Surah Al-Jumu'ah in Kannada: translation and audio
Surah 62 · الجمعة · The Congregation, Friday · 11 verses
Surah Al-Jumu'ah verse by verse: the Arabic with a recitation you can repeat, the transliteration, and the Kannada translation by Kannada Translation. For the meaning of every word, see Surah Al-Jumu'ah word by word in English.
Verse 1
يُسَبِّحُ لِلَّهِ مَا فِى ٱلسَّمَـٰوَٰتِ وَمَا فِى ٱلْأَرْضِ ٱلْمَلِكِ ٱلْقُدُّوسِ ٱلْعَزِيزِ ٱلْحَكِيمِ
Transliteration yusabbiḥu lillahi mā fī l-samāwāti wamā fī l-arḍi l-maliki l-qudūsi l-ʿazīzi l-ḥakīmi
Kannada ಭೂಮಿ-ಆಕಾಶಗಳಲ್ಲಿರುವ ಪ್ರತಿಯೊಂದು ವಸ್ತುವೂ ಅಲ್ಲಾಹನ ಪರಿಶುದ್ಧತೆಯನ್ನು ಪ್ರಕೀ ರ್ತಿಸುತ್ತಿದೆ. (ಅವನು) ರಾಜಾಧಿಪತಿಯೂ ಅತ್ಯಂತ ಪರಿಶುದ್ಧನೂ ಅಜೇಯನೂ ಯುಕ್ತಿಪೂರ್ಣನೂ ಆಗಿರುವನು.
Verse 2
هُوَ ٱلَّذِى بَعَثَ فِى ٱلْأُمِّيِّـۧنَ رَسُولًا مِّنْهُمْ يَتْلُوا۟ عَلَيْهِمْ ءَايَـٰتِهِۦ وَيُزَكِّيهِمْ وَيُعَلِّمُهُمُ ٱلْكِتَـٰبَ وَٱلْحِكْمَةَ وَإِن كَانُوا۟ مِن قَبْلُ لَفِى ضَلَـٰلٍ مُّبِينٍ
Transliteration huwa alladhī baʿatha fī l-umiyīna rasūlan min'hum yatlū ʿalayhim āyātihi wayuzakkīhim wayuʿallimuhumu l-kitāba wal-ḥik'mata wa-in kānū min qablu lafī ḍalālin mubīnin
Kannada ಅವನೇ ನಿರಕ್ಷರಿಗಳ ನಡುವೆ ಅವರಿಂದಲೇ ಒಬ್ಬ ಸಂದೇಶವಾಹಕರನ್ನು ನಿಯೋಗಿಸಿದವನು. ಅವರು ಅವರಿಗೆ ಅವನ ಸೂಕ್ತಗಳನ್ನು ಓದಿ ಹೇಳು ತ್ತಾರೆ, ಅವರನ್ನು ಸಂಸ್ಕರಿಸುತ್ತಾರೆ ಮತ್ತು ಅವರಿಗೆ ಗ್ರಂಥ ಹಾಗೂ ತತ್ವಜ್ಞಾನವನ್ನು ಕಲಿಸುತ್ತಾರೆ. ಅದಕ್ಕಿಂತ ಮುಂಚೆ ಅವರು ಸ್ಪಷ್ಟ ಪಥಭ್ರಷ್ಟತೆಗೆ ಒಳಗಾಗಿದ್ದರು .
Verse 3
وَءَاخَرِينَ مِنْهُمْ لَمَّا يَلْحَقُوا۟ بِهِمْ ۚ وَهُوَ ٱلْعَزِيزُ ٱلْحَكِيمُ
Transliteration waākharīna min'hum lammā yalḥaqū bihim wahuwa l-ʿazīzu l-ḥakīmu
Kannada ಅವರಲ್ಲಿ ಒಳಪಟ್ಟವರೂ ಇನ್ನೂ ಅವರ ಬಳಿ ಬಂದು ತಲುಪದಿರುವವರೂ ಆದ ಬೇರೆ ಕೆಲವರ ಬಳಿಗೂ (ಮುಹಮ್ಮದ್ ನಬಿಯನ್ನು ನಿಯೋಗಿಸಲಾಗಿದೆ). ಅಲ್ಲಾಹನು ಪ್ರಬಲನೂ ಯುಕ್ತಿವಂತನೂ ಆಗಿರುತ್ತಾನೆ.
Verse 4
ذَٰلِكَ فَضْلُ ٱللَّهِ يُؤْتِيهِ مَن يَشَآءُ ۚ وَٱللَّهُ ذُو ٱلْفَضْلِ ٱلْعَظِيمِ
Transliteration dhālika faḍlu l-lahi yu'tīhi man yashāu wal-lahu dhū l-faḍli l-ʿaẓīmi
Kannada ಅದು ಅಲ್ಲಾಹನ ಅನುಗ್ರಹ. ಅದನ್ನು ತಾನಿಚ್ಚಿಸಿ ದವರಿಗೆ ಅವನು ನೀಡುತ್ತಾನೆ. ಅಲ್ಲಾಹನು ಮಹಾ ಅನುಗ್ರಹದಾತನಾಗಿದ್ದಾನೆ.
Verse 5
مَثَلُ ٱلَّذِينَ حُمِّلُوا۟ ٱلتَّوْرَىٰةَ ثُمَّ لَمْ يَحْمِلُوهَا كَمَثَلِ ٱلْحِمَارِ يَحْمِلُ أَسْفَارًۢا ۚ بِئْسَ مَثَلُ ٱلْقَوْمِ ٱلَّذِينَ كَذَّبُوا۟ بِـَٔايَـٰتِ ٱللَّهِ ۚ وَٱللَّهُ لَا يَهْدِى ٱلْقَوْمَ ٱلظَّـٰلِمِينَ
Transliteration mathalu alladhīna ḥummilū l-tawrāta thumma lam yaḥmilūhā kamathali l-ḥimāri yaḥmilu asfāran bi'sa mathalu l-qawmi alladhīna kadhabū biāyāti l-lahi wal-lahu lā yahdī l-qawma l-ẓālimīna
Kannada ತೌರಾತಿನ (ಅನುಸರಣೆಯ) ಹೊಣೆ ಹೊರಿಸಲ್ಪಟ್ಟು, ತದನಂತರ ಅದರ ಹೊಣೆಗಾರಿಕೆಯನ್ನು ಹೊರದೆ ಇರುವವರ ಉದಾಹರಣೆಯು ಗ್ರಂಥಗಳನ್ನು ಹೊತ್ತುಕೊಂಡ ಕತ್ತೆಯಂತಿದೆ . ಅಲ್ಲಾಹನ ಸೂಕ್ತಗಳನ್ನು ಸುಳ್ಳಾಗಿಸಿದ ಜನತೆಯ ಉಪಮೆ ಬಹಳ ನಿಕೃಷ್ಟ. (ಇಂತಹ) ಅಕ್ರಮಿಗಳಾದ ಜನತೆಗೆ ಅಲ್ಲಾಹನು ಮಾರ್ಗದರ್ಶನ ಮಾಡುವುದಿಲ್ಲ.
Verse 6
قُلْ يَـٰٓأَيُّهَا ٱلَّذِينَ هَادُوٓا۟ إِن زَعَمْتُمْ أَنَّكُمْ أَوْلِيَآءُ لِلَّهِ مِن دُونِ ٱلنَّاسِ فَتَمَنَّوُا۟ ٱلْمَوْتَ إِن كُنتُمْ صَـٰدِقِينَ
Transliteration qul yāayyuhā alladhīna hādū in zaʿamtum annakum awliyāu lillahi min dūni l-nāsi fatamannawū l-mawta in kuntum ṣādiqīna
Kannada ಹೇಳಿರಿ; ಯಹೂದಿಗಳೇ, ಇತರ ಮನುಷ್ಯರನ್ನು ಹೊರತು ನೀವು ಮಾತ್ರ ಅಲ್ಲಾಹನಿಗೆ ನೆಚ್ಚಿನವರೆಂಬವಾದ ನಿಮ್ಮದಾಗಿದ್ದರೆ ಮತ್ತು ಅದರಲ್ಲಿ ನೀವು ಸತ್ಯವಂತರಾಗಿದ್ದರೆ ಮರಣವನ್ನು ನೀವು ಆಶಿಸಿರಿ.
Verse 7
وَلَا يَتَمَنَّوْنَهُۥٓ أَبَدًۢا بِمَا قَدَّمَتْ أَيْدِيهِمْ ۚ وَٱللَّهُ عَلِيمٌۢ بِٱلظَّـٰلِمِينَ
Transliteration walā yatamannawnahu abadan bimā qaddamat aydīhim wal-lahu ʿalīmun bil-ẓālimīna
Kannada ಆದರೆ ಅವರು ತಮ್ಮ ಕೈಗಳಿಂದ ಮಾಡಿರುವಂತಹ ದುಷ್ಕøತ್ಯಗಳ ಕಾರಣದಿಂದಾಗಿ ಯಾವತ್ತೂ ಮರಣವನ್ನು ಅವರು ಆಶಿಸಲಾರರು. ಅಲ್ಲಾಹನು ಅಕ್ರಮಿಗಳನ್ನು ಚೆನ್ನಾಗಿ ಬಲ್ಲನು.
Verse 8
قُلْ إِنَّ ٱلْمَوْتَ ٱلَّذِى تَفِرُّونَ مِنْهُ فَإِنَّهُۥ مُلَـٰقِيكُمْ ۖ ثُمَّ تُرَدُّونَ إِلَىٰ عَـٰلِمِ ٱلْغَيْبِ وَٱلشَّهَـٰدَةِ فَيُنَبِّئُكُم بِمَا كُنتُمْ تَعْمَلُونَ
Transliteration qul inna l-mawta alladhī tafirrūna min'hu fa-innahu mulāqīkum thumma turaddūna ilā ʿālimi l-ghaybi wal-shahādati fayunabbi-ukum bimā kuntum taʿmalūna
Kannada ತಾವು ಹೇಳಿರಿ - ನೀವು ಯಾವ ಮರಣದಿಂದ ಓಡುತ್ತಿರುವಿರೋ ಅದು ನಿಮಗೆ ಬಂದೇ ತೀರು ವುದು. ಅನಂತರ ನಿಮ್ಮನ್ನು ದೃಶ್ಯಾದೃಶ್ಯಗಳ ಜ್ಞಾನಿಯಾದ ಅಲ್ಲಾಹನೆಡೆಗೆ ಮರಳಿಸಲಾಗುವುದು. ನೀವು ಮಾಡುತ್ತಿದ್ದ ಕರ್ಮಗಳ ಬಗ್ಗೆ ಆಗ ಅವನು ನಿಮಗೆ ತಿಳಿಸುವನು.
Verse 9
يَـٰٓأَيُّهَا ٱلَّذِينَ ءَامَنُوٓا۟ إِذَا نُودِىَ لِلصَّلَوٰةِ مِن يَوْمِ ٱلْجُمُعَةِ فَٱسْعَوْا۟ إِلَىٰ ذِكْرِ ٱللَّهِ وَذَرُوا۟ ٱلْبَيْعَ ۚ ذَٰلِكُمْ خَيْرٌ لَّكُمْ إِن كُنتُمْ تَعْلَمُونَ
Transliteration yāayyuhā alladhīna āmanū idhā nūdiya lilṣṣalati min yawmi l-jumuʿati fa-is'ʿaw ilā dhik'ri l-lahi wadharū l-bayʿa dhālikum khayrun lakum in kuntum taʿlamūna
Kannada ಸತ್ಯವಿಶ್ವಾಸಿಗಳೇ, ಶುಕ್ರವಾರ ದಿನದ ನಮಾಝಿ ಗಾಗಿ ನಿಮ್ಮನ್ನು ಕರೆಯಲಾದರೆ ನೀವು ಅಲ್ಲಾ ಹನ ದಿಕ್ರ್ನ ಕಡೆಗೆ ಧಾವಿಸಿರಿ ಮತ್ತು ವ್ಯಾಪಾರ ವನ್ನು ತ್ಯಜಿಸಿರಿ. ನೀವು ಅರಿತವರಾಗಿದ್ದರೆ ಅದು ನಿಮಗೆ ಅತ್ಯುತ್ತಮವಾಗಿದೆ .
Verse 10
فَإِذَا قُضِيَتِ ٱلصَّلَوٰةُ فَٱنتَشِرُوا۟ فِى ٱلْأَرْضِ وَٱبْتَغُوا۟ مِن فَضْلِ ٱللَّهِ وَٱذْكُرُوا۟ ٱللَّهَ كَثِيرًا لَّعَلَّكُمْ تُفْلِحُونَ
Transliteration fa-idhā quḍiyati l-ṣalatu fa-intashirū fī l-arḍi wa-ib'taghū min faḍli l-lahi wa-udh'kurū l-laha kathīran laʿallakum tuf'liḥūna
Kannada ನಮಾಝ್ ನಿರ್ವಹಿಸಲಾದರೆ, ನೀವು ಭೂಮಿ ಯಲ್ಲಿ ಚದುರಿಬಿಡಿರಿ. ಅಲ್ಲಾಹನ ಅನುಗ್ರಹದಿಂದ ಅರಸಿರಿ. ಅಲ್ಲಾಹನನ್ನು ನೀವು ಧಾರಾಳ ಸ್ಮರಿಸಿರಿ. ನೀವು ಯಶಸ್ಸುಗೊಂಡವರಾಗಲಿಕ್ಕಾಗಿ.
Verse 11
وَإِذَا رَأَوْا۟ تِجَـٰرَةً أَوْ لَهْوًا ٱنفَضُّوٓا۟ إِلَيْهَا وَتَرَكُوكَ قَآئِمًا ۚ قُلْ مَا عِندَ ٱللَّهِ خَيْرٌ مِّنَ ٱللَّهْوِ وَمِنَ ٱلتِّجَـٰرَةِ ۚ وَٱللَّهُ خَيْرُ ٱلرَّٰزِقِينَ
Transliteration wa-idhā ra-aw tijāratan aw lahwan infaḍḍū ilayhā watarakūka qāiman qul mā ʿinda l-lahi khayrun mina l-lahwi wamina l-tijārati wal-lahu khayru l-rāziqīna
Kannada ಅವರು ಒಂದು ವ್ಯಾಪಾರವನ್ನೋ, ಮನರಂಜನೆ ಯನ್ನೋ ಕಂಡಾಗ ಅದರೆಡೆಗೆ ಧಾವಿಸಿ ಹೋ ದರು ಮತ್ತು ನಿಮ್ಮನ್ನು ನಿಂತಲ್ಲೇ ಉಪೇಕ್ಷಿಸಿ ಬಿಟ್ಟರು. ತಾವು ಹೇಳಿರಿ, ಅಲ್ಲಾಹನ ಬಳಿ ಇರು ವುದು ವ್ಯಾಪಾರಕ್ಕಿಂತಲೂ ಮನರಂಜನೆಗಿಂ ತಲೂ ಉತ್ತಮವಾಗಿದೆ. ಅಲ್ಲಾಹನು ಅತ್ಯುತ್ತಮ ಅನ್ನದಾತನಾಗಿದ್ದಾನೆ .
Read Surah Al-Jumu'ah in another language
- English (word by word)
- Albanian
- Amazigh
- Amharic
- Assamese
- Azerbaijani
- Bambara
- Bangla
- Bosnian
- Bulgarian
- Chechen
- Chinese
- Czech
- Dari
- Dhivehi
- Dutch
- Finnish
- French
- German
- Gujarati
- Hausa
- Hebrew
- Hindi
- Indonesian
- Italian
- Japanese
- Kazakh
- Khmer
- Kinyarwanda
- Korean
- Kurdish
- Luganda
- Malay
- Malayalam
- Maranao
- Marathi
- Nepali
- Norwegian
- Oromo
- Pashto
- Persian
- Polish
- Portuguese
- Romanian
- Russian
- Sindhi
- Sinhala
- Somali
- Spanish
- Swahili
- Swedish
- Tagalog
- Tajik
- Tamil
- Tatar
- Telugu
- Thai
- Turkish
- Ukrainian
- Urdu
- Uyghur
- Uzbek
- Vietnamese
- Yao
- Yoruba
All 114 surahs in Kannada: the Qur’an in Kannada.
Kannada translation: Kannada Translation, from Quran.com. Transliteration: Quran.com. Recitation: Mishary Alafasy, from EveryAyah.com. MyDugsi is a learning aid, not a replacement for a qualified teacher.