوْ أَبْنَآءِ بُعُولَتِهِنَّ أَوْ إِخْوَٰنِهِنَّ أَوْ بَنِىٓ إِخْوَٰنِهِنَّ أَوْ بَنِىٓ أَخَوَٰتِهِنَّ أَوْ نِسَآئِهِنَّ أَوْ مَا مَلَكَتْ أَيْمَـٰنُهُنَّ أَوِ ٱلتَّـٰبِعِينَ غَيْرِ أُو۟لِى ٱلْإِرْبَةِ مِنَ ٱلرِّجَالِ أَوِ ٱلطِّفْلِ ٱلَّذِينَ لَمْ يَظْهَرُوا۟ عَلَىٰ عَوْرَٰتِ ٱلنِّسَآءِ ۖ وَلَا يَضْرِبْنَ بِأَرْجُلِهِنَّ لِيُعْلَمَ مَا يُخْفِينَ مِن زِينَتِهِنَّ ۚ وَتُوبُوٓا۟ إِلَى ٱللَّهِ جَمِيعًا أَيُّهَ ٱلْمُؤْمِنُونَ لَعَلَّكُمْ تُفْلِحُونَ
Transliteration waqul lil'mu'mināti yaghḍuḍ'na min abṣārihinna wayaḥfaẓna furūjahunna walā yub'dīna zīnatahunna illā mā ẓahara min'hā walyaḍrib'na bikhumurihinna ʿalā juyūbihinna walā yub'dīna zīnatahunna illā libuʿūlatihinna aw ābāihinna aw ābāi buʿūlatihinna aw abnāihinna aw abnāi buʿūlatihinna aw ikh'wānihinna aw banī ikh'wānihinna aw banī akhawātihinna aw nisāihinna aw mā malakat aymānuhunna awi l-tābiʿīna ghayri ulī l-ir'bati mina l-rijāli awi l-ṭif'li alladhīna lam yaẓharū ʿalā ʿawrāti l-nisāi walā yaḍrib'na bi-arjulihinna liyuʿ'lama mā yukh'fīna min zīnatihinna watūbū ilā l-lahi jamīʿan ayyuha l-mu'minūna laʿallakum tuf'liḥūna
Kannada (ಪೈಗಂಬರರೇ,) ಸತ್ಯವಿಶ್ವಾಸಿನಿಯರಿಗೆ ಹೇಳಿರಿ. ಅವರು ತಮ್ಮ ದೃಷ್ಟಿಗಳನ್ನು ತಗ್ಗಿಸಿಕೊಳ್ಳಲಿ, ತಮ್ಮ ಗುಪ್ತಾಂಗಗಳನ್ನು ರಕ್ಷಿಸಿಕೊಳ್ಳಲಿ. ತಮ್ಮ ಸೌಂದರ್ಯದಿಂದ ಪ್ರಕಟವಾಗುವ ಭಾಗ ವನ್ನು ಹೊರತುಪಡಿಸಿ ತೋರಿಸದಿರಲಿ. ತಮ್ಮ ಎದೆಯ ಮೇಲೆ ತಮ್ಮ ಮುಖ ಪರದೆಯನ್ನು ಎಳೆದು ಹಾಕಲಿ . ಪತಿಯರು, ತಂದೆಯರು, ಪತಿಯ ತಂದೆಯರು, ತಮ್ಮ ಪುತ್ರರು, ಪತಿಯರ ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿಯರ ಪುತ್ರರು, ಆಪ್ತ ಸ್ತ್ರೀಯರು, ತಮ್ಮ ದಾಸಿಯರು, ಯಾವುದೇ ಲೈಂಗಿಕ ಮೋಹ ವಿಲ್ಲದ ಅಧೀನ ಸೇವಕರು ಮತ್ತು ಇನ್ನೂ ಸ್ತ್ರೀಯರ ಗೋಪ್ಯತೆಯ ಬಗ್ಗೆ ಅರಿಯುವ ಪ್ರಾಯ ವಾಗದ ಮಕ್ಕಳು, ಇವಿಷ್ಟು ಜನರನ್ನು ಹೊರತು ಪಡಿಸಿ ಇನ್ನಾರಿಗೂ ತಮ್ಮ ಸೌಂದರ್ಯವನ್ನು ತೋರ್ಪಡಿಸದಿರಲಿ. ಅವರು, ತಾವು ಮುಚ್ಚಿಟ್ಟ ಅಲಂಕಾರವನ್ನು ತಿಳಿಯುವಂತೆ ತಮ್ಮ ಪಾದಗಳನ್ನು ಬಡಿದು ನಡೆಯದಿರಲಿ. ಸತ್ಯ ವಿಶ್ವಾಸಿಗಳೇ! ನೀವೆಲ್ಲರೂ ಅಲ್ಲಾಹನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ. ನಿಮಗೆ ಯಶಸ್ಸು ಪ್ರಾಪ್ತವಾದೀತು.
Verse 32
وَأَنكِحُوا۟ ٱلْأَيَـٰمَىٰ مِنكُمْ وَٱلصَّـٰلِحِينَ مِنْ عِبَادِكُمْ وَإِمَآئِكُمْ ۚ إِن يَكُونُوا۟ فُقَرَآءَ يُغْنِهِمُ ٱللَّهُ مِن فَضْلِهِۦ ۗ وَٱللَّهُ وَٰسِعٌ عَلِيمٌ
Transliteration wa-ankiḥū l-ayāmā minkum wal-ṣāliḥīna min ʿibādikum wa-imāikum in yakūnū fuqarāa yugh'nihimu l-lahu min faḍlihi wal-lahu wāsiʿun ʿalīmun
Kannada ನಿಮ್ಮಲ್ಲಿ ಎಣೆಗಳಿಲ್ಲದ ಒಂಟಿಯಾಗಿರುವ ಸ್ತ್ರೀ- ಪುರುಷರಿಗೂ ಮತ್ತು ನಿಮ್ಮ ದಾಸ-ದಾಸಿ ಯರಲ್ಲಿ ಸಜ್ಜನರಾಗಿರುವವರಿಗೂ ವಿವಾಹ ಮಾಡಿಕೊಡಿರಿ. ಅವರು ಬಡವರಾಗಿದ್ದರೆ ಅಲ್ಲಾ ಹನು ತನ್ನ ಔದಾರ್ಯದಿಂದ ಅವರನ್ನು ಶ್ರೀಮಂತ ಗೊಳಿಸುವನು. ಅಲ್ಲಾಹನು ಅತಿ ವಿಶಾಲನೂ ಸರ್ವಜ್ಞನೂ ಆಗಿರುತ್ತಾನೆ.
Verse 33
وَلْيَسْتَعْفِفِ ٱلَّذِينَ لَا يَجِدُونَ نِكَاحًا حَتَّىٰ يُغْنِيَهُمُ ٱللَّهُ مِن فَضْلِهِۦ ۗ وَٱلَّذِينَ يَبْتَغُونَ ٱلْكِتَـٰبَ مِمَّا مَلَكَتْ أَيْمَـٰنُكُمْ فَكَاتِبُوهُمْ إِنْ عَلِمْتُمْ فِيهِمْ خَيْرًا ۖ وَءَاتُوهُم مِّن مَّالِ ٱللَّهِ ٱلَّذِىٓ ءَاتَىٰكُمْ ۚ وَلَا تُكْرِهُوا۟ فَتَيَـٰتِكُمْ عَلَى ٱلْبِغَآءِ إِنْ أَرَدْنَ تَحَصُّنًا لِّتَبْتَغُوا۟ عَرَضَ ٱلْحَيَوٰةِ ٱلدُّنْيَا ۚ وَمَن يُكْرِههُّنَّ فَإِنَّ ٱللَّهَ مِنۢ بَعْدِ إِكْرَٰهِهِنَّ غَفُورٌ رَّحِيمٌ
Transliteration walyastaʿfifi alladhīna lā yajidūna nikāḥan ḥattā yugh'niyahumu l-lahu min faḍlihi wa-alladhīna yabtaghūna l-kitāba mimmā malakat aymānukum fakātibūhum in ʿalim'tum fīhim khayran waātūhum min māli l-lahi alladhī ātākum walā tuk'rihū fatayātikum ʿalā l-bighāi in aradna taḥaṣṣunan litabtaghū ʿaraḍa l-ḥayati l-dun'yā waman yuk'rihhunna fa-inna l-laha min baʿdi ik'rāhihinna ghafūrun raḥīmun
Kannada ವಿವಾಹಾನುಕೂಲತೆ ಒದಗದವರು ಅಲ್ಲಾಹನು ತನ್ನ ಔದಾರ್ಯದಿಂದ ಅವರನ್ನು ಶ್ರೀಮಂತ ಗೊಳಿಸುವವರೆಗೂ ಚಾರಿತ್ರ್ಯವನ್ನು ಕಾಯ್ದು ಕೊಳ್ಳಲಿ. ನಿಮ್ಮ ಗುಲಾಮರ ಪೈಕಿ ಮುಕ್ತಿ ಕರಾರಿಗಾಗಿ ನಿವೇದಿಸಿ ಕೊಳ್ಳುವವರಿಗೆ, ಅವರಲ್ಲಿ ಒಳಿತಿದೆ ಎಂದು ನಿಮಗೆ ತಿಳಿದು ಬಂದರೆ ಮುಕ್ತಿ ಕರಾರು ಬರೆದುಕೊಡಿರಿ. ಅಲ್ಲಾಹನು ನಿಮಗೆ ಕೊಟ್ಟಿರುವ ಸಂಪತ್ತಿನಿಂದ ಅವರಿಗೆ ಕೊಡಿರಿ. ನಿಮ್ಮ ದಾಸಿಯರು ಸ್ವತಃ ಚಾರಿತ್ರ್ಯ ಶುದ್ಧಿಯನ್ನು ಬಯಸುವಾಗ ಲೌಕಿಕ ಲಾಭವನ್ನು ಗಳಿಸಲಿಕ್ಕಾಗಿ ಅವರನ್ನು ವೇಶ್ಯಾವೃತ್ತಿಗೆ ಬಲಾತ್ಕರಿಸ ಬೇಡಿರಿ. ಅವರನ್ನು ಯಾರಾದರೂ ಬಲಾತ್ಕರಿಸಿದರೆ ಈ ಬಲಾತ್ಕಾರದ ನಂತರ ಖಂಡಿತ ಅಲ್ಲಾಹನು, ಕ್ಷಮಾದಾನಿಯೂ ದಯಾನಿಧಿಯೂ ಆಗಿರುತ್ತಾನೆ.
Verse 34
وَلَقَدْ أَنزَلْنَآ إِلَيْكُمْ ءَايَـٰتٍ مُّبَيِّنَـٰتٍ وَمَثَلًا مِّنَ ٱلَّذِينَ خَلَوْا۟ مِن قَبْلِكُمْ وَمَوْعِظَةً لِّلْمُتَّقِينَ
Transliteration walaqad anzalnā ilaykum āyātin mubayyinātin wamathalan mina alladhīna khalaw min qablikum wamawʿiẓatan lil'muttaqīna
Kannada ಸುಸ್ಪಷ್ಟವಾದ ಸೂಕ್ತಗಳನ್ನೂ ನಿಮಗಿಂತ ಮುಂಚೆ ಗತಿಸಿದ ಜನಾಂಗಗಳ ಕೆಲವು ಅದ್ಭುತ ದೃಷ್ಟಾಂತಗಳನ್ನೂ ದೇವ ಭಯವಿರಿಸಿಕೊಳ್ಳು ವವರಿಗೆ ಉಪದೇಶವನ್ನೂ ನಾವು ನಿಮಗೆ ಇಳಿಸಿ ಕೊಟ್ಟಿದ್ದೇವೆ.
Verse 35
۞ ٱللَّهُ نُورُ ٱلسَّمَـٰوَٰتِ وَٱلْأَرْضِ ۚ مَثَلُ نُورِهِۦ كَمِشْكَوٰةٍ فِيهَا مِصْبَاحٌ ۖ ٱلْمِصْبَاحُ فِى زُجَاجَةٍ ۖ ٱلزُّجَاجَةُ كَأَنَّهَا كَوْكَبٌ دُرِّىٌّ يُوقَدُ مِن شَجَرَةٍ مُّبَـٰرَكَةٍ زَيْتُونَةٍ لَّا شَرْقِيَّةٍ وَلَا غَرْبِيَّةٍ يَكَادُ زَيْتُهَا يُضِىٓءُ وَلَوْ لَمْ تَمْسَسْهُ نَارٌ ۚ نُّورٌ عَلَىٰ نُورٍ ۗ يَهْدِى ٱللَّهُ لِنُورِهِۦ مَن يَشَآءُ ۚ وَيَضْرِبُ ٱللَّهُ ٱلْأَمْثَـٰلَ لِلنَّاسِ ۗ وَٱللَّهُ بِكُلِّ شَىْءٍ عَلِيمٌ
Transliteration al-lahu nūru l-samāwāti wal-arḍi mathalu nūrihi kamish'katin fīhā miṣ'bāḥun l-miṣ'bāḥu fī zujājatin l-zujājatu ka-annahā kawkabun durriyyun yūqadu min shajaratin mubārakatin zaytūnatin lā sharqiyyatin walā gharbiyyatin yakādu zaytuhā yuḍīu walaw lam tamsashu nārun nūrun ʿalā nūrin yahdī l-lahu linūrihi man yashāu wayaḍribu l-lahu l-amthāla lilnnāsi wal-lahu bikulli shayin ʿalīmun
Kannada ಅಲ್ಲಾಹನು ಭೂಮಿ-ಆಕಾಶಗಳ ಪ್ರಕಾಶದಾತ ನಾಗಿರುವನು. (ಸತ್ಯವಿಶ್ವಾಸಿಗಳ ಹೃದಯದಲ್ಲಿ) ಅವನು ಹಚ್ಚಿದ ಪ್ರಕಾಶದ ಉಪಮೆ ಒಂದು ಗೋಡೆ ಗೂಡಿನಂತಿದೆ. ಅದರಲ್ಲಿ ಒಂದು ದೀಪ ವಿದೆ. ದೀಪವು ಒಂದು ಗಾಜಿನೊಳಗಿದೆ. ಗಾಜು ಮುತ್ತಿನಂತೆ ಹೊಳೆಯುವ ತಾರೆಯಂತಿದೆ. ಪೂರ್ವದಲ್ಲಾಗಲಿ ಪಶ್ಚಿಮದಲ್ಲಾಗಲಿ ಬೆಳೆಯದ (ಹೆಚ್ಚು ಉಷ್ಣವೋ ತಂಪೋ ತಾಗದ ಮದ್ಯಮ ವಾತಾವರಣದ ಪ್ರದೇಶದಲ್ಲಿರುವ) ಅನುಗ್ರಹೀತ ಇಪ್ಪೆಯ ಒಂದು ಮರದ ಎಣ್ಣೆಯಿಂದ ಅದನ್ನು ಬೆಳಗಿಸಲಾಗುತ್ತದೆ. ಅದರ ಎಣ್ಣೆಗೆ ಬೆಂಕಿ ತಾಗದಿದ್ದರೂ ಅದು ತಾನಾಗಿಯೇ ಪ್ರಜ್ವಲಿಸುತ್ತದೆ. ಹೀಗೆ ಪ್ರಕಾಶದ ಮೇಲೆ ಪ್ರಕಾಶ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ (ಸತ್ಯದೆಡೆಗೆ) ಒಯ್ಯುತ್ತಾನೆ. ಅವನು ಜನರಿಗೆ ಉಪಮೆಗಳನ್ನು ವಿವರಿಸಿ ಕೊಡುತ್ತಾನೆ. ಅಲ್ಲಾಹನು ಸಕಲ ವಸ್ತುಗಳನ್ನು ಚೆನ್ನಾಗಿ ಬಲ್ಲವನು.
Verse 36
فِى بُيُوتٍ أَذِنَ ٱللَّهُ أَن تُرْفَعَ وَيُذْكَرَ فِيهَا ٱسْمُهُۥ يُسَبِّحُ لَهُۥ فِيهَا بِٱلْغُدُوِّ وَٱلْـَٔاصَالِ
Transliteration fī buyūtin adhina l-lahu an tur'faʿa wayudh'kara fīhā us'muhu yusabbiḥu lahu fīhā bil-ghuduwi wal-āṣāli
Kannada
Verse 37
رِجَالٌ لَّا تُلْهِيهِمْ تِجَـٰرَةٌ وَلَا بَيْعٌ عَن ذِكْرِ ٱللَّهِ وَإِقَامِ ٱلصَّلَوٰةِ وَإِيتَآءِ ٱلزَّكَوٰةِ ۙ يَخَافُونَ يَوْمًا تَتَقَلَّبُ فِيهِ ٱلْقُلُوبُ وَٱلْأَبْصَـٰرُ
Transliteration rijālun lā tul'hīhim tijāratun walā bayʿun ʿan dhik'ri l-lahi wa-iqāmi l-ṣalati waītāi l-zakati yakhāfūna yawman tataqallabu fīhi l-qulūbu wal-abṣāru
Kannada ಉನ್ನತಗೊಳಿಸಲು ಹಾಗೂ ಅವುಗಳಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಅನುಮತಿ ನೀಡಿರುವಂತಹ ಕೆಲವು ಭವನಗಳಲ್ಲಿ (ಮಸೀದಿಗಳಲ್ಲಿ) ಬೆಳಗು ಬೈಗುಗಳಲ್ಲಿ ಕೆಲವು ಪುರುಷರು ಅವನ ಪವಿತ್ರ ಕೀರ್ತನೆ ಮಾಡುತ್ತಿರುವರು . ವ್ಯಾಪಾರ ಮತ್ತು ಕ್ರಯ ವಿಕ್ರಯಗಳು ಅಲ್ಲಾಹನ ಸ್ಮರಣೆಯಿಂದಲೂ ನಮಾಝಿನ ಸಂಸ್ಥಾಪನೆಯಿಂದಲೂ ಝಕಾತಿನ ಪಾವತಿಯಿಂದಲೂ ಅವರನ್ನು ತಡೆಯುವುದಿಲ್ಲ. ಹೃದಯಗಳು ಮತ್ತು ದೃಷ್ಟಿಗಳು ಪಲ್ಲಟಗೊಳ್ಳುವ ಆ ಒಂದು ದಿನವನ್ನು ಅವರು ಭಯಪಡುತ್ತಿರುವರು.
Verse 38
لِيَجْزِيَهُمُ ٱللَّهُ أَحْسَنَ مَا عَمِلُوا۟ وَيَزِيدَهُم مِّن فَضْلِهِۦ ۗ وَٱللَّهُ يَرْزُقُ مَن يَشَآءُ بِغَيْرِ حِسَابٍ
Transliteration liyajziyahumu l-lahu aḥsana mā ʿamilū wayazīdahum min faḍlihi wal-lahu yarzuqu man yashāu bighayri ḥisābin
Kannada ಅಲ್ಲಾಹನು ಅವರ ಉತ್ತಮ ಕರ್ಮದ ಫಲಗಳನ್ನು ಅವರಿಗೆ ಕೊಡಲಿಕ್ಕಾಗಿ ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚಿಸಲಿಕ್ಕಾಗಿ ಅವರು ಹೀಗೆ ಮಾಡುತ್ತಾರೆ. ಅಲ್ಲಾಹು ತಾನಿಚ್ಚಿಸಿದವರಿಗೆ ಲೆಕ್ಕವಿಲ್ಲದೆ ನೀಡುತ್ತಾನೆ .
Verse 39
وَٱلَّذِينَ كَفَرُوٓا۟ أَعْمَـٰلُهُمْ كَسَرَابٍۭ بِقِيعَةٍ يَحْسَبُهُ ٱلظَّمْـَٔانُ مَآءً حَتَّىٰٓ إِذَا جَآءَهُۥ لَمْ يَجِدْهُ شَيْـًٔا وَوَجَدَ ٱللَّهَ عِندَهُۥ فَوَفَّىٰهُ حِسَابَهُۥ ۗ وَٱللَّهُ سَرِيعُ ٱلْحِسَابِ
Transliteration wa-alladhīna kafarū aʿmāluhum kasarābin biqīʿatin yaḥsabuhu l-ẓamānu māan ḥattā idhā jāahu lam yajid'hu shayan wawajada l-laha ʿindahu fawaffāhu ḥisābahu wal-lahu sarīʿu l-ḥisābi
Kannada ಸತ್ಯನಿಷೇಧವನ್ನು ಕೈಗೊಂಡವರ ಕರ್ಮಗಳು ನಿರ್ಜಲ ಮರುಭೂಮಿಯಲ್ಲಿರುವ ಮರೀಚಿಕೆ ಯಂತಿದೆ. ಅದನ್ನು ಬಾಯಾರಿದವನು ನೀರೆಂದು ಭ್ರಮಿಸುವನು. ಆದರೆ ಅಲ್ಲಿಗೆ ತಲುಪಿದಾಗ ಅಲ್ಲೇನನ್ನೂ ಕಾಣುವುದಿಲ್ಲ. ಸತ್ಯನಿಷೇಧಿಯು ತನ್ನ ಕರ್ಮಗಳ ಬಳಿ ಅಲ್ಲಾಹನನ್ನು ಕಂಡನು. ಆಗ ಅಲ್ಲಾಹನು ಅದರ ಲೆಕ್ಕವನ್ನು ಸಂಪೂರ್ಣ ವಾಗಿ (ಇಹದಲ್ಲೇ) ತೀರಿಸಿದನು. ಅಲ್ಲಾಹನು, ಅತಿ ಶೀಘ್ರ ಲೆಕ್ಕಿಗನು.
Verse 40
أَوْ كَظُلُمَـٰتٍ فِى بَحْرٍ لُّجِّىٍّ يَغْشَىٰهُ مَوْجٌ مِّن فَوْقِهِۦ مَوْجٌ مِّن فَوْقِهِۦ سَحَابٌ ۚ ظُلُمَـٰتٌۢ بَعْضُهَا فَوْقَ بَعْضٍ إِذَآ أَخْرَجَ يَدَهُۥ لَمْ يَكَدْ يَرَىٰهَا ۗ وَمَن لَّمْ يَجْعَلِ ٱللَّهُ لَهُۥ نُورًا فَمَا لَهُۥ مِن نُّورٍ
Transliteration aw kaẓulumātin fī baḥrin lujjiyyin yaghshāhu mawjun min fawqihi mawjun min fawqihi saḥābun ẓulumātun baʿḍuhā fawqa baʿḍin idhā akhraja yadahu lam yakad yarāhā waman lam yajʿali l-lahu lahu nūran famā lahu min nūrin
Kannada ಅಥವಾ ಅವರ ಕರ್ಮಗಳು ಒಂದು ಆಳವಾದ ಸಾಗರದಲ್ಲಿ ಅಂಧಕಾರದಂತಿದೆ. ಮೇಲೊಂದು ತೆರೆ ಆವರಿಸಿದೆ. ಅದರ ಮೇಲೆ ಇನ್ನೊಂದು ತೆರೆಯಿದ್ದು ಅದರ ಮೇಲೆ ಮೋಡ ಆವರಿಸಿಕೊಂಡಿದೆ. ಅಂಧಕಾರದ ಮೇಲೆ ಅಂಧಕಾರ ಕವಿದಿದೆ. ಮನುಷ್ಯನು ತನ್ನ ಕೈಯನ್ನು ಹೊರ ಚಾಚಿದರೆ ಅದೂ ಅವನಿಗೆ ಕಾಣಿಸದು. ಅಲ್ಲಾಹನು ಯಾರಿಗೆ ಪ್ರಕಾಶವನ್ನು ಸ್ಥಾಪಿಸಲಿಲ್ಲವೋ ಅವನಿಗೆ ಬೇರಾವ ಪ್ರಕಾಶವೂ ಇಲ್ಲ.
Verse 41
أَلَمْ تَرَ أَنَّ ٱللَّهَ يُسَبِّحُ لَهُۥ مَن فِى ٱلسَّمَـٰوَٰتِ وَٱلْأَرْضِ وَٱلطَّيْرُ صَـٰٓفَّـٰتٍ ۖ كُلٌّ قَدْ عَلِمَ صَلَاتَهُۥ وَتَسْبِيحَهُۥ ۗ وَٱللَّهُ عَلِيمٌۢ بِمَا يَفْعَلُونَ
Transliteration alam tara anna l-laha yusabbiḥu lahu man fī l-samāwāti wal-arḍi wal-ṭayru ṣāffātin kullun qad ʿalima ṣalātahu watasbīḥahu wal-lahu ʿalīmun bimā yafʿalūna
Kannada ಭೂಮಿ-ಆಕಾಶಗಳಲ್ಲಿ ಇರುವವರು, ವಾಯು ಮಂಡಲದಲ್ಲಿ ರೆಕ್ಕೆಬಿಚ್ಚಿ ಹಾರುತ್ತಿರುವ ಹಕ್ಕಿಗಳೂ ಅಲ್ಲಾಹನ ಪ್ರಕೀರ್ತನೆ ಮಾಡುತ್ತಿರುವುದನ್ನು ನೀವು ನೋಡುತ್ತಿಲ್ಲವೇ? ಎಲ್ಲವೂ ತನ್ನ ಪ್ರಾರ್ಥನೆ ಮತ್ತು ಕೀರ್ತನೆಯನ್ನು ಅರಿತಿದೆ. ಅವರು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲವನು.
Verse 42
وَلِلَّهِ مُلْكُ ٱلسَّمَـٰوَٰتِ وَٱلْأَرْضِ ۖ وَإِلَى ٱللَّهِ ٱلْمَصِيرُ
Transliteration walillahi mul'ku l-samāwāti wal-arḍi wa-ilā l-lahi l-maṣīru
Kannada ಭೂಮಿ-ಆಕಾಶಗಳ ಆದಿಪತ್ಯವು ಅಲ್ಲಾಹನದ್ದು. ಅವನ ಕಡೆಗೆ ನಿರ್ಗಮನವಿದೆ.
Verse 43
أَلَمْ تَرَ أَنَّ ٱللَّهَ يُزْجِى سَحَابًا ثُمَّ يُؤَلِّفُ بَيْنَهُۥ ثُمَّ يَجْعَلُهُۥ رُكَامًا فَتَرَى ٱلْوَدْقَ يَخْرُجُ مِنْ خِلَـٰلِهِۦ وَيُنَزِّلُ مِنَ ٱلسَّمَآءِ مِن جِبَالٍ فِيهَا مِنۢ بَرَدٍ فَيُصِيبُ بِهِۦ مَن يَشَآءُ وَيَصْرِفُهُۥ عَن مَّن يَشَآءُ ۖ يَكَادُ سَنَا بَرْقِهِۦ يَذْهَبُ بِٱلْأَبْصَـٰرِ
Transliteration alam tara anna l-laha yuz'jī saḥāban thumma yu-allifu baynahu thumma yajʿaluhu rukāman fatarā l-wadqa yakhruju min khilālihi wayunazzilu mina l-samāi min jibālin fīhā min baradin fayuṣību bihi man yashāu wayaṣrifuhu ʿan man yashāu yakādu sanā barqihi yadhhabu bil-abṣāri
Kannada ಅಲ್ಲಾಹನು ಮೋಡವನ್ನು ಮೆಲ್ಲ ಮೆಲ್ಲನೆ ಚಲಾ ಯಿಸುವುದನ್ನೂ ಅನಂತರ ಅದರ ತುಂಡು ಗಳನ್ನು ಪರಸ್ಪರ ಜೋಡಿಸುವುದನ್ನೂ ತರು ವಾಯ ಅದನ್ನು ಒತ್ತೊತ್ತಾಗಿ ರಾಶಿ ಹಾಕುವು ದನ್ನೂ ನೀವು ನೋಡುತ್ತಿಲ್ಲವೇ? ಆ ಬಳಿಕ ಅದರ ಎಡೆಯಿಂದ ಮಳೆಯು ಹನಿಯಾಗಿ ಬೀಳುತ್ತಿರು ವುದನ್ನು ನೀವು ನೋಡುತ್ತೀರಿ. ಅವನು ಆಕಾಶ ದಿಂದ ಅಂದರೆ ಅದರಲ್ಲಿರುವ ಮೇಘ ಪರ್ವತ ಗಳಿಂದ ಆಲಿಕಲ್ಲುಗಳನ್ನು ಬೀಳಿಸುತ್ತಾನೆ. ಅದರಿಂದ ತಾನಿಚ್ಚಿಸುವವರಿಗೆ ಮುಟ್ಟಿಸುತ್ತಾನೆ. ಮತ್ತು ತಾನಿಚ್ಚಿಸುವವರಿಂದ ಅದನ್ನು ತಪ್ಪಿಸು ತ್ತಾನೆ. ಅದರ ಮಿಂಚಿನ ಹೊಳಪು ಕಣ್ಣುಗಳನ್ನು ಕೋರೈಸಿ ಬಿಡುತ್ತದೆ.
Verse 44
يُقَلِّبُ ٱللَّهُ ٱلَّيْلَ وَٱلنَّهَارَ ۚ إِنَّ فِى ذَٰلِكَ لَعِبْرَةً لِّأُو۟لِى ٱلْأَبْصَـٰرِ
Transliteration yuqallibu l-lahu al-layla wal-nahāra inna fī dhālika laʿib'ratan li-ulī l-abṣāri
Kannada ಅಲ್ಲಾಹು ರಾತ್ರಿ ಹಗಲುಗಳ ಪರಿವರ್ತನೆಯನ್ನು ಮಾಡುತ್ತಿರುತ್ತಾನೆ. ಇದರಲ್ಲಿ ಯೋಚಿಸುವವರಿಗೆ ಖಂಡಿತ ಪಾಠವಿದೆ.
Verse 45
وَٱللَّهُ خَلَقَ كُلَّ دَآبَّةٍ مِّن مَّآءٍ ۖ فَمِنْهُم مَّن يَمْشِى عَلَىٰ بَطْنِهِۦ وَمِنْهُم مَّن يَمْشِى عَلَىٰ رِجْلَيْنِ وَمِنْهُم مَّن يَمْشِى عَلَىٰٓ أَرْبَعٍ ۚ يَخْلُقُ ٱللَّهُ مَا يَشَآءُ ۚ إِنَّ ٱللَّهَ عَلَىٰ كُلِّ شَىْءٍ قَدِيرٌ
Transliteration wal-lahu khalaqa kulla dābbatin min māin famin'hum man yamshī ʿalā baṭnihi wamin'hum man yamshī ʿalā rij'layni wamin'hum man yamshī ʿalā arbaʿin yakhluqu l-lahu mā yashāu inna l-laha ʿalā kulli shayin qadīrun
Kannada ಅಲ್ಲಾಹನು ಪ್ರತಿಯೊಂದು ಜೀವಿಯನ್ನು ನೀರಿ ನಿಂದ ಸೃಷ್ಟಿಸಿದನು. ಆ ಪೈಕಿ ಕೆಲವು ಹೊಟ್ಟೆಯ ಮೇಲೆ ಎಳೆದು ನಡೆದರೆ, ಇನ್ನು ಕೆಲವು ಎರಡು ಕಾಲುಗಳ ಮೇಲೂ ಮತ್ತೆ ಕೆಲವು ನಾಲ್ಕು ಕಾಲುಗಳ ಮೇಲೂ ನಡೆಯುತ್ತವೆ. ಅವನು ತಾನಿಚ್ಚಿಸಿ ದ್ದನ್ನು ಸೃಷ್ಟಿಸುತ್ತಾನೆ. ನಿಜಕ್ಕೂ ಅಲ್ಲಾಹನು ಸರ್ವ ವಸ್ತುಗಳ ಮೇಲೆ ಸಾಮಥ್ರ್ಯವುಳ್ಳವನು .
Verse 46
لَّقَدْ أَنزَلْنَآ ءَايَـٰتٍ مُّبَيِّنَـٰتٍ ۚ وَٱللَّهُ يَهْدِى مَن يَشَآءُ إِلَىٰ صِرَٰطٍ مُّسْتَقِيمٍ
Transliteration laqad anzalnā āyātin mubayyinātin wal-lahu yahdī man yashāu ilā ṣirāṭin mus'taqīmin
Kannada ಸತ್ಯವನ್ನು ವ್ಯಕ್ತವಾಗಿ ತಿಳಿಸುವ ಸೂಕ್ತಗಳನ್ನು ನಾವು ಅವತೀರ್ಣಗೊಳಿಸಿದ್ದೇವೆ. ಅಲ್ಲಾಹನು ನೇರ ಮಾರ್ಗದ ಕಡೆಗೆ ತಾನಿಚ್ಛಿಸಿದವರನ್ನು ಸೇರಿಸುತ್ತಾನೆ.
Verse 47
وَيَقُولُونَ ءَامَنَّا بِٱللَّهِ وَبِٱلرَّسُولِ وَأَطَعْنَا ثُمَّ يَتَوَلَّىٰ فَرِيقٌ مِّنْهُم مِّنۢ بَعْدِ ذَٰلِكَ ۚ وَمَآ أُو۟لَـٰٓئِكَ بِٱلْمُؤْمِنِينَ
Transliteration wayaqūlūna āmannā bil-lahi wabil-rasūli wa-aṭaʿnā thumma yatawallā farīqun min'hum min baʿdi dhālika wamā ulāika bil-mu'minīna
Kannada ‘ನಾವು ಅಲ್ಲಾಹು ಮತ್ತು ಸಂದೇಶವಾಹಕರಲ್ಲಿ ವಿಶ್ವಾಸವಿರಿಸಿದ್ದೇವೆ ಮತ್ತು ನಾವು ಅವರನ್ನು ಅನುಸರಿಸಿದ್ದೇವೆ’ ಎಂದು ಅವರು ಹೇಳುತ್ತಾರೆ. ಆದರೆ ಅನಂತರ ಅವರಲ್ಲೊಂದು ಪಂಗಡ ವಿಮುಖವಾಗಿ ಬಿಡುತ್ತದೆ. ಇಂಥವರು ಖಂಡಿತ ಸತ್ಯ ವಿಶ್ವಾಸಿಗಳಲ್ಲ.
Verse 48
وَإِذَا دُعُوٓا۟ إِلَى ٱللَّهِ وَرَسُولِهِۦ لِيَحْكُمَ بَيْنَهُمْ إِذَا فَرِيقٌ مِّنْهُم مُّعْرِضُونَ
Transliteration wa-idhā duʿū ilā l-lahi warasūlihi liyaḥkuma baynahum idhā farīqun min'hum muʿ'riḍūna
Kannada ಅವರ ನಡುವೆ ತೀರ್ಪು ಕಲ್ಪಿಸಲಿಕ್ಕಾಗಿ ಅವರನ್ನು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಕಡೆಗೆ ಕರೆಯಲಾದರೆ ಅವರಲ್ಲೊಂದು ಪಂಗಡ ಹಿಂಜರಿಯುತ್ತದೆ.
Verse 49
وَإِن يَكُن لَّهُمُ ٱلْحَقُّ يَأْتُوٓا۟ إِلَيْهِ مُذْعِنِينَ
Transliteration wa-in yakun lahumu l-ḥaqu yatū ilayhi mudh'ʿinīna
Kannada ಆದರೆ ಸತ್ಯವು ಅವರ ಪರವಾಗಿದ್ದರೆ ಅತ್ಯಂತ ವಿಧೇಯರಾಗಿ ದೂತರ ಬಳಿಗೆ ಓಡಿ ಬರುತ್ತಾರೆ.
Verse 50
أَفِى قُلُوبِهِم مَّرَضٌ أَمِ ٱرْتَابُوٓا۟ أَمْ يَخَافُونَ أَن يَحِيفَ ٱللَّهُ عَلَيْهِمْ وَرَسُولُهُۥ ۚ بَلْ أُو۟لَـٰٓئِكَ هُمُ ٱلظَّـٰلِمُونَ
Transliteration afī qulūbihim maraḍun ami ir'tābū am yakhāfūna an yaḥīfa l-lahu ʿalayhim warasūluhu bal ulāika humu l-ẓālimūna
Kannada ಅವರ ಹೃದಯಗಳಲ್ಲಿ (ಅವಿಶ್ವಾಸದ) ರೋಗ ವಿದೆಯೇ? ಅಥವಾ ಅವರು (ಪ್ರವಾದಿತ್ವದಲ್ಲಿ) ಸಂಶಯಪಟ್ಟಿರುವರೇ? ಅಥವಾ ಅಲ್ಲಾಹು ಮತ್ತು ದೇವದೂತರು ಅವರ ಮೇಲೆ ಅನ್ಯಾಯ ವೆಸಗು ವರೆಂದು ಭಯಪಡುತ್ತಿರುವರೇ? ಅದೇನೂ ಅಲ್ಲ. ವಾಸ್ತವದಲ್ಲಿ ಅವರೇ ಅಕ್ರಮಿಗಳು.
Verse 51
إِنَّمَا كَانَ قَوْلَ ٱلْمُؤْمِنِينَ إِذَا دُعُوٓا۟ إِلَى ٱللَّهِ وَرَسُولِهِۦ لِيَحْكُمَ بَيْنَهُمْ أَن يَقُولُوا۟ سَمِعْنَا وَأَطَعْنَا ۚ وَأُو۟لَـٰٓئِكَ هُمُ ٱلْمُفْلِحُونَ
Transliteration innamā kāna qawla l-mu'minīna idhā duʿū ilā l-lahi warasūlihi liyaḥkuma baynahum an yaqūlū samiʿ'nā wa-aṭaʿnā wa-ulāika humu l-muf'liḥūna
Kannada ಅವರ ನಡುವೆ ತೀರ್ಪು ಕಲ್ಪಿಸಲು ಅವರನ್ನು ಅಲ್ಲಾಹು ಮತ್ತು ರಸೂಲರ ಕಡೆಗೆ ಕರೆಯಲಾದರೆ ಸತ್ಯವಿಶ್ವಾಸಿಗಳು ‘ನಾವು ಆಲಿಸಿದೆವು ಮತ್ತು ಅನುಸರಿಸಿದೆವು’ ಎಂದು ಹೇಳುವರು. ಅವರೇ ವಿಜಯಿಗಳು.
Verse 52
وَمَن يُطِعِ ٱللَّهَ وَرَسُولَهُۥ وَيَخْشَ ٱللَّهَ وَيَتَّقْهِ فَأُو۟لَـٰٓئِكَ هُمُ ٱلْفَآئِزُونَ
Transliteration waman yuṭiʿi l-laha warasūlahu wayakhsha l-laha wayattaqhi fa-ulāika humu l-fāizūna
Kannada ಯಾರು, ಅಲ್ಲಾಹು ಮತ್ತು ಅವನ ದೂತರನ್ನು ಅನುಸರಿಸುತ್ತಾರೆ, ಅಲ್ಲಾಹನನ್ನು ಭಯಪಡು ತ್ತಾರೆ ಮತ್ತು ಅವನ ಆಜ್ಞೋಲ್ಲಂಘನೆಯಿಂದ ದೂರವಿರುತ್ತಾರೆ, ಅವರೇ ವಿಜಯಿಗಳು.
Verse 53
۞ وَأَقْسَمُوا۟ بِٱللَّهِ جَهْدَ أَيْمَـٰنِهِمْ لَئِنْ أَمَرْتَهُمْ لَيَخْرُجُنَّ ۖ قُل لَّا تُقْسِمُوا۟ ۖ طَاعَةٌ مَّعْرُوفَةٌ ۚ إِنَّ ٱللَّهَ خَبِيرٌۢ بِمَا تَعْمَلُونَ
Transliteration wa-aqsamū bil-lahi jahda aymānihim la-in amartahum layakhrujunna qul lā tuq'simū ṭāʿatun maʿrūfatun inna l-laha khabīrun bimā taʿmalūna
Kannada (ಪೈಗಂಬರರೇ,) ತಾವು ಏನಾದರೂ ಅವರಿಗೆ ಅಪ್ಪಣೆ ಕೊಟ್ಟರೆ ನಾವು ಅದಕ್ಕಾಗಿ ಹೊರಟು ಬರು ವೆವು ಎಂದು ಕಪಟ ವಿಶ್ವಾಸಿಗಳು ಬಲವಾದ ಭಾಷೆಯಲ್ಲಿ ಅಲ್ಲಾಹನನ್ನು ಮುಂದಿರಿಸಿ, ಆಣೆ ಹಾಕುತ್ತಾರೆ. ಹೀಗೆ ಹೇಳಿರಿ; “ಆಣೆ ಹಾಕ ಬೇಡಿರಿ. ನಿಮ್ಮ ವಿಧೇಯತೆಯು ಗೊತ್ತಾದ ವಿಷಯ. ನಿಮ್ಮ ಕೃತ್ಯಗಳ ಬಗ್ಗೆ ಅಲ್ಲಾಹನು ಸೂಕ್ಷ್ಮ ಜ್ಞನಾಗಿದ್ದಾನೆ”.
Verse 54
قُلْ أَطِيعُوا۟ ٱللَّهَ وَأَطِيعُوا۟ ٱلرَّسُولَ ۖ فَإِن تَوَلَّوْا۟ فَإِنَّمَا عَلَيْهِ مَا حُمِّلَ وَعَلَيْكُم مَّا حُمِّلْتُمْ ۖ وَإِن تُطِيعُوهُ تَهْتَدُوا۟ ۚ وَمَا عَلَى ٱلرَّسُولِ إِلَّا ٱلْبَلَـٰغُ ٱلْمُبِينُ
Transliteration qul aṭīʿū l-laha wa-aṭīʿū l-rasūla fa-in tawallaw fa-innamā ʿalayhi mā ḥummila waʿalaykum mā ḥummil'tum wa-in tuṭīʿūhu tahtadū wamā ʿalā l-rasūli illā l-balāghu l-mubīnu
Kannada ಹೇಳಿರಿ, ಅಲ್ಲಾಹು ಮತ್ತು ದೂತರನ್ನು ಅನು ಸರಿಸಿರಿ. ಇನ್ನು ನೀವು ವಿಮುಖರಾದರೆ ದೂತ ರಿಗೆ ಹೊರಿಸಲಾದ ಕರ್ತವ್ಯಗಳಿಗೆ ಮಾತ್ರ ಅವರು ಜವಾಬ್ದಾರರು. ಆದರೆ ನಿಮ್ಮ ಮೇಲೆ ಹೊರಿಸಲಾದ ಕರ್ತವ್ಯಗಳಿಗೆ ನೀವೇ ಜವಾಬ್ದಾರರು. ನೀವು ದೂತರನ್ನು ಅನುಸರಿಸಿದರೆ ನೀವು ಸನ್ಮಾರ್ಗ ಹೊಂದುವಿರಿ. ಸುವ್ಯಕ್ತವಾಗಿ ಆದೇಶಗಳನ್ನು ತಲುಪಿಸಿಕೊಡುವುದೇ ದೂತರ ಹೊಣೆ.
Verse 55
وَعَدَ ٱللَّهُ ٱلَّذِينَ ءَامَنُوا۟ مِنكُمْ وَعَمِلُوا۟ ٱلصَّـٰلِحَـٰتِ لَيَسْتَخْلِفَنَّهُمْ فِى ٱلْأَرْضِ كَمَا ٱسْتَخْلَفَ ٱلَّذِينَ مِن قَبْلِهِمْ وَلَيُمَكِّنَنَّ لَهُمْ دِينَهُمُ ٱلَّذِى ٱرْتَضَىٰ لَهُمْ وَلَيُبَدِّلَنَّهُم مِّنۢ بَعْدِ خَوْفِهِمْ أَمْنًا ۚ يَعْبُدُونَنِى لَا يُشْرِكُونَ بِى شَيْـًٔا ۚ وَمَن كَفَرَ بَعْدَ ذَٰلِكَ فَأُو۟لَـٰٓئِكَ هُمُ ٱلْفَـٰسِقُونَ
Transliteration waʿada l-lahu alladhīna āmanū minkum waʿamilū l-ṣāliḥāti layastakhlifannahum fī l-arḍi kamā is'takhlafa alladhīna min qablihim walayumakkinanna lahum dīnahumu alladhī ir'taḍā lahum walayubaddilannahum min baʿdi khawfihim amnan yaʿbudūnanī lā yush'rikūna bī shayan waman kafara baʿda dhālika fa-ulāika humu l-fāsiqūna
Kannada ನಿಮ್ಮ ಪೈಕಿ ಸತ್ಯವಿಶ್ವಾಸವಿರಿಸಿ ಸತ್ಕರ್ಮವೆಸಗಿದ ಜನರಿಗೆ ಅವರಿಗಿಂತ ಮುಂಚಿನವರಿಗೆ ಪ್ರಾತಿ ನಿಧ್ಯವನ್ನು ಕಲ್ಪಿಸಿದಂತೆಯೇ ಈ ಭೂಮಿಯಲ್ಲಿ ಅವರಿಗೂ ಪ್ರಾತಿನಿಧ್ಯ ಕಲ್ಪಿಸುತ್ತೇನೆಂದೂ ತಾನು ಅವರಿಗಾಗಿ ತೃಪ್ತಿಪಟ್ಟಿರುವ ಅವರ ಧರ್ಮವನ್ನು ಬಲಿಷ್ಟವಾಗಿ ಸ್ಥಾಪಿಸುತ್ತೇನೆಂದೂ ಅವರ ಭಯದ ನಂತರ ಶಾಂತಿಯನ್ನು ಮಾರ್ಪಡಿಸಿ ಬಿಡುತ್ತೇನೆಂದೂ ಅಲ್ಲಾಹನು ವಾಗ್ದಾನ ಮಾಡಿರುವನು. ಅವರು ನನ್ನನ್ನು ಮಾತ್ರ ಆರಾಧಿಸಲಿ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಗಳಾಗಿ ಮಾಡದಿರಲಿ, ಎಂಬ ಉದ್ದೇಶದಿಂದ ಹೀಗೆ ಮಾಡಲಾಗಿತ್ತು. ಆದರೆ ಈ ಅನುಗ್ರಹ ಲಭಿಸಿದ ಬಳಿಕ ಯಾರು ಕೃತಘ್ನರಾಗುವರೋ ಅವರೇ ಧರ್ಮಭ್ರಷ್ಟರು.
Verse 56
وَأَقِيمُوا۟ ٱلصَّلَوٰةَ وَءَاتُوا۟ ٱلزَّكَوٰةَ وَأَطِيعُوا۟ ٱلرَّسُولَ لَعَلَّكُمْ تُرْحَمُونَ
Transliteration wa-aqīmū l-ṣalata waātū l-zakata wa-aṭīʿū l-rasūla laʿallakum tur'ḥamūna
Kannada ನಮಾಝನ್ನು ಸಂಸ್ಥಾಪಿಸಿರಿ, ಝಕಾತ್ ಕೊಡಿರಿ ಮತ್ತು ದೂತರನ್ನು ಅನುಸರಿಸಿರಿ. ನಿಮ್ಮ ಮೇಲೆ ದಯೆ ಇರುವುದು.
Verse 57
لَا تَحْسَبَنَّ ٱلَّذِينَ كَفَرُوا۟ مُعْجِزِينَ فِى ٱلْأَرْضِ ۚ وَمَأْوَىٰهُمُ ٱلنَّارُ ۖ وَلَبِئْسَ ٱلْمَصِيرُ
Transliteration lā taḥsabanna alladhīna kafarū muʿ'jizīna fī l-arḍi wamawāhumu l-nāru walabi'sa l-maṣīru
Kannada ಸತ್ಯನಿಷೇಧಿಗಳು ಭೂಮಿಯಲ್ಲಿ ಅಲ್ಲಾಹನನ್ನು ಪರಾಜಿತಗೊಳಿಸಬಲ್ಲರೆಂದು ತಪ್ಪು ತಿಳಿಯ ಬೇಡಿ. ನರಕವೇ ಅವರ ನೆಲೆ ಮತ್ತು ಅದು ಅತ್ಯಂತ ಕೆಟ್ಟ ನೆಲೆಯಾಗಿದೆ.
Verse 58
يَـٰٓأَيُّهَا ٱلَّذِينَ ءَامَنُوا۟ لِيَسْتَـْٔذِنكُمُ ٱلَّذِينَ مَلَكَتْ أَيْمَـٰنُكُمْ وَٱلَّذِينَ لَمْ يَبْلُغُوا۟ ٱلْحُلُمَ مِنكُمْ ثَلَـٰثَ مَرَّٰتٍ ۚ مِّن قَبْلِ صَلَوٰةِ ٱلْفَجْرِ وَحِينَ تَضَعُونَ ثِيَابَكُم مِّنَ ٱلظَّهِيرَةِ وَمِنۢ بَعْدِ صَلَوٰةِ ٱلْعِشَآءِ ۚ ثَلَـٰثُ عَوْرَٰتٍ لَّكُمْ ۚ لَيْسَ عَلَيْكُمْ وَلَا عَلَيْهِمْ جُنَاحٌۢ بَعْدَهُنَّ ۚ طَوَّٰفُونَ عَلَيْكُم بَعْضُكُمْ عَلَىٰ بَعْضٍ ۚ كَذَٰلِكَ يُبَيِّنُ ٱللَّهُ لَكُمُ ٱلْـَٔايَـٰتِ ۗ وَٱللَّهُ عَلِيمٌ حَكِيمٌ
Transliteration yāayyuhā alladhīna āmanū liyastadhinkumu alladhīna malakat aymānukum wa-alladhīna lam yablughū l-ḥuluma minkum thalātha marrātin min qabli ṣalati l-fajri waḥīna taḍaʿūna thiyābakum mina l-ẓahīrati wamin baʿdi ṣalati l-ʿishāi thalāthu ʿawrātin lakum laysa ʿalaykum walā ʿalayhim junāḥun baʿdahunna ṭawwāfūna ʿalaykum baʿḍukum ʿalā baʿḍin kadhālika yubayyinu l-lahu lakumu l-āyāti wal-lahu ʿalīmun ḥakīmun
Kannada ಸತ್ಯವಿಶ್ವಾಸಿಗಳೇ, ನಿಮ್ಮ ಸ್ವಾಧೀನಕ್ಕೆ ಬಂದವರು (ದಾಸ-ದಾಸಿಯರು) ಮತ್ತು ಇನ್ನೂ ಪ್ರಬು ದ್ಧರಾಗದ ನಿಮ್ಮ ಮಕ್ಕಳು ಮೂರು ಹೊತ್ತುಗಳಲ್ಲಿ ನಿಮ್ಮ ಬಳಿಗೆ ಬರುವಾಗ ಅನುಮತಿ ಪಡೆದು ಬರಲಿ. ಫಜ್ರ್ ನಮಾಝಿಗಿಂತ ಮುಂಚೆ, ಮಧ್ಯಾಹ್ನ ವಿಶ್ರಾಂತಿಗಾಗಿ ನೀವು ಉಡುಪುಗ ಳನ್ನು ಕಳಚಿಡುವ ಸಮಯದಲ್ಲಿ ಮತ್ತು ಇಷಾ ನಮಾಝಿನ ಅನಂತರ. ಇವು ಮೂರು ನಿಮ್ಮ ಗೌಪ್ಯತೆಯ ಸಮಯವಾಗಿದೆ. ಇತರ ಸಮಯಗಳಲ್ಲಿ ಅವರು ಅನುಮತಿ ಪಡೆಯದೆ ಬಂದರೆ ನಿಮ್ಮ ಮೇಲಾಗಲಿ ಅವರ ಮೇಲಾಗಲಿ ಏನೂ ದೋಷವಿಲ್ಲ. ಅವರು ನಿಮ್ಮಲ್ಲಿ - ಅಂದರೆ ನಿಮ್ಮಲ್ಲಿ ಕೆಲವರು ಕೆಲವರಲ್ಲಿ - (ಶುಶ್ರೂಷೆ ಮತ್ತಿತರ ಅಗತ್ಯಗಳಿಗಾಗಿ) ಸುತ್ತುಗಟ್ಟಿ ನಿಲ್ಲು ವವರು ತಾನೆ? ಈ ರೀತಿ ಅಲ್ಲಾಹನು ತನ್ನ ಆದೇ ಶಗಳನ್ನು ನಿಮಗಾಗಿ ವಿವರಿಸುತ್ತಾನೆ. ಅವನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
Verse 59
وَإِذَا بَلَغَ ٱلْأَطْفَـٰلُ مِنكُمُ ٱلْحُلُمَ فَلْيَسْتَـْٔذِنُوا۟ كَمَا ٱسْتَـْٔذَنَ ٱلَّذِينَ مِن قَبْلِهِمْ ۚ كَذَٰلِكَ يُبَيِّنُ ٱللَّهُ لَكُمْ ءَايَـٰتِهِۦ ۗ وَٱللَّهُ عَلِيمٌ حَكِيمٌ
Transliteration wa-idhā balagha l-aṭfālu minkumu l-ḥuluma falyastadhinū kamā is'tadhana alladhīna min qablihim kadhālika yubayyinu l-lahu lakum āyātihi wal-lahu ʿalīmun ḥakīmun
Kannada ಇನ್ನು ನಿಮ್ಮ ಮಕ್ಕಳು ಪ್ರಬುದ್ಧರಾದಾಗ ಅವರ ಹಿರಿಯರು ಅನುಮತಿ ಪಡೆಯುವಂತೆಯೇ ಅವರೂ ಅನುಮತಿ ಪಡೆದು ಬರಲಿ. ಈ ರೀತಿಯಲ್ಲಿ ಅಲ್ಲಾಹನು ತನ್ನ ಪುರಾವೆಗಳನ್ನು ನಿಮಗೆ ವಿವರಿಸಿ ಹೇಳುತ್ತಾನೆ. ಅಲ್ಲಾಹನು ಸರ್ವಜ್ಞನೂ ಯುಕ್ತಿಪೂರ್ಣನೂ ಆಗಿರುತ್ತಾನೆ.
Verse 60
وَٱلْقَوَٰعِدُ مِنَ ٱلنِّسَآءِ ٱلَّـٰتِى لَا يَرْجُونَ نِكَاحًا فَلَيْسَ عَلَيْهِنَّ جُنَاحٌ أَن يَضَعْنَ ثِيَابَهُنَّ غَيْرَ مُتَبَرِّجَـٰتٍۭ بِزِينَةٍ ۖ وَأَن يَسْتَعْفِفْنَ خَيْرٌ لَّهُنَّ ۗ وَٱللَّهُ سَمِيعٌ عَلِيمٌ
Transliteration wal-qawāʿidu mina l-nisāi allātī lā yarjūna nikāḥan falaysa ʿalayhinna junāḥun an yaḍaʿna thiyābahunna ghayra mutabarrijātin bizīnatin wa-an yastaʿfif'na khayrun lahunna wal-lahu samīʿun ʿalīmun
Kannada ವಿವಾಹವಾಗಲು ಬಯಸದೆ ವೃದ್ಧೆಯರಾದ ಸ್ತ್ರೀ ಯರು ತಮ್ಮ ಪರ್ದಾಚಾದರಗಳನ್ನು ತೆಗೆದಿರಿ ಸಿದರೆ ಅವರ ಮೇಲೇನೂ ದೋಷವಿಲ್ಲ. ಆದರೆ ಒಡವೆ ಅಲಂಕಾರವನ್ನು ಅವರು ಪ್ರದರ್ಶಿಸಬಾರದು. ಪರ್ದಾಚಾದರವನ್ನು ಕಳಚಿ ಇಡದಿರುವುದೇ ಅವರ ಮಟ್ಟಿಗೆ ಉತ್ತಮವಾಗಿದೆ. ಅಲ್ಲಾಹನು ಎಲ್ಲವನ್ನು ಆಲಿಸುತ್ತಾನೆ ಮತ್ತು ಅರಿಯುತ್ತಾನೆ .
Verse 61
لَّيْسَ عَلَى ٱلْأَعْمَىٰ حَرَجٌ وَلَا عَلَى ٱلْأَعْرَجِ حَرَجٌ وَلَا عَلَى ٱلْمَرِيضِ حَرَجٌ وَلَا عَلَىٰٓ أَنفُسِكُمْ أَن تَأْكُلُوا۟ مِنۢ بُيُوتِكُمْ أَوْ بُيُوتِ ءَابَآئِكُمْ أَوْ بُيُوتِ أُمَّهَـٰتِكُمْ أَوْ بُيُوتِ إِخْوَٰنِكُمْ أَوْ بُيُوتِ أَخَوَٰتِكُمْ أَوْ بُيُوتِ أَعْمَـٰمِكُمْ أَوْ بُيُوتِ عَمَّـٰتِكُمْ أَوْ بُيُوتِ أَخْوَٰلِكُمْ أَوْ بُيُوتِ خَـٰلَـٰتِكُمْ أَوْ مَا مَلَكْتُم مَّفَاتِحَهُۥٓ أَوْ صَدِيقِكُمْ ۚ لَيْسَ عَلَيْكُمْ جُنَاحٌ أَن تَأْكُلُوا۟ جَمِيعًا أَوْ أَشْتَاتًا ۚ فَإِذَا دَخَلْتُم بُيُوتًا فَسَلِّمُوا۟ عَلَىٰٓ أَنفُسِكُمْ تَحِيَّةً مِّنْ عِندِ ٱللَّهِ مُبَـٰرَكَةً طَيِّبَةً ۚ كَذَٰلِكَ يُبَيِّنُ ٱللَّهُ لَكُمُ ٱلْـَٔايَـٰتِ لَعَلَّكُمْ تَعْقِلُونَ
Transliteration laysa ʿalā l-aʿmā ḥarajun walā ʿalā l-aʿraji ḥarajun walā ʿalā l-marīḍi ḥarajun walā ʿalā anfusikum an takulū min buyūtikum aw buyūti ābāikum aw buyūti ummahātikum aw buyūti ikh'wānikum aw buyūti akhawātikum aw buyūti aʿmāmikum aw buyūti ʿammātikum aw buyūti akhwālikum aw buyūti khālātikum aw mā malaktum mafātiḥahu aw ṣadīqikum laysa ʿalaykum junāḥun an takulū jamīʿan aw ashtātan fa-idhā dakhaltum buyūtan fasallimū ʿalā anfusikum taḥiyyatan min ʿindi l-lahi mubārakatan ṭayyibatan kadhālika yubayyinu l-lahu lakumu l-āyāti laʿallakum taʿqilūna
Kannada ನೀವು ನಿಮ್ಮ ಮನೆಗಳಲ್ಲಿ, ನಿಮ್ಮ ತಂದೆ - ತಾತಂದಿರ ಮನೆಗಳಲ್ಲಿ, ನಿಮ್ಮ ತಾಯಂದಿರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರರ ಮನೆಗಳಲ್ಲಿ ಅಥವಾ ನಿಮ್ಮ ಸಹೋದರಿಯರ ಮನೆಗಳಲ್ಲಿ ಅಥವಾ ನಿಮ್ಮ ಸೋದರತ್ತೆಯಂದಿರ ಮನೆಗಳಲ್ಲಿ ಅಥವಾ ನಿಮ್ಮ ಸೋದರ ಮಾವಂದಿರ ಮನೆಗಳಲ್ಲಿ ಅಥವಾ ನಿಮ್ಮ ಮಾತೃ ಸೋದರಿಯರ ಮನೆಗಳಲ್ಲಿ ಅಥವಾ ಬೀಗದ ಕೈಗಳು ನಿಮ್ಮ ವಶದಲ್ಲಿರುವ ಮನೆಗಳಲ್ಲಿ ಅಥವಾ ನಿಮ್ಮ ಮಿತ್ರರ ಮನೆಗಳಲ್ಲಿ ಉಣ್ಣುವುದರಲ್ಲಿ ಆಕ್ಷೇಪವಿಲ್ಲ. ಕುರುಡನ ಮೇಲೆ ತಪ್ಪಿಲ್ಲ. ಕುಂಟನ ಮೇಲೆ ತಪ್ಪಿಲ್ಲ. ರೋಗಿಯ ಮೇಲೆ ತಪ್ಪಿಲ್ಲ. ಸ್ವತಃ ನಿಮ್ಮ ಮೇಲೂ ತಪ್ಪಿಲ್ಲ. ನೀವು ಒಟ್ಟಿಗೆ ಕೂತು ಉಣ್ಣುವು ದಕ್ಕೂ ಬೇರೆ ಬೇರೆ ಕೂತು ಉಣ್ಣುವುದಕ್ಕೂ ವಿರೋಧವಿಲ್ಲ. ಆದರೆ ಮನೆಗಳೊಳಗೆ ಪ್ರವೇಶಿ ಸುವಾಗ ಅಲ್ಲಾಹನ ವತಿಯಿಂದ ಇರುವ ಅನು ಗ್ರಹೀತವೂ ಪರಿಪಾವನವೂ ಆದ ಅಭಿವಾದ್ಯ ವೆಂಬ ನೆಲೆಯಲ್ಲಿ ನಿಮ್ಮ ಸ್ವಂತದ ಮೇಲೆ ಸಲಾಮ್ ಹೇಳಿರಿ. ಹೀಗೆ ಅಲ್ಲಾಹನು, ನಿಮಗೆ ನಿದರ್ಶನಗಳನ್ನು ವಿವರಿಸುತ್ತಾನೆ. ನೀವು ಯೋಚಿಸಿ ಗ್ರಹಿಸಲಿಕ್ಕಾಗಿ.
Verse 62
إِنَّمَا ٱلْمُؤْمِنُونَ ٱلَّذِينَ ءَامَنُوا۟ بِٱللَّهِ وَرَسُولِهِۦ وَإِذَا كَانُوا۟ مَعَهُۥ عَلَىٰٓ أَمْرٍ جَامِعٍ لَّمْ يَذْهَبُوا۟ حَتَّىٰ يَسْتَـْٔذِنُوهُ ۚ إِنَّ ٱلَّذِينَ يَسْتَـْٔذِنُونَكَ أُو۟لَـٰٓئِكَ ٱلَّذِينَ يُؤْمِنُونَ بِٱللَّهِ وَرَسُولِهِۦ ۚ فَإِذَا ٱسْتَـْٔذَنُوكَ لِبَعْضِ شَأْنِهِمْ فَأْذَن لِّمَن شِئْتَ مِنْهُمْ وَٱسْتَغْفِرْ لَهُمُ ٱللَّهَ ۚ إِنَّ ٱللَّهَ غَفُورٌ رَّحِيمٌ
Transliteration innamā l-mu'minūna alladhīna āmanū bil-lahi warasūlihi wa-idhā kānū maʿahu ʿalā amrin jāmiʿin lam yadhhabū ḥattā yastadhinūhu inna alladhīna yastadhinūnaka ulāika alladhīna yu'minūna bil-lahi warasūlihi fa-idhā is'tadhanūka libaʿḍi shanihim fadhan liman shi'ta min'hum wa-is'taghfir lahumu l-laha inna l-laha ghafūrun raḥīmun
Kannada ಅಲ್ಲಾಹು ಮತ್ತು ಅವನ ದೂತರನ್ನು ನಂಬು ವವರೇ ಸತ್ಯವಿಶ್ವಾಸಿಗಳು, ಯಾವುದೇ ಸಾಮೂ ಹಿಕ ಕಾರ್ಯದಲ್ಲಿ ಅವರು ದೇವದೂತರ ಜೊತೆಗೆ ಭಾಗವಹಿಸುತ್ತಿರುವಾಗ ಅವರಿಂದ ಅನುಮತಿ ಪಡೆಯದೆ ಹೊರ ಹೋಗಬಾರದು. (ಪೈಗಂಬರರೇ,) ನಿಮ್ಮೊಡನೆ ಅನುಮತಿ ಕೇಳುವವರೇ ಅಲ್ಲಾಹು ಮತ್ತು ದೂತರನ್ನು ನಂಬುವವರು. ಆದುದರಿಂದ ಅವರು ತಮ್ಮ ಯಾವುದೇ ಕಾರ್ಯ ಕ್ಕಾಗಿ ಹೊರ ಹೋಗಲು ಅನುಮತಿ ಕೇಳಿದರೆ ನೀವಿಚ್ಚಿಸುವವರಿಗೆ ಅನುಮತಿಕೊಡಿರಿ. ಮತ್ತು ಅವರ ಪಾಪ ಮುಕ್ತಿಗಾಗಿ ಅಲ್ಲಾಹನೊಡನೆ ಪ್ರಾರ್ಥಿಸಿರಿ. ಅಲ್ಲಾಹನು ಕ್ಷಮಾಶೀಲನೂ, ಕರುಣಾನಿಧಿಯೂ ಆಗಿರುತ್ತಾನೆ.
Verse 63
لَّا تَجْعَلُوا۟ دُعَآءَ ٱلرَّسُولِ بَيْنَكُمْ كَدُعَآءِ بَعْضِكُم بَعْضًا ۚ قَدْ يَعْلَمُ ٱللَّهُ ٱلَّذِينَ يَتَسَلَّلُونَ مِنكُمْ لِوَاذًا ۚ فَلْيَحْذَرِ ٱلَّذِينَ يُخَالِفُونَ عَنْ أَمْرِهِۦٓ أَن تُصِيبَهُمْ فِتْنَةٌ أَوْ يُصِيبَهُمْ عَذَابٌ أَلِيمٌ
Transliteration lā tajʿalū duʿāa l-rasūli baynakum kaduʿāi baʿḍikum baʿḍan qad yaʿlamu l-lahu alladhīna yatasallalūna minkum liwādhan falyaḥdhari alladhīna yukhālifūna ʿan amrihi an tuṣībahum fit'natun aw yuṣībahum ʿadhābun alīmun
Kannada ನಿಮ್ಮ ನಡುವೆ ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ದೂತರನ್ನು ನೀವು ಕರೆಯ ಬೇಡಿರಿ. ನಿಮ್ಮ ಪೈಕಿ ಜನರ ಮರೆಯಲ್ಲಿ ಮೆಲ್ಲನೆ ಕೊಸರಿಕೊಳ್ಳುವ ಮಂದಿಯನ್ನು ಅಲ್ಲಾಹು ಚೆನ್ನಾಗಿ ಅರಿಯುತ್ತಾನೆ. ದೂತರ ಆಜ್ಞೆಗೆ ವಿರುದ್ಧ ವರ್ತಿಸುವವರು ಯಾವುದೇ ಪರೀಕ್ಷೆ ಬಂದೆರಗುವ ಬಗ್ಗೆ ಅಥವಾ ತಮ್ಮ ಮೇಲೆ ವೇದನಾಯುಕ್ತ ಶಿಕ್ಷೆ ಬಂದೆರಗುವ ಬಗ್ಗೆ ಭಯಪಟ್ಟುಕೊಳ್ಳಲಿ.
Verse 64
أَلَآ إِنَّ لِلَّهِ مَا فِى ٱلسَّمَـٰوَٰتِ وَٱلْأَرْضِ ۖ قَدْ يَعْلَمُ مَآ أَنتُمْ عَلَيْهِ وَيَوْمَ يُرْجَعُونَ إِلَيْهِ فَيُنَبِّئُهُم بِمَا عَمِلُوا۟ ۗ وَٱللَّهُ بِكُلِّ شَىْءٍ عَلِيمٌۢ
Transliteration alā inna lillahi mā fī l-samāwāti wal-arḍi qad yaʿlamu mā antum ʿalayhi wayawma yur'jaʿūna ilayhi fayunabbi-uhum bimā ʿamilū wal-lahu bikulli shayin ʿalīmun
Kannada ತಿಳಿಯಿರಿ, ಭೂಮಿ-ಆಕಾಶಗಳಲ್ಲಿರುವುದು ಅಲ್ಲಾಹನದು. ನೀವು ಯಾವ ಅವಸ್ಥೆಯಲ್ಲಿ ಇದ್ದೀರಿ ಎಂಬುದನ್ನು ಮತ್ತು ಅವರು (ಕಪಟಿ ಗಳು) ಆತನ ಕಡೆಗೆ ಮರಳಿಸಲ್ಪಡುವ ದಿನವನ್ನು ಅಲ್ಲಾಹು ಖಂಡಿತ ಅರಿಯುತ್ತಾನೆ. ಆಗ ಅವರು ಮಾಡಿದ ಕರ್ಮಗಳ ಪ್ರತಿಫಲವನ್ನು ಅಲ್ಲಿ ಅವನು ಅವರಿಗೆ ಕೊಡುವನು. ಅಲ್ಲಾಹು ಸಕಲ ವಿಷಯಗಳ ಜ್ಞಾನವುಳ್ಳವನು.
Read Surah An-Nur in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.