MyDugsiStart learning

Surah At-Tahrim in Kannada: translation and audio

Surah 66 · التحريم · The Prohibition · 12 verses

Surah At-Tahrim verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah At-Tahrim word by word in English.

Verse 1

يَـٰٓأَيُّهَا ٱلنَّبِىُّ لِمَ تُحَرِّمُ مَآ أَحَلَّ ٱللَّهُ لَكَ ۖ تَبْتَغِى مَرْضَاتَ أَزْوَٰجِكَ ۚ وَٱللَّهُ غَفُورٌ رَّحِيمٌ

Transliteration yāayyuhā l-nabiyu lima tuḥarrimu mā aḥalla l-lahu laka tabtaghī marḍāta azwājika wal-lahu ghafūrun raḥīmun

Kannada ಓ ಪ್ರವಾದಿವರ್ಯರೇ, ತಾವು ತಮ್ಮ ಪತ್ನಿಯರ ಮೆಚ್ಚುಗೆಯನ್ನು ಬಯಸಿಕೊಂಡು ಅಲ್ಲಾಹನು ತಮಗೆ ಹಲಾಲ್ (ಧರ್ಮಸಮ್ಮತ)ಗೊಳಿಸಿರುವ ವಸ್ತುವನ್ನು ತಾವೇಕೆ ಹರಾಮ್ (ನಿಷಿದ್ಧ) ಗೊಳಿಸುತ್ತೀರಿ? ಅಲ್ಲಾಹನು ಕ್ಷಮಾದಾನಿಯೂ ಕೃಪಾನಿಧಿಯೂ ಆಗಿರುತ್ತಾನೆ.

Verse 2

قَدْ فَرَضَ ٱللَّهُ لَكُمْ تَحِلَّةَ أَيْمَـٰنِكُمْ ۚ وَٱللَّهُ مَوْلَىٰكُمْ ۖ وَهُوَ ٱلْعَلِيمُ ٱلْحَكِيمُ

Transliteration qad faraḍa l-lahu lakum taḥillata aymānikum wal-lahu mawlākum wahuwa l-ʿalīmu l-ḥakīmu

Kannada ಅಲ್ಲಾಹನು ನಿಮ್ಮ ಶಪಥಗಳ ಪರಿಹಾರ ನಿಯಮವನ್ನು ನಿಶ್ಚಯಿಸಿರುತ್ತಾನೆ. ಅಲ್ಲಾಹನೇ ತಮ್ಮ ಯಜಮಾನನು. ಅವನು ಸರ್ವಜ್ಞನೂ ಯುಕ್ತಿವಂತನೂ ಆಗಿರುತ್ತಾನೆ.

Verse 3

وَإِذْ أَسَرَّ ٱلنَّبِىُّ إِلَىٰ بَعْضِ أَزْوَٰجِهِۦ حَدِيثًا فَلَمَّا نَبَّأَتْ بِهِۦ وَأَظْهَرَهُ ٱللَّهُ عَلَيْهِ عَرَّفَ بَعْضَهُۥ وَأَعْرَضَ عَنۢ بَعْضٍ ۖ فَلَمَّا نَبَّأَهَا بِهِۦ قَالَتْ مَنْ أَنۢبَأَكَ هَـٰذَا ۖ قَالَ نَبَّأَنِىَ ٱلْعَلِيمُ ٱلْخَبِيرُ

Transliteration wa-idh asarra l-nabiyu ilā baʿḍi azwājihi ḥadīthan falammā nabba-at bihi wa-aẓharahu l-lahu ʿalayhi ʿarrafa baʿḍahu wa-aʿraḍa ʿan baʿḍin falammā nabba-ahā bihi qālat man anba-aka hādhā qāla nabba-aniya l-ʿalīmu l-khabīru

Kannada ಪ್ರವಾದಿಯು ತಮ್ಮ ಓರ್ವ ಪತ್ನಿಯೊಡನೆ ಒಂದು ಸಮಾಚಾರವನ್ನು ರಹಸ್ಯವಾಗಿ ಹೇಳಿದ ಸಂದರ್ಭ (ವನ್ನು ಸ್ಮರಿಸಿರಿ). ತರುವಾಯ ಆ ಪತ್ನಿಯು ಆ ರಹಸ್ಯವನ್ನು (ಬೇರೊಬ್ಬರಲ್ಲಿ) ಬಯಲುಗೊಳಿಸಿ ದಾಗ ಮತ್ತು ಅಲ್ಲಾಹನು ಪ್ರವಾದಿಗೆ ಈ ಸುದ್ದಿಯನ್ನು ತಿಳಿಸಿದಾಗ, ಅವರು ಅದರ ಸ್ಪಲ್ಪಾಂಶವನ್ನು ತಿಳಿಸಿದರು ಮತ್ತು ಸ್ವಲ್ಪಾಂಶವನ್ನು ಕಡೆಗಣಿಸಿದರು. ಹಾಗೆ ಪ್ರವಾದಿಯವರು ಆ ಪತ್ನಿಗೆ ಆ ಸುದ್ದಿಯನ್ನು ತಿಳಿಸಿದಾಗ ಆ ಪತ್ನಿ; ``ತಮಗೆ ಈ ಸುದ್ದಿ ತಿಳಿಸಿದವರು ಯಾರು?’’ ಎಂದು ಕೇಳಿದರು. ಪ್ರವಾದಿಯವರು, ``ನನಗೆ ಸರ್ವಜ್ಞನೂ ಸೂಕ್ಷ್ಮಜ್ಞಾನಿಯೂ ಆಗಿರುವ ಅಲ್ಲಾಹನು ತಿಳಿಸಿ ಕೊಟ್ಟನು’ ಎಂದರು .

Verse 4

إِن تَتُوبَآ إِلَى ٱللَّهِ فَقَدْ صَغَتْ قُلُوبُكُمَا ۖ وَإِن تَظَـٰهَرَا عَلَيْهِ فَإِنَّ ٱللَّهَ هُوَ مَوْلَىٰهُ وَجِبْرِيلُ وَصَـٰلِحُ ٱلْمُؤْمِنِينَ ۖ وَٱلْمَلَـٰٓئِكَةُ بَعْدَ ذَٰلِكَ ظَهِيرٌ

Transliteration in tatūbā ilā l-lahi faqad ṣaghat qulūbukumā wa-in taẓāharā ʿalayhi fa-inna l-laha huwa mawlāhu wajib'rīlu waṣāliḥu l-mu'minīna wal-malāikatu baʿda dhālika ẓahīrun

Kannada ನೀವಿಬ್ಬರೂ ಅಲ್ಲಾಹನೆಡೆಗೆ ಪಶ್ಚಾತ್ತಾಪಪಟ್ಟು ಮರಳುತ್ತೀರಾದರೆ (ಉತ್ತಮ). ಏಕೆಂದರೆ, ನಿಮ್ಮಿ ಬ್ಬರ ಹೃದಯಗಳು (ಕೆಡುಕಿಗೆ) ವಾಲಿಬಿಟ್ಟಿವೆ. ಇನ್ನು ನೀವಿಬ್ಬರೂ ಪ್ರವಾದಿಯ ವಿರುದ್ಧ ಪರಸ್ಪರ ಸಹಕರಿಸಿದರೆ, (ನೆನಪಿರಲಿ) ಅಲ್ಲಾಹನು ಅವರ ಸಂರಕ್ಷನಾಗಿದ್ದಾನೆ ಮತ್ತು ಜಿಬ್‍ರೀಲರು, ಎಲ್ಲ ಸಜ್ಜನ ಸತ್ಯವಿಶ್ವಾಸಿಗಳು ಮತ್ತು ತದನಂತರ ಎಲ್ಲ ದೇವಚರರೂ (ಪ್ರವಾದಿಯ) ಸಹಾಯಿಗಳಾಗಿರುವರು.

Verse 5

عَسَىٰ رَبُّهُۥٓ إِن طَلَّقَكُنَّ أَن يُبْدِلَهُۥٓ أَزْوَٰجًا خَيْرًا مِّنكُنَّ مُسْلِمَـٰتٍ مُّؤْمِنَـٰتٍ قَـٰنِتَـٰتٍ تَـٰٓئِبَـٰتٍ عَـٰبِدَٰتٍ سَـٰٓئِحَـٰتٍ ثَيِّبَـٰتٍ وَأَبْكَارًا

Transliteration ʿasā rabbuhu in ṭallaqakunna an yub'dilahu azwājan khayran minkunna mus'limātin mu'minātin qānitātin tāibātin ʿābidātin sāiḥātin thayyibātin wa-abkāran

Kannada (ಪ್ರವಾದಿ ಪತ್ನಿಯರೇ!) ಪ್ರವಾದಿಯು ನಿಮ್ಮನ್ನು ತಲಾಖ್ ಹೇಳಿದರೆ ಅಲ್ಲಾಹನು ಅವರಿಗೆ ನಿಮ್ಮ ಬದಲಿಗೆ ನಿಮಗಿಂತ ಉತ್ತಮರೂ ನೈಜ ಮುಸ್ಲಿಮರೂ ಸತ್ಯವಿಶ್ವಾಸವುಳ್ಳವರೂ, ಭಯಭಕ್ತಿಯುಳ್ಳವರೂ, ಪಶ್ಚಾತ್ತಾಪಪಡುವವರೂ ಆರಾಧನಾಶೀಲೆಯರೂ ಉಪವಾಸವೃತ ಆಚರಿಸುವವರೂ ಆದ - ವಿಧವೆಯರೂ, ಕನ್ಯೆಯರೂ ಆದ ಪತ್ನಿಯರನ್ನು ದಯಪಾಲಿಸಬಹುದು.

Verse 6

يَـٰٓأَيُّهَا ٱلَّذِينَ ءَامَنُوا۟ قُوٓا۟ أَنفُسَكُمْ وَأَهْلِيكُمْ نَارًا وَقُودُهَا ٱلنَّاسُ وَٱلْحِجَارَةُ عَلَيْهَا مَلَـٰٓئِكَةٌ غِلَاظٌ شِدَادٌ لَّا يَعْصُونَ ٱللَّهَ مَآ أَمَرَهُمْ وَيَفْعَلُونَ مَا يُؤْمَرُونَ

Transliteration yāayyuhā alladhīna āmanū qū anfusakum wa-ahlīkum nāran waqūduhā l-nāsu wal-ḥijāratu ʿalayhā malāikatun ghilāẓun shidādun lā yaʿṣūna l-laha mā amarahum wayafʿalūna mā yu'marūna

Kannada ಸತ್ಯವಿಶ್ವಾಸಿಗಳೇ, ನೀವು ಸ್ವಶರೀರಗಳನ್ನೂ, ನಿಮ್ಮ ಕುಟುಂಬದವರನ್ನೂ ನರಕಾಗ್ನಿಯಿಂದ ರಕ್ಷಿಸಿಕೊಳ್ಳಿರಿ. ಮನುಷ್ಯರು ಮತ್ತು ಕಲ್ಲುಗಳು ಅದರ ಇಂಧನವಾಗಿರುವುದು. ಅದರ ಮೇಲೆ ಅತ್ಯಂತ ಕಠೋರ ಮತ್ತು ಬಲಾಡ್ಯರಾದ ದೇವಚರರು ನಿಯುಕ್ತರಾಗಿರುವರು. ಅವರೆಂದೂ ಅಲ್ಲಾಹನ ಅಜ್ಞೋಲ್ಲಂಘನೆ ಮಾಡುವುದಿಲ್ಲ. ಅವರಿಗೆ ನೀಡಲಾಗುವ ಪ್ರತಿಯೊಂದು ಅಪ್ಪಣೆಯನ್ನೂ ಅವರು ಪಾಲಿಸುತ್ತಾರೆ.

Verse 7

يَـٰٓأَيُّهَا ٱلَّذِينَ كَفَرُوا۟ لَا تَعْتَذِرُوا۟ ٱلْيَوْمَ ۖ إِنَّمَا تُجْزَوْنَ مَا كُنتُمْ تَعْمَلُونَ

Transliteration yāayyuhā alladhīna kafarū lā taʿtadhirū l-yawma innamā tuj'zawna mā kuntum taʿmalūna

Kannada ಸತ್ಯನಿಷೇಧಿಗಳೇ, ನೀವಿಂದು ನೆಪಗಳನ್ನು ಹೇಳ ಬೇಡಿರಿ. ನೀವು ಮಾಡುತ್ತಿದ್ದ ಕರ್ಮಗಳಿಗೆ ತಕ್ಕುದಾದ ಪ್ರತಿಫಲವನ್ನೇ ನಿಮಗೆ ನೀಡಲಾಗುತ್ತಿದೆ. (ಎಂದು ಸತ್ಯನಿಷೇಧಿಗಳೊಂದಿಗೆ ಹೇಳಲಾಗುವುದು.)

Verse 8

يَـٰٓأَيُّهَا ٱلَّذِينَ ءَامَنُوا۟ تُوبُوٓا۟ إِلَى ٱللَّهِ تَوْبَةً نَّصُوحًا عَسَىٰ رَبُّكُمْ أَن يُكَفِّرَ عَنكُمْ سَيِّـَٔاتِكُمْ وَيُدْخِلَكُمْ جَنَّـٰتٍ تَجْرِى مِن تَحْتِهَا ٱلْأَنْهَـٰرُ يَوْمَ لَا يُخْزِى ٱللَّهُ ٱلنَّبِىَّ وَٱلَّذِينَ ءَامَنُوا۟ مَعَهُۥ ۖ نُورُهُمْ يَسْعَىٰ بَيْنَ أَيْدِيهِمْ وَبِأَيْمَـٰنِهِمْ يَقُولُونَ رَبَّنَآ أَتْمِمْ لَنَا نُورَنَا وَٱغْفِرْ لَنَآ ۖ إِنَّكَ عَلَىٰ كُلِّ شَىْءٍ قَدِيرٌ

Transliteration yāayyuhā alladhīna āmanū tūbū ilā l-lahi tawbatan naṣūḥan ʿasā rabbukum an yukaffira ʿankum sayyiātikum wayud'khilakum jannātin tajrī min taḥtihā l-anhāru yawma lā yukh'zī l-lahu l-nabiya wa-alladhīna āmanū maʿahu nūruhum yasʿā bayna aydīhim wabi-aymānihim yaqūlūna rabbanā atmim lanā nūranā wa-igh'fir lanā innaka ʿalā kulli shayin qadīrun

Kannada ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನೆಡೆಗೆ ನಿಷ್ಕಳಂಕವಾದ ಪಶ್ಚಾತ್ತಾಪ ಕೈಗೊಂಡು ಮರಳಿರಿ. ನಿಮ್ಮ ಪ್ರಭು ನಿಮ್ಮ ದೋಷಗಳನ್ನು ಅಳಿಸಬಹುದು ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಲ್ಲಿ ನಿಮ್ಮನ್ನು ಪ್ರವೇಶಗೊಳಿಸಲೂಬಹುದು. ಅದು ಅಲ್ಲಾಹನು ತನ್ನ ಪ್ರವಾದಿಯನ್ನಾಗಲಿ, ಅವರೊಂದಿಗೆ ವಿಶ್ವಾಸವಿರಿಸಿದ ಜನರನ್ನಾಗಲಿ ಅವಮಾನಗೊಳಿಸದಂತಹ ದಿನವಾಗಿರುವುದು. ಅವರ ಪ್ರಕಾಶವು ಅವರ ಮುಂದಿನಿಂದಲೂ ಅವರ ಬಲಬದಿಯಲ್ಲೂ ಚಲಿಸುತ್ತಿರುವುದು. ಅವರು, ನಮ್ಮ ಪ್ರಭು, ನಮ್ಮ ಪ್ರಕಾಶವನ್ನು ನಮಗೆ ನೀನು ಪರಿಪೂರ್ಣಗೊಳಿಸಿಕೊಡು ಮತ್ತು ನಮ್ಮನ್ನು ಕ್ಷಮಿಸು, ನೀನು ಸಕಲ ವಸ್ತುವಿನ ಮೇಲೆ ಸರ್ವ ಸಮರ್ಥನು ಎಂದು ಹೇಳುತ್ತಿರುವರು.

Verse 9

يَـٰٓأَيُّهَا ٱلنَّبِىُّ جَـٰهِدِ ٱلْكُفَّارَ وَٱلْمُنَـٰفِقِينَ وَٱغْلُظْ عَلَيْهِمْ ۚ وَمَأْوَىٰهُمْ جَهَنَّمُ ۖ وَبِئْسَ ٱلْمَصِيرُ

Transliteration yāayyuhā l-nabiyu jāhidi l-kufāra wal-munāfiqīna wa-ugh'luẓ ʿalayhim wamawāhum jahannamu wabi'sa l-maṣīru

Kannada ಓ ಪ್ರವಾದಿಯರೇ, ಸತ್ಯನಿಷೇಧಿಗಳೊಂದಿಗೂ ಕಪಟವಿಶ್ವಾಸಿಗಳೊಂದಿಗೂ ಸಮರ ಹೂಡಿರಿ. ಅವರೊಡನೆ ಕಠಿಣವಾಗಿ ವರ್ತಿಸಿರಿ. ನರಕವೇ ಅವರ ನಿವಾಸವಾಗಿದೆ. ಅದು ಅತ್ಯಂತ ಕೆಟ್ಟ ನಿರ್ಗಮನ ಕೇಂದ್ರವಾಗಿದೆ.

Verse 10

ضَرَبَ ٱللَّهُ مَثَلًا لِّلَّذِينَ كَفَرُوا۟ ٱمْرَأَتَ نُوحٍ وَٱمْرَأَتَ لُوطٍ ۖ كَانَتَا تَحْتَ عَبْدَيْنِ مِنْ عِبَادِنَا صَـٰلِحَيْنِ فَخَانَتَاهُمَا فَلَمْ يُغْنِيَا عَنْهُمَا مِنَ ٱللَّهِ شَيْـًٔا وَقِيلَ ٱدْخُلَا ٱلنَّارَ مَعَ ٱلدَّٰخِلِينَ

Transliteration ḍaraba l-lahu mathalan lilladhīna kafarū im'ra-ata nūḥin wa-im'ra-ata lūṭin kānatā taḥta ʿabdayni min ʿibādinā ṣāliḥayni fakhānatāhumā falam yugh'niyā ʿanhumā mina l-lahi shayan waqīla ud'khulā l-nāra maʿa l-dākhilīna

Kannada ಅಲ್ಲಾಹನು ನೂಹರ ಪತ್ನಿಯನ್ನು ಮತ್ತು ಲೂಥರ ಪತ್ನಿಯನ್ನು ಸತ್ಯನಿಷೇಧಿಗಳಿಗೆ ಉದಾ ಹರಣೆಯಾಗಿ ಮುಂದಿಡುತ್ತಾನೆ. ಆ ಇಬ್ಬರು ಸ್ತ್ರೀಯರು ನಮ್ಮ ದಾಸರ ಪೈಕಿ ಇಬ್ಬರು ಸಜ್ಜನ ದಾಸರ ದಾಂಪತ್ಯ ಬಂಧನದಲ್ಲಿದ್ದರು. ಅವರೀರ್ವರೂ ತಮ್ಮ ಪತಿಯರನ್ನು ವಂಚಿಸಿದರ . ಆ ಇಬ್ಬರು ಸ್ತ್ರೀಯರನ್ನೂ ಅಲ್ಲಾಹನ ಶಿಕ್ಷೆಯಿಂದ ಪಾರು ಮಾಡಲು ಆ ಪ್ರವಾದಿಗಳಿಗೆ ಸಾಧ್ಯವಾಗಲಿಲ್ಲ. ‘ಅಗ್ನಿಯಲ್ಲಿ ಬೀಳುವವರ ಜೊತೆಗೆ ನೀವಿಬ್ಬರೂ ಬೀಳಿರಿ’ ಎಂದು ಹೇಳಲಾಯಿತು.

Verse 11

وَضَرَبَ ٱللَّهُ مَثَلًا لِّلَّذِينَ ءَامَنُوا۟ ٱمْرَأَتَ فِرْعَوْنَ إِذْ قَالَتْ رَبِّ ٱبْنِ لِى عِندَكَ بَيْتًا فِى ٱلْجَنَّةِ وَنَجِّنِى مِن فِرْعَوْنَ وَعَمَلِهِۦ وَنَجِّنِى مِنَ ٱلْقَوْمِ ٱلظَّـٰلِمِينَ

Transliteration waḍaraba l-lahu mathalan lilladhīna āmanū im'ra-ata fir'ʿawna idh qālat rabbi ib'ni lī ʿindaka baytan fī l-janati wanajjinī min fir'ʿawna waʿamalihi wanajjinī mina l-qawmi l-ẓālimīna

Kannada ಸತ್ಯವಿಶ್ವಾಸಿಗಳಿಗೆ ಉದಾಹರಣೆಯಾಗಿ ಫಿರ್ ಔನನ ಪತ್ನಿಯನ್ನು ಅಲ್ಲಾಹನು ಮುಂದಿಡು ತ್ತಾನೆ. ಆಕೆ ಹೇಳಿದ ಸಂದರ್ಭ; ನನ್ನ ಪ್ರಭೂ, ನನಗಾಗಿ ನಿನ್ನ ಬಳಿ ಸ್ವರ್ಗದಲ್ಲೊಂದು ಭವನವನ್ನು ನಿರ್ಮಿಸಿಕೊಡು ಮತ್ತು ನನ್ನನ್ನು ಫಿರ್ ಔನನಿಂದಲೂ ಅವನ ಕರ್ಮಗಳಿಂದಲೂ ರಕ್ಷಿಸು ಮತ್ತು ಅಕ್ರಮಿ ಜನಾಂಗದಿಂದ ನನ್ನನ್ನು ಪಾರುಗೊಳಿಸು’.

Verse 12

وَمَرْيَمَ ٱبْنَتَ عِمْرَٰنَ ٱلَّتِىٓ أَحْصَنَتْ فَرْجَهَا فَنَفَخْنَا فِيهِ مِن رُّوحِنَا وَصَدَّقَتْ بِكَلِمَـٰتِ رَبِّهَا وَكُتُبِهِۦ وَكَانَتْ مِنَ ٱلْقَـٰنِتِينَ

Transliteration wamaryama ib'nata ʿim'rāna allatī aḥṣanat farjahā fanafakhnā fīhi min rūḥinā waṣaddaqat bikalimāti rabbihā wakutubihi wakānat mina l-qānitīna

Kannada ಅವನು ಇಮ್ರಾನರ ಪುತ್ರಿ ಮರ್ಯಮರನ್ನೂ (ಸತ್ಯವಿಶ್ವಾಸಿಗಳಿಗೆ ಉದಾಹರಣೆಯಾಗಿ) ಮುಂದಿಡುತ್ತಾನೆ. ಅವರು ತಮ್ಮ ಶೀಲವನ್ನು ಕಾಪಾಡಿಕೊಂಡಿದ್ದರು. ಆಗ ನಾವು ಅವರೊಳಗೆ ನಮ್ಮ ಆತ್ಮದಿಂದ ಊದಿದೆವು. ಆಕೆ ತಮ್ಮ ಪ್ರಭುವಿನ ವಚನಗಳಲ್ಲೂ, ಅವನ ಗ್ರಂಥಗಳಲ್ಲೂ ವಿಶ್ವಾಸವಿರಿಸಿದ್ದರು. ಮತ್ತು ಆಕೆ ಭಕ್ತಿಯುಳ್ಳವರಲ್ಲಿ ಒಳಪಟ್ಟವರಾದರು .

Read Surah At-Tahrim in another language

All languages

All 114 surahs in Kannada: the Qur’an in Kannada.

Learn it in MyDugsi

Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.