Surah Al-Isra in Kannada: translation and audio
Surah 17 · الإسراء · The Night Journey · 111 verses
Surah Al-Isra verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Isra word by word in English.
Verse 1
سُبْحَـٰنَ ٱلَّذِىٓ أَسْرَىٰ بِعَبْدِهِۦ لَيْلًا مِّنَ ٱلْمَسْجِدِ ٱلْحَرَامِ إِلَى ٱلْمَسْجِدِ ٱلْأَقْصَا ٱلَّذِى بَـٰرَكْنَا حَوْلَهُۥ لِنُرِيَهُۥ مِنْ ءَايَـٰتِنَآ ۚ إِنَّهُۥ هُوَ ٱلسَّمِيعُ ٱلْبَصِيرُ
Transliteration sub'ḥāna alladhī asrā biʿabdihi laylan mina l-masjidi l-ḥarāmi ilā l-masjidi l-aqṣā alladhī bāraknā ḥawlahu linuriyahu min āyātinā innahu huwa l-samīʿu l-baṣīru
Kannada ತನ್ನ ದಾಸನನ್ನು ಒಂದು ರಾತ್ರಿಯಲ್ಲಿ ಮಸ್ಜಿದುಲ್ ಹರಾಮ್‍ನಿಂದ, ನಾವು ಪರಿಸರವನ್ನು ಅನುಗ್ರಹಿತ ಗೊಳಿಸಿರುವಂತಹ ಅಖ್ಸಾ ಮಸೀದಿಯ ಕಡೆಗೆ ನಿಶಾಯಾನ ಮಾಡಿಸಿದವನು ಪರಮ ಪಾವನನು. ನಮ್ಮ ಕೆಲವು ದೃಷ್ಟಾಂತಗಳನ್ನು ಅವರಿಗೆ ನಾವು ತೋರಿಸಿಕೊಡಲಿಕ್ಕಾಗಿ. ನಿಶ್ಚಯವಾಗಿಯೂ ಅವನು (ಅಲ್ಲಾಹು) ಸರ್ವಶ್ರುತನೂ ಸರ್ವವೀಕ್ಷಕನೂ ಆಗಿರುತ್ತಾನೆ.
Verse 2
وَءَاتَيْنَا مُوسَى ٱلْكِتَـٰبَ وَجَعَلْنَـٰهُ هُدًى لِّبَنِىٓ إِسْرَٰٓءِيلَ أَلَّا تَتَّخِذُوا۟ مِن دُونِى وَكِيلًا
Transliteration waātaynā mūsā l-kitāba wajaʿalnāhu hudan libanī is'rāīla allā tattakhidhū min dūnī wakīlan
Kannada ಮೂಸಾರವರಿಗೆ ನಾವು ಗ್ರಂಥ ನೀಡಿದ್ದೆವು. ನನ್ನ ಹೊರತು ಇನ್ನಾವ ಕಾರ್ಯ ನಿರ್ವಾಹಕನನ್ನೂ ನೀವು ಸ್ವೀಕರಿಸಬೇಡಿರಿ ಎಂಬ ಆಜ್ಞೆಯೊಂದಿಗೆ ಅದನ್ನು ಬನೀಇಸ್ರಾಈಲ ಸಂತತಿಗಳ ಸನ್ಮಾರ್ಗ ದರ್ಶನವನ್ನಾಗಿ ಮಾಡಿದ್ದೆವು.
Verse 3
ذُرِّيَّةَ مَنْ حَمَلْنَا مَعَ نُوحٍ ۚ إِنَّهُۥ كَانَ عَبْدًا شَكُورًا
Transliteration dhurriyyata man ḥamalnā maʿa nūḥin innahu kāna ʿabdan shakūran
Kannada ನೂಹರ ಸಂಗಡ ನಾವು ನಾವೆಯಲ್ಲಿ ಹತ್ತಿಸಿದ್ದವರ ಸಂತತಿಗಳನ್ನು. ನಿಜಕ್ಕೂ ನೂಹ್ ಓರ್ವ ಕೃತಜ್ಞ ದಾಸರಾಗಿದ್ದರು.
Verse 4
وَقَضَيْنَآ إِلَىٰ بَنِىٓ إِسْرَٰٓءِيلَ فِى ٱلْكِتَـٰبِ لَتُفْسِدُنَّ فِى ٱلْأَرْضِ مَرَّتَيْنِ وَلَتَعْلُنَّ عُلُوًّا كَبِيرًا
Transliteration waqaḍaynā ilā banī is'rāīla fī l-kitābi latuf'sidunna fī l-arḍi marratayni walataʿlunna ʿuluwwan kabīran
Kannada ನಾವು ಇಸ್ರಾಈಲ ಸಂತತಿಗಳಿಗೆ ಈ ರೀತಿ ವಿಧಿಸಿದ್ದೆವು; ನೀವು ಎರಡು ಬಾರಿ ಭೂಮಿಯಲ್ಲಿ ಗೊಂದಲವನ್ನುಂಟುಮಾಡುವಿರಿ ಹಾಗೂ ಭಾರೀ ಮೇಲ್ಮೆಯನ್ನು ತೋರುವಿರಿ ಎಂದು.
Verse 5
فَإِذَا جَآءَ وَعْدُ أُولَىٰهُمَا بَعَثْنَا عَلَيْكُمْ عِبَادًا لَّنَآ أُو۟لِى بَأْسٍ شَدِيدٍ فَجَاسُوا۟ خِلَـٰلَ ٱلدِّيَارِ ۚ وَكَانَ وَعْدًا مَّفْعُولًا
Transliteration fa-idhā jāa waʿdu ūlāhumā baʿathnā ʿalaykum ʿibādan lanā ulī basin shadīdin fajāsū khilāla l-diyāri wakāna waʿdan mafʿūlan
Kannada ಹಾಗೆ ಆ ಎರಡು ಸಂದರ್ಭಗಳ ಪೈಕಿ ಒಂದನೆಯದಕ್ಕೆ ನಿಶ್ಚಯಿಸಲಾದ (ಶಿಕ್ಷೆಯ) ಸಮಯವಾದರೆ ಉಗ್ರ ಪರಾಕ್ರಮಿಶಾಲಿಗಳಾದ ನಮ್ಮ ಕೆಲವು ದಾಸರನ್ನು ನಿಮ್ಮ ವಿರುದ್ಧ ಎಬ್ಬಿಸಿದೆವು. ಅವರು ನಿಮ್ಮ ನಾಡುಗಳಿಗೆ ನುಗ್ಗಿ ನಿಮ್ಮನ್ನು ಹುಡುಕುತ್ತಾ ಹೋದರು. ಇದು ನೆರವೇರಲಾಗುವ ಒಂದು ವಾಗ್ದಾನವಾಗಿತ್ತು.
Verse 6
ثُمَّ رَدَدْنَا لَكُمُ ٱلْكَرَّةَ عَلَيْهِمْ وَأَمْدَدْنَـٰكُم بِأَمْوَٰلٍ وَبَنِينَ وَجَعَلْنَـٰكُمْ أَكْثَرَ نَفِيرًا
Transliteration thumma radadnā lakumu l-karata ʿalayhim wa-amdadnākum bi-amwālin wabanīna wajaʿalnākum akthara nafīran
Kannada ಅನಂತರ ನಾವು ನಿಮಗೆ ಅವರ ಮೇಲೆ ಪ್ರಾಬಲ್ಯವನ್ನು ಮರಳಿಸಿ ಕೊಟ್ಟೆವು. ನಿಮ್ಮನ್ನು ಸಂಪತ್ತು ಹಾಗೂ ಸಂತತಿಗಳಿಂದ ಅಭಿವೃದ್ಧಿ ಗೊಳಿಸಿದೆವು. ನಿಮ್ಮನ್ನು ಹೆಚ್ಚು ಸಂಖ್ಯಾ ಬಲವುಳ್ಳವರಾಗಿ ಮಾಡಿದೆವು.
Verse 7
إِنْ أَحْسَنتُمْ أَحْسَنتُمْ لِأَنفُسِكُمْ ۖ وَإِنْ أَسَأْتُمْ فَلَهَا ۚ فَإِذَا جَآءَ وَعْدُ ٱلْـَٔاخِرَةِ لِيَسُـۥٓـُٔوا۟ وُجُوهَكُمْ وَلِيَدْخُلُوا۟ ٱلْمَسْجِدَ كَمَا دَخَلُوهُ أَوَّلَ مَرَّةٍ وَلِيُتَبِّرُوا۟ مَا عَلَوْا۟ تَتْبِيرًا
Transliteration in aḥsantum aḥsantum li-anfusikum wa-in asatum falahā fa-idhā jāa waʿdu l-ākhirati liyasūū wujūhakum waliyadkhulū l-masjida kamā dakhalūhu awwala marratin waliyutabbirū mā ʿalaw tatbīran
Kannada ನೀವು ಸತ್ಕರ್ಮ ಮಾಡಿದ್ದರೆ ಅದು ನಿಮ್ಮ ಹಿತಕ್ಕಾಗಿಯೇ ಮಾಡಿದ್ದೀರಿ, ನೀವು ದುಷ್ಕರ್ಮ ವೆಸಗಿದ್ದರೆ ಅದರ ಕೇಡು ನಿಮಗೇ ಇರುವುದು. ತರುವಾಯ ಎರಡನೆಯ ವಾಗ್ದಾನದ (ಶಿಕ್ಷೆಯ) ಕಾಲ ಬಂದಾಗ ನಿಮ್ಮ ಮುಖಗಳನ್ನು ಭಂಗಗೊಳಿಸುವಂತೆಯೂ ಮೊದಲ ಬಾರಿಗೆ ಆರಾಧನಾಲಯಕ್ಕೆ ಪ್ರವೇ ಶಿಸಿದಂತೆ ಪುನಃ ಪ್ರವೇಶಿಸುವಂತೆಯೂ ಅವರು ಜೈಸಿದ್ದನ್ನೆಲ್ಲ ನಾಶಗೊಳಿಸುವಂತೆಯೂ (ನಾವು ನಿಮ್ಮ ಮೇಲೆ ಶತ್ರುಗಳನ್ನು ಹೇರಿಬಿಟ್ಟೆವು.)
Verse 8
عَسَىٰ رَبُّكُمْ أَن يَرْحَمَكُمْ ۚ وَإِنْ عُدتُّمْ عُدْنَا ۘ وَجَعَلْنَا جَهَنَّمَ لِلْكَـٰفِرِينَ حَصِيرًا
Transliteration ʿasā rabbukum an yarḥamakum wa-in ʿudttum ʿud'nā wajaʿalnā jahannama lil'kāfirīna ḥaṣīran
Kannada ನಿಮ್ಮ ಪ್ರಭು ನಿಮ್ಮ ಮೇಲೆ ದಯೆತೋರಲೂಬಹುದು. ಆದರೆ ನೀವು ಪುನರಾವರ್ತಿಸಿದರೆ ನಾವು (ನಮ್ಮ ಶಿಕ್ಷೆಯನ್ನು) ಪುನರಾವರ್ತಿಸುವೆವು. ಸತ್ಯನಿಷೇಧಿಗಳಿಗೆ ನಾವು ನರಕವನ್ನು ಸೆರೆ ಮನೆಯನ್ನಾಗಿ ಮಾಡಿದ್ದೇವೆ.
Verse 9
إِنَّ هَـٰذَا ٱلْقُرْءَانَ يَهْدِى لِلَّتِى هِىَ أَقْوَمُ وَيُبَشِّرُ ٱلْمُؤْمِنِينَ ٱلَّذِينَ يَعْمَلُونَ ٱلصَّـٰلِحَـٰتِ أَنَّ لَهُمْ أَجْرًا كَبِيرًا
Transliteration inna hādhā l-qur'āna yahdī lillatī hiya aqwamu wayubashiru l-mu'minīna alladhīna yaʿmalūna l-ṣāliḥāti anna lahum ajran kabīran
Kannada ವಾಸ್ತವದಲ್ಲಿ ಈ ಖುರ್‍ಆನ್ ಅತ್ಯಂತ ನೇರ ಮಾರ್ಗವನ್ನು ತೋರಿಸಿಕೊಡುತ್ತದೆ. ಸತ್ಕರ್ಮವೆಸಗಿದ ಸತ್ಯವಿಶ್ವಾಸಿಗಳಿಗೆ ದೊಡ್ಡ ಸತ್ಫಲವಿದೆಯೆಂಬ ಸುವಾರ್ತೆಯನ್ನು ನೀಡುತ್ತದೆ.
Verse 10
وَأَنَّ ٱلَّذِينَ لَا يُؤْمِنُونَ بِٱلْـَٔاخِرَةِ أَعْتَدْنَا لَهُمْ عَذَابًا أَلِيمًا
Transliteration wa-anna alladhīna lā yu'minūna bil-ākhirati aʿtadnā lahum ʿadhāban alīman
Kannada ಪರಲೋಕದಲ್ಲಿ ವಿಶ್ವಾಸವಿರಿಸದವರು ಯಾರೋ, ನಾವು ಅವರಿಗಾಗಿ ವೇದನಾಜನಕ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ ಎಂದು (ತಿಳಿಸುತ್ತದೆ.)
Verse 11
وَيَدْعُ ٱلْإِنسَـٰنُ بِٱلشَّرِّ دُعَآءَهُۥ بِٱلْخَيْرِ ۖ وَكَانَ ٱلْإِنسَـٰنُ عَجُولًا
Transliteration wayadʿu l-insānu bil-shari duʿāahu bil-khayri wakāna l-insānu ʿajūlan
Kannada ಮಾನವನು ಒಳಿತಿಗೆ ಪ್ರಾರ್ಥಿಸುವಂತೆ ಕೆಡುಕಿಗೂ ಪ್ರಾರ್ಥಿಸುತ್ತಾನೆ. ಮನುಷ್ಯನು ಮಹಾ ದುಡುಕು ಸ್ವಭಾವದವನು.
Verse 12
وَجَعَلْنَا ٱلَّيْلَ وَٱلنَّهَارَ ءَايَتَيْنِ ۖ فَمَحَوْنَآ ءَايَةَ ٱلَّيْلِ وَجَعَلْنَآ ءَايَةَ ٱلنَّهَارِ مُبْصِرَةً لِّتَبْتَغُوا۟ فَضْلًا مِّن رَّبِّكُمْ وَلِتَعْلَمُوا۟ عَدَدَ ٱلسِّنِينَ وَٱلْحِسَابَ ۚ وَكُلَّ شَىْءٍ فَصَّلْنَـٰهُ تَفْصِيلًا
Transliteration wajaʿalnā al-layla wal-nahāra āyatayni famaḥawnā āyata al-layli wajaʿalnā āyata l-nahāri mub'ṣiratan litabtaghū faḍlan min rabbikum walitaʿlamū ʿadada l-sinīna wal-ḥisāba wakulla shayin faṣṣalnāhu tafṣīlan
Kannada ಇರುಳು ಮತ್ತು ಹಗಲನ್ನು ನಾವು ಎರಡು ನಿದ ರ್ಶನಗಳಾಗಿ ಮಾಡಿರುತ್ತೇವೆ. ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸಿಕೊಳ್ಳಲಾಗುವಂ ತೆಯೂ ಸಂವತ್ಸರಗಳ ಹಾಗೂ ಸಮಯಗಳ ಗಣನೆಯನ್ನು ಮಾಡಿಕೊಳ್ಳುವಂತೆಯೂ ನಾವು ಇರುಳಿನ ನಿದರ್ಶನವನ್ನು ಮಬ್ಬಾಗಿಯೂ ಹಗಲಿನ ನಿದರ್ಶನವನ್ನು ಪ್ರಕಾಶಮಾನವಾಗಿಯೂ ಮಾಡಿದೆವು. ನಾವು ಪ್ರತಿಯೊಂದು ವಸ್ತುವನ್ನೂ ಚೆನ್ನಾಗಿ ನಿರೂಪಿಸಿಟ್ಟಿರುತ್ತೇವೆ.
Verse 13
وَكُلَّ إِنسَـٰنٍ أَلْزَمْنَـٰهُ طَـٰٓئِرَهُۥ فِى عُنُقِهِۦ ۖ وَنُخْرِجُ لَهُۥ يَوْمَ ٱلْقِيَـٰمَةِ كِتَـٰبًا يَلْقَىٰهُ مَنشُورًا
Transliteration wakulla insānin alzamnāhu ṭāirahu fī ʿunuqihi wanukh'riju lahu yawma l-qiyāmati kitāban yalqāhu manshūran
Kannada ಪ್ರತಿಯೊಬ್ಬ ಮನುಷ್ಯನ ಶಕುನವನ್ನು ನಾವು ಅವನ ಕೊರಳಿಗೇ ಕಟ್ಟಿರುತ್ತೇವೆ. ಪುನರುತ್ಥಾನ ದಿನದಂದು ನಾವು ಅವನಿಗಾಗಿ ಒಂದು ಗ್ರಂಥ ವನ್ನು ಹೊರಡಿಸುವೆವು. ಅವನು ಅದನ್ನು ತೆರೆದಂತೆ ಕಾಣುವನು.
Verse 14
ٱقْرَأْ كِتَـٰبَكَ كَفَىٰ بِنَفْسِكَ ٱلْيَوْمَ عَلَيْكَ حَسِيبًا
Transliteration iq'ra kitābaka kafā binafsika l-yawma ʿalayka ḥasīban
Kannada ನಿನ್ನ ಕರ್ಮಗ್ರಂಥವನ್ನು ಓದು. ಇಂದು ನಿನ್ನ ಲೆಕ್ಕ ತೆಗೆಯಲು ನೀನೇ ಸಾಕು. (ಎಂದು ಅವನಿಗೆ ಹೇಳಲಾಗುವುದು)
Verse 15
مَّنِ ٱهْتَدَىٰ فَإِنَّمَا يَهْتَدِى لِنَفْسِهِۦ ۖ وَمَن ضَلَّ فَإِنَّمَا يَضِلُّ عَلَيْهَا ۚ وَلَا تَزِرُ وَازِرَةٌ وِزْرَ أُخْرَىٰ ۗ وَمَا كُنَّا مُعَذِّبِينَ حَتَّىٰ نَبْعَثَ رَسُولًا
Transliteration mani ih'tadā fa-innamā yahtadī linafsihi waman ḍalla fa-innamā yaḍillu ʿalayhā walā taziru wāziratun wiz'ra ukh'rā wamā kunnā muʿadhibīna ḥattā nabʿatha rasūlan
Kannada ಯಾರು ಸನ್ಮಾರ್ಗ ಸ್ವೀಕರಿಸಿಕೊಳ್ಳುವನೋ ಅವ ನು ತನ್ನ ಸ್ವಂತ ಒಳಿತಿಗಾಗಿ ಸನ್ಮಾರ್ಗ ಸ್ವೀಕರಿಸಿದನು. ಯಾರು ಪಥಭ್ರಷ್ಟನಾಗುವನೋ, ಅವನು ತನ್ನ ಮೇಲೆ ಕೇಡಾಗಿ ಪಥಭ್ರಷ್ಟನಾದನು. ಪಾಪದ ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನುಂ. ಓರ್ವ ದೂತ ನನ್ನು ಕಳುಹಿಸಿಕೊಡುವವರೆಗೆ ನಾವು ಯಾರ ನ್ನೂ ಶಿಕ್ಷಿಸುವವರಲ್ಲ ಃ.
Verse 16
وَإِذَآ أَرَدْنَآ أَن نُّهْلِكَ قَرْيَةً أَمَرْنَا مُتْرَفِيهَا فَفَسَقُوا۟ فِيهَا فَحَقَّ عَلَيْهَا ٱلْقَوْلُ فَدَمَّرْنَـٰهَا تَدْمِيرًا
Transliteration wa-idhā aradnā an nuh'lika qaryatan amarnā mut'rafīhā fafasaqū fīhā faḥaqqa ʿalayhā l-qawlu fadammarnāhā tadmīran
Kannada ನಾವು ಒಂದು ನಾಡನ್ನು ನಾಶಗೊಳಿಸಲಿಚ್ಛಿಸಿ ದಾಗ ಅಲ್ಲಿನ ಸುಖಲೋಲುಪರಿಗೆ (ಸರ ದಾರರಿಗೆ) ಅಪ್ಪಣೆ ಕೊಡುತ್ತೇವೆ. ಆದರೆ ಅವರು ಆ ಅಣತಿಯ ವಿಚಾರದಲ್ಲಿ ಆಜ್ಞೋಲ್ಲಂಘನೆ ಮಾಡುತ್ತಾರೆ. ಆಗ (ಯಾತನೆಯ) ವಚನವು ಆ ನಾಡಿನ ಮೇಲೆ ನಿಜವಾಗುತ್ತದೆ. ನಾವು ಅದನ್ನು ಸಂಪೂರ್ಣ ನಾಶಮಾಡುತ್ತೇವೆ.
Verse 17
وَكَمْ أَهْلَكْنَا مِنَ ٱلْقُرُونِ مِنۢ بَعْدِ نُوحٍ ۗ وَكَفَىٰ بِرَبِّكَ بِذُنُوبِ عِبَادِهِۦ خَبِيرًۢا بَصِيرًا
Transliteration wakam ahlaknā mina l-qurūni min baʿdi nūḥin wakafā birabbika bidhunūbi ʿibādihi khabīran baṣīran
Kannada ನೂಹರ ಅನಂತರ ಅದೆಷ್ಟು ತಲೆಮಾರುಗಳನ್ನು ನಾವು ನಾಶಗೊಳಿಸಿದ್ದೇವೆ. ತನ್ನ ದಾಸರ ಪಾಪ ಗಳ ಬಗೆಗೆ ಸೂಕ್ಷ್ಮವಾಗಿ ಅರಿಯಲಿಕ್ಕೂ ಸರ್ವ ವನ್ನು ವೀಕ್ಷಿಸಲಿಕ್ಕೂ ನಿನ್ನ ಪ್ರಭುವೇ ಸಾಕು.
Verse 18
مَّن كَانَ يُرِيدُ ٱلْعَاجِلَةَ عَجَّلْنَا لَهُۥ فِيهَا مَا نَشَآءُ لِمَن نُّرِيدُ ثُمَّ جَعَلْنَا لَهُۥ جَهَنَّمَ يَصْلَىٰهَا مَذْمُومًا مَّدْحُورًا
Transliteration man kāna yurīdu l-ʿājilata ʿajjalnā lahu fīhā mā nashāu liman nurīdu thumma jaʿalnā lahu jahannama yaṣlāhā madhmūman madḥūran
Kannada ಯಾರಾದರೂ ಇಹದಲ್ಲೇ ತ್ವರಿತ ಗತಿಯ ಫಲವನ್ನು ಉದ್ದೇಶವಿಟ್ಟರೆ ತ್ವರಿತ ಫಲವನ್ನು ಯಾರಿಗೆ ಕೊಡಬೇಕೆಂದು ನಾವು ಇಚ್ಛಿಸುವೆವೋ ಅವನಿಗೆ ಕೊಡುವೆವು. ಅನಂತರ ಅವನಿಗೆ ನಾವು ನರಕವನ್ನು ನಿಶ್ಚಯಿಸುತ್ತೇವೆ. ಅದರಲ್ಲಿ ಅವನು ನಿಂದ್ಯನಾಗಿ ಹಾಗೂ (ದೇವಕೃಪೆಯಿಂದ) ಬಹಿಷ್ಕøತನಾಗಿ ಸೇರಿ ಬಿಡುವನು.
Verse 19
وَمَنْ أَرَادَ ٱلْـَٔاخِرَةَ وَسَعَىٰ لَهَا سَعْيَهَا وَهُوَ مُؤْمِنٌ فَأُو۟لَـٰٓئِكَ كَانَ سَعْيُهُم مَّشْكُورًا
Transliteration waman arāda l-ākhirata wasaʿā lahā saʿyahā wahuwa mu'minun fa-ulāika kāna saʿyuhum mashkūran
Kannada ಯಾರಾದರೂ ಪರಲೋಕವನ್ನು ಬಯಸಿದರೆ ಮತ್ತು ಸತ್ಯವಿಶ್ವಾಸಿಯಾಗಿದ್ದು ಕೊಂಡು ಅದಕ್ಕಾಗಿ ಶ್ರಮಿಸಬೇಕಾದ ರೀತಿಯಲ್ಲಿ ಶ್ರಮ ಪಟ್ಟರೆ ಅಂಥವರ ಪರಿಶ್ರಮವು ಕೃತಜ್ಞಾರ್ಹವಾಗುವುದು.
Verse 20
كُلًّا نُّمِدُّ هَـٰٓؤُلَآءِ وَهَـٰٓؤُلَآءِ مِنْ عَطَآءِ رَبِّكَ ۚ وَمَا كَانَ عَطَآءُ رَبِّكَ مَحْظُورًا
Transliteration kullan numiddu hāulāi wahāulāi min ʿaṭāi rabbika wamā kāna ʿaṭāu rabbika maḥẓūran
Kannada ಇವರಿಗೂ ಅವರಿಗೂ ಎಲ್ಲರಿಗೂ ನಾವು ನಿನ್ನ ಪ್ರಭುವಿನ ಕೊಡುಗೆಯಿಂದ ನೆರವಾಗುತ್ತೇವೆ. ನಿನ್ನ ಪ್ರಭುವಿನ ಕೊಡುಗೆಯು ಯಾರಿಂದಲೂ ತಡೆದಿರಿಸಲ್ಪಡುವಂತಹದ್ದಲ್ಲ.
Verse 21
ٱنظُرْ كَيْفَ فَضَّلْنَا بَعْضَهُمْ عَلَىٰ بَعْضٍ ۚ وَلَلْـَٔاخِرَةُ أَكْبَرُ دَرَجَـٰتٍ وَأَكْبَرُ تَفْضِيلًا
Transliteration unẓur kayfa faḍḍalnā baʿḍahum ʿalā baʿḍin walalākhiratu akbaru darajātin wa-akbaru tafḍīlan
Kannada ನಾವು ಅವರಲ್ಲಿ ಕೆಲವರಿಗೆ ಕೆಲವರಿಗಿಂತ ಹೇಗೆ ಶ್ರೇಷ್ಟತೆ ಪ್ರದಾನ ಮಾಡಿರುತ್ತೇವೆ ಎಂಬುದನ್ನು ನೋಡಿರಿ. ಪರಲೋಕವು ಸ್ಥಾನದಲ್ಲಿ ಅತ್ಯಂತ ಘನವೆತ್ತುದು. ಅತ್ಯಂತ ಅಮೋಘವಾದುದು.
Verse 22
لَّا تَجْعَلْ مَعَ ٱللَّهِ إِلَـٰهًا ءَاخَرَ فَتَقْعُدَ مَذْمُومًا مَّخْذُولًا
Transliteration lā tajʿal maʿa l-lahi ilāhan ākhara fataqʿuda madhmūman makhdhūlan
Kannada ನೀನು ಅಲ್ಲಾಹನೊಂದಿಗೆ ಬೇರಾರನ್ನೂ ಆರಾಧ್ಯನಾಗಿ ಮಾಡದಿರು. ಅನ್ಯಥಾ ನಿಂದ್ಯನಾಗಿ, ಅಸಹಾಯಕನಾಗಿ ಕುಳಿತುಕೊಳ್ಳುವಿ.
Verse 23
۞ وَقَضَىٰ رَبُّكَ أَلَّا تَعْبُدُوٓا۟ إِلَّآ إِيَّاهُ وَبِٱلْوَٰلِدَيْنِ إِحْسَـٰنًا ۚ إِمَّا يَبْلُغَنَّ عِندَكَ ٱلْكِبَرَ أَحَدُهُمَآ أَوْ كِلَاهُمَا فَلَا تَقُل لَّهُمَآ أُفٍّ وَلَا تَنْهَرْهُمَا وَقُل لَّهُمَا قَوْلًا كَرِيمًا
Transliteration waqaḍā rabbuka allā taʿbudū illā iyyāhu wabil-wālidayni iḥ'sānan immā yablughanna ʿindaka l-kibara aḥaduhumā aw kilāhumā falā taqul lahumā uffin walā tanharhumā waqul lahumā qawlan karīman
Kannada ನೀವು ಕೇವಲ ಅವನೊಬ್ಬನಿಗೇ ಹೊರತು ಇನ್ನಾರಿಗೂ ಖಂಡಿತ ಆರಾಧಿಸಬಾರದು, ಮಾತಾ ಪಿತರೊಡನೆ ಸೌಜನ್ಯದಿಂದ ವರ್ತಿಸಿರಿ ಎಂದು ನಿನ್ನ ಪ್ರಭು ವಿಧಿಸಿರುವನು. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿನ್ನ ಬಳಿಯಲ್ಲಿದ್ದರೆ, ಅವರಿಗೆ `ಛೆ’ ಎಂದು ಹೇಳದಿರು. ಅವರನ್ನು ಜರೆಯದಿರು. ಅವರೊಂದಿಗೆ ಗೌರವ ಪೂರ್ವಕವಾಗಿ ಮಾತನಾಡು.
Verse 24
وَٱخْفِضْ لَهُمَا جَنَاحَ ٱلذُّلِّ مِنَ ٱلرَّحْمَةِ وَقُل رَّبِّ ٱرْحَمْهُمَا كَمَا رَبَّيَانِى صَغِيرًا
Transliteration wa-ikh'fiḍ lahumā janāḥa l-dhuli mina l-raḥmati waqul rabbi ir'ḥamhumā kamā rabbayānī ṣaghīran
Kannada ಕರುಣೆಯೊಂದಿಗೆ ವಿನಯದ ರೆಕ್ಕೆಯನ್ನು ಅವರ ಮುಂದೆ ತಗ್ಗಿಸಿರಿ. ಓ ನನ್ನ ಪ್ರಭೂ, ಇವರು ನನ್ನ ಚಿಕ್ಕಂದಿನಲ್ಲಿ (ದಯಾ ವಾತ್ಸಲ್ಯಗಳಿಂದ) ನನ್ನನ್ನು ಸಾಕಿ ಸಲಹಿದಂತೆಯೇ ನೀನು ಅವರ ಮೇಲೆ ಕೃಪೆ ತೋರು ಎಂದು ಪ್ರಾರ್ಥಿಸು.
Verse 25
رَّبُّكُمْ أَعْلَمُ بِمَا فِى نُفُوسِكُمْ ۚ إِن تَكُونُوا۟ صَـٰلِحِينَ فَإِنَّهُۥ كَانَ لِلْأَوَّٰبِينَ غَفُورًا
Transliteration rabbukum aʿlamu bimā fī nufūsikum in takūnū ṣāliḥīna fa-innahu kāna lil'awwābīna ghafūran
Kannada ನಿಮ್ಮ ಅಂತರಂಗದಲ್ಲಿರುವುದನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು. ನೀವು ಸಜ್ಜನರಾಗಿದ್ದರೆ, (ದೇವಾನುಸರಣೆಯ ಕಡೆಗೆ) ಆಗ್ರಹಪೂರ್ವಕ ಮರಳಿ ಬರುವವರನ್ನು ಅವನು ಕ್ಷಮಿಸುವವನಾ ಗಿರುತ್ತಾನೆ.
Verse 26
وَءَاتِ ذَا ٱلْقُرْبَىٰ حَقَّهُۥ وَٱلْمِسْكِينَ وَٱبْنَ ٱلسَّبِيلِ وَلَا تُبَذِّرْ تَبْذِيرًا
Transliteration waāti dhā l-qur'bā ḥaqqahu wal-mis'kīna wa-ib'na l-sabīli walā tubadhir tabdhīran
Kannada ಸಂಬಂಧಿಕನಿಗೆ ಅವನ ಹಕ್ಕನ್ನೂ ಬಡವರಿಗೂ ಪ್ರಯಾಣಿಕನಿಗೂ ಅವನವನ ಹಕ್ಕನ್ನೂ ಕೊಡು. ದುಂದುವೆಚ್ಚ ಮಾಡದಿರು.
Verse 27
إِنَّ ٱلْمُبَذِّرِينَ كَانُوٓا۟ إِخْوَٰنَ ٱلشَّيَـٰطِينِ ۖ وَكَانَ ٱلشَّيْطَـٰنُ لِرَبِّهِۦ كَفُورًا
Transliteration inna l-mubadhirīna kānū ikh'wāna l-shayāṭīni wakāna l-shayṭānu lirabbihi kafūran
Kannada ದುಂದುಗಾರರು ಶೈತಾನನ ಸೋದರರಾಗಿರುತ್ತಾರೆ. ಶೈತಾನನು ತನ್ನ ಪ್ರಭುವಿಗೆ ಅತ್ಯಂತ ಕೃತಘ್ನನು.
Verse 28
وَإِمَّا تُعْرِضَنَّ عَنْهُمُ ٱبْتِغَآءَ رَحْمَةٍ مِّن رَّبِّكَ تَرْجُوهَا فَقُل لَّهُمْ قَوْلًا مَّيْسُورًا
Transliteration wa-immā tuʿ'riḍanna ʿanhumu ib'tighāa raḥmatin min rabbika tarjūhā faqul lahum qawlan maysūran
Kannada ನಿನ್ನ ಪ್ರಭುವಿನ ಕಡೆಯಿಂದ ನೀನು ಆಗ್ರಹಿಸುತ್ತಿರುವ ಕೃಪೆಯನ್ನು ಅರಸುತ್ತ ನಿನಗೆ ಅವರಿಂದ ತಪ್ಪಿಸಿಕೊಳ್ಳಬೇಕೆಂದಾದರೆ, ಅವರಿಗೆ ನಯವಾದ ಮಾತನ್ನೇ ಹೇಳು.
Verse 29
وَلَا تَجْعَلْ يَدَكَ مَغْلُولَةً إِلَىٰ عُنُقِكَ وَلَا تَبْسُطْهَا كُلَّ ٱلْبَسْطِ فَتَقْعُدَ مَلُومًا مَّحْسُورًا
Transliteration walā tajʿal yadaka maghlūlatan ilā ʿunuqika walā tabsuṭ'hā kulla l-basṭi fataqʿuda malūman maḥsūran
Kannada ನಿನ್ನ ಕೈಯನ್ನು ಕೊರಳಿಗೆ ಕಟ್ಟಿ ಹಾಕಬೇಡ ಮತ್ತು ಅದನ್ನು ಸಂಪೂರ್ಣವಾಗಿ ತೆರೆದಿಡಲೂ ಬೇಡ. ಹಾಗಾದರೆ ನೀನು ನಿಂದ್ಯನೂ ನಿರ್ಗತಿಕನೂ ಆಗುವಿ.
Verse 30
إِنَّ رَبَّكَ يَبْسُطُ ٱلرِّزْقَ لِمَن يَشَآءُ وَيَقْدِرُ ۚ إِنَّهُۥ كَانَ بِعِبَادِهِۦ خَبِيرًۢا بَصِيرًا
Transliteration inna rabbaka yabsuṭu l-riz'qa liman yashāu wayaqdiru innahu kāna biʿibādihi khabīran baṣīran
Kannada ನಿನ್ನ ಪ್ರಭು ತಾನಿಚ್ಛಿಸಿದವರಿಗೆ ಜೀವನಾಧಾರವನ್ನು ವಿಶಾಲಗೊಳಿಸುತ್ತಾನೆ. ತಾನಿಚ್ಛಿಸಿದವರಿಗೆ ಸಂಕುಚಿತಗೊಳಿಸುತ್ತಾನೆ. ಅವನು ತನ್ನದಾಸರ ಬಗ್ಗೆ ಸೂಕ್ಷ್ಮವಾಗಿ ಅರಿತವನೂ ಅವರ ಮೇಲೆ ನಿಗಾ ಇಟ್ಟವನೂ ಆಗಿರುವನು.
Verse 31
وَلَا تَقْتُلُوٓا۟ أَوْلَـٰدَكُمْ خَشْيَةَ إِمْلَـٰقٍ ۖ نَّحْنُ نَرْزُقُهُمْ وَإِيَّاكُمْ ۚ إِنَّ قَتْلَهُمْ كَانَ خِطْـًٔا كَبِيرًا
Transliteration walā taqtulū awlādakum khashyata im'lāqin naḥnu narzuquhum wa-iyyākum inna qatlahum kāna khiṭ'an kabīran
Kannada ಬಡತನದ ಭೀತಿಯಿಂದ ನಿಮ್ಮ ಮಕ್ಕಳನ್ನು ಕೊಲ್ಲಬೇಡಿರಿ. ನಾವು ಅವರಿಗೂ ನಿಮಗೂ ಆಹಾರ ನೀಡುವೆವು. ವಾಸ್ತವದಲ್ಲಿ ಅವರ ವಧೆಯು ಒಂದು ಘೋರ ಅಪರಾಧವಾಗಿದೆ.
Verse 32
وَلَا تَقْرَبُوا۟ ٱلزِّنَىٰٓ ۖ إِنَّهُۥ كَانَ فَـٰحِشَةً وَسَآءَ سَبِيلًا
Transliteration walā taqrabū l-zinā innahu kāna fāḥishatan wasāa sabīlan
Kannada ನೀವು ವ್ಯಭಿಚಾರದ ಹತ್ತಿರ ಸುಳಿಯಬೇಡಿರಿ. ಅದು ಅತಿಹೀನ ಕಾರ್ಯ ಮತ್ತು ಅತ್ಯಂತ ಕೆಟ್ಟ ಮಾರ್ಗ.
Verse 33
وَلَا تَقْتُلُوا۟ ٱلنَّفْسَ ٱلَّتِى حَرَّمَ ٱللَّهُ إِلَّا بِٱلْحَقِّ ۗ وَمَن قُتِلَ مَظْلُومًا فَقَدْ جَعَلْنَا لِوَلِيِّهِۦ سُلْطَـٰنًا فَلَا يُسْرِف فِّى ٱلْقَتْلِ ۖ إِنَّهُۥ كَانَ مَنصُورًا
Transliteration walā taqtulū l-nafsa allatī ḥarrama l-lahu illā bil-ḥaqi waman qutila maẓlūman faqad jaʿalnā liwaliyyihi sul'ṭānan falā yus'rif fī l-qatli innahu kāna manṣūran
Kannada ಅಲ್ಲಾಹನು ಮಾನ್ಯತೆ ಕಲ್ಪಿಸಿರುವ ಜೀವವನ್ನು ನ್ಯಾಯದಿಂದಲ್ಲದೆ ಕೊಲ್ಲಬೇಡಿರಿ. ಯಾರಾದರೂ ಅಕ್ರಮವಾಗಿ ವಧಿಸಲ್ಪಟ್ಟರೆ ಅವನ ವಾರೀಸುದಾರನಿಗೆ ಪ್ರತೀಕಾರ ಪಡೆಯುವ ಅಧಿಕಾರನ್ನು ನಾವು ನೀಡಿರುತ್ತೇವೆ. ಆದರೆ ಅವನು ಪ್ರತೀಕಾರದ ಕೊಲೆಯ ವಿಚಾರದಲ್ಲಿ ಮಿತಿಮೀರಬಾರದು. ನಿಶ್ಚ ಯವಾಗಿಯೂ ಅವನಿಗೆ ಸಹಾಯ ಮಾಡಲಾಗುವುದು.
Verse 34
وَلَا تَقْرَبُوا۟ مَالَ ٱلْيَتِيمِ إِلَّا بِٱلَّتِى هِىَ أَحْسَنُ حَتَّىٰ يَبْلُغَ أَشُدَّهُۥ ۚ وَأَوْفُوا۟ بِٱلْعَهْدِ ۖ إِنَّ ٱلْعَهْدَ كَانَ مَسْـُٔولًا
Transliteration walā taqrabū māla l-yatīmi illā bi-allatī hiya aḥsanu ḥattā yablugha ashuddahu wa-awfū bil-ʿahdi inna l-ʿahda kāna masūlan
Kannada ಅನಾಥನ ಸೊತ್ತನ್ನು ಅತ್ಯಂತ ಉತ್ತಮ ರೀತಿಯಿಂದಲ್ಲದೆ ಸಮೀಪಿಸಬಾರದು. ಅವನು ಪ್ರಾಪ್ತ ವಯಸ್ಸಿಗೆ ತಲುಪುವ ತನಕ. ಮತ್ತು ನೀವು ಕರಾರನ್ನು ಪಾಲಿಸಿರಿ. ನಿಶ್ಚಯವಾಗಿಯೂ ಕರಾರಿನ ಕುರಿತು ನೀವು ವಿಚಾರಣೆಗೊಳಗಾಗುವಿರಿ.
Verse 35
وَأَوْفُوا۟ ٱلْكَيْلَ إِذَا كِلْتُمْ وَزِنُوا۟ بِٱلْقِسْطَاسِ ٱلْمُسْتَقِيمِ ۚ ذَٰلِكَ خَيْرٌ وَأَحْسَنُ تَأْوِيلًا
Transliteration wa-awfū l-kayla idhā kil'tum wazinū bil-qis'ṭāsi l-mus'taqīmi dhālika khayrun wa-aḥsanu tawīlan
Kannada ಅಳತೆ ಮಾಡಿ ಕೊಡುವಾಗ ಪೂರ್ಣ ಅಳೆದು ಕೊಡಿರಿ. ಸರಿಯಾದ ತಕ್ಕಡಿಯಲ್ಲಿ ತೂಗಿರಿ. ಇದು ಒಳ್ಳೆಯ ಕ್ರಮ ಮತ್ತು ಪರಿಣಾಮದ ದೃಷ್ಟಿಯಿಂದಲೂ ಇದೇ ಉತ್ತಮ.
Verse 36
وَلَا تَقْفُ مَا لَيْسَ لَكَ بِهِۦ عِلْمٌ ۚ إِنَّ ٱلسَّمْعَ وَٱلْبَصَرَ وَٱلْفُؤَادَ كُلُّ أُو۟لَـٰٓئِكَ كَانَ عَنْهُ مَسْـُٔولًا
Transliteration walā taqfu mā laysa laka bihi ʿil'mun inna l-samʿa wal-baṣara wal-fuāda kullu ulāika kāna ʿanhu masūlan
Kannada ನಿನಗೆ ಜ್ಞಾನವಿಲ್ಲದಂತಹ ವಿಚಾರದ ಬೆನ್ನು ಹತ್ತದಿರು. ನಿಶ್ಚಯವಾಗಿಯೂ ಶ್ರವಣ, ದೃಷ್ಟಿ ಮತ್ತು ಮನಸ್ಸು ಇವೆಲ್ಲವುಗಳ ವಿಚಾರಣೆ ನಡೆಯಲಿದೆ.
Verse 37
وَلَا تَمْشِ فِى ٱلْأَرْضِ مَرَحًا ۖ إِنَّكَ لَن تَخْرِقَ ٱلْأَرْضَ وَلَن تَبْلُغَ ٱلْجِبَالَ طُولًا
Transliteration walā tamshi fī l-arḍi maraḥan innaka lan takhriqa l-arḍa walan tablugha l-jibāla ṭūlan
Kannada ಭೂಮಿಯ ಮೇಲೆ ದರ್ಪದಿಂದ ನಡೆಯದಿರು. ನೀನು ಭೂಮಿಯನ್ನು ಸೀಳಲಾರೆ ಮತ್ತು ಪರ್ವತಗಳ ಎತ್ತರಕ್ಕೂ ತಲುಪಲಾರೆ.
Verse 38
كُلُّ ذَٰلِكَ كَانَ سَيِّئُهُۥ عِندَ رَبِّكَ مَكْرُوهًا
Transliteration kullu dhālika kāna sayyi-uhu ʿinda rabbika makrūhan
Kannada ಇದೆಲ್ಲವೂ ನಿನ್ನ ಪ್ರಭುವಿನ ಬಳಿ ಅಪ್ರಿಯವಾದ ಕೆಡುಕುಗಳು.
Verse 39
ذَٰلِكَ مِمَّآ أَوْحَىٰٓ إِلَيْكَ رَبُّكَ مِنَ ٱلْحِكْمَةِ ۗ وَلَا تَجْعَلْ مَعَ ٱللَّهِ إِلَـٰهًا ءَاخَرَ فَتُلْقَىٰ فِى جَهَنَّمَ مَلُومًا مَّدْحُورًا
Transliteration dhālika mimmā awḥā ilayka rabbuka mina l-ḥik'mati walā tajʿal maʿa l-lahi ilāhan ākhara fatul'qā fī jahannama malūman madḥūran
Kannada ನಿಮ್ಮ ಪ್ರಭು ನಿಮ್ಮ ಕಡೆಗೆ ಬೋಧನೆ ನೀಡಿದ ಯುಕ್ತಿ ಪೂರ್ಣ ಮಾತುಗಳಿವು. ಅಲ್ಲಾಹನೊಂದಿಗೆ ಇನ್ನಾವ ಆರಾಧ್ಯನನ್ನು ಮಾಡಿಕೊಳ್ಳಬೇಡ. ಅನ್ಯಥಾ ನೀನು ನಿಂದ್ಯನಾಗಿ (ಅಲ್ಲಾಹನ ಕೃಪೆಯಿಂದ) ಬಹಿಷ್ಕøತನಾಗಿ ನರಕದಲ್ಲಿ ತಳ್ಳಲ್ಪಡುವೆ.
Verse 40
أَفَأَصْفَىٰكُمْ رَبُّكُم بِٱلْبَنِينَ وَٱتَّخَذَ مِنَ ٱلْمَلَـٰٓئِكَةِ إِنَـٰثًا ۚ إِنَّكُمْ لَتَقُولُونَ قَوْلًا عَظِيمًا
Transliteration afa-aṣfākum rabbukum bil-banīna wa-ittakhadha mina l-malāikati ināthan innakum lataqūlūna qawlan ʿaẓīman
Kannada ನಿಮ್ಮ ಪ್ರಭು ನಿಮಗೆ ಪುತ್ರರನ್ನು ವಿಶೇಷವಾಗಿ ಕೊಟ್ಟನೆ? ಮತ್ತು ತನಗಾಗಿ ದೇವಚರರನ್ನು ಪುತ್ರಿಯರನ್ನಾಗಿ ಮಾಡಿಕೊಂಡನೇ? ನಿಶ್ಚಯವಾಗಿಯೂ ನೀವು ಒಂದು ಘೋರ ಮಾತನ್ನಾಡುತ್ತಿರುವಿರಿ.
Verse 41
وَلَقَدْ صَرَّفْنَا فِى هَـٰذَا ٱلْقُرْءَانِ لِيَذَّكَّرُوا۟ وَمَا يَزِيدُهُمْ إِلَّا نُفُورًا
Transliteration walaqad ṣarrafnā fī hādhā l-qur'āni liyadhakkarū wamā yazīduhum illā nufūran
Kannada ಅವರು ಜಾಗೃತರಾಗಲೆಂದು ನಾವು ಈ ಖುರ್‍ಆನ್‍ನಲ್ಲಿ ವಿಧವಿಧವಾಗಿ ವಿವರಿಸಿದ್ದೇವೆ. ಆದರೆ ಅದು ಅವರಿಗೆ ಸತ್ಯದಿಂದ ಪಲಾಯನ (ಜಿಗುಪ್ಸೆ)ವನ್ನಲ್ಲದೆ ಹೆಚ್ಚಿಸಲಿಲ್ಲ.
Verse 42
قُل لَّوْ كَانَ مَعَهُۥٓ ءَالِهَةٌ كَمَا يَقُولُونَ إِذًا لَّٱبْتَغَوْا۟ إِلَىٰ ذِى ٱلْعَرْشِ سَبِيلًا
Transliteration qul law kāna maʿahu ālihatun kamā yaqūlūna idhan la-ib'taghaw ilā dhī l-ʿarshi sabīlan
Kannada (ಓ ಪೈಗಂಬರರೇ,) ಹೇಳಿರಿ; ಇವರು ಹೇಳುವ ಪ್ರಕಾರ ಅಲ್ಲಾಹನ ಸಂಗಡ ಇತರ ದೇವರೂ ಇರುತ್ತಿದ್ದರೆ ಅರ್ಶ್‍ನ ಅಧಿಪತಿಯ ಕಡೆಗೆ ಅವರು (ಇತರ ದೇವರು) ಯಾವುದಾದರೂ ಮಾರ್ಗವನ್ನು ಹುಡುಕುತ್ತಿದ್ದರು.
Verse 43
سُبْحَـٰنَهُۥ وَتَعَـٰلَىٰ عَمَّا يَقُولُونَ عُلُوًّا كَبِيرًا
Transliteration sub'ḥānahu wataʿālā ʿammā yaqūlūna ʿuluwwan kabīran
Kannada ಅವನೆಷ್ಟು ಪರಿಶುದ್ಧನು! ಇವರು ಹೇಳುತ್ತಿರುವ ಮಾತುಗಳಿಂದ ಮೀರಿ ನಿಂತ ಅವನು ಬಹಳ ಘನವೆತ್ತ ಔನ್ನತ್ಯವನ್ನು ಪಡೆದಿರುವನು.
Verse 44
تُسَبِّحُ لَهُ ٱلسَّمَـٰوَٰتُ ٱلسَّبْعُ وَٱلْأَرْضُ وَمَن فِيهِنَّ ۚ وَإِن مِّن شَىْءٍ إِلَّا يُسَبِّحُ بِحَمْدِهِۦ وَلَـٰكِن لَّا تَفْقَهُونَ تَسْبِيحَهُمْ ۗ إِنَّهُۥ كَانَ حَلِيمًا غَفُورًا
Transliteration tusabbiḥu lahu l-samāwātu l-sabʿu wal-arḍu waman fīhinna wa-in min shayin illā yusabbiḥu biḥamdihi walākin lā tafqahūna tasbīḥahum innahu kāna ḥalīman ghafūran
Kannada ಸಪ್ತಗಗನಗಳೂ ಭೂಮಿಯೂ ಅವುಗಳಲ್ಲಿರುವ ಸಕಲವೂ ಅವನ ಪಾವಿತ್ರ್ಯವನ್ನು ಕೊಂಡಾಡು ತ್ತಿವೆ. ಅವನ ಸ್ತುತಿಯೊಂದಿಗೆ ಅವನ ಪಾವಿತ್ರ್ಯ ವನ್ನು ಕೊಂಡಾಡದ ಯಾವ ವಸ್ತುವೂ ಇಲ್ಲ. ಆದರೆ ನೀವು ಅವುಗಳ ಕೀರ್ತನೆಯನ್ನು ಗ್ರಹಿಸು ವುದಿಲ್ಲ. ವಾಸ್ತವದಲ್ಲಿ ಅವನು ಅತ್ಯಂತ ಸಹನ ಶೀಲನೂ ಕ್ಷಮಾ ದಾನಿಯೂ ಆಗಿರುತ್ತಾನೆ.
Verse 45
وَإِذَا قَرَأْتَ ٱلْقُرْءَانَ جَعَلْنَا بَيْنَكَ وَبَيْنَ ٱلَّذِينَ لَا يُؤْمِنُونَ بِٱلْـَٔاخِرَةِ حِجَابًا مَّسْتُورًا
Transliteration wa-idhā qarata l-qur'āna jaʿalnā baynaka wabayna alladhīna lā yu'minūna bil-ākhirati ḥijāban mastūran
Kannada ನೀವು ಖುರ್‍ಆನ್ ಪಠಿಸುವಾಗ ನಿಮ್ಮ ಮತ್ತು ಪರಲೋಕದಲ್ಲಿ ವಿಶ್ವಾಸವಿರಿಸದವರ ನಡುವೆ ಅದೃಶ್ಯ ಮರೆಯೊಂದನ್ನು ನಾವು ಹಾಕಿ ಬಿಡುತ್ತೇವೆ.
Verse 46
وَجَعَلْنَا عَلَىٰ قُلُوبِهِمْ أَكِنَّةً أَن يَفْقَهُوهُ وَفِىٓ ءَاذَانِهِمْ وَقْرًا ۚ وَإِذَا ذَكَرْتَ رَبَّكَ فِى ٱلْقُرْءَانِ وَحْدَهُۥ وَلَّوْا۟ عَلَىٰٓ أَدْبَـٰرِهِمْ نُفُورًا
Transliteration wajaʿalnā ʿalā qulūbihim akinnatan an yafqahūhu wafī ādhānihim waqran wa-idhā dhakarta rabbaka fī l-qur'āni waḥdahu wallaw ʿalā adbārihim nufūran
Kannada ಅವರು ಏನನ್ನೂ ಗ್ರಹಿಸದಂತಾಗಲು ಅವರ ಹೃದಯಗಳ ಮೇಲೆ ಮುಚ್ಚಲವನ್ನು ಮತ್ತು ಅವರ ಕಿವಿಗಳಲ್ಲಿ ಭಾರವನ್ನು (ಗಂಟನ್ನು) ಹಾಕಿ ಬಿಡುತ್ತೇವೆ. ನೀವು ಖುರ್‍ಆನ್‍ನಲ್ಲಿ ಕೇವಲ ನಿಮ್ಮ ಪ್ರಭುವನ್ನು ಮಾತ್ರ ಪ್ರಸ್ತಾಪಿಸುವಾಗ ಅವರು ಜಿಗುಪ್ಸೆಯಿಂದ ಬೆನ್ನು ತಿರುಗಿಸಿ ಹೋಗುತ್ತಾರೆ.
Verse 47
نَّحْنُ أَعْلَمُ بِمَا يَسْتَمِعُونَ بِهِۦٓ إِذْ يَسْتَمِعُونَ إِلَيْكَ وَإِذْ هُمْ نَجْوَىٰٓ إِذْ يَقُولُ ٱلظَّـٰلِمُونَ إِن تَتَّبِعُونَ إِلَّا رَجُلًا مَّسْحُورًا
Transliteration naḥnu aʿlamu bimā yastamiʿūna bihi idh yastamiʿūna ilayka wa-idh hum najwā idh yaqūlu l-ẓālimūna in tattabiʿūna illā rajulan masḥūran
Kannada ಅವರು ಕಿವಿಗೊಟ್ಟು ಆಲಿಸುವಾಗ ನಿಜಕ್ಕೂ ಅವರು ಏನನ್ನಾಲಿಸುತ್ತಾರೆಂಬುದನ್ನೂ ಅವರು ಪರಸ್ಪರ ಗುಪ್ತ ಮಾತುಗಳನ್ನಾಡುತ್ತಿರುವ ಸಂದರ್ಭದಲ್ಲಿ; “ಓರ್ವ ಮಾಟ ಬಾಧಿತ ವ್ಯಕ್ತಿಯನ್ನೇ ಹೊರತು ನೀವು ಹಿಂಬಾಲಿಸುತ್ತಿಲ್ಲ” ಎಂದೂ ಈ ಅಕ್ರಮಿಗಳು ಪರಸ್ಪರ ಹೇಳಿಕೊಳ್ಳುವ ಸಂದರ್ಭವನ್ನೂ ನಾವು ಚೆನ್ನಾಗಿ ಬಲ್ಲೆವು.
Verse 48
ٱنظُرْ كَيْفَ ضَرَبُوا۟ لَكَ ٱلْأَمْثَالَ فَضَلُّوا۟ فَلَا يَسْتَطِيعُونَ سَبِيلًا
Transliteration unẓur kayfa ḍarabū laka l-amthāla faḍallū falā yastaṭīʿūna sabīlan
Kannada ನೋಡಿರಿ, ಇವರು ನಿಮ್ಮ ಮೇಲೆ ಹೇಗೆ ಉಪಮೆ ಗಳನ್ನು ಕಟ್ಟುತ್ತಾರೆ? ಹೀಗೆ ಇವರು ಪಥಭ್ರಷ್ಟರಾದರು. ಆದ್ದರಿಂದ ಇವರಿಗೆ ಯಾವುದೇ ದಾರಿ ಹಿಡಿಯಲು ಸಾಧ್ಯವಾಗುತ್ತಿಲ್ಲ.
Verse 49
وَقَالُوٓا۟ أَءِذَا كُنَّا عِظَـٰمًا وَرُفَـٰتًا أَءِنَّا لَمَبْعُوثُونَ خَلْقًا جَدِيدًا
Transliteration waqālū a-idhā kunnā ʿiẓāman warufātan a-innā lamabʿūthūna khalqan jadīdan
Kannada ಅವರು ಹೇಳಿದರು; ನಾವು ಬರೇ ಎಲುಬುಗಳಾಗಿ ಮತ್ತು ಅವಶೇಷಗಳಾಗಿ ಬಿಟ್ಟ ಮೇಲೆ ನಮ್ಮ ನ್ನು ಮತ್ತೆ ಹೊಸದಾಗಿ ಹುಟ್ಟಿಸಿ ಎಬ್ಬಿಸಲಾಗುವುದೇ?
Verse 50
۞ قُلْ كُونُوا۟ حِجَارَةً أَوْ حَدِيدًا
Transliteration qul kūnū ḥijāratan aw ḥadīdan
Kannada (ಪ್ರವಾದಿಯರೇ) ಹೇಳಿರಿ; `ನೀವು ಶಿಲೆ ಅಥವಾ ಕಬ್ಬಿಣವೇ ಆಗಿರಿ.
Verse 51
أَوْ خَلْقًا مِّمَّا يَكْبُرُ فِى صُدُورِكُمْ ۚ فَسَيَقُولُونَ مَن يُعِيدُنَا ۖ قُلِ ٱلَّذِى فَطَرَكُمْ أَوَّلَ مَرَّةٍ ۚ فَسَيُنْغِضُونَ إِلَيْكَ رُءُوسَهُمْ وَيَقُولُونَ مَتَىٰ هُوَ ۖ قُلْ عَسَىٰٓ أَن يَكُونَ قَرِيبًا
Transliteration aw khalqan mimmā yakburu fī ṣudūrikum fasayaqūlūna man yuʿīdunā quli alladhī faṭarakum awwala marratin fasayun'ghiḍūna ilayka ruūsahum wayaqūlūna matā huwa qul ʿasā an yakūna qarīban
Kannada ಅಥವಾ ನಿಮ್ಮ ಮನಸ್ಸುಗಳಲ್ಲಿ ಬಹಳ ದೊಡ್ಡ ವಿಷಯವಾಗಿ ತೋರುವ ಯಾವುದೇ ಸೃಷ್ಟಿಯಾ ಗಿರಿ (ಆಗಲೂ ನೀವು ಪುನರುಜ್ಜೀವನ ಗೊಳಿಸಲ್ಪಡುವಿರಿ.) ಆಗ ನಮ್ಮನ್ನು ಪುನಃ ಜೀವಂತಗೊಳಿ ಸುವವನಾರು? ಎಂದು ಅವರು ಕೇಳುವರು. ‘ನಿಮ್ಮನ್ನು ಪ್ರಥಮ ಬಾರಿ ಸೃಷ್ಟಿಸಿದವನೇ’ ಎಂದು ಹೇಳಿರಿ. ಆಗ ಅವರು ನಿಮ್ಮೆಡೆಗೆ (ನೋಡಿ) ತಲೆಯಾಡಿಸುತ್ತ ‘ಅದು (ಪುನರು ತ್ಥಾನ) ಯಾವಾಗ?’ ಎಂದು ಕೇಳುವರು. ನೀವು ಹೇಳಿರಿ. ‘ಅದು ಹತ್ತಿರವೇ ಇರಬಹುದು’.
Verse 52
يَوْمَ يَدْعُوكُمْ فَتَسْتَجِيبُونَ بِحَمْدِهِۦ وَتَظُنُّونَ إِن لَّبِثْتُمْ إِلَّا قَلِيلًا
Transliteration yawma yadʿūkum fatastajībūna biḥamdihi wataẓunnūna in labith'tum illā qalīlan
Kannada ಅವನು ನಿಮ್ಮನ್ನು ಕೂಗಿ ಕರೆಯುವ ಮತ್ತು ನೀವು ಅವನನ್ನು ಸ್ತುತಿಸುತ್ತಾ ಅವನ ಕರೆಗೆ ಓಗೊಡುವ ದಿನ. (ಆಗ) ತುಸು ಹೊತ್ತು ಮಾತ್ರವೇ (ಇಹಲೋಕದಲ್ಲಿ) ನೀವು ನೆಲೆಸಿದ್ದೀರಿ ಎಂದು ಭಾವಿಸುವಿರಿ.
Verse 53
وَقُل لِّعِبَادِى يَقُولُوا۟ ٱلَّتِى هِىَ أَحْسَنُ ۚ إِنَّ ٱلشَّيْطَـٰنَ يَنزَغُ بَيْنَهُمْ ۚ إِنَّ ٱلشَّيْطَـٰنَ كَانَ لِلْإِنسَـٰنِ عَدُوًّا مُّبِينًا
Transliteration waqul liʿibādī yaqūlū allatī hiya aḥsanu inna l-shayṭāna yanzaghu baynahum inna l-shayṭāna kāna lil'insāni ʿaduwwan mubīnan
Kannada (ಓ ಪೈಗಂಬರರೇ,) ನನ್ನ ದಾಸರೊಡನೆ ಹೇಳಿರಿ; ಅವರು ಅತ್ಯುತ್ತಮ ಮಾತನ್ನೇ ಆಡಲಿ. ವಸ್ತುತಃ ಶೈತಾನನು ಅವರ ನಡುವೆ ಪಿತೂರಿ ಎಬ್ಬಿಸುತ್ತಾನೆ. ಖಂಡಿತ ಶೈತಾನನು ಮಾನವನ ಪ್ರತ್ಯಕ್ಷ ಶತ್ರುವಾಗಿರುತ್ತಾನೆ.
Verse 54
رَّبُّكُمْ أَعْلَمُ بِكُمْ ۖ إِن يَشَأْ يَرْحَمْكُمْ أَوْ إِن يَشَأْ يُعَذِّبْكُمْ ۚ وَمَآ أَرْسَلْنَـٰكَ عَلَيْهِمْ وَكِيلًا
Transliteration rabbukum aʿlamu bikum in yasha yarḥamkum aw in yasha yuʿadhib'kum wamā arsalnāka ʿalayhim wakīlan
Kannada ನಿಮ್ಮ ಪ್ರಭು ನಿಮ್ಮನ್ನು ಚೆನ್ನಾಗಿ ಬಲ್ಲನು. ಅವನು ಇಚ್ಛಿಸಿದರೆ ನಿಮ್ಮ ಮೇಲೆ ಕೃಪೆ ತೋರುವನು. ಇಚ್ಛಿಸಿದರೆ ಶಿಕ್ಷಿಸುವನು. (ಓ ಪೈಗಂಬರರೇ) ನಾವು ನಿಮ್ಮನ್ನು ಅವರ ಮೇಲೆ ಮೇಲ್ನೋಟಗಾರನಾಗಿ ಮಾಡಿ ಕಳುಹಿಸಿಲ್ಲ.
Verse 55
وَرَبُّكَ أَعْلَمُ بِمَن فِى ٱلسَّمَـٰوَٰتِ وَٱلْأَرْضِ ۗ وَلَقَدْ فَضَّلْنَا بَعْضَ ٱلنَّبِيِّـۧنَ عَلَىٰ بَعْضٍ ۖ وَءَاتَيْنَا دَاوُۥدَ زَبُورًا
Transliteration warabbuka aʿlamu biman fī l-samāwāti wal-arḍi walaqad faḍḍalnā baʿḍa l-nabiyīna ʿalā baʿḍin waātaynā dāwūda zabūran
Kannada ನಿಮ್ಮ ಪ್ರಭು ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ರುವವರ ಬಗ್ಗೆ ಚೆನ್ನಾಗಿ ಅರಿಯುತ್ತಾನೆ. ನಾವು ಕೆಲವು ಪ್ರವಾದಿಗಳಿಗೆ ಬೇರೆ ಕೆಲವರಿಗಿಂತ ಶ್ರೇಷ್ಟ ತೆಯನ್ನು ನೀಡಿದ್ದೇವೆ. ದಾವೂದರಿಗೆ ನಾವು ಝಬೂರನ್ನು ಕೊಟ್ಟಿದ್ದೇವೆ.
Verse 56
قُلِ ٱدْعُوا۟ ٱلَّذِينَ زَعَمْتُم مِّن دُونِهِۦ فَلَا يَمْلِكُونَ كَشْفَ ٱلضُّرِّ عَنكُمْ وَلَا تَحْوِيلًا
Transliteration quli id'ʿū alladhīna zaʿamtum min dūnihi falā yamlikūna kashfa l-ḍuri ʿankum walā taḥwīlan
Kannada (ಪ್ರವಾದಿಯವರೇ) ಹೇಳಿರಿ, `ನೀವು ಯಾರನ್ನು ಅಲ್ಲಾಹನ ಹೊರತು (ಆರಾಧ್ಯರೆಂದು) ವಾದಿಸು ತ್ತೀರೊ ಅವರನ್ನು ಕರೆದು ನೋಡಿರಿ. ಅವರು ನಿಮ್ಮ ಯಾವ ಸಂಕಷ್ಟವನ್ನೂ ನೀಗಿಸುವ ಮತ್ತು (ಇತರರಿಗೆ) ಬದಲಿಸುವ ಶಕ್ತಿಯನ್ನು ಅಧೀನ ಗೊಳಿಸಿಲ್ಲ.
Verse 57
أُو۟لَـٰٓئِكَ ٱلَّذِينَ يَدْعُونَ يَبْتَغُونَ إِلَىٰ رَبِّهِمُ ٱلْوَسِيلَةَ أَيُّهُمْ أَقْرَبُ وَيَرْجُونَ رَحْمَتَهُۥ وَيَخَافُونَ عَذَابَهُۥٓ ۚ إِنَّ عَذَابَ رَبِّكَ كَانَ مَحْذُورًا
Transliteration ulāika alladhīna yadʿūna yabtaghūna ilā rabbihimu l-wasīlata ayyuhum aqrabu wayarjūna raḥmatahu wayakhāfūna ʿadhābahu inna ʿadhāba rabbika kāna maḥdhūran
Kannada ಇವರು ಯಾರನ್ನು (ಆರಾಧ್ಯರೆಂದು) ಕರೆಯುತ್ತಿರುವರೋ ಅವರ ಪೈಕಿ ಅಲ್ಲಾಹನಿಗೆ ಅತ್ಯಂತ ನಿಕಟರೂ ಕೂಡಾ ತಮ್ಮ ಪ್ರಭುವಿನೆಡೆಗೆ (ಅನು ಸರಣೆಯ ಮೂಲಕ) ಸಾಮಿಪ್ಯವನ್ನು ಅರಸುತ್ತಾರೆ. ಅವರು ಅವನ ಕೃಪೆಯನ್ನು ಆಗ್ರಹಿಸುವವರೂ ಅವನ ಶಿಕ್ಷೆಯನ್ನು (ಇತರರಂತೆ) ಭಯ ಪಡುವವರೂ ಆಗಿರುತ್ತಾರೆ. ವಾಸ್ತವದಲ್ಲಿ ನಿಮ್ಮ ಪ್ರಭುವಿನ ಶಿಕ್ಷೆಯು ಭಯಪಡಬೇಕಾದುದೇ ಆಗಿದೆ.
Verse 58
وَإِن مِّن قَرْيَةٍ إِلَّا نَحْنُ مُهْلِكُوهَا قَبْلَ يَوْمِ ٱلْقِيَـٰمَةِ أَوْ مُعَذِّبُوهَا عَذَابًا شَدِيدًا ۚ كَانَ ذَٰلِكَ فِى ٱلْكِتَـٰبِ مَسْطُورًا
Transliteration wa-in min qaryatin illā naḥnu muh'likūhā qabla yawmi l-qiyāmati aw muʿadhibūhā ʿadhāban shadīdan kāna dhālika fī l-kitābi masṭūran
Kannada ಪುನರುತ್ಥಾನದ ದಿನಕ್ಕಿಂತ ಮುಂಚೆ ನಾವು ನಾಶ ಗೊಳಿಸದ ಅಥವಾ ಕಠಿಣವಾಗಿ ಶಿಕ್ಷಿಸದ ನಾಡೊಂದೂ ಇಲ್ಲ. ಇದು ಗ್ರಂಥದಲ್ಲಿ ಲಿಖಿತಗೊಂಡಿದೆ.
Verse 59
وَمَا مَنَعَنَآ أَن نُّرْسِلَ بِٱلْـَٔايَـٰتِ إِلَّآ أَن كَذَّبَ بِهَا ٱلْأَوَّلُونَ ۚ وَءَاتَيْنَا ثَمُودَ ٱلنَّاقَةَ مُبْصِرَةً فَظَلَمُوا۟ بِهَا ۚ وَمَا نُرْسِلُ بِٱلْـَٔايَـٰتِ إِلَّا تَخْوِيفًا
Transliteration wamā manaʿanā an nur'sila bil-āyāti illā an kadhaba bihā l-awalūna waātaynā thamūda l-nāqata mub'ṣiratan faẓalamū bihā wamā nur'silu bil-āyāti illā takhwīfan
Kannada ಮುಂಚಿನವರು ನಿದರ್ಶನಗಳನ್ನು ಸುಳ್ಳಾಗಿಸಿದ್ದ ರೆಂಬುದರ ಹೊರತು ನಮ್ಮನ್ನು ಆ ನಿದರ್ಶನಗಳ ನ್ನು ಕಳುಹಿಸದಂತೆ ತಡೆಯಲಿಲ್ಲ. ನಾವು ಸಮೂದರಿಗೆ ಪ್ರತ್ಯಕ್ಷ ನಿದರ್ಶನವಾಗಿ ಒಂದು ಒಂಟೆಯನ್ನು ನೀಡಿದೆವು. ಅವರು ಅದರ ಮೇಲೆ ಅಕ್ರಮವೆಸಗಿದರು. ನಾವು ನಿದರ್ಶನಗಳನ್ನು ಕಳುಹಿಸುವುದು (ಜನರಿಗೆ) ಭಯಹುಟ್ಟಿ (ನಂಬಿ) ಸಲು ಮಾತ್ರವಾಗಿದೆ.
Verse 60
وَإِذْ قُلْنَا لَكَ إِنَّ رَبَّكَ أَحَاطَ بِٱلنَّاسِ ۚ وَمَا جَعَلْنَا ٱلرُّءْيَا ٱلَّتِىٓ أَرَيْنَـٰكَ إِلَّا فِتْنَةً لِّلنَّاسِ وَٱلشَّجَرَةَ ٱلْمَلْعُونَةَ فِى ٱلْقُرْءَانِ ۚ وَنُخَوِّفُهُمْ فَمَا يَزِيدُهُمْ إِلَّا طُغْيَـٰنًا كَبِيرًا
Transliteration wa-idh qul'nā laka inna rabbaka aḥāṭa bil-nāsi wamā jaʿalnā l-ru'yā allatī araynāka illā fit'natan lilnnāsi wal-shajarata l-malʿūnata fī l-qur'āni wanukhawwifuhum famā yazīduhum illā ṭugh'yānan kabīran
Kannada (ಓ ಪೈಗಂಬರರೇ,) ನಿಮ್ಮ ಪ್ರಭು ಜನರನ್ನು ಸುತ್ತುವರಿದಿದ್ದಾನೆಂದು ನಾವು ನಿಮ್ಮೊಡನೆ ಹೇಳಿದ್ದುದನ್ನು ಸ್ಮರಿಸಿರಿ. ನಾವು ನಿಮಗೆ ತೋರಿಸಿಕೊಟ್ಟ ಆ (ನಿಶಾಯಾನದ) ದರ್ಶನವನ್ನೂ ಖುರ್‍ಆನ್‍ನಲ್ಲಿ ಶಪಿಸಿರುವ (ಝಖ್ಹೂಮ್) ವೃಕ್ಷವನ್ನೂ ನಾವು ಅವರಿಗೊಂದು ಪರೀಕ್ಷಾ ಸಾಧನವನ್ನಾಗಿ ಮಾಡಿದ್ದೇವೆ. ನಾವು ಅವರನ್ನು ಭಯಪಡಿಸುತ್ತೇವೆ. ಆದರೆ, ಅದು (ಭಯಪಡಿಸು ವಿಕೆಯು) ಅವರ ಧಿಕ್ಕಾರವನ್ನಲ್ಲದೆ ಇನ್ನೇನನ್ನೂ ಹೆಚ್ಚಿಸುವುದಿಲ್ಲ.
Verse 61
وَإِذْ قُلْنَا لِلْمَلَـٰٓئِكَةِ ٱسْجُدُوا۟ لِـَٔادَمَ فَسَجَدُوٓا۟ إِلَّآ إِبْلِيسَ قَالَ ءَأَسْجُدُ لِمَنْ خَلَقْتَ طِينًا
Transliteration wa-idh qul'nā lil'malāikati us'judū liādama fasajadū illā ib'līsa qāla a-asjudu liman khalaqta ṭīnan
Kannada ನೀವು `ಆದಮರಿಗೆ ಸಾಷ್ಟಾಂಗವೆರಗಿರಿ’ ಎಂದು ನಾವು ದೇವಚರರೊಡನೆ ಹೇಳಿದ ಸಂದರ್ಭ (ಸ್ಮರಣೀಯ). ಆಗ ಅವರು ಸಾಷ್ಟಾಂಗವೆರಗಿದರು. ಇಬ್ಲೀಸನ ಹೊರತು. ಅವನು ‘ನೀನು ಕೊಜೆ ಮಣ್ಣಿನಿಂದ ಸೃಷ್ಟಿಸಿದವನ ಮಂದೆ ನಾನು ಸಾಷ್ಟಾಂಗವೆರಗಬೇಕೆ ?’ ಎಂದು ಕೇಳಿದನು.
Verse 62
قَالَ أَرَءَيْتَكَ هَـٰذَا ٱلَّذِى كَرَّمْتَ عَلَىَّ لَئِنْ أَخَّرْتَنِ إِلَىٰ يَوْمِ ٱلْقِيَـٰمَةِ لَأَحْتَنِكَنَّ ذُرِّيَّتَهُۥٓ إِلَّا قَلِيلًا
Transliteration qāla ara-aytaka hādhā alladhī karramta ʿalayya la-in akhartani ilā yawmi l-qiyāmati la-aḥtanikanna dhurriyyatahu illā qalīlan
Kannada . (ಮುಂದುವರಿಯುತ್ತ) ‘ನೀನು ನನಗಿಂತ ಹೆಚ್ಚು ಗೌರವಿಸಿದ ಇವನು ಯಾರೆಂದು ನನಗೆ ತಿಳಿಸಿಕೊಡು, ನೀನು ನನಗೆ ಪುನರುತ್ಥಾನದ ದಿನದವರೆಗೆ ಕಾಲಾವಕಾಶ ಕೊಟ್ಟರೆ ನಾನು ಇವನ ಸಂತತಿಯನ್ನು ಮೂಲೋತ್ಪಾಟನೆಗೊಳಿಸಿ ಬಿಡುವೆನು. ಸ್ವಲ್ಪ ಮಂದಿಯ ಹೊರತು’ ಎಂದು ಹೇಳಿದನು.
Verse 63
قَالَ ٱذْهَبْ فَمَن تَبِعَكَ مِنْهُمْ فَإِنَّ جَهَنَّمَ جَزَآؤُكُمْ جَزَآءً مَّوْفُورًا
Transliteration qāla idh'hab faman tabiʿaka min'hum fa-inna jahannama jazāukum jazāan mawfūran
Kannada ಅಲ್ಲಾಹ್ ಹೇಳಿದನು; ‘ಹೋಗು, ಅವರ ಪೈಕಿ ಯಾರೆಲ್ಲ ನಿನ್ನನ್ನು ಅನುಸರಿಸುವರೋ ನಿಮಗೆಲ್ಲರಿಗೂ ನರಕವೇ ಪ್ರತಿಫಲ. ಹೌದು, ಪರಿಪೂರ್ಣ ಪ್ರತಿಫಲ.
Verse 64
وَٱسْتَفْزِزْ مَنِ ٱسْتَطَعْتَ مِنْهُم بِصَوْتِكَ وَأَجْلِبْ عَلَيْهِم بِخَيْلِكَ وَرَجِلِكَ وَشَارِكْهُمْ فِى ٱلْأَمْوَٰلِ وَٱلْأَوْلَـٰدِ وَعِدْهُمْ ۚ وَمَا يَعِدُهُمُ ٱلشَّيْطَـٰنُ إِلَّا غُرُورًا
Transliteration wa-is'tafziz mani is'taṭaʿta min'hum biṣawtika wa-ajlib ʿalayhim bikhaylika warajilika washārik'hum fī l-amwāli wal-awlādi waʿid'hum wamā yaʿiduhumu l-shayṭānu illā ghurūran
Kannada ನಿನ್ನ ಸ್ವರದಿಂದ ನಿನಗೆ ಸಾಧ್ಯವಿರುವವರನ್ನೆಲ್ಲ ಹುರಿದುಂಬಿಸು. ಅವರ ಮೇಲೆ ನಿನ್ನ ಅಶ್ವಪಡೆ ಯನ್ನೂ ಕಾಲಾಳು ಸೇನೆಯನ್ನೂ ಕೂಗಿ ಎಳೆದು ತಾ. ಸಂಪತ್ತು ಮತ್ತು ಸಂತಾನಗಳಲ್ಲಿ ಅವರೊಂದಿಗೆ ಭಾಗಿಯಾಗು. ಮತ್ತು ಅವರಿಗೆ ವಾಗ್ದಾನಗಳನ್ನು ಕೊಡು. ಶೈತಾನನು ಅವರಿಗೆ ವಂಚನೆಯ ವಿನಾ ವಾಗ್ದಾನ ಮಾಡಲಾರ.
Verse 65
إِنَّ عِبَادِى لَيْسَ لَكَ عَلَيْهِمْ سُلْطَـٰنٌ ۚ وَكَفَىٰ بِرَبِّكَ وَكِيلًا
Transliteration inna ʿibādī laysa laka ʿalayhim sul'ṭānun wakafā birabbika wakīlan
Kannada ನಿಶ್ಚಯವಾಗಿಯೂ ನನ್ನ ದಾಸರ ಮೇಲೆ ನಿನಗೇನೂ ಅಧಿಕಾರ ಪ್ರಾಪ್ತವಾಗದು. ಅವರ ಕಾರ್ಯನಿ ರ್ವಾಹಕನಾಗಿ ನಿನ್ನ ಪ್ರಭುವೇ ಸಾಕು.
Verse 66
رَّبُّكُمُ ٱلَّذِى يُزْجِى لَكُمُ ٱلْفُلْكَ فِى ٱلْبَحْرِ لِتَبْتَغُوا۟ مِن فَضْلِهِۦٓ ۚ إِنَّهُۥ كَانَ بِكُمْ رَحِيمًا
Transliteration rabbukumu alladhī yuz'jī lakumu l-ful'ka fī l-baḥri litabtaghū min faḍlihi innahu kāna bikum raḥīman
Kannada ನಿಮಗಾಗಿ ಸಮುದ್ರದಲ್ಲಿ ನಾವೆಯನ್ನು ನಡೆಸು ವವನೇ ನಿಮ್ಮ ಪ್ರಭು. ನೀವು ಅವನ ಔದಾರ್ಯ ದಿಂದ ಅರಸಲಿಕ್ಕಾಗಿ. ವಾಸ್ತವದಲ್ಲಿ ಅವನು ನಿಮ್ಮ ಮೇಲೆ ಅತ್ಯಂತ ಕರಣೆಯುಳ್ಳವನಾಗಿದ್ದಾನೆ.
Verse 67
وَإِذَا مَسَّكُمُ ٱلضُّرُّ فِى ٱلْبَحْرِ ضَلَّ مَن تَدْعُونَ إِلَّآ إِيَّاهُ ۖ فَلَمَّا نَجَّىٰكُمْ إِلَى ٱلْبَرِّ أَعْرَضْتُمْ ۚ وَكَانَ ٱلْإِنسَـٰنُ كَفُورًا
Transliteration wa-idhā massakumu l-ḍuru fī l-baḥri ḍalla man tadʿūna illā iyyāhu falammā najjākum ilā l-bari aʿraḍtum wakāna l-insānu kafūran
Kannada ಸಮುದ್ರದಲ್ಲಿ ನಿಮಗೆ ಗಂಡಾಂತರ ಎದುರಾದರೆ, ಅವನೊಬ್ಬನ ಹೊರತು ಇತರ ಯಾರನ್ನೆಲ್ಲ ನೀವು ಕೂಗಿ ಆರಾಧಿಸುತ್ತಿದ್ದಿರೋ ಅವರೆಲ್ಲ ಮಾಯವಾಗುವರು. ಆದರೆ ಅವನು ನಿಮ್ಮನ್ನು ರಕ್ಷಿಸಿ ದಡಕ್ಕೆ ಸೇರಿಸಿದಾಗ ನೀವು (ಏಕದೇವ ವಿಶ್ವಾಸದಿಂದ) ವಿಮುಖರಾಗುತ್ತೀರಿ. ಮಾನವನು ಮಹಾಕೃತಘ್ನನಾಗಿರುವನು.
Verse 68
أَفَأَمِنتُمْ أَن يَخْسِفَ بِكُمْ جَانِبَ ٱلْبَرِّ أَوْ يُرْسِلَ عَلَيْكُمْ حَاصِبًا ثُمَّ لَا تَجِدُوا۟ لَكُمْ وَكِيلًا
Transliteration afa-amintum an yakhsifa bikum jāniba l-bari aw yur'sila ʿalaykum ḥāṣiban thumma lā tajidū lakum wakīlan
Kannada ಅಲ್ಲಾಹ್ ನಿಮ್ಮನ್ನು ನೆಲದಲ್ಲೇ ಹೂತು ಬಿಡುವ ಅಥವಾ ನಿಮ್ಮ ಮೇಲೆ ಕಲ್ಲಿನ ಮಳೆಗೆರೆಯುವ ಬಗ್ಗೆ ಮತ್ತು ನೀವು ನಿಮಗಾಗಿ ಯಾವುದೇ ರಕ್ಷಕನನ್ನು ಪಡೆಯಲಾರಿರಿ ಎಂಬ ಬಗ್ಗೆ ನೀವು ನಿರ್ಭಯರಾಗಿರುವಿರಾ?
Verse 69
أَمْ أَمِنتُمْ أَن يُعِيدَكُمْ فِيهِ تَارَةً أُخْرَىٰ فَيُرْسِلَ عَلَيْكُمْ قَاصِفًا مِّنَ ٱلرِّيحِ فَيُغْرِقَكُم بِمَا كَفَرْتُمْ ۙ ثُمَّ لَا تَجِدُوا۟ لَكُمْ عَلَيْنَا بِهِۦ تَبِيعًا
Transliteration am amintum an yuʿīdakum fīhi tāratan ukh'rā fayur'sila ʿalaykum qāṣifan mina l-rīḥi fayugh'riqakum bimā kafartum thumma lā tajidū lakum ʿalaynā bihi tabīʿan
Kannada ಅಥವಾ ಅಲ್ಲಾಹ್ ನಿಮ್ಮನ್ನು ಇನ್ನೊಂದು ಬಾರಿ ಸಮುದ್ರಕ್ಕೆ ಮರಳಿ ಕೊಂಡುಹೋಗಿ ಆಮೇಲೆ ಪ್ರಚಂಡ ಬಿರುಗಾಳಿಯನ್ನು ಕಳುಹಿಸಿ ನಿಮ್ಮ ಕೃತಘ್ನತೆಗೆ ಪ್ರತಿಫಲವಾಗಿ ನಿಮ್ಮನ್ನು ಮುಳುಗಿಸಿ ಬಿಡುವ ಹಾಗೂ ತರುವಾಯ ಈ ಕಾರ್ಯದ ಬಗ್ಗೆ ನಿಮ್ಮ ಪರವಾಗಿ ನಮ್ಮನ್ನು ವಿಚಾರಣೆ ನಡೆಸತಕ್ಕ ಸಹಾಯಕನಾರೂ ನಿಮಗೆ ಸಿಗಲಾರ ಎಂಬ ಬಗ್ಗೆ ನೀವು ನಿರ್ಭಯರಾಗಿರುವಿರಾ?
Verse 70
۞ وَلَقَدْ كَرَّمْنَا بَنِىٓ ءَادَمَ وَحَمَلْنَـٰهُمْ فِى ٱلْبَرِّ وَٱلْبَحْرِ وَرَزَقْنَـٰهُم مِّنَ ٱلطَّيِّبَـٰتِ وَفَضَّلْنَـٰهُمْ عَلَىٰ كَثِيرٍ مِّمَّنْ خَلَقْنَا تَفْضِيلًا
Transliteration walaqad karramnā banī ādama waḥamalnāhum fī l-bari wal-baḥri warazaqnāhum mina l-ṭayibāti wafaḍḍalnāhum ʿalā kathīrin mimman khalaqnā tafḍīlan
Kannada ನಾವು ಆದಮರ ಸಂತತಿಯನ್ನು ಗೌರವಿಸಿದ್ದೇವೆ. ಅವರಿಗೆ ನೆಲ, ಜಲಗಳಲ್ಲಿ ವಾಹನಗಳನ್ನು ಒದಗಿಸಿದ್ದೇವೆ. ಅವರಿಗೆ ಶುದ್ಧ ವಸ್ತುಗಳಿಂದ ಆಹಾರ ನೀಡಿದ್ದೇವೆ. ನಮ್ಮ ಅನೇಕ ಸೃಷ್ಟಿಗಳಿಗಿಂತ ಒಂದು ಶ್ರೇಷ್ಠತೆಯನ್ನು ನೀಡಿದ್ದೇವೆ.
Verse 71
يَوْمَ نَدْعُوا۟ كُلَّ أُنَاسٍۭ بِإِمَـٰمِهِمْ ۖ فَمَنْ أُوتِىَ كِتَـٰبَهُۥ بِيَمِينِهِۦ فَأُو۟لَـٰٓئِكَ يَقْرَءُونَ كِتَـٰبَهُمْ وَلَا يُظْلَمُونَ فَتِيلًا
Transliteration yawma nadʿū kulla unāsin bi-imāmihim faman ūtiya kitābahu biyamīnihi fa-ulāika yaqraūna kitābahum walā yuẓ'lamūna fatīlan
Kannada ನಾವು ಪ್ರತಿಯೊಂದು ಮನುಷ್ಯ ಕೂಟವನ್ನೂ ಅದರ ಮುಂದಾಳುವಿನ ಸಂಗಡ ಕರೆಯುವ ದಿನದ ಬಗ್ಗೆ ಸ್ಮರಿಸಿರಿ. ಆಗ ಯಾರಿಗೆ ತಮ್ಮ ಕರ್ಮಪತ್ರ ಬಲಗೈಯಲ್ಲಿ ಕೊಡಲ್ಪಟ್ಟಿತೋ ಅವರು ತಮ್ಮ ಕರ್ಮ ಪತ್ರವನ್ನು ಓದುವರು. ಅವರ ಮೇಲೆ ಎಳ್ಳಷ್ಟೂ ಅನ್ಯಾಯವಾಗದು.
Verse 72
وَمَن كَانَ فِى هَـٰذِهِۦٓ أَعْمَىٰ فَهُوَ فِى ٱلْـَٔاخِرَةِ أَعْمَىٰ وَأَضَلُّ سَبِيلًا
Transliteration waman kāna fī hādhihi aʿmā fahuwa fī l-ākhirati aʿmā wa-aḍallu sabīlan
Kannada ಯಾವನು ಇಹಲೋಕದಲ್ಲಿ ಕುರುಡನಾಗುತ್ತಾನೋ ಅವನು ಪರಲೋಕದಲ್ಲೂ ಕುರುಡನಾಗುವನು. ಮತ್ತು ಅತಿಹೆಚ್ಚು ದಾರಿ ತಪ್ಪುವನು.
Verse 73
وَإِن كَادُوا۟ لَيَفْتِنُونَكَ عَنِ ٱلَّذِىٓ أَوْحَيْنَآ إِلَيْكَ لِتَفْتَرِىَ عَلَيْنَا غَيْرَهُۥ ۖ وَإِذًا لَّٱتَّخَذُوكَ خَلِيلًا
Transliteration wa-in kādū layaftinūnaka ʿani alladhī awḥaynā ilayka litaftariya ʿalaynā ghayrahu wa-idhan la-ittakhadhūka khalīlan
Kannada (ಓ ಪೈಗಂಬರರೇ,) ನಾವು ನಿಮಗೆ ಬೋಧಿಸಿ ಕೊಟ್ಟ ದಿವ್ಯಸಂದೇಶದಿಂದ ಅವರು ನಿಮ್ಮನ್ನು ತಿರುಗಿಸಿ ಬಿಡಲು ಸಿದ್ಧರಾಗಿದ್ದಾರೆ. ನೀವು ನಮ್ಮ ಹೆಸರಲ್ಲಿ ಬೇರೆ ಏನನ್ನಾದರೂ ಕೃತ್ರಿಮ ನಡೆಸಲೆಂದು. (ನೀವು ಹಾಗೆ ಮಾಡುತ್ತಿದ್ದರೆ) ಅವರು ನಿಮ್ಮನ್ನು ತಮ್ಮ ಆಪ್ತಮಿತ್ರನಾಗಿ ಮಾಡಿ ಕೊಳ್ಳುತ್ತಿದ್ದರು.
Verse 74
وَلَوْلَآ أَن ثَبَّتْنَـٰكَ لَقَدْ كِدتَّ تَرْكَنُ إِلَيْهِمْ شَيْـًٔا قَلِيلًا
Transliteration walawlā an thabbatnāka laqad kidtta tarkanu ilayhim shayan qalīlan
Kannada ನಾವು ನಿಮ್ಮನ್ನು (ಸತ್ಯದ ಮೇಲೆ) ಸ್ಥಿರ ಸುರಕ್ಷಿ ತರನ್ನಾಗಿ ಮಾಡದಿರುತ್ತಿದ್ದರೆ ನೀವು ಅವರ ಕಡೆಗೆ ಸ್ವಲ್ಪವಾದರೂ ವಾಲಿ ಬಿಡುತ್ತಿದ್ದಿರಿ .
Verse 75
إِذًا لَّأَذَقْنَـٰكَ ضِعْفَ ٱلْحَيَوٰةِ وَضِعْفَ ٱلْمَمَاتِ ثُمَّ لَا تَجِدُ لَكَ عَلَيْنَا نَصِيرًا
Transliteration idhan la-adhaqnāka ḍiʿ'fa l-ḥayati waḍiʿ'fa l-mamāti thumma lā tajidu laka ʿalaynā naṣīran
Kannada ನೀವು ಹಾಗೆ ಮಾಡುತ್ತಿದ್ದರೆ ನಾವು ನಿಮಗೆ ಇಹಲೋಕದ ಇಮ್ಮಡಿ ಶಿಕ್ಷೆಯನ್ನೂ ಪರ ಲೋಕದ ಇಮ್ಮಡಿ ಶಿಕ್ಷೆಯನ್ನೂ ಉಣಿಸುತ್ತಿದ್ದೆವು. ಅನಂತರ ನೀವು ನಮ್ಮ ವಿರುದ್ಧ ಯಾವ ಸಹಾಯಕನನ್ನೂ ಪಡೆಯುತ್ತಿರಲಿಲ್ಲ.
Verse 76
وَإِن كَادُوا۟ لَيَسْتَفِزُّونَكَ مِنَ ٱلْأَرْضِ لِيُخْرِجُوكَ مِنْهَا ۖ وَإِذًا لَّا يَلْبَثُونَ خِلَـٰفَكَ إِلَّا قَلِيلًا
Transliteration wa-in kādū layastafizzūnaka mina l-arḍi liyukh'rijūka min'hā wa-idhan lā yalbathūna khilāfaka illā qalīlan
Kannada ಇವರು ನಿಮ್ಮನ್ನು ಈ ನಾಡಿನಿಂದ ಕಿತ್ತು ಹಾಕಿ ಇಲ್ಲಿಂದ ಹೊರಕ್ಕಟ್ಟಿ ಬಿಡಲು ಸಜ್ಜಾಗಿದ್ದಾರೆ. ಇವರು ಹೀಗೆ ಮಾಡಿದರೆ ನಿಮ್ಮ ನಂತರ ಇವರು ಇಲ್ಲಿ ಹೆಚ್ಚು ಕಾಲ ನೆಲೆಸಲಾರರು.
Verse 77
سُنَّةَ مَن قَدْ أَرْسَلْنَا قَبْلَكَ مِن رُّسُلِنَا ۖ وَلَا تَجِدُ لِسُنَّتِنَا تَحْوِيلًا
Transliteration sunnata man qad arsalnā qablaka min rusulinā walā tajidu lisunnatinā taḥwīlan
Kannada ಇದು ನಾವು ನಿಮಗಿಂತ ಮುಂಚೆ ರವಾನಿಸಿದ ನಮ್ಮ ಸಂದೇಶವಾಹಕರ ವಿಷಯದಲ್ಲಿ ತೆಗೆದುಕೊಳ್ಳುತ್ತಿದ್ದ ಕಾರ್ಯವಿಧಾನ. ನಮ್ಮ ಕಾರ್ಯ ವಿಧಾನದಲ್ಲಿ ನೀವು ಯಾವ ಬದಲಾವಣೆಯನ್ನೂ ಕಾಣಲಾರಿರಿ .
Verse 78
أَقِمِ ٱلصَّلَوٰةَ لِدُلُوكِ ٱلشَّمْسِ إِلَىٰ غَسَقِ ٱلَّيْلِ وَقُرْءَانَ ٱلْفَجْرِ ۖ إِنَّ قُرْءَانَ ٱلْفَجْرِ كَانَ مَشْهُودًا
Transliteration aqimi l-ṣalata lidulūki l-shamsi ilā ghasaqi al-layli waqur'āna l-fajri inna qur'āna l-fajri kāna mashhūdan
Kannada ಸೂರ್ಯನು (ಮಧ್ಯಾಹ್ನದಿಂದ) ಸರಿದಾಗಿನಿಂದ ರಾತ್ರಿ ಕತ್ತಲಾವರಿಸುವ ತನಕ ನಮಾಝನ್ನು ಮತ್ತು (ಖುರ್‍ಆನ್ ಪಠಿತ) ಪ್ರಾತಃ ನಮಾ ಝನ್ನು ಸಂಸ್ಥಾಪಿಸಿರಿ. ಪ್ರಾತಃ ನಮಾಝ್ ಪ್ರಮಾಣಿತ ವಾಗಿರುತ್ತದೆ.
Verse 79
وَمِنَ ٱلَّيْلِ فَتَهَجَّدْ بِهِۦ نَافِلَةً لَّكَ عَسَىٰٓ أَن يَبْعَثَكَ رَبُّكَ مَقَامًا مَّحْمُودًا
Transliteration wamina al-layli fatahajjad bihi nāfilatan laka ʿasā an yabʿathaka rabbuka maqāman maḥmūdan
Kannada ರಾತ್ರಿಯಿಂದ ಅಲ್ಪ ಸಮಯ ನಿದ್ದೆಯಿಂದ ಎಚ್ಚೆತ್ತು ಖುರ್‍ಆನ್ ಪಠಣದೊಂದಿಗೆ ತಹಜ್ಜುದ್ ನಮಾಝ್ ನಿರ್ವಹಿಸಿರಿ. ಇದು ನಿಮಗೆ ಹೆಚ್ಚುವರಿ ಪುಣ್ಯ ಕರ್ಮವಾಗಿದೆ. ನಿಮ್ಮ ಪ್ರಭು ನಿಮ್ಮನ್ನು ಪ್ರಶಂಸಿತ ಸ್ಥಾನಕ್ಕೆ ನಿಯೋಗಿಸುವನು
Verse 80
وَقُل رَّبِّ أَدْخِلْنِى مُدْخَلَ صِدْقٍ وَأَخْرِجْنِى مُخْرَجَ صِدْقٍ وَٱجْعَل لِّى مِن لَّدُنكَ سُلْطَـٰنًا نَّصِيرًا
Transliteration waqul rabbi adkhil'nī mud'khala ṣid'qin wa-akhrij'nī mukh'raja ṣid'qin wa-ij'ʿal lī min ladunka sul'ṭānan naṣīran
Kannada `ಓ ನನ್ನ ಪ್ರಭೂ! ಸತ್ಯದ ಪ್ರವೇಶ ಸ್ಥಾನಕ್ಕೆ ನನ್ನನ್ನು ಪ್ರವೇಶಗೊಳಿಸು, ಸತ್ಯವನ್ನು ಹೊರಗೆಡಹುವ ಸ್ಥಾನದಿಂದ ನನ್ನನ್ನು ಹೊರ ಡಿಸು. ನಿನ್ನ ಕಡೆಯಿಂದ ನನಗೆ ಸಹಾಯಕವಾದ ಒಂದು ಅಧಿಕಾರ ಶಕ್ತಿಯನ್ನು ಒದಗಿಸು’ ಎಂದು ಪ್ರಾರ್ಥಿಸಿರಿ.
Verse 81
وَقُلْ جَآءَ ٱلْحَقُّ وَزَهَقَ ٱلْبَـٰطِلُ ۚ إِنَّ ٱلْبَـٰطِلَ كَانَ زَهُوقًا
Transliteration waqul jāa l-ḥaqu wazahaqa l-bāṭilu inna l-bāṭila kāna zahūqan
Kannada ‘ಸತ್ಯ ಬಂತು. ಮಿಥ್ಯ ಅಳಿಯಿತು. ಮಿಥ್ಯವು ಖಂಡಿತ ಅಳಿದು ಹೋಗುವುದು’ ಎಂದು ಘೋಷಿಸಿರಿ.
Verse 82
وَنُنَزِّلُ مِنَ ٱلْقُرْءَانِ مَا هُوَ شِفَآءٌ وَرَحْمَةٌ لِّلْمُؤْمِنِينَ ۙ وَلَا يَزِيدُ ٱلظَّـٰلِمِينَ إِلَّا خَسَارًا
Transliteration wanunazzilu mina l-qur'āni mā huwa shifāon waraḥmatun lil'mu'minīna walā yazīdu l-ẓālimīna illā khasāran
Kannada ಸತ್ಯವಿಶ್ವಾಸಿಗಳಿಗೆ ಗುಣೌಷಧ ಮತ್ತು ಕಾರು ಣ್ಯವಾದ ಖುರ್‍ಆನನ್ನು ನಾವು ಅವತೀರ್ಣಗೊಳಿಸಿರುತ್ತೇವೆ. ಆದರೆ ಅಕ್ರಮಿಗಳಿಗೆ ಅದು ನಷ್ಟವನ್ನೇ ಹೊರತು ಇನ್ನೇನನ್ನೂ ವರ್ಧಿಸುವುದಿಲ್ಲ.
Verse 83
وَإِذَآ أَنْعَمْنَا عَلَى ٱلْإِنسَـٰنِ أَعْرَضَ وَنَـَٔا بِجَانِبِهِۦ ۖ وَإِذَا مَسَّهُ ٱلشَّرُّ كَانَ يَـُٔوسًا
Transliteration wa-idhā anʿamnā ʿalā l-insāni aʿraḍa wanaā bijānibihi wa-idhā massahu l-sharu kāna yaūsan
Kannada ಮಾನವನಿಗೆ ನಾವು ಅನುಗ್ರಹಿಸಿದರೆ ಅವನು ಬೆನ್ನುತಿರುಗಿಸಿ ದೂರ ಸರಿಯುತ್ತಾನೆ. ಅವನಿಗೆ ಸ್ವಲ್ಪವೇನಾದರೂ ಕಷ್ಟ ಬಾಧಿಸಿದರೆ (ದೇವಕೃಪೆ ಯಿಂದ) ನಿರಾಶನಾಗುತ್ತಾನೆ.
Verse 84
قُلْ كُلٌّ يَعْمَلُ عَلَىٰ شَاكِلَتِهِۦ فَرَبُّكُمْ أَعْلَمُ بِمَنْ هُوَ أَهْدَىٰ سَبِيلًا
Transliteration qul kullun yaʿmalu ʿalā shākilatihi farabbukum aʿlamu biman huwa ahdā sabīlan
Kannada . (ಓ ಪೈಗಂಬರರೇ,) ಹೇಳಿರಿ. ‘ಪ್ರತಿಯೊಬ್ಬನೂ ತನ್ನದೇ ಕ್ರಮದ ಕಾರ್ಯವೆಸಗುತ್ತಾನೆ. ಆದರೆ ಅತ್ಯಂತ ನೇರ ಮಾರ್ಗದಲ್ಲಿ ಯಾರಿದ್ದಾನೆ ಎಂಬು ದನ್ನು ನಿಮ್ಮ ಪ್ರಭು ಚೆನ್ನಾಗಿ ಬಲ್ಲನು’.
Verse 85
وَيَسْـَٔلُونَكَ عَنِ ٱلرُّوحِ ۖ قُلِ ٱلرُّوحُ مِنْ أَمْرِ رَبِّى وَمَآ أُوتِيتُم مِّنَ ٱلْعِلْمِ إِلَّا قَلِيلًا
Transliteration wayasalūnaka ʿani l-rūḥi quli l-rūḥu min amri rabbī wamā ūtītum mina l-ʿil'mi illā qalīlan
Kannada ಇವರು ನಿಮ್ಮೊಡನೆ ಆತ್ಮದ ಕುರಿತು ಪ್ರಶ್ನಿಸುತ್ತಾರೆ. ಹೇಳಿರಿ; ‘ಆತ್ಮವು ನನ್ನ ಪ್ರಭುವಿನ ಕಾರ್ಯಕ್ಕೆ ಸೇರಿದೆ. ಜ್ಞಾನದ ಅಲ್ಪಾಂಶವನ್ನು ಮಾತ್ರ ನಿಮಗೆ ಕೊಡಲಾಗಿದೆ’.
Verse 86
وَلَئِن شِئْنَا لَنَذْهَبَنَّ بِٱلَّذِىٓ أَوْحَيْنَآ إِلَيْكَ ثُمَّ لَا تَجِدُ لَكَ بِهِۦ عَلَيْنَا وَكِيلًا
Transliteration wala-in shi'nā lanadhhabanna bi-alladhī awḥaynā ilayka thumma lā tajidu laka bihi ʿalaynā wakīlan
Kannada (ಓ ಪೈಗಂಬರರೇ,) ನಾವಿಚ್ಛಿಸಿದರೆ ನಾವು ನಿಮಗೆ ಕೊಟ್ಟ ಸಂದೇಶವನ್ನು ಹಿಂತೆಗೆದು ಕೊಳ್ಳುತ್ತಿದ್ದೆವು. ಅನಂತರ ನೀವು ನಮಗೆ ಎದುರಾಗಿ ಭರವಸೆಯನ್ನಿರಿಸುವಂತಹ ಯಾವ ಕಾರ್ಯ ನಿರ್ವಾಹಕನನ್ನೂ ಹೊಂದಲಾರಿರಿ.
Verse 87
إِلَّا رَحْمَةً مِّن رَّبِّكَ ۚ إِنَّ فَضْلَهُۥ كَانَ عَلَيْكَ كَبِيرًا
Transliteration illā raḥmatan min rabbika inna faḍlahu kāna ʿalayka kabīran
Kannada ಇದು ನಿಮ್ಮ ಪ್ರಭುವಿನ ಕೃಪೆಯಿಂದಲೇ ದೊರೆತಿದೆ. ನಿಮ್ಮ ಮೇಲೆ ಅವನ ಅನುಗ್ರಹವು ಮಹತ್ತರವಾಗಿದೆ.
Verse 88
قُل لَّئِنِ ٱجْتَمَعَتِ ٱلْإِنسُ وَٱلْجِنُّ عَلَىٰٓ أَن يَأْتُوا۟ بِمِثْلِ هَـٰذَا ٱلْقُرْءَانِ لَا يَأْتُونَ بِمِثْلِهِۦ وَلَوْ كَانَ بَعْضُهُمْ لِبَعْضٍ ظَهِيرًا
Transliteration qul la-ini ij'tamaʿati l-insu wal-jinu ʿalā an yatū bimith'li hādhā l-qur'āni lā yatūna bimith'lihi walaw kāna baʿḍuhum libaʿḍin ẓahīran
Kannada ಹೇಳಿರಿ-`ಮನುಷ್ಯನೂ ಜಿನ್ನ್‍ಗಳೂ ಎಲ್ಲರೂ ಒಟ್ಟಾಗಿ ಈ ಖುರ್‍ಆನ್‍ಗೆ ಸಮಾನವಾದುದನ್ನು ತರಲು ಪ್ರಯತ್ನಿಸಿದರೆ ಅವರೆಲ್ಲರೂ ಪರಸ್ಪರ ಸಹಾಯಕರಾದರೂ ಅವರಿಗೆ ಅದನ್ನು ತರಲಿಕ್ಕಾಗದು’.
Verse 89
وَلَقَدْ صَرَّفْنَا لِلنَّاسِ فِى هَـٰذَا ٱلْقُرْءَانِ مِن كُلِّ مَثَلٍ فَأَبَىٰٓ أَكْثَرُ ٱلنَّاسِ إِلَّا كُفُورًا
Transliteration walaqad ṣarrafnā lilnnāsi fī hādhā l-qur'āni min kulli mathalin fa-abā aktharu l-nāsi illā kufūran
Kannada ಈ ಖುರ್‍ಆನ್‍ನಲ್ಲಿ ಜನರಿಗೆ ನಾನಾ ವಿಧ ಉಪಮೆಗಳಿಂದ ವಿವರಿಸಿದೆವು. ಆದರೆ ಜನರಲ್ಲಿ ಹೆಚ್ಚಿ ನವರು ನಿಷೇಧಿಸುವುದರಲ್ಲೇ ತಲ್ಲೀನರಾದರು.
Verse 90
وَقَالُوا۟ لَن نُّؤْمِنَ لَكَ حَتَّىٰ تَفْجُرَ لَنَا مِنَ ٱلْأَرْضِ يَنۢبُوعًا
Transliteration waqālū lan nu'mina laka ḥattā tafjura lanā mina l-arḍi yanbūʿan
Kannada ಅವರು ಹೇಳಿದರು; `ನೀವು ಈ ಭೂಮಿಯಿಂದ ನಮಗಾಗಿ ಒಂದು ಚಿಲುಮೆಯನ್ನು ಹರಿಸುವ ವರೆಗೂ ನಾವು ನಿಮ್ಮನ್ನು ನಂಬಲಾರೆವು.
Verse 91
أَوْ تَكُونَ لَكَ جَنَّةٌ مِّن نَّخِيلٍ وَعِنَبٍ فَتُفَجِّرَ ٱلْأَنْهَـٰرَ خِلَـٰلَهَا تَفْجِيرًا
Transliteration aw takūna laka jannatun min nakhīlin waʿinabin fatufajjira l-anhāra khilālahā tafjīran
Kannada ಅಥವಾ ನಿಮಗೆ ಖರ್ಜೂರಗಳ ಮತ್ತು ದ್ರಾಕ್ಷೆಗಳ ಒಂದು ತೋಟ ಉಂಟಾಗಿ ನೀವು ಅದರ ನಡುವೆ ತುಂಬಿ ಹರಿಯುವ ಕಾಲುವೆಗಳನ್ನು ಹರಿಸುವವರೆಗೂ.
Verse 92
أَوْ تُسْقِطَ ٱلسَّمَآءَ كَمَا زَعَمْتَ عَلَيْنَا كِسَفًا أَوْ تَأْتِىَ بِٱللَّهِ وَٱلْمَلَـٰٓئِكَةِ قَبِيلًا
Transliteration aw tus'qiṭa l-samāa kamā zaʿamta ʿalaynā kisafan aw tatiya bil-lahi wal-malāikati qabīlan
Kannada ಅಥವಾ ನಿಮ್ಮ ವಾದದಂತೆ ಆಕಾಶವನ್ನು ತುಂಡು ತುಂಡಾಗಿ ಮಾಡಿ ನಮ್ಮ ಮೇಲೆ ಬೀಳಿ ಸುವವರೆಗೂ ಇಲ್ಲವೇ ಅಲ್ಲಾಹನನ್ನೂ ದೇವಚರ ರನ್ನೂ ಮುಖಾಮುಖಿ ನಮ್ಮ ಮುಂದೆ ತರುವವರೆಗೂ.
Verse 93
أَوْ يَكُونَ لَكَ بَيْتٌ مِّن زُخْرُفٍ أَوْ تَرْقَىٰ فِى ٱلسَّمَآءِ وَلَن نُّؤْمِنَ لِرُقِيِّكَ حَتَّىٰ تُنَزِّلَ عَلَيْنَا كِتَـٰبًا نَّقْرَؤُهُۥ ۗ قُلْ سُبْحَانَ رَبِّى هَلْ كُنتُ إِلَّا بَشَرًا رَّسُولًا
Transliteration aw yakūna laka baytun min zukh'rufin aw tarqā fī l-samāi walan nu'mina liruqiyyika ḥattā tunazzila ʿalaynā kitāban naqra-uhu qul sub'ḥāna rabbī hal kuntu illā basharan rasūlan
Kannada ಅಥವಾ ನಿಮಗೆ ಒಂದು ಚಿನ್ನದ ಮನೆ ಉಂಟಾ ಗುವವರೆಗೂ ಅಥವಾ ನೀವು ಆಕಾಶಕ್ಕೆ (ಏಣಿ ಇಟ್ಟು) ಏರಿಹೋಗುವವರೆಗೂ. ನಮಗೆ ಓದ ಬಹುದಾದ ಒಂದು ಗ್ರಂಥವನ್ನು ನಮ್ಮ ಬಳಿಗೆ ನೀವು ಇಳಿಸಿಕೊಡುವವರೆಗೆ ನಿಮ್ಮ ಏರುವಿಕೆಯನ್ನು ನಾವು ನಂಬಲಾರೆವು - (ಓ ಪೈಗಂಬರರೇ,) ಹೇಳಿರಿ; ‘ನನ್ನ ಪ್ರಭು ಪರಮ ಪಾವನನು. ನಾನೊಬ್ಬ ದೂತನಾದ ಮಾನವನೇ ಹೊರತು ಇನ್ನೇನಾದರೂ ಆಗಿರುವೆನೇ?’
Verse 94
وَمَا مَنَعَ ٱلنَّاسَ أَن يُؤْمِنُوٓا۟ إِذْ جَآءَهُمُ ٱلْهُدَىٰٓ إِلَّآ أَن قَالُوٓا۟ أَبَعَثَ ٱللَّهُ بَشَرًا رَّسُولًا
Transliteration wamā manaʿa l-nāsa an yu'minū idh jāahumu l-hudā illā an qālū abaʿatha l-lahu basharan rasūlan
Kannada ಜನರರಿಗೆ ಸನ್ಮಾರ್ಗದರ್ಶನ ಬಂದಾಗಲೆಲ್ಲ - ಅದರ ಮೇಲೆ ವಿಶ್ವಾಸವಿಡದಂತೆ ಜನರನ್ನು ತಡೆ ದುದು ಅಲ್ಲಾಹನು ಮಾನವನನ್ನು ಸಂದೇಶವಾ ಹಕನಾಗಿ ಕಳುಹಿಸಿದನೇ? ಎಂಬ ಅವರ ಮಾತು ಮಾತ್ರವಾಗಿದ್ದಿತು.
Verse 95
قُل لَّوْ كَانَ فِى ٱلْأَرْضِ مَلَـٰٓئِكَةٌ يَمْشُونَ مُطْمَئِنِّينَ لَنَزَّلْنَا عَلَيْهِم مِّنَ ٱلسَّمَآءِ مَلَكًا رَّسُولًا
Transliteration qul law kāna fī l-arḍi malāikatun yamshūna muṭ'ma-innīna lanazzalnā ʿalayhim mina l-samāi malakan rasūlan
Kannada ಹೇಳಿರಿ; ‘ಭೂಮಿಯ ಮೇಲೆ ಶಾಂತರಾಗಿ ನಡೆ ಯುವ ದೇವಚರರು ಇರುತ್ತಿದ್ದರೆ ನಾವು ಖಂಡಿ ತವಾಗಿಯೂ ಅವರ ಮೇಲೆ ಆಕಾಶದಿಂದ ಒಬ್ಬ ದೇವಚರನನ್ನೇ ದೂತನನ್ನಾಗಿ ಮಾಡಿ ಕಳುಹಿಸುತ್ತಿದ್ದೆವು’.
Verse 96
قُلْ كَفَىٰ بِٱللَّهِ شَهِيدًۢا بَيْنِى وَبَيْنَكُمْ ۚ إِنَّهُۥ كَانَ بِعِبَادِهِۦ خَبِيرًۢا بَصِيرًا
Transliteration qul kafā bil-lahi shahīdan baynī wabaynakum innahu kāna biʿibādihi khabīran baṣīran
Kannada ಹೇಳಿರಿ; ‘ಭೂಮಿಯ ಮೇಲೆ ಶಾಂತರಾಗಿ ನಡೆ ಯುವ ದೇವಚರರು ಇರುತ್ತಿದ್ದರೆ ನಾವು ಖಂಡಿ ತವಾಗಿಯೂ ಅವರ ಮೇಲೆ ಆಕಾಶದಿಂದ ಒಬ್ಬ ದೇವಚರನನ್ನೇ ದೂತನನ್ನಾಗಿ ಮಾಡಿ ಕಳುಹಿಸುತ್ತಿದ್ದೆವು’.
Verse 97
وَمَن يَهْدِ ٱللَّهُ فَهُوَ ٱلْمُهْتَدِ ۖ وَمَن يُضْلِلْ فَلَن تَجِدَ لَهُمْ أَوْلِيَآءَ مِن دُونِهِۦ ۖ وَنَحْشُرُهُمْ يَوْمَ ٱلْقِيَـٰمَةِ عَلَىٰ وُجُوهِهِمْ عُمْيًا وَبُكْمًا وَصُمًّا ۖ مَّأْوَىٰهُمْ جَهَنَّمُ ۖ كُلَّمَا خَبَتْ زِدْنَـٰهُمْ سَعِيرًا
Transliteration waman yahdi l-lahu fahuwa l-muh'tadi waman yuḍ'lil falan tajida lahum awliyāa min dūnihi wanaḥshuruhum yawma l-qiyāmati ʿalā wujūhihim ʿum'yan wabuk'man waṣumman mawāhum jahannamu kullamā khabat zid'nāhum saʿīran
Kannada ಯಾರಿಗೆ ಅಲ್ಲಾಹ್ ಸನ್ಮಾರ್ಗವೀಯುತ್ತಾನೋ ಅವನೇ ಸನ್ಮಾರ್ಗ ಪ್ರಾಪ್ತನು. ಅವನು ಯಾರನ್ನು ಪಥಭ್ರಷ್ಟಗೊಳಿಸುವನೋ ಅವರಿಗೆ ಅವನ ಹೊರತು ಯಾವ ರಕ್ಷಕ ಮಿತ್ರರನ್ನೂ ನೀವು ಪಡೆಯಲಾರಿರಿ. ಪುನರುತ್ಥಾನದಿನ ಕುರುಡರಾಗಿ ಯೂ ಮೂಕರಾಗಿಯೂ ಕಿವುಡರಾಗಿಯೂ ಮಾಡಿ ಇವರ ಮುಖಗಳನ್ನು ನೆಲಕಚ್ಚಿಸುತ್ತಾ ನಾವು ಇವರನ್ನು ಒಟ್ಟು ಸೇರಿಸುವೆವು. ಅವರ ವಾಸಸ್ಥಳ ನರಕವಾಗಿದೆ. ಅದರ ಅಗ್ನಿಯು ಮಂದವಾದಾಗಲೆಲ್ಲ ನಾವು ಅದರ ಜ್ವಾಲೆಯನ್ನು ಇನ್ನಷ್ಟು ತೀಕ್ಷ್ಣಗೊಳಿಸುವೆವು.
Verse 98
ذَٰلِكَ جَزَآؤُهُم بِأَنَّهُمْ كَفَرُوا۟ بِـَٔايَـٰتِنَا وَقَالُوٓا۟ أَءِذَا كُنَّا عِظَـٰمًا وَرُفَـٰتًا أَءِنَّا لَمَبْعُوثُونَ خَلْقًا جَدِيدًا
Transliteration dhālika jazāuhum bi-annahum kafarū biāyātinā waqālū a-idhā kunnā ʿiẓāman warufātan a-innā lamabʿūthūna khalqan jadīdan
Kannada ನಮ್ಮ ನಿದರ್ಶನಗಳನ್ನು ನಿಷೇಧಿಸಿ ‘ನಾವು ಎಲುಬುಗಳೂ ದ್ರವಿಸಿದ ಮೂಳೆಗಳೂ ಆಗಿ ಹೋದ ಬಳಿಕ ನಮ್ಮನ್ನು ಹೊಸದಾಗಿ ಸೃಷ್ಟಿಸಿ ಎಬ್ಬಿಸಲಾಗುವುದೇ?’ ಎಂದು ಅವರು ಹೇಳಿದುದರ ಪ್ರತಿಫಲವಿದು.
Verse 99
۞ أَوَلَمْ يَرَوْا۟ أَنَّ ٱللَّهَ ٱلَّذِى خَلَقَ ٱلسَّمَـٰوَٰتِ وَٱلْأَرْضَ قَادِرٌ عَلَىٰٓ أَن يَخْلُقَ مِثْلَهُمْ وَجَعَلَ لَهُمْ أَجَلًا لَّا رَيْبَ فِيهِ فَأَبَى ٱلظَّـٰلِمُونَ إِلَّا كُفُورًا
Transliteration awalam yaraw anna l-laha alladhī khalaqa l-samāwāti wal-arḍa qādirun ʿalā an yakhluqa mith'lahum wajaʿala lahum ajalan lā rayba fīhi fa-abā l-ẓālimūna illā kufūran
Kannada ಆಕಾಶಗಳನ್ನೂ ಭೂಮಿಯನ್ನೂ ಸೃಷ್ಟಿಸಿದ ಅಲ್ಲಾಹನು ಖಂಡಿತವಾಗಿಯೂ ಇವರಂಥವರ ನ್ನು ಸೃಷ್ಟಿಸಲು ಶಕ್ತನೆಂದು ಇವರು ಅರ್ಥ ಮಾಡಿಕೊಳ್ಳಲಿಲ್ಲವೇ? ಅವನು ಇವರಿಗೆ (ಮರಣ ಹಾಗೂ ಪುನರುತ್ಥಾನಕ್ಕಾಗಿ) ಒಂದು ಸಮಯವನ್ನು ನಿಶ್ಚಯಿಸಿಟ್ಟಿದ್ದಾನೆ. ಅದರಲ್ಲಿ ಸಂಶಯವಿಲ್ಲ. ಆದರೆ ಅದರ ನಿಷೇಧವನ್ನೇ ಹೊರತು ಅಕ್ರಮಿಗಳು ಬೇರೇನನ್ನೂ ಒಪ್ಪಿಕೊಳ್ಳಲಿಲ್ಲ .
Verse 100
قُل لَّوْ أَنتُمْ تَمْلِكُونَ خَزَآئِنَ رَحْمَةِ رَبِّىٓ إِذًا لَّأَمْسَكْتُمْ خَشْيَةَ ٱلْإِنفَاقِ ۚ وَكَانَ ٱلْإِنسَـٰنُ قَتُورًا
Transliteration qul law antum tamlikūna khazāina raḥmati rabbī idhan la-amsaktum khashyata l-infāqi wakāna l-insānu qatūran
Kannada ಓ ಪೈಗಂಬರರೇ,) ಹೇಳಿರಿ; `ನನ್ನ ಪ್ರಭುವಿನ ಕೃಪಾಭಂಡಾರಗಳು ನಿಮ್ಮ ಒಡೆತನದಲ್ಲಿ ಇದ್ದು ಬಿಡುತ್ತಿದ್ದರೆ, ಖರ್ಚಾಗಿ ಹೋದೀತೆಂಬ ಭಯದಿಂದ ಅವುಗಳನ್ನು ಖಂಡಿತ (ಜಿಪುಣತೆಯಿಂದ) ನೀವು ತಡೆದಿಡುತ್ತಿದ್ದಿರಿ’. ನಿಜಕ್ಕೂ ಮಾನವನು ಬಹಳ ಕೃಪಣನೇ ಹೌದು .
Verse 101
وَلَقَدْ ءَاتَيْنَا مُوسَىٰ تِسْعَ ءَايَـٰتٍۭ بَيِّنَـٰتٍ ۖ فَسْـَٔلْ بَنِىٓ إِسْرَٰٓءِيلَ إِذْ جَآءَهُمْ فَقَالَ لَهُۥ فِرْعَوْنُ إِنِّى لَأَظُنُّكَ يَـٰمُوسَىٰ مَسْحُورًا
Transliteration walaqad ātaynā mūsā tis'ʿa āyātin bayyinātin fasal banī is'rāīla idh jāahum faqāla lahu fir'ʿawnu innī la-aẓunnuka yāmūsā masḥūran
Kannada ಮೂಸಾರವರಿಗೆ ನಾವು ಪ್ರತ್ಯಕ್ಷವಾದ ಒಂಬತ್ತು ನಿದರ್ಶನಗಳನ್ನು ದಯಪಾಲಿಸಿದ್ದೆವು. ಅವರು (ಮೂಸಾರವರು) ಅವರಲ್ಲಿಗೆ ಬಂದಾಗ ಫಿರ್‍ಔನನು ಓ ಮೂಸಾ, ಖಂಡಿತವಾಗಿಯೂ ನೀ ನೊಬ್ಬ ಮಾಟ ಬಾಧಿತ ಮನುಷ್ಯನಾಗಿ ನಾನು ಭಾವಿಸುತ್ತೇನೆಂದು ಹೇಳಿದ್ದ ಸಂದರ್ಭದ ಬಗ್ಗೆ ಇಸ್ರಾಈಲ ಸಂತತಿಗಳಲ್ಲಿ ನೀವು ಕೇಳಿ ನೋಡಿರಿ.
Verse 102
قَالَ لَقَدْ عَلِمْتَ مَآ أَنزَلَ هَـٰٓؤُلَآءِ إِلَّا رَبُّ ٱلسَّمَـٰوَٰتِ وَٱلْأَرْضِ بَصَآئِرَ وَإِنِّى لَأَظُنُّكَ يَـٰفِرْعَوْنُ مَثْبُورًا
Transliteration qāla laqad ʿalim'ta mā anzala hāulāi illā rabbu l-samāwāti wal-arḍi baṣāira wa-innī la-aẓunnuka yāfir'ʿawnu mathbūran
Kannada ಮೂಸಾ ಹೇಳಿದರು; ‘ಈ ನಿದರ್ಶನಗಳನ್ನು ಅಂತರ್ದರ್ಶಿ ಪಾಠಗಳಾಗಿ ಆಕಾಶಗಳ ಮತ್ತು ಭೂಮಿಯ ಪ್ರಭುವಿನ ಹೊರತು ಇನ್ನಾರೂ ಇಳಿಸಿಲ್ಲವೆಂದು ನೀನು ಚೆನ್ನಾಗಿ ತಿಳಿದಿರುವೆ. ಓ ಫಿರ್‍ಔನ್! ನೀನೊಬ್ಬ ಹತಭಾಗಿ ಎಂದೇ ನಾನು ಭಾವಿಸಿದ್ದೇನೆ’.
Verse 103
فَأَرَادَ أَن يَسْتَفِزَّهُم مِّنَ ٱلْأَرْضِ فَأَغْرَقْنَـٰهُ وَمَن مَّعَهُۥ جَمِيعًا
Transliteration fa-arāda an yastafizzahum mina l-arḍi fa-aghraqnāhu waman maʿahu jamīʿan
Kannada ಕೊನೆಗೆ ಫಿರ್‍ಔನನು (ಮೂಸಾ ಮತ್ತು ಬನೀ ಇಸ್ರಾಈಲರನ್ನು) ರಾಜ್ಯದಿಂದ ಹೊರ ಗಟ್ಟಬೇಕೆಂದು ನಿರ್ಧರಿಸಿದನು. ಆದರೆ ನಾವು ಅವನನ್ನೂ ಅವನ ಸಂಗಡಿಗರನ್ನೂ ಒಟ್ಟಾಗಿ ಮುಳುಗಿಸಿ ನಾಶ ಮಾಡಿದೆವು.
Verse 104
وَقُلْنَا مِنۢ بَعْدِهِۦ لِبَنِىٓ إِسْرَٰٓءِيلَ ٱسْكُنُوا۟ ٱلْأَرْضَ فَإِذَا جَآءَ وَعْدُ ٱلْـَٔاخِرَةِ جِئْنَا بِكُمْ لَفِيفًا
Transliteration waqul'nā min baʿdihi libanī is'rāīla us'kunū l-arḍa fa-idhā jāa waʿdu l-ākhirati ji'nā bikum lafīfan
Kannada ಅವನ (ನಾಶದ) ಬಳಿಕ ಇಸ್ರಾಈಲ ಸಂತತಿಗಳೊಡನೆ ಹೀಗೆ ಹೇಳಿದೆವು; ‘ಭೂಮಿಯಲ್ಲಿ ನೆಲೆಸಿರಿ. ಮುಂದೆ ಪರಲೋಕದ ವಾಗ್ದಾನದ ಸಮಯ ಬಂದಾಗ ನಾವು ನಿಮ್ಮೆಲ್ಲರನ್ನೂ ಒಟ್ಟಾಗಿ ತರುವೆವು.
Verse 105
وَبِٱلْحَقِّ أَنزَلْنَـٰهُ وَبِٱلْحَقِّ نَزَلَ ۗ وَمَآ أَرْسَلْنَـٰكَ إِلَّا مُبَشِّرًا وَنَذِيرًا
Transliteration wabil-ḥaqi anzalnāhu wabil-ḥaqi nazala wamā arsalnāka illā mubashiran wanadhīran
Kannada ಸತ್ಯಾಧಿಷ್ಠಿತವಾಗಿಯೇ ನಾವು ಈ ಖುರ್‍ಆನನ್ನು ಅವತೀರ್ಣಗೊಳಿಸಿರುತ್ತೇವೆ. ಇದು ಸತ್ಯ ಗರ್ಭಿತವಾಗಿಯೇ ಅವತೀರ್ಣಗೊಂಡಿದೆ. (ಓ ಪೈಗಂಬರರೇ!) ಸುವಾರ್ತೆ ನೀಡಲಿಕ್ಕಾಗಿ ಮತ್ತು ಎಚ್ಚರಿಕೆ ಕೊಡಲಿಕ್ಕಾಗಿಯೇ ವಿನಾ ನಿಮ್ಮನ್ನು ನಾವು ಕಳುಹಿಸಿರುವುದಿಲ್ಲ.
Verse 106
وَقُرْءَانًا فَرَقْنَـٰهُ لِتَقْرَأَهُۥ عَلَى ٱلنَّاسِ عَلَىٰ مُكْثٍ وَنَزَّلْنَـٰهُ تَنزِيلًا
Transliteration waqur'ānan faraqnāhu litaqra-ahu ʿalā l-nāsi ʿalā muk'thin wanazzalnāhu tanzīlan
Kannada ನೀವು ಜನರಿಗೆ ಸಾವಕಾಶವಾಗಿ ಓದಿಕೊಡಲಿ ಕ್ಕಾಗಿ ಖುರ್‍ಆನನ್ನು ನಾವು (ಹಲವು ಭಾಗಗಳಾಗಿ) ವಿಂಗಡಿಸಿದ್ದೇವೆ. ಮತ್ತು ಇದನ್ನು ನಾವು ಹಂತಹಂತವಾಗಿ (ಸಂದರ್ಭೋಚಿತವಾಗಿ) ಅವತೀರ್ಣಗೊಳಿಸಿದ್ದೇವೆ.
Verse 107
قُلْ ءَامِنُوا۟ بِهِۦٓ أَوْ لَا تُؤْمِنُوٓا۟ ۚ إِنَّ ٱلَّذِينَ أُوتُوا۟ ٱلْعِلْمَ مِن قَبْلِهِۦٓ إِذَا يُتْلَىٰ عَلَيْهِمْ يَخِرُّونَ لِلْأَذْقَانِ سُجَّدًا
Transliteration qul āminū bihi aw lā tu'minū inna alladhīna ūtū l-ʿil'ma min qablihi idhā yut'lā ʿalayhim yakhirrūna lil'adhqāni sujjadan
Kannada (ಓ ಪೈಗಂಬರರೇ,) ಹೇಳಿರಿ; ನೀವು ಇದನ್ನು (ಖುರ್‍ಆನನ್ನು) ನಂಬಿರಿ ಇಲ್ಲವೇ ನಂಬದಿರಿ. ಇದಕ್ಕೆ ಮುಂಚೆ ಜ್ಞಾನ ಕೊಡಲ್ಪಟ್ಟವರಿಗೆ ಇದನ್ನು ಓದಿ ಹೇಳಿದಾಗ ಅವರು ತಲೆಬಾಗಿ ಅಧೋಮುಖಿಗಳಾಗಿ ದೊಪ್ಪನೆ ಸಾಷ್ಟಾಂಗವೆರಗಿ ಬಿಡುತ್ತಾರೆ.
Verse 108
وَيَقُولُونَ سُبْحَـٰنَ رَبِّنَآ إِن كَانَ وَعْدُ رَبِّنَا لَمَفْعُولًا
Transliteration wayaqūlūna sub'ḥāna rabbinā in kāna waʿdu rabbinā lamafʿūlan
Kannada ಅವರು ಹೇಳುವರು; ನಮ್ಮ ಪ್ರಭು ಪರಮ ಪಾವನನು. ನಮ್ಮ ಪ್ರಭುವಿನ ವಾಗ್ದಾನ ಪೂರ್ಣಗೊಳ್ಳಲೇಬೇಕು.
Verse 109
وَيَخِرُّونَ لِلْأَذْقَانِ يَبْكُونَ وَيَزِيدُهُمْ خُشُوعًا ۩
Transliteration wayakhirrūna lil'adhqāni yabkūna wayazīduhum khushūʿan
Kannada ಅವರು ಅಳುತ್ತಾ ಅಧೋಮುಖಿಗಳಾಗಿ ಬೀಳುತ್ತಾರೆ ಮತ್ತು ಅದು (ಖುರ್‍ಆನ್) ಅವರ ಭಯ ವಿನಯವನ್ನು ಇನ್ನಷ್ಟು ವರ್ಧಿಸುತ್ತದೆ.
Verse 110
قُلِ ٱدْعُوا۟ ٱللَّهَ أَوِ ٱدْعُوا۟ ٱلرَّحْمَـٰنَ ۖ أَيًّا مَّا تَدْعُوا۟ فَلَهُ ٱلْأَسْمَآءُ ٱلْحُسْنَىٰ ۚ وَلَا تَجْهَرْ بِصَلَاتِكَ وَلَا تُخَافِتْ بِهَا وَٱبْتَغِ بَيْنَ ذَٰلِكَ سَبِيلًا
Transliteration quli id'ʿū l-laha awi id'ʿū l-raḥmāna ayyan mā tadʿū falahu l-asmāu l-ḥus'nā walā tajhar biṣalātika walā tukhāfit bihā wa-ib'taghi bayna dhālika sabīlan
Kannada (ಓ ಪೈಗಂಬರರೇ,) ಹೇಳಿರಿ! ನೀವು ಅಲ್ಲಾಹು ಎಂದು ಕರೆಯಿರಿ ಅಥವಾ ರಹ್ಮಾನ್ ಎಂದು ಕರೆಯಿರಿ. ಯಾವ ಹೆಸರಿಂದ ಕರೆದರೂ ಅವನಿಗೆ ಉತ್ಕøಷ್ಟನಾಮಗಳೇ ಇವೆ. ನಿಮ್ಮ ನಮಾಝನ್ನು (ಪಠಣವನ್ನು) ಬಹಳ ಉಚ್ಚ ಸ್ವರದಲ್ಲಾಗಲಿ ತೀರಾ ಮೆಲುದನಿಯಲ್ಲಾಗಲಿ ನಿರ್ವಹಿಸಬೇಡಿರಿ - ಅವೆರಡರ ನಡುವೆ ಮಧ್ಯಮ ನೀತಿ ಅನುಸರಿಸಿರಿ.
Verse 111
وَقُلِ ٱلْحَمْدُ لِلَّهِ ٱلَّذِى لَمْ يَتَّخِذْ وَلَدًا وَلَمْ يَكُن لَّهُۥ شَرِيكٌ فِى ٱلْمُلْكِ وَلَمْ يَكُن لَّهُۥ وَلِىٌّ مِّنَ ٱلذُّلِّ ۖ وَكَبِّرْهُ تَكْبِيرًۢا
Transliteration waquli l-ḥamdu lillahi alladhī lam yattakhidh waladan walam yakun lahu sharīkun fī l-mul'ki walam yakun lahu waliyyun mina l-dhuli wakabbir'hu takbīran
Kannada ಹೇಳಿರಿ! ಸರ್ವಸ್ತುತಿಗಳೂ ಅಲ್ಲಾಹನಿಗೇ ಮೀಸಲು. ಅವನು ಸಂತಾನವನ್ನು ಮಾಡಿ ಕೊಳ್ಳಲಿಲ್ಲ. ಅವನ ಪ್ರಭುತ್ವದಲ್ಲಿ (ದೇವತ್ವದಲ್ಲಿ) ಯಾರೂ ಸಹಭಾಗಿಯಿಲ್ಲ. ರಕ್ಷಕನ ಅಗತ್ಯ ಬರುವಂತಹ ನಿಂದ್ಯತೆಯೇ ಅವನಿಗಿಲ್ಲ. ಅವನ ಹಿರಿಮೆಯನ್ನು ಪರಿಪೂರ್ಣವಾದ ರೀತಿಯಲ್ಲಿ ಕೊಂಡಾಡಿರಿ.
Read Surah Al-Isra in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.